ನವದೆಹಲಿ,ಜೂ.24: ಇತ್ತೀಚೆಗೆ ತೂಕ ಇಳಿಕೆಗಾಗಿ ಹರಸಾಹಸ ಮಾಡುತ್ತಿದ್ದವರು ಅನೇಕರು ಇದ್ದಾರೆ. ಅದರಲ್ಲೂ ಆಹಾರ ಸೇವನೆ ಅಂತ ಬಂದಾಗ ಕಟ್ಟುನಿಟ್ಟಾಗಿ ಪಾಲಿಸಬೇಕು, ದೇಹಕ್ಕೆ ಆಹಾರ ಬೇಕು ಅಂದಾಗಲೂ ಸೇವಿಸಲೇಬಾರದು ಎಂದು ಅನ್ನ, ಬ್ರೇಕ್ ಪಾಸ್ಟ್ ಇತ್ಯಾದಿಯನ್ನು ತ್ಯಜಿಸುವವರು ಅನೇಕರು ಇದ್ದಾರೆ. ಬಹುತೇಕರು ತೂಕ ಇಳಿಸಬೇಕೆಂದು ಅನ್ನ (Eating Rice) ಬೀಡಲೆಬೇಕು ಎಂದು ಶಪಥ ಮಾಡಿಕೊಳ್ಳುವವರು ಇದ್ದಾರೆ. ಆದರೆ ತಲೆಮಾರುಗಳಿಂದ ಸಾಂಪ್ರ ದಾಯಿಕ ಆಹಾರದ ಭಾಗವಾಗಿರುವ ಅನ್ನವನ್ನು ಬೀಡಲೆಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಹಾಗಿದ್ರೆ ಅನ್ನ ಸೇವನೆ ಮಾಡಿದ್ರೆ ತೂಕ ಹೆಚ್ಚಾಗುತ್ತಾ?
ಅನ್ನ ತಿಂದರೆ ತೂಕ ಹೆಚ್ಚುತ್ತದೆ ಎಂಬ ತಪ್ಪು ಕಲ್ಪನೆ ಹಲವು ಜನರಲ್ಲಿ ಇದೆ. ಅಕ್ಕಿಯು ದೇಹಕ್ಕೆ ನಿರಂತರ ದೈಹಿಕ ಶಕ್ತಿ ಮತ್ತು ತ್ರಾಣವನ್ನು ಒದಗಿಸಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಇತ್ತೀಚಿನ ಡಯಟ್ ಬದಿಗಿಟ್ಟು, ನಮ್ಮ ಸಾಂಪ್ರದಾಯಿಕ ಆಹಾರವಾದ ಅನ್ನವನ್ನು ಧೈರ್ಯವಾಗಿ ಸೇವನೆ ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ:
ಅಕ್ಕಿ ಜಾಗತಿಕವಾಗಿ ಪ್ರಸಿದ್ಧ ಆಹಾರ ಧಾನ್ಯವಾಗಿದೆ. ಇದು 15 ಕ್ಕೂ ಹೆಚ್ಚು ಅಗತ್ಯ ಪೋಷಕಾಂಶ ದೇಹಕ್ಕೆ ಒದಗಿಸಿ ಆರೋಗ್ಯ ರಕ್ಷಣೆ ಮಾಡುತ್ತದೆ. ಥಯಾಮಿನ್, ನಿಯಾಸಿನ್ ಮತ್ತು ವಿಟಮಿನ್ B6 ನಂತಹ ಬಿ ಜೀವಸತ್ವಗಳು ಹೇರಳವಾಗಿದ್ದು ಕಾರ್ಬೋಹೈಡ್ರೇಟ್ ಗಳ ಉತ್ತಮ ಮೂಲವಾಗಿದೆ, ಇದು ದೇಹದ ಪ್ರಾಥಮಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
Health Tips: ಕರುಳಿನ ಆರೋಗ್ಯ ಸುಧಾರಿಸುವ ನೀವು ಸೇವಿಸಬೇಕಾದ ಆಹಾರಗಳಿವು
ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ:
ಅಕ್ಕಿಯಲ್ಲಿ ಕಂಡುಬರುವ ಕಾರ್ಬೋಹೈಡ್ರೇಟ್‌ಗಳು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತವೆ. ಸಂಸ್ಕರಿಸಿದ ಆಹಾರಗಳಲ್ಲಿ ಇರುವ ಕಾರ್ಬೋಹೈಡ್ರೇಟ್‌ಗಳಿಗೆ ಹೋಲಿಸಿದರೆ ಅವು ದೇಹದಲ್ಲಿ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಆದರೆ ಅಕ್ಕಿಯೂ ದೀರ್ಘಕಾಲದವರೆಗೆ ನಿಮ್ಮನ್ನು ಪೂರ್ಣವಾಗಿ ಮತ್ತು ಚೈತನ್ಯದಿಂದ ಇರಿಸುತ್ತದೆ.
ಫೈಬರ್ ಅಂಶ ಅಧಿಕವಾಗಿದೆ:
ಆರೋಗ್ಯಕರ ಕರುಳಿಗೆ ಸಹಾಯ ಮಾಡುವ ಹಲವು ಪೋಷಕಾಂಶಗಳು ಅಕ್ಕಿಯಲ್ಲಿದೆ. ಅದರಲ್ಲೂ ಪ್ರೋಬಯಾಟಿಕ್ ಗಳು, ನಾರಿನ ಅಂಶಗಳು ಹೆಚ್ಚಾಗಿದೆ.. ಈ ಎಲ್ಲಾ ಆರೋಗ್ಯಕರ ಗುಣಗಳ ಜೊತೆಗೆ, ರೈಸ್ ಜಗತ್ತಿನಾದ್ಯಂತ ಅತ್ಯಂತ ಸುಲಭ ಹಾಗೂ ಕಡಿಮೆ ದರಕ್ಕೆ ಸಿಗುವ ಆಹಾರ ಧಾನ್ಯವಾಗಿದೆ.
ಹಾಗಾಗಿ ಅನ್ನ ಸೇವನೆಯು ನೇರವಾಗಿ ನಮ್ಮ ತೂಕವನ್ನು ಹೆಚ್ಚಿಸುವುದಿಲ್ಲ. ನೀವು ಸೇವಿಸುವ ಕ್ಯಾಲೋರಿಗಳ ಮೇರೆಗೆ ಮತ್ತು ದೈಹಿಕ ಚಟುವಟಿಕೆ ಮೇಲೆ ತೂಕ ಏರಿಕೆ ಅವಲಂಬಿತವಾಗಿರುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.