ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೂತ್ರಪಿಂಡದ ಆರೋಗ್ಯಕ್ಕೆ ಉತ್ತಮವಾದ ಹಣ್ಣುಗಳು ಹಾಗೂ ಅವುಗಳನ್ನು ಸೇವಿಸಬೇಕಾದ ವಿಧಾನ ಇಲ್ಲಿದೆ!

Health Tips: ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಫಿಲ್ಟರ್ ಗಳಾಗಿ ಕಾರ್ಯನಿರ್ವಹಿಸುತ್ತದೆ. ದಿನದ 24 ಗಂಟೆಯೂ ಸದ್ದಿಲ್ಲದೆ ಕೆಲಸ ಮಾಡಿ ತ್ಯಾಜ್ಯವನ್ನು ಹೊರಹಾಕುತ್ತವೆ. ಆದರೆ ಇತ್ತೀಚೆಗೆ ಮೂತ್ರಪಿಂಡ ರೋಗಗಳ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣ ನಾವು ಸೇವಿಸುವ ಆಹಾರವಾಗಿದೆ‌. ದಿನನಿತ್ಯದ ಆಹಾರದಲ್ಲಿ ಕಿಡ್ನಿಯ ಆರೋಗ್ಯ ಮತ್ತು ದೇಹದಲ್ಲಿರುವ ಪೊಟ್ಯಾಸಿಯಮ್ ಮಟ್ಟಕ್ಕೆ ಸೂಕ್ತವಾದ ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇಂಟರ್ ನೆಟ್ ಚಿತ್ರ

ನವದೆಹಲಿ,ಸೆ.10: ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಫಿಲ್ಟರ್ ಗಳಾಗಿ ಕಾರ್ಯನಿರ್ವಹಿಸುತ್ತದೆ. ದಿನದ 24 ಗಂಟೆಯೂ ಸದ್ದಿಲ್ಲದೆ ಕೆಲಸ ಮಾಡಿ ತ್ಯಾಜ್ಯವನ್ನು ಹೊರಹಾಕುತ್ತವೆ. ಆದರೆ ಇತ್ತೀಚೆಗೆ ಮೂತ್ರಪಿಂಡ ರೋಗಗಳ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣ ನಾವು ಸೇವಿಸುವ ಆಹಾರ ವಾಗಿದೆ‌. ದಿನನಿತ್ಯದ ಆಹಾರದಲ್ಲಿ ಕಿಡ್ನಿಯ (Kidney Health) ಆರೋಗ್ಯ ಮತ್ತು ದೇಹದಲ್ಲಿರುವ ಪೊಟ್ಯಾಸಿಯಮ್ ಮಟ್ಟಕ್ಕೆ ಸೂಕ್ತವಾದ ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.​ ಕಿಡ್ನಿಯ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುವ ಪ್ರಮುಖ ಹಣ್ಣುಗಳ ಮಾಹಿತಿ ಇಲ್ಲಿದೆ.

ಸೇಬು ಹಣ್ಣು:

ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎನ್ನುವ ಮಾತನ್ನು ನೀವು ಕೇಳಿರಬಹುದು. ಮಧ್ಯಮ ಗಾತ್ರದ ಸೇಬು ಕಡಿಮೆ-ಪೊಟ್ಯಾಸಿಯಮ್ ಆಯ್ಕೆ ಎಂದು ಪರಿ ಗಣಿಸುತ್ತದೆ. ಇದು ಫೈಬರ್ ಅನ್ನು ದೇಹಕ್ಕೆ ಒದಗಿಸಲಿದ್ದು ಮೂತ್ರಪಿಂಡದ ಆರೋಗ್ಯಕ್ಕೆ ಬಹಳಷ್ಟು ರಕ್ಷಣೆ ನೀಡುತ್ತದೆ. ಸೇಬನ್ನು ಜ್ಯೂಸ್ ಮಾಡುವ ಬದಲು ಸಂಪೂರ್ಣ ಹಣ್ಣನ್ನು ಸೇವಿಸುವುದು ಸೂಕ್ತ.

Health Tips: ಮೊಬೈಲ್ ಸ್ಕ್ರೋಲ್ ಮಾಡುತ್ತ ಆಹಾರ ಸೇವಿಸುವ ಅಭ್ಯಾಸ ನಿಮಗಿದ್ಯಾ? ನೀವು ಡೇಂಜರ್‌ ಝೋನ್‌ನಲ್ಲಿದ್ದೀರಿ ಎಂದೇ ಅರ್ಥ

ಬೆರ್ರಿಗಳು:

ನಿಮ್ಮ ಆಹಾರದಲ್ಲಿ ಬೆರ್ರಿಗಳಿಗೆ ಆಯ್ಕೆ ಇರಲಿ. ಇವು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ದೇಹಕ್ಕೆ ಒದಗಿಸಲಿದ್ದು  ಪೊಟ್ಯಾಸಿಯಮ್ ಪ್ರಮಾಣ ಕಡಿಮೆಯಿ ರುತ್ತದೆ.ಅವುಗಳನ್ನು ತಾಜಾವಾಗಿ ಆನಂದಿಸಿ, ಓಟ್ ಮೀಲ್ ಗೆ ಅಥವಾ ಮೊಸರಿಗೆ ಮಿಶ್ರಣ ಮಾಡಿ ಸೇವಿಸಿ.

ದ್ರಾಕ್ಷಿ:

​ದ್ರಾಕ್ಷಿ ಅತ್ಯಂತ ಸಿಹಿಯಾದ ಹಾಗೂ ಪೌಷ್ಟಿಕಾಂಶ ಹೊಂದಿರುವ ಹಣ್ಣಾಗಿದೆ. ಕಡಿಮೆ ಪೊಟ್ಯಾಸಿಯಮ್ ಅಂಶ ಇದರಲ್ಲಿದ್ದು ಜ್ಯೂಸ್ ಮಾಡಿ ಕುಡಿಯುವುದಕ್ಕಿಂತ ಇಡೀ ಹಣ್ಣನ್ನು ಹಾಗೆಯೇ ಸೇವಿಸುವುದು ಅತ್ಯಂತ ಸೂಕ್ತ. ಇದರಿಂದ ಅನಗತ್ಯ ಸಕ್ಕರೆ ಅಂಶ ತಪ್ಪುತ್ತದೆ.

ಪೇರಳೆ ಹಣ್ಣು:

ಪೇರಳೆಗಳು ಫೈಬರ್ ನಾರಿನಂಶದಿಂದ ಕೂಡಿದ್ದು, ಕಿಡ್ನಿ ಆರೋಗ್ಯಕ್ಕೆ ವೈವಿಧ್ಯತೆಯನ್ನು ನೀಡುತ್ತದೆ. ದಿನವೂ ಒಂದೇ ರೀತಿಯ ಹಣ್ಣು ತಿನ್ನುವ ಬದಲು ಪೇರಳೆ ಹಣ್ಣನ್ನು ಸಣ್ಣದಾಗಿ ಹಚ್ಚಿ ಇತರ ಹಣ್ಣಿನ ಜೊತೆ ಸೇವನೆ ಮಾಡಬಹುದು.

ಅನಾನಸ್ :

ಕಡಿಮೆ ಪೊಟ್ಯಾಸಿಯಮ್ ಆಯ್ಕೆಗಳಲ್ಲಿ ಅನಾನಸ್ ಕೂಡ ಒಂದಾಗಿದೆ. ಇದರ ನೈಸರ್ಗಿಕವಾಗಿ ಸಿಹಿಯೂ ಹೆಚ್ಚು ರುಚಿ ನೀಡುವುದಲ್ಲದೆ ಕಿಡ್ನಿಯ ಆರೋಗ್ಯಕ್ಕೂ ಒಳ್ಳೆಯದು.

ಪೀಚ್ ಹಣ್ಣು:

​ಪೀಚ್ ಹಣ್ಣು ಕಡಿಮೆ ಪೊಟ್ಯಾಸಿಯಮ್ ಹೊಂದಿರುವ ಹಣ್ಣಾಗಿದೆ. ಇದನ್ನು ಇಡೀ ಹಣ್ಣಾಗಿ ಅಥವಾ ತುಂಡುಗಳನ್ನಾಗಿ ಮಾಡಿ ಸೇವಿಸಬಹುದು.

ಈ ಬಗ್ಗೆ ಗಮನ ಹರಿಸಿ:

ಇದು ಕಿಡ್ನಿಗೆ ಒಳ್ಳೆಯ ಹಣ್ಣು ಎಂದು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ದೊಡ್ಡ ತಪ್ಪು. ಕಡಿಮೆ ಪೊಟ್ಯಾಸಿಯಮ್ ಇರುವ ಹಣ್ಣನ್ನು ಸಹ ಹೆಚ್ಚು ತಿಂದಾಗ ಪೊಟ್ಯಾಸಿಯಮ್ ಮಟ್ಟ ಹೆಚ್ಚಾಗಬಹುದು.