ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ನೀಡಬೇಕಾಗುತ್ತದೆ. ಅತೀಯಾದ ತೇವಾಂಶದಿಂದಾಗಿ ಸುಲಭವಾಗಿ ಬ್ಯಾಕ್ಟೀರಿಯಾ ಸೋಂಕುಗಳಿಗೂ ಕಾರಣವಾಗಬಹುದು. ಅದರಲ್ಲೂ ಮಾನ್ಸೂನ್ ಸಮಯವು ಕಳಪೆ ನಿದ್ರೆ, ಜೀರ್ಣಕ್ರಿಯೆಯ ಸಮಸ್ಯೆ ಮತ್ತು ನಿಶಕ್ತಿಗೆ (Feeling Lazy for Rainy Season) ಕಾರಣವಾಗಬಹುದು. ಹಾಗಾಗಿ ದಿನವಿಡೀ ನಿಮ್ಮ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು,ಕೆಲವೊಂದು ಅಭ್ಯಾಸ ಕ್ರಮದ ಮೂಲಕ ಸರಿದೂಗಿಸಬಹುದು. ಮಾನ್ಸೂನ್ ಸಮಯದಲ್ಲಿ ನಿಮ್ಮ ಶಕ್ತಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತಜ್ಞರು ಈ ಸಲಹೆಗಳನ್ನು ನೀಡಿದ್ದಾರೆ
ಮಳೆಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯು ನಿಮ್ಮ ಮನಸ್ಥಿತಿ ಮತ್ತು ಶಕ್ತಿಯ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ..ಇದು ಆಲಸ್ಯತನಕ್ಕೆ ಕಾರಣವಾಗಿ ನಿಮ್ಮ ದಿನವನ್ನು ಬೋರಿಂಗ್ ಆಗಿ ಇರಿಸಬಹುದು. ಈ ಆಲಸ್ಯವನ್ನು ಸೂಕ್ತ ಆಹಾರ ಪದ್ಧತಿ ಹಾಗೂ ಜೀವನಶೈಲಿಯ ಮೂಲಕ ಸುಲಭವಾಗಿ ಪರಿಹರಿಸಿಕೊಳ್ಳಬಹುದು.
ಪ್ರೊಟೀನ್ ಹಾಗೂ ಪೋಷಕಾಂಶಭರಿತ ಆಹಾರ
ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಹೊಂದಿಸಲು ಪ್ರೋಟೀನ್ ಭರಿತ ಆಹಾರವನ್ನು ಸೇವನೆ ಮಾಡಿ. ಮೊಟ್ಟೆ, ಬೇಳೆ, ತಾಜಾ ಮೊಸರು, ಮೊಳಕೆ ಕಾಳು ಬೀಜ ಆಹಾರಗಳಿಗೆ ಆಧ್ಯತೆ ನೀಡಿ. ಹಾಗೆಯೇ ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳ ಸೇವನೆಯೂ ಮಾಡಿ. ನಿಮ್ಮ ದೈಹಿಕ ಶ್ರಮಕ್ಕೆ ಅನುಗುಣವಾಗಿ ಪ್ರತಿದಿನ ಅಗತ್ಯವಿರುವಷ್ಟು ಪ್ರೊಟೀನ್ ಸೇವನೆ ಮಾಡುವುದು ಅಗತ್ಯವಾಗಿ ಇರುತ್ತದೆ.
ಬೇಡ ಎನಿಸಿದರೂ ನೀರು ಕುಡಿಯಿರಿ
ಮಳೆಗಾಲದಲ್ಲಿ ತಂಪು ವಾತಾವರಣ ಇರುವುದರಿಂದ ನೀರನ್ನು ದೂರ ಇಡುತ್ತೇವೆ. ಆದರೆ ದೇಹದ ಆಯಾಸಕ್ಕೆ ದಿನವಿಡೀ ಹೈಡ್ರೇಟೆಡ್ ಆಗಿರುವುದು ಅತ್ಯಗತ್ಯ.ನಿರ್ಜಲೀಕರಣವು ಮಳೆಗಾಲದಲ್ಲಿ ನಿಮ್ಮ ದೇಹವನ್ನು ಆಲಸ್ಯ ಮತ್ತು ಹೆಚ್ಚು ದಣಿದಂತೆ ಮಾಡುತ್ತದೆ. ಹಾಗಾಗಿ ನೀರಿನ ಸೇವನೆಗೆ ಪ್ರಮುಖ್ಯತೆ ನೀಡಿ.
ರೋಗ ನಿರೋಧಕ ಶಕ್ತಿಯಿಂದ ಕೂದಲಿನ ಆರೈಕೆಯವರೆಗೆ...ನೆಲ್ಲಿಕಾಯಿಯ 14 ಲಾಭಗಳು ಇಲ್ಲಿವೆ
ಸರಿಯಾದ ನಿದ್ರೆಗೆ ಒತ್ತು ನೀಡಿ
ನಿದ್ರೆಯ ಗುಣಮಟ್ಟವು ನಿಮ್ಮ ಶಕ್ತಿಯ ಮಟ್ಟಕ್ಕೆ ನೇರವಾಗಿ ಪರಿಣಾಮ ಬೀರುತ್ತದೆ. ಏಕೆಂದರೆ ಉತ್ತಮ ವಿಶ್ರಾಂತಿ ಪಡೆದ ದೇಹ ಮತ್ತು ಮೆದುಳು ಅತ್ಯುತ್ತಮ ಸಾಮರ್ಥ್ಯದ ಮೂಲಕ ಆ್ಯಕ್ಟೀವ್ ಆಗಿ ಇರಿಸಬಹುದು. ಅನಿಯಮಿತ ನಿದ್ರೆಯು ರೋಗನಿರೋಧಕ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತದೆ.
ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು
ಮಾನ್ಸೂನ್ ಸಮಯದಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಹೆಚ್ಚು ಅವಶ್ಯಕ. ಇದು ಹೆಚ್ಚಿನ ಪ್ರಮಾಣದ ಅಗತ್ಯವಾದ ವಿಟಮಿನ್ ಡಿ ಪ್ರಮಾಣವನ್ನು ನೀಡುವಂತೆ ಮಾಡುತ್ತದೆ. ಬೆಳಗಿನ ನಡಿಗೆಗೆ ಹೋಗುವುದು, ನೈಸರ್ಗಿಕ ಬೆಳಕಿನಲ್ಲಿ ಒಳಾಂಗಣ ವ್ಯಾಯಾಮ ಮಾಡುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.
ಕರುಳಿನ ಆರೋಗ್ಯವನ್ನು ಬಲಪಡಿಸಿ
ನಿಮ್ಮ ಆಹಾರದಲ್ಲಿ ಸಾಕಷ್ಟು ಹುದುಗಿಸಿದ ಆಹಾರವನ್ನು ಸೇವಿಸುವುದು ಅಗತ್ಯ. ಮಳೆಗಾಲದಲ್ಲಿ ನಿಮ್ಮ ರೋಗನಿರೋಧಕ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಲು ಮೊಸರು, ಮಜ್ಜಿಗೆ, ಹಣ್ಣುಗಳು ಮತ್ತು ತರಕಾರಿಗಳ ಸೇವನೆಗೆ ಆಧ್ಯತೆ ನೀಡಿ.