ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರತಿದಿನ ರಾತ್ರಿ ತಡವಾಗಿ ಊಟ ಮಾಡುತ್ತೀರಾ? ಹಾಗಾದ್ರೆ ಈ ಆರೋಗ್ಯ ಸಮಸ್ಯೆ ಬರಬಹುದು ಹುಷಾರ್‌

ಕೆಲಸದ ಒತ್ತಡ, ಸುದೀರ್ಘ ಪ್ರಯಾಣ ಮತ್ತು ಬದಲಾಗುತ್ತಿರುವ ದಿನಚರಿಯಿಂದಾಗಿ ಪ್ರತಿನಿತ್ಯ ರಾತ್ರಿಯ ಊಟ ಹೆಚ್ಚಾಗಿ ತಡವಾಗುತ್ತದೆ. ಒಂದು ದಿನ ತಡವಾಗಿ ಊಟ ಮಾಡುವುದರಿಂದ ದೊಡ್ಡ ಸಮಸ್ಯೆ ಉಂಟಾಗದಿರಬಹುದು, ಆದರೆ ಇದನ್ನೆ ಪ್ರತಿದಿನ ಅಭ್ಯಾಸ ಮಾಡಿಕೊಂಡರೆ ನಿಮ್ಮ ಜೀರ್ಣಕ್ರಿಯೆ, ಶುಗರ ಲೆವಲ್ ಹಾಗೂ ನಿದ್ರೆಯ ಮೇಲೆ ಒತ್ತಡ ಉಂಟಾಗಬಹುದು.

ಸಂಗ್ರಹ ಚಿತ್ರ

ಬೆಂಗಳೂರು: ಕೆಲಸದ ಒತ್ತಡ, ಸುದೀರ್ಘ ಪ್ರಯಾಣ ಮತ್ತು ಬದಲಾಗುತ್ತಿರುವ ದಿನಚರಿಯಿಂದಾಗಿ (Early Dinner) ಪ್ರತಿನಿತ್ಯ ರಾತ್ರಿಯ ಊಟ ಹೆಚ್ಚಾಗಿ (Health Tips) ತಡವಾಗುತ್ತದೆ. ಒಂದು ದಿನ ತಡವಾಗಿ ಊಟ ಮಾಡುವುದರಿಂದ ದೊಡ್ಡ ಸಮಸ್ಯೆ ಉಂಟಾಗದಿರಬಹುದು, ಆದರೆ ಇದನ್ನೆ ಪ್ರತಿದಿನ ಅಭ್ಯಾಸ ಮಾಡಿಕೊಂಡರೆ ನಿಮ್ಮ ಜೀರ್ಣಕ್ರಿಯೆ, ಶುಗರ ಲೆವಲ್ ಹಾಗೂ ನಿದ್ರೆಯ ಮೇಲೆ ಒತ್ತಡ ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ.

ವೈದ್ಯರ ಪ್ರಕಾರ ನಾವೂ ಊಟ ಮಾಡುವ ಸಮಯ ಬಹಳ ಮುಖ್ಯ. ಏಕೆಂದರೆ ಊಟ ಮಾಡಿದ ತಕ್ಷಣ ಮಲಗಿದರೆ ಆಹಾರ ಜೀರ್ಣವಾಗಿ ಹೊಟ್ಟೆ ಖಾಲಿಯಾಗಲು ದೇಹಕ್ಕೆ ಪೂರ್ಣ ಸಮಯ ದೊರೆಯುವುದಿಲ್ಲ. ಕೆಲಸದ ಒತ್ತಡದ ನಡುವೆ ಪ್ರತಿದಿನ ತಡವಾಗಿ ಊಟ ಮಾಡುವುದು ದೊಡ್ಡ ವಿಷಯವಲ್ಲ ಅನಿಸಬಹುದು. ಆದರೆ ನಾವು ತಡವಾಗಿ ಊಟ ಮಾಡುವುದು ನಮ್ಮ ಜೀರ್ಣಕ್ರಿಯೆ ಮೇಲಷ್ಟೆ ಅಲ್ಲ ನಮ್ಮ ದೇಹದ ಹಲವು ಅಂಗಗಳ ಮೇಲೆಯೂ ಪ್ರಭಾವ ಬೀರುತ್ತದೆ.

ತಡರಾತ್ರಿ ಊಟಕ್ಕೂ ಮಧುಮೇಹಕ್ಕೂ ಇರುವ ಸಂಬಂಧವೇನು?

ನಾವು ಸೇವಿಸುವ ಆಹಾರಕ್ಕೆ ತಕ್ಕಂತೆ ನಮ್ಮ ದೇಹದ ಪ್ರತಿಕ್ರಿಯೆಯೂ ಬದಲಾಗುತ್ತದೆ. ಬೆಳಗಿನ ಸಮಯಕ್ಕೆ ಹೋಲಿಸಿದರೆ ರಾತ್ರಿ ಸಮಯ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಕಡಿಮೆ ಇರುತ್ತದೆ. ಮಲಗುವ ಸಮಯದಲ್ಲಿ ಊಟ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಇದು ಪ್ರತಿನಿತ್ಯ ಅಭ್ಯಾಸವಾದರೆ ಪ್ರಿ-ಡಯಾಬಿಟಿಸ್, ಮಧುಮೇಹ, ಅತಿಯಾದ ತೂಕ, ಇನ್ಸುಲಿನ್ ಮುಂತಾದ ಕಾಯಿಲೆಗಳು ಪ್ರಾರಂಭವಾಗುತ್ತವೆ.

ರಾತ್ರಿ ತಡವಾಗಿ ಊಟ ಮಾಡುವುದರಿಂದ ದಿನ ನಿತ್ಯ ನಾವು ಹಲವು ಸಮಸ್ಯೆಗಳನ್ನು ಎದುರಿಸುತ್ತೇವೆ. ಊಟವಾದ ಬಳಿಕ ಹೊಟ್ಟೆ ಭಾರ ಎನಿಸಲು ಪ್ರಾರಂಭಿಸುತ್ತದೆ. ಊಟದ ಬಳಿಕ ತಕ್ಷಣ ಮಲಗಿದರೆ ದೇಹದಲ್ಲಿ ಜೀರ್ಣಕ್ರಿಯೆಗೆ ಸಮಸ್ಯೆಯಾಗಿ ಆಸಿಡಿಟಿ, ಎದೆ ಉರಿ, ಪಿತ್ತದಂತಹ ಸಮಸ್ಯೆ ಪ್ರಾರಂಭವಾಗುತ್ತದೆ.

ತಡರಾತ್ರಿ ಊಟ ನಂತರ ಹೊಟ್ಟೆ ಬಾರ ಎನಿಸುವುದು ಕೇವಲ ಅತಿಯಾಗಿ ತಿನ್ನುವುದರಿಂದ ಮಾತ್ರವಲ್ಲ, ಊಟ ಮಾಡಿದ ತಕ್ಷಣ ಮಲಗುವುದರಿಂದ ಆಸಿಡಿಟಿ, ಎದೆ ಉರಿ, ಹೊಟ್ಟೆ ಬಾರ, ಮತ್ತು ಪಿತ್ತದಂತಹ ಸಮಸ್ಯೆಗಳು ಎದುರಿಸಬೇಕಾಗತ್ತದೆ. ಊಟದ ತಕ್ಷಣ ಮಲಗುವುದರಿಂದ ಹೊಟ್ಟೆಯಲ್ಲಿರುವ ಆಹಾರ ಮತ್ತು ಆಸಿಡ್ ಸುಲಭವಾಗಿ ಅನ್ನನಾಳದ ಕಡೆಗೆ ಹೋಗುತ್ತದೆ. ರಾತ್ರಿ ಖಾರ, ಜಿಡ್ಡಿನ ಪದಾರ್ಥ, ಕರಿದ ತಿಂಡಿಯನ್ನು ತಿಂದು ಮಲಗಿದರೆ ಈ ಸಮಸ್ಯೆ ಇನ್ನಷ್ಟು ಕಾಡಬಹುದು. ತಡವಾಗಿ ಊಟ ಮಾಡುವುದು ನಿದ್ರಾಹೀನತೆಗೂ ಕಾರಣವಾಗಬಹುದು.

ಮಣ್ಣಿನ ಪಾತ್ರೆಯಲ್ಲಿ ಮಾಡುವ ಆಹಾರದ ರುಚಿ ಹೆಚ್ಚು, ಆರೋಗ್ಯ ಸಮಸ್ಯೆ ಕಮ್ಮಿ; ಯಾಕೆ?

ಹಾಗಾದರೆ ಯಾವಾಗ ಊಟ ಮಾಡಬೇಕು?

ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಕೆಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ. ನಿರ್ದಿಷ್ಟ ಸಮಯಕ್ಕೆ ಊಟ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಇಲ್ಲವಾದರೆ, ಮಲಗಲು ಕನಿಷ್ಟ ಎರಡರಿಂದ ಮೂರು ಗಂಟೆಗಳ ಮೊದಲು ಊಟ ಮಾಡಿದರೆ ಆರೋಗ್ಯಕ್ಕೆ ಹಿತ. ಅತಿಯಾದ ಊಟಕ್ಕಿಂತ ತರಕಾರಿಗಳು, ಪ್ರೋಟಿನ್, ಧಾನ್ಯಗಳು ಮತ್ತು ಆರೋಗ್ಯಕರ ಕೊಬ್ಬನ್ನ ಒಳಗೊಂಡ ಹಿತಮಿತವಾದ ಪೌಷ್ಟಿಕ ಅಹಾರವನ್ನ ಸೇವಿಸುವುದು ಉತ್ತಮ. ಒತ್ತಡದ ಸಂದರ್ಭದಲ್ಲಿ ಊಟ ಮಾಡಲೇಬೇಕಾದ ಪರಿಸ್ಥಿತಿ ಇದ್ದರೆ ಕಡಿಮೆ ಪ್ರಮಾಣದ ಆಹಾರ ಸೇವಿಸುವುದು ಉತ್ತಮ. ರಾತ್ರಿ ಊಟದ ಬಳಿಕ 10 ನಿಮಿಷದ ವಾಕಿಂಗ್‌ ಮಾಡಿದರೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಪ್ರತಿನಿತ್ಯ ಕೆಲ ಶಿಸ್ತುಬದ್ಧ ನಿಯಮಗಳನ್ನು ರೂಢಿಸಿಕೊಂಡರೆ ಆರೋಗ್ಯಕರ ಜೀವನವನ್ನು ನಮ್ಮದಾಗಿಸಿಕೊಳ್ಳಬಹುದು.

Vishakha Bhat Heggar

View all posts by this author