ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Diabetes Control Tips: ಮುನ್ನೆಚ್ಚರಿಕೆ ತೆಗೆದುಕೊಂಡರೆ ಮಧುಮೇಹ ನಿಯಂತ್ರಿಸಬಹುದು

ಮಧುಮೇಹ ಕಾಯಿಲೆ ಬಗ್ಗೆ ಜನಸಾಮಾನ್ಯರಿಗೆ ಇಂದಿಗೂ ತಿಳುವಳಿಕೆ ಕೊರತೆ ಇದೆ. ಇದನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚುವ ಮೂಲಕ ಸೂಕ್ತ ಚಿಕಿತ್ಸೆ ಪಡೆದರೆ ಇದನ್ನು ನಿಯಂತ್ರಣಕ್ಕೆ ತರಬಹುದು ಎನ್ನುತ್ತಾರೆ ಮಧುಮೇಹ ತಜ್ಞ ಡಾ. ಸುಮನ್. ‌ʼವಿಶ್ವವಾಣಿ ಹೆಲ್ತ್ʼ ಯೂಟ್ಯೂಬ್‌ ಚಾನಲ್‌ನೊಂದಿಗೆ ಮಾತನಾಡಿದ ಅವರು ಹಲವರು ಟಿಪ್ಸ್‌ ನೀಡಿದ್ದಾರೆ. ಆ ಕುರಿತಾದ ವಿವರ ಇಲ್ಲಿದೆ.

ಮಧುಮೇಹ ತಜ್ಞ ಡಾ. ಸುಮನ್

ಬೆಂಗಳೂರು, ಡಿ. 2: ನವಂಬರ್ 14 ಅನ್ನು ವಿಶ್ವ ಮಧುಮೇಹ ದಿನ (World Diabetes Day)ವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವದೆಲ್ಲಡೆ ಇದನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಮಧುಮೇಹ ಸಮಸ್ಯೆಗೆ ಇನ್ಸುಲಿನ್ ಕಂಡುಹಿಡಿದಿರುವ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಸರ್. ಬ್ಯಾಂಟಿಂಗ್ ಮತ್ತು ಬೆಸ್ಟ್ ಎಂಬಿಬ್ಬರ ಈ ಕ್ರಾಂತಿಕಾರಿ ಆವಿಷ್ಕಾರದಿಂದಾಗಿ ಇಂದು ಅದೆಷ್ಟೋ ಮಧುಮೇಹಿಗಳು ನಾರ್ಮಲ್ ಜೀವನವನ್ನು ನಡೆಸುತ್ತಿದ್ದಾರೆ ಎಂದು ಮಧುಮೇಹ ತಜ್ಞ ಡಾ. ಸುಮನ್ ಹೇಳಿದ್ದಾರೆ. ʼವಿಶ್ವವಾಣಿ ಹೆಲ್ತ್ʼ ಯೂಟ್ಯೂಬ್‌ ಚಾನಲ್‌ನೊಂದಿಗೆ ಮಾತನಾಡಿದ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಭಾರತದಂತಹ ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಲೇ ಇರುವುದು ಆತಂಕಕಾರಿ. ಪ್ರತಿ ಮನೆಯಲ್ಲೂ ಕನಿಷ್ಠ ಒಬ್ಬರಿಗೆ ಅಥವಾ ಇಬ್ಬರಿಗೆ ಈ ಕಾಯಿಲೆ ಇರುತ್ತದೆ. ಅದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇಂಟರ್ ನ್ಯಾಶನಲ್ ಡಯಾಬಿಟಿಕ್ ಆರ್ಗನೈಸೇಶನ್ ಸೇರಿಕೊಂಡು ವಿಶ್ವ ಮಧುಮೇಹ ದಿನವನ್ನು ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನಿಟ್ಟುಕೊಂಡು ಆಚರಿಸುತ್ತಿದೆ.

ಮಧುಮೇಹ ಕುರಿತಾದ ವಿವರ ಇಲ್ಲಿದೆ:



ಮಧುಮೇಹ ಕಾಯಿಲೆ ಬಗ್ಗೆ ಜನಸಾಮಾನ್ಯರಲ್ಲಿ ಸೂಕ್ತವಾದ ಅರಿವು ಮೂಡಿಸುವ ಮೂಲಕ ಈ ಸಮಸ್ಯೆಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಹೇಗೆ ಎನ್ನುವ ಬಗ್ಗೆ ತಿಳಿಸಲಾಗುತ್ತದೆ. ಸರಿಯಾದ ಆಹಾರ ಪದ್ಧತಿ ಮತ್ತು ಜೀವನ ಶೈಲಿ ಮೂಲಕ ಈ ಕಾಯಿಲೆಯನ್ನು ನಿಯಂತ್ರಿಸಲು ಸಾಧ್ಯವಿದೆ ಎನ್ನುವ ಅರಿವನ್ನು ಈ ದಿನಾಚರಣೆ ಮೂಲಕ ಮೂಡಿಸಲಾಗುತ್ತದೆ.

ಖಾಲಿ ಹೊಟ್ಟೆಗೆ ಹಸಿ ಬೆಳ್ಳುಳ್ಳಿಯನ್ನು ಜಗಿದು ತಿಂದ್ರೆ ಆರೋಗ್ಯಕ್ಕಾಗುವ ಲಾಭವೇನು?

ಪ್ರಿಡಯಾಬಿಟಿಸ್ ಅಂದರೆ ಕುಟುಂಬವೊಂದರಲ್ಲಿ ತಂದೆ ಅಥವಾ ತಾಯಿಗೆ ಮಧುಮೇಹ ಸಮಸ್ಯೆ ಇದ್ದಲ್ಲಿ ಅದು ಅವರ ಮಕ್ಕಳಿಗೆ ಬರುವ ಸಾಧ್ಯತೆ ಇರುತ್ತದೆ. ಅಂತಹವರು ಸಕಾಲದಲ್ಲಿ ಮಧುಮೇಹ ಪರೀಕ್ಷೆಗೆ ಒಳಗಾಗದೇ ಇದ್ದಲ್ಲಿ ಪ್ರಿಡಯಾಬಿಟಿಸ್ ವ್ಯಕ್ತಿಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.

ಸಾಮಾನ್ಯ ಆರೋಗ್ಯವಂತ ಸ್ಥಿತಿಯೂ ಅಲ್ಲದ, ಮಧುಮೇಹಿಗಳೂ ಅಲ್ಲದಂತಹವರನ್ನು ಪ್ರಿಡಯಾಬಿಟಿಕ್ ವರ್ಗಕ್ಕೆ ಸೇರಿಸಲಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಸಕ್ಕರೆ ಮಟ್ಟ 100ಕ್ಕಿಂತ ಮೇಲಿರುವುದು ಮತ್ತು ಆಹಾರ ಸೇವನೆ ಬಳಿಕ ಸಕ್ಕರೆ ಮಟ್ಟ 120ಕ್ಕಿಂತ ಕೆಳಗಿದ್ದರೆ ಅಂತಹ ಸ್ಥಿತಿಯನ್ನು ಪ್ರಿಡಯಾಬಿಟಿಕ್ ಎಂದು ಹೇಳಲಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ, ತಿಂಡಿ ತಿಂದ ಬಳಿಕ ಸಕ್ಕರೆ ಮಟ್ಟ 140ಕ್ಕಿಂತ ಮೇಲೆ ಮತ್ತು 200ರ ಒಳಗಿದ್ರೆ ಪ್ರಿಡಯಾಬಿಟಿಸ್ ಅಂತ ಹೇಳಲಾಗುತ್ತದೆ. ಪ್ರಿಡಯಾಬಿಟಿಸ್ ಅನ್ನು ಎಷ್ಟು ಬೇಗ ಪತ್ತೆಮಾಡಿ ಅದಕ್ಕೆ ಚಿಕಿತ್ಸೆ ಕೊಟ್ಟರೆ ಅಂತಹ ವ್ಯಕ್ತಿಗಳು ನಾರ್ಮಲ್ ಜೀವನವನ್ನು ನಡೆಸಲು ಸಾಧ್ಯ.

ಪ್ರಿಡಯಾಬಿಟಿಸ್ ಅನ್ನು ನಿರ್ಲಕ್ಷ್ಯ ಮಾಡಿದಲ್ಲಿ ಅದು ಬೇಗನೇ ಮಧುಮೇಹ ಸ್ಥಿತಿಗೆ ತಲುಪಿ ಬಿಡುತ್ತದೆ. ಸರಿಯಾದ ಆಹಾರ ಪದ್ಧತಿ ಅನುಸರಿಸದೇ ಇರುವುದು, ಸಿಹಿ ತಿನ್ನುವ ವಿಚಾರದಲ್ಲಿ ನಿಯಂತ್ರಣವಿಲ್ಲದೇ ಇರುವುದು, ವಾಕಿಂಗ್, ವ್ಯಾಯಾಮಗಳನ್ನು ಮಾಡದೇ ಇರುವುದು, ಇಂತಹ ವಿಚಾರಗಳನ್ನು ನಿರ್ಲಕ್ಷ್ಯ ಮಾಡಿದಲ್ಲಿ ವ್ಯಕ್ತಿಯೊಬ್ಬರಿಗೆ ಐದು ವರ್ಷದ ಬಳಿಕ ಬರಬಹುದಾದ ಮಧುಮೇಹ ಆರೇ ತಿಂಗಳಲ್ಲಿ ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇನ್ನುಳಿದಂತೆ, ಆತಂಕ, ಒತ್ತಡಗಳೂ ಸಹ ಮಧುಮೇಹ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.