ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Breastfeeding Mother: ಎದೆಹಾಲು ಉಣಿಸುವುದರಿಂದ ದಪ್ಪ ಆಗ್ತಾರಾ? ತಾಯಿ ಆರೋಗ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ

Breastfeeding Benefits: ಮಗು ಹುಟ್ಟಿದ ಬಳಿಕ ತಾಯಿಯಾದವರು ಎದೆಹಾಲು ಉಣಿಸುವುದರಿಂದ ಏನೆಲ್ಲ ಆರೋಗ್ಯ ಪ್ರಯೋಜನ ಪಡೆಯುತ್ತಾರೆ ಎಂಬ ಬಗ್ಗೆವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ಸ್ತ್ರೀ ರೋಗ ತಜ್ಞೆಯಾದ ಡಾಕ್ಟರ್ ವಿದ್ಯಾ ವಿ. ಭಟ್ ಅವರು ಅನೇಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ‌. ಮಗುವನ್ನು ಮಾನಸಿಕವಾಗಿ , ದೈಹಿಕವಾಗಿ ಆರೋಗ್ಯಯುತವಾಗಿ ಬೆಳೆಸುವಲ್ಲಿ ಎದೆಹಾಲಿನ ಪ್ರಾಮುಖ್ಯತೆ ಬಗ್ಗೆ ಅನೇಕ ಉಪಯುಕ್ತ ಮಾಹಿತಿಯನ್ನು ಅವರು ಹಂಚಿಕೊಂಡಿದ್ದು ಈ ಕುರಿತಾಗಿ ಕೆಲವು ಅಂಶಗಳು ಇಲ್ಲಿವೆ..

ಸಾಂದರ್ಭಿಕ ಚಿತ್ರ-

ಬೆಂಗಳೂರು: ಮಗುವಿಗೆ ಜನ್ಮ ನೀಡುತ್ತಲೇ ತಾಯಿಯಾದವಳು ಮರು (Postpartum woman) ಜನ್ಮ ಪಡೆಯುತ್ತಾಳೆ ಎಂಬ ಮಾತಿದೆ. ತಾಯಿಯಾದ ಬಳಿಕ ಮಗುವಿನ ಆರೈಕೆ ಮಾಡುವ ಜೊತೆಗೆ ಸ್ವ ಆರೈಕೆ ಮಾಡುವುದು ಕೂಡ ಬಹಳ ಮುಖ್ಯ. ಮಗುವಿಗೆ ತಾಯಿಯ ಹಾಲು (Breastfeeding) ಅಮೃತಕ್ಕೆ ಸಮವಾಗಿದೆ. ಎದೆಹಾಲು ಉಣಿಸುವುದರಿಂದ ಅನೇಕ ಮಹಿಳೆಯದ ಸ್ತ್ರೀ ರೋಗ ಸಮಸ್ಯೆ ಕೂಡ ನಿವಾರಣೆ ಆಗಲಿದೆ. ಮಗು ಹುಟ್ಟಿದ ಬಳಿಕ ತಾಯಿಯಾದವರು ಎದೆಹಾಲು ಉಣಿಸುವುದರಿಂದ ಏನೆಲ್ಲ ಆರೋಗ್ಯ ಪ್ರಯೋಜನ ಪಡೆಯುತ್ತಾರೆ ಎಂಬ ಬಗ್ಗೆವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ಸ್ತ್ರೀ ರೋಗ ತಜ್ಞೆಯಾದ ಡಾಕ್ಟರ್ ವಿದ್ಯಾ ವಿ. ಭಟ್ ಅವರು ಅನೇಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ‌. ಮಗುವನ್ನು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯಯುತವಾಗಿ ಬೆಳೆಸುವಲ್ಲಿ ಎದೆ ಹಾಲಿನ ಪ್ರಾಮುಖ್ಯತೆ ಬಗ್ಗೆ ಅನೇಕ ಉಪಯುಕ್ತ ಮಾಹಿತಿಯನ್ನು ಅವರು ಹಂಚಿಕೊಂಡಿದ್ದು, ಈ ಕುರಿತಾಗಿ ಕೆಲವು ಅಂಶಗಳು ಇಲ್ಲಿವೆ.

ಮಗುವಿಗೆ ಹಾಲು ಉಣಿಸುವುದರಿಂದ ಮಹಿಳೆಯರಿಗೆ ದಪ್ಪ ಆಗ್ತೇನೆ ಎಂಬೆಲ್ಲ ಯೋಚನೆ ಬರುವುದು ಸಹಜ. ಆದರೆ ಮಗು ಜನಿಸಿ ಅರ್ಧ ಗಂಟೆ ಒಳಗೆ ಮಗುವಿಗೆ ಹಾಲು ಉಣಿಸುದರಿಂದ ತಾಯಿಯ ಗರ್ಭಕೋಶ ಚಿಕ್ಕದಾಗಿ ರಕ್ತಸ್ರಾವ ಕಡಿಮೆ ಆಗಲಿದೆ. ಮಗುವಿಗೂ ಹಾಲು ಬಹಳ ಒಳ್ಳೆಯ ಪೋಷಕಾಂಶ ಆಗಲಿದೆ. ಕನಿಷ್ಠ ಪಕ್ಷ 4-5 ತಿಂಗಳಾದರೂ ಎದೆಹಾಲು ಉಣಿಸಬೇಕು. ಇದರಿಂದ ಮಗು ಮತ್ತು ತಾಯಿ ಇಬ್ಬರು ಆರೋಗ್ಯಯುತ ವಾಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಎದೆಹಾಲಿನ ಪ್ರಾಮುಖ್ಯತೆ ಬಗ್ಗೆ ಡಾಕ್ಟರ್ ವಿದ್ಯಾ ವಿ. ಭಟ್ ಮಾತನಾಡಿರುವ ವಿಡಿಯೊ ಇಲ್ಲಿದೆ:



ಮಕ್ಕಳಿಗೆ ಬಾಟಲ್ ನಲ್ಲಿ ನಿಪಲ್ ಹಾಲು ನೀಡುವುದು ನಿಜಕ್ಕೂ ಪೋಷಕಾಂಶ ಅಲ್ಲ. ತೀರ ಅಗತ್ಯ ಎನಿಸಿದರೆ 5ತಿಂಗಳ ಬಳಿಕ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಈ ರೀತಿ ಮಾಡಿ. ಹೆಚ್ಚು ಬಾಟಲ್ ಹಾಲು ಕುಡಿಯುವ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರಲಿದೆ. ಪದೆ ಪದೆ ಇನ್ ಫೆಕ್ಷನ್ ಆಗುವ ಸಾಧ್ಯತೆ ಇದೆ. ಅದರ ಜೊತೆಗೆ ಹಲ್ಲುಗಳು ಕೂಡ ಮುಂಬಲ್ಲಾಗಿ ಬೆಳೆಯಲಿದೆ. ಹೀಗಾಗಿ ಆದಷ್ಟು ಬಾಟಲ್ ಹಾಲು ನೀಡದೆ ಎದೆಹಾಲು ನೀಡಿ ಮಗುವನ್ನು ಪೋಷಿಸಬೇಕಾಗಿ ಅವರು ಸಲಹೆ ನೀಡಿದ್ದಾರೆ

ಚಳಿಗಾಲದಲ್ಲಿ ಮೆಂತೆ ಸೊಪ್ಪು ಸೇವಿಸುವುದರಿಂದ ಸಿಗಲಿದೆ ಹತ್ತಾರು ಪ್ರಯೋಜನ

ತಾಯಿಗೆ ಯಾವೆಲ್ಲ ಆರೋಗ್ಯ ಪ್ರಯೋಜನೆ ಸಿಗಲಿದೆ?

  • ಗರ್ಭಾವಸ್ಥೆಯಲ್ಲಿ ಮಹಿಳೆಯರ ತೂಕವು ಅಧಿಕವಾಗಲಿದೆ. ಮಗುವಿಗೆ ಎದೆಹಾಲು ಉಣಿಸುವ ಕ್ರಮದ ಮೂಲಕ ತೂಕ ಇಳಿಕೆಯಾಗಲಿದೆ.
  • ತಾಯಿಯ ಇಮ್ಯೂನಿಟಿ ಶಕ್ತಿ ಹೆಚ್ಚಿರುವುದರಿಂದ ಎದೆಹಾಲು ಉಣಿಸುವ ಮೂಲಕ ತಾಯಿ ಮತ್ತು ಮಗು ಆರೋಗ್ಯ ಯುತವಾಗಿ ಇರಲಿದ್ದಾರೆ.
  • ತಾಯಿ ಮತ್ತು ಮಗುವಿನ ನಡುವಿನ ಅನುಬಂಧ ಹೆಚ್ಚಾಗಲಿದೆ. ತಾಯಿಯ ಮಾನಸಿಕ ಸ್ಥಿತಿ ಸಮತೋಲನದಲ್ಲಿ ಇರಲಿದೆ.
  • ಮಹಿಳೆಯರ ರಕ್ತಸ್ರಾವ ಸಮಸ್ಯೆ ಕೂಡ ಪರಿಹಾರ ಆಗಲಿದೆ.

ಎದೆಹಾಲು ಉಣಿಸದಿದ್ದರೆ ತೂಕ ಇನ್ನಷ್ಟು ಹೆಚ್ಚಾಗುತ್ತದೆ. ಮಗುವಿಗೂ ಅನೇಕ ಆರೋಗ್ಯ ಸಮಸ್ಯೆ ಬರಲಿದೆ. ಹೀಗಾಗಿ ಮಗುವಿಗೆ ಎದೆಹಾಲು ಉಣಿಸುವುದು ತಾಯಿ ಮತ್ತು ಮಗುವಿನ ಆರೋಗ್ಯ ದೃಷ್ಟಿಯಿಂದ ಬಹಳ ಉತ್ತಮ ಆರೋಗ್ಯಕ್ರಮವಾಗಿದೆ. ಹಾಲುಣಿಸಿದರೆ ಕ್ಯಾಲ್ಸಿಯಂ ಸಮಸ್ಯೆ ಬರುತ್ತದೆ ಎಂಬ ದೂರು ಕೂಡ ಅನೇಕ ಮಹಿಳೆಯರಿಂದ ಕೇಳಿರುತ್ತೇವೆ. ಆದರೆ ಕ್ಯಾಲ್ಸಿಯಂಗಾಗಿ ಇರುವ ಔಷಧವನ್ನು ತಾಯಿಯಾದವರು ಪಡೆಯಬೇಕು. ಇನ್ನು ಕೆಲವರು ಎದೆಹಾಲು ಉಣಿಸಿದ ಬಳಿಕ ಎದೆ ದೊಡ್ಡದಾಗುತ್ತೆ ಎಂದು ಹೆದರುತ್ತಾರೆ. ಇಂತಹ ಸಮಸ್ಯೆಗೆ ಬಾಡಿ ಎಕ್ಸ್ ಸೈಜ್ ಮಾಡಬೇಕು, ಯೋಗಾ ಮಾಡಬೇಕು ಆಗ ಸರಿಹೋಗುತ್ತದೆ ಎಂದು ಸಲಹೆ ನೀಡಿದ್ದಾರೆ.