ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಕ್ತದಲ್ಲಿ ಶುಗರ್ ಲೆವೆಲ್ ಹೆಚ್ಚಾದಾಗ ನರಗಳಿಗೆ ಸಮಸ್ಯೆ ಆಗುತ್ತಾ? ಈ ಬಗ್ಗೆ ವೈದ್ಯರು ಹೇಳೋದೇನು?

Health Tips: ಒಮ್ಮೆ ಡಯಾಬಿಟಿಸ್ ಬಂದ ಮೇಲೆ ಅದನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಬದಲಾಗಿ ನಿಯಂತ್ರಣದಲ್ಲಿಟ್ಟು ಉತ್ತಮ ಜೀವನ ನಡೆಸಬಹುದು. ಡಯಾಬಿಟಿಸ್ ಕಂಡು ಬಂದಂತಹ ಸಂದರ್ಭದಲ್ಲಿ ನಾವು ಆರೋಗ್ಯ ಕಾಳಜಿ ವಹಿಸುವುದರಿಂದ ಅನೇಕ ಸಮಸ್ಯೆಗಳನ್ನು ಪ್ರಾಥಮಿಕ ಹಂತದಲ್ಲೇ ನಿರ್ಮೂಲನೆ ಮಾಡಬಹುದು ಎಂದು ಡಯಟಿಷಿಯನ್ ಡಾ. ಅನಿತಾ ಹೇಳಿದ್ದಾರೆ. ವಿಶ್ವವಾಣಿ ಹೆಲ್ತ್ ಚಾನೆಲ್‌ನ ಸಂದರ್ಶನದಲ್ಲಿ ಮಾತನಾಡಿದ ಅವರು ಹಲವು ಉಪಯುಕ್ತ ಮಾಹಿತಿಗಳನನು ತಿಳಿಸಿದ್ದಾರೆ.

ಅನಿತಾ

ಬೆಂಗಳೂರು, ಡಿ. 23: ಇತ್ತೀಚಿಗೆ ಮಕ್ಕಳಿಂದ ಹಿಡಿದು ಹಿರಿಯರ ತನಕ ಡಯಾಬಿಟಿಸ್ ಸಮಸ್ಯೆ ಕಂಡು ಬರುತ್ತಲೇ ಇದೆ. ನಮ್ಮ ದೇಹದಲ್ಲಿ ಮೇದೋಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದನೆಯನ್ನು ನಿಲ್ಲಿಸಿದಾಗ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುತ್ತದೆ. ಇದೇ ಡಯಾಬಿಟಿಸ್ ಬರಲು ಮುಖ್ಯ ಕಾರಣವಾಗುತ್ತದೆ. ಒಮ್ಮೆ ಡಯಾಬಿಟಿಸ್ ಬಂದ ಮೇಲೆ ಅದನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಬದಲಾಗಿ ನಿಯಂತ್ರಣದಲ್ಲಿಟ್ಟು ಆರೋಗ್ಯಪೂರ್ಣ ಜೀವನ ನಡೆಸಬಹುದು. ಡಯಾಬಿಟಿಸ್ ಕಂಡುಬಂದ ಸಂದರ್ಭದಲ್ಲಿ ನಾವು ಆರೋಗ್ಯ ಕಾಳಜಿ ವಹಿಸುದರಿಂದ ಅನೇಕ ಸಮಸ್ಯೆ ಪ್ರಾಥಮಿಕ ಹಂತದಲ್ಲೇ ನಿರ್ಮೂಲನೆ ಆಗುತ್ತದೆ ಎಂದು ವಿಶ್ವವಾಣಿ ಹೆಲ್ತ್ ಚಾನೆಲ್‌ನ ಸಂದರ್ಶನದಲ್ಲಿ ಡಯಟಿಷಿಯನ್ ಡಾ. ಅನಿತಾ (Dr. Anitha) ತಿಳಿಸಿ ಕೊಟ್ಟಿದ್ದಾರೆ. ಅದೇ ರೀತಿ ಡಯಾಬಿಟಿಸ್ ಬಂದು ಸಕ್ಕರೆ ಮಟ್ಟ ಹೆಚ್ಚಾದಾಗ ನರಗಳ ಮೇಲೆ ಅವುಗಳು ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಅವರು ಸಂದರ್ಶನದಲ್ಲಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ದೇಹದಲ್ಲಿ ಡಯಾಬಿಟಿಸ್ ಸಮಸ್ಯೆ ಕಂಡು ಬಂದ ಮೇಲೆ 5-6 ವರ್ಷಕ್ಕೆಲ್ಲ ನರಗಳಲ್ಲಿ ವೀಕ್‌ನೆಸ್‌ ಉಂಟಾಗಿ ಉರಿಯಾಗುವುದು, ಸೆಳೆತದ ಸಮಸ್ಯೆ ಕಂಡು ಬರುತ್ತದೆ. ನಮ್ಮ ದೇಹದ ಸಕ್ಕರೆಯ ಮಟ್ಟವು ನರಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಡಯಾಬಿಟಿಸ್ ನಿಯಂತ್ರಣ ಮಾಡಬೇಕು. ವಯಸ್ಸಾಗುತ್ತ ಹೋದಂತೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಆಗ ನರ ಸಮಸ್ಯೆಗಳು ಕಂಡು ಬರುವ ಪ್ರಮಾಣ ಕೂಡ ಹೆಚ್ಚಾಗುವ ಸಾಧ್ಯತೆ ಇದೆ‌. ಹೀಗಾಗಿ ಊಟದಲ್ಲಿ ಯಾವ ಪೋಷಕಾಂಶ ಅಳವಡಿಕೆ ಮಾಡಿದರೆ ಡಯಾಬಿಟಿಸ್ ಕಂಟ್ರೋಲ್ ಬರುತ್ತದೆ ಎಂದು ತಿಳಿಯಬೇಕು. ಅದಕ್ಕಾಗಿ ರಕ್ತ ಪರೀಕ್ಷೆ ಮಾಡಿಸಿ ವೈದ್ಯರ ಸಲಹೆ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.

ವಿಡಿಯೊ ವೀಕ್ಷಿಸಿ:



ಡಯಾಬಿಟಿಸ್‌ನಲ್ಲಿ ಬಿ 12 ಮತ್ತು ನ್ಯೂರೋಪತಿಯ ಪ್ರಾಮುಖ್ಯತೆ ತಿಳಿಯಬೇಕು. ಮಧುಮೇಹ ಸಮಸ್ಯೆ ಇರುವವರು ಬಿ 12 ವಿಟಮಿನ್ ಬಹಳ ಅಗತ್ಯವಾಗಿದ್ದು ಹೆಚ್ಚಾಗಿ ಮಾಂಸಾಹಾರದಲ್ಲಿ ಈ ಪೋಷಕಾಂಶ ಕಂಡು ಬರುತ್ತದೆ. ಸಸ್ಯಾಹಾರಿಗಳು ಧಾನ್ಯಗಳು, ಪ್ರೋಟಿನ್ ವೈದ್ಯರ ಸಲಹೆಯಂತೆ ಸೇವನೆ ಮಾಡಬೇಕು. ಒಂದು ವೇಳೆ ಇಂತಹ ಆಹಾರ ಸೇವಿಸಿದ ಬಳಿಕವು ನಿಮ್ಮ ದೇಹದಲ್ಲಿ ಬಿ 12 ವಿಟಮಿನ್ ಕಡಿಮೆ ಇದ್ದ ಸಂದರ್ಭದಲ್ಲಿ ವೈದ್ಯರ ಔಷಧಗಳ ಸಹಾಯದಿಂದ ಅದನ್ನು ಹೆಚ್ಚಿಸಬಹುದು ಎಂದು ಅವರು ಹೇಳಿದ್ದಾರೆ.

ಚಳಿಗಾಲದಲ್ಲಿ ಕೂದಲಿನ ಆರೈಕೆ ಹೇಗೆ?

ದೇಹದಲ್ಲಿ ಬಿ 12 ಮಟ್ಟ ಹೆಚ್ಚಾಗುತ್ತ ಹೋದಂತೆ ನ್ಯೂರೋಪತಿ (ನರಗಳ) ಸಮಸ್ಯೆಗೆ ಪರಿಹಾರ ಸಿಗಲಿದೆ. ನರಗಳ ಉರಿ, ಸೆಳೆತ, ನೋವು ಎಲ್ಲವೂ ಕಡಿಮೆಯಾಗಲಿದೆ. ಅಂತೆಯೇ ಮದ್ಯಪಾನ ಮಾಡುವ ಬಹುತೇಕರಿಗೆ ಬಿ 12 ವಿಟಮಿನ್ ಕೊರತೆ ಕಂಡು ಬರುತ್ತದೆ. ಅದಕ್ಕೆ ಅವರು ಮೊದಲು ಮದ್ಯಪಾನ ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಬೇಕು. ಇದಕ್ಕಾಗಿ ಹಣ್ಣುಗಳು, ಕಾಳುಗಳು, ಬಿ 12 ವಿಟಮಿನ್ ಒಳಗೊಂಡಿರುವ ಆಹಾರಗಳು ಕೂಡ ಮಾರುಕಟ್ಟೆಯಲ್ಲಿ ಸಿಗುತ್ತವೆ. ಅಂತವುಗಳನ್ನು ಸೇವಿಸಬೇಕು. ಆದರೆ ಇಂತಹ ಪ್ರಾಡಕ್ಟ್ ಸೇವಿಸುವ ಮೊದಲು ವೈದ್ಯರ ಬಳಿ ಸಮಾಲೋಚನೆ ನಡೆಸಬೇಕು.

ಮೊದಲು ರಕ್ತದಲ್ಲಿ ಬಿ 12 ವಿಟಮಿನ್ ಪ್ರಮಾಣ ಎಷ್ಟಿದೆ ಎಂದು ಪರೀಕ್ಷೆ ಮಾಡಿಸಬೇಕು. ಆ ಬಳಿಕ ಬಿ 12 ವಿಟಮಿನ್ ಲೆವೆಲ್ ಕಡಿಮೆ ಇದೆ ಎಂದು ಖಾತರಿಯಾದ ಬಳಿಕವಷ್ಟೇ ವೈದ್ಯರ ಮಾತ್ರೆ, ಔಷಧ ಸೇವಿಸಬೇಕು. ಒಂದು ವೇಳೆ ದೇಹದಲ್ಲಿ ಬಿ 12 ವಿಟಮಿನ್ ಪ್ರಮಾಣ ಅಧಿಕವಾದರೂ ಸಮಸ್ಯೆಯಾಗುತ್ತದೆ. ಅದಕ್ಕಾಗಿ ಪರೀಕ್ಷೆ ಮಾಡಿಸಿ ವೈದ್ಯಕೀಯ ಸಲಹೆ ಇಲ್ಲದೆ ಔಷದ ಸೇವನೆ ಮಾಡುವುದು ಉತ್ತಮವಲ್ಲ ಎಂದು ಡಾ. ಅನಿತಾ ವಿವರಿಸಿದ್ದಾರೆ.