ನವದೆಹಲಿ, ಜ. 5: ದೇಶದ ಹಲವು ಭಾಗಗಳಲ್ಲಿ ಚಳಿಗಾಲದ ವಾತಾವರಣ (Winter Health) ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ತಂಪಾದ ವಾತಾವರಣ ಕಂಡು ಬರುವ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಕೆಮ್ಮು, ಶೀತ, ಜ್ವರ ಜೀರ್ಣಕಾರಿ ಮತ್ತು ಆಯಾಸದಂತಹ ಅನೇಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಹಾಗಾಗಿ ಈ ಸಂದರ್ಭದಲ್ಲಿ ನಾವು ಸೇವಿಸುವಂತಹ ಆಹಾರ ಕೂಡ ಪ್ರಮುಖವಾಗುತ್ತದೆ. ಮುಖ್ಯವಾಗಿ ಸೊಪ್ಪು ಆಹಾರ ಪದಾರ್ಥಗಳನ್ನು ಸೇವಿಸುವುದು ಅಗತ್ಯ ವಾಗಿದ್ದು ಇವು ನೈಸರ್ಗಿಕ ಮಲ್ಟಿ-ವಿಟಮಿನ್‌ಗಳಂತೆ ಕಾರ್ಯನಿರ್ವಹಿಸುತ್ತವೆ. ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಚಳಿಗಾಲದ ಆರೋಗ್ಯ ಸಮಸ್ಯೆಯಿಂದ ದೂರವಿರಲು ಈ ಸೊಪ್ಪುಗಳ ಸೇವನೆ ಮಾಡುವುದು ಅತ್ಯಗತ್ಯ.
ನುಗ್ಗೆ ಸೊಪ್ಪು
ನುಗ್ಗೆ ಸೊಪ್ಪನ್ನು 'ಸೂಪರ್ ಫುಡ್' ಎಂದು ಕರೆಯಲಾಗುತ್ತದೆ. ಇದು ಕೆಲವು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ನೀಡಲಿದ್ದು ವಿಟಮಿನ್ ಎ, ಸಿ ಮತ್ತು ಇ, ಜೊತೆಗೆ ಕ್ಯಾಲ್ಸಿಯಂ, ಪೊಟ್ಯಾಸಿ ಯಮ್ ಮತ್ತು ಪ್ರೋಟೀನ್‌ಗಳನ್ನು ಹೊಂದಿದೆ..ಇದು ಉರಿಯೂತದ ಗುಣಲಕ್ಷಣಗಳಿಗೆ ಹೆಸರು ವಾಸಿಯಾಗಿದ್ದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಮೆಂತ್ಯ ಸೊಪ್ಪು
ಮೆಂತ್ಯ ಸೊಪ್ಪು ಕಬ್ಬಿಣ, ನಾರು, ವಿಟಮಿನ್ ಕೆ ಮತ್ತು ಹಲವಾರು ಬಿ ಜೀವಸತ್ವಗಳಲ್ಲಿ ಸಮೃದ್ಧ ವಾಗಿವೆ. ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಮತ್ತು ಜೀರ್ಣಕ್ರಿಯೆಯ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದ್ದು ಬಾಣಂತಿಯರಲ್ಲಿ ಎದೆಹಾಲು ಹೆಚ್ಚಿಸಲು ಕೂಡ ಪರಿಣಾಮಕಾರಿಯಾಗಿದೆ.
ಸಾಸಿವೆ ಸೊಪ್ಪು
ಚಳಿಗಾಲದ ವಿಶೇಷವಾದ ಈ ಸೊಪ್ಪು ವಿಟಮಿನ್ ಎ, ಸಿ ಇಂದ ಸಮೃದ್ಧವಾಗಿದೆ. ಇವು ಕೊಲೆ ಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಮೂಲಕ ಹೃದಯದ ಆರೋಗ್ಯಕ್ಕೆ ಅತ್ಯಮೂಲ್ಯ ಕೊಡುಗೆ ನೀಡುತ್ತದೆ. ಸಾಸಿವೆ ಸೊಪ್ಪುಗಳು ಹೆಚ್ಚಿನ ಕ್ಯಾಲ್ಸಿಯಂ ಮತ್ತು ವಿಟಮಿನ್ ಕೆ ಅಂಶದಿಂದಾಗಿ ಮೂಳೆಯ ಆರೋಗ್ಯವನ್ನು ಸಹ ಬೆಂಬಲಿಸುತ್ತವೆ.
ಉತ್ತಮ ನಿದ್ರೆ ಮಾಡಬೇಕಾ?; ಹಾಗಾದ್ರೆ ಇಂದಿನಿಂದಲೇ ಮಲಗುವ ಮುನ್ನ ಇಂತಹ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಿ
ಪಾಲಕ್ ಸೊಪ್ಪು
ಪಾಲಕ್ ಸೊಪ್ಪಿನ ಸೇವನೆ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಕಬ್ಬಿಣಾಂಶ, ಫೋಲೇಟ್ ಮತ್ತು ಮೆಗ್ನೀಸಿಯಮ್ ಅಧಿಕವಾಗಿದೆ. ಇವು ಕಣ್ಣಿನ ದೃಷ್ಟಿ ದೋಷಗಳನ್ನು ತಡೆಗಟ್ಟಲು ಅತ್ಯುತ್ತಮ ಆಹಾರವಾಗಿದೆ.
ಬತುವಾ ಸೊಪ್ಪು (ಚಕ್ರವರ್ತಿ ಸೊಪ್ಪು)
ಈ ಸೊಪ್ಪು ನಾರು, ವಿಟಮಿನ್ ಸಿ, ಬಿ 6 ಮತ್ತು ಎ ಮತ್ತು ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಇತರ ಅಗತ್ಯ ಖನಿಜಗಳಲ್ಲಿ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡಲಿದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಕೂಡ ಹೊಂದಿದೆ.
ಹೀಗೆ ಬಳಕೆ ಮಾಡಿ
- ಬೇಯಿಸಿದ ಸೊಪ್ಪನ್ನು ಮಸಾಲೆ ಮೊಸರಿನೊಂದಿಗೆ ಬೆರೆಸಿ 'ರೈತ' ಮಾಡಿ ಸೇವನೆ ಮಾಡಬಹುದು.
- ಒಣಗಿಸಿದ ನುಗ್ಗೆ ಎಲೆಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಚಹಾ ಮಾಡಬಹುದು
- ವಿವಿಧ ತರಕಾರಿ ಹಣ್ಣುಗಳ ಸಲಾಡ್ ನೊಂದಿಗೆ ಸೊಪ್ಪುಗಳ ಬಳಕೆ ಮಾಡಬಹುದು.
- ಆದರೆ ಸೊಪ್ಪುಗಳನ್ನು ಬಳಸುವ ಮೊದಲು ನೀರಿನಲ್ಲಿ ಸರಿಯಾಗಿ ತೊಳೆದುಕೊಳ್ಳುವುದು ಉತ್ತಮ