ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯಾವಾಗಲೂ ಖುಷಿ- ಖುಷಿಯಾಗಿರಬೇಕಾ? ಈ ವಿಚಾರ ನೆನಪಿನಲ್ಲಿಡಿ

Health Tips: ಸಾಮಾನ್ಯವಾಗಿ ನಮ್ಮ ದೈಹಿಕ ಆರೋಗ್ಯಕ್ಕಾಗಿ ವ್ಯಾಯಾಮ, ಡಯೆಟ್,ವಾಕಿಂಗ್ ಹೀಗೆ ಹಲವು ಕಾರ್ಯದಲ್ಲಿ ತೊಡಗಿಕೊಳ್ಳುತ್ತೇವೆ. ಅದೇ ರೀತಿ ಮನಸ್ಸಿನ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡ ಬೇಕು. ಹಾಗಿದ್ರೆ ನಾವು ಯಾವ ರೀತಿಯ ಬದಲಾವಣೆ ಮಾಡಿಕೊಳ್ಳಬೇಕು, ಮಾನಸಿಕ ಆರೋಗ್ಯದ ರಕ್ಷಣೆ ಹೇಗೆ ಎಂದು ಡಾ. ನವೀನ್ ಎಲ್ಲಂಗಲ ಅವರು ಮಾಹಿತಿ ನೀಡಿದ್ದಾರೆ.

ಡಾ. ನವೀನ್ ಎಲ್ಲಂಗಲ

ಬೆಂಗಳೂರು,ಮಾ.16: ದೇಹದ ಆರೋಗ್ಯಕ್ಕೆ ನೀಡುವ ಪ್ರಮುಖ್ಯತೆಯನ್ನು ನಾವು ಮನಸ್ಸಿನ ಆರೋಗ್ಯಕ್ಕೂ ನೀಡಬೇಕಾಗುತ್ತದೆ. ಹಾಗಾಗಿ ದೈನಂದಿನ ಜೀವನದಲ್ಲಿ ಕೆಲವು ಬದಲಾವಣೆಯನ್ನು ನಾವು ಮಾಡಬೇಕಾಗುತ್ತದೆ.ಸಾಮಾನ್ಯವಾಗಿ ನಮ್ಮ ದೈಹಿಕ ಆರೋಗ್ಯಕ್ಕಾಗಿ ವ್ಯಾಯಾಮ, ಡಯೆಟ್, ವಾಕಿಂಗ್ ಹೀಗೆ ಹಲವು ಕಾರ್ಯದಲ್ಲಿ ತೊಡಗಿ ಕೊಳ್ಳುತ್ತೇವೆ. ಅದೇ ರೀತಿ ಮನಸ್ಸಿನ ಆರೋಗ್ಯಕ್ಕೆ (Happy Life) ಹೆಚ್ಚಿನ ಒತ್ತು ನೀಡಬೇಕು. ಹಾಗಿದ್ರೆ ನಾವು ಯಾವ ರೀತಿಯ ಬದಲಾವಣೆ ಮಾಡಿಕೊಳ್ಳಬೇಕು, ಮಾನಸಿಕ ಆರೋಗ್ಯದ ರಕ್ಷಣೆ ಹೇಗೆ ಎಂದು ಡಾ. ನವೀನ್ ಎಲ್ಲಂಗಲ ಅವರು ಮಾಹಿತಿ ನೀಡಿದ್ದಾರೆ.

ನಮ್ಮ ಮನಸ್ಸಿನ ಆರೋಗ್ಯಕ್ಕೆ ಪಂಚಕೋಶಗಳು ಮುಖ್ಯ ವಾಗಿರುತ್ತದೆ. ಎಂದರೆ ಅನ್ನಮಯ, ಪ್ರಾಣಮಯ, ಮನೋ ಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳಾಗಿವೆ. ಇವು ದೇಹಕ್ಕೆ ಮತ್ತು ಮನಸ್ಸಿಗೆ ಸಮತೋಲನ ಒದಗಿಸುತ್ತದೆ‌. ಅನ್ನಮಯ ಕೋಶವು ದೈಹಿಕ ಆರೋಗ್ಯ ರಕ್ಷಣೆ ಮಾಡಿ ಕೊಳ್ಳುವುದು. ಮಾಂಸ, ಮೂಳೆ, ಚರ್ಮ, ಅಂಗಾಂಗ ಗಳನ್ನು ಒಳಗೊಂಡ ಈ ಕೋಶವು ದೇಹವನ್ನು ಬಲಪಡಿಸುತ್ತದೆ.

ವಿಡಿಯೋ ನೋಡಿ:



ಮುಖ್ಯವಾಗಿ ಮನಸ್ಸಿನ ಆರೋಗ್ಯಕ್ಕೆ ಪ್ರಾಣಮಯ ಕೋಶವನ್ನು ನಾವು ಅಭಿವೃದ್ಧಿ ಪಡಿಸ ಬೇಕಾಗುತ್ತದೆ.ಇದು ಭೌತಿಕ ದೇಹ ಮತ್ತು ಮನಸ್ಸಿನ ನಡುವಿನ ಸೇತುವೆಯಾಗಿದ್ದು ಆರೋಗ್ಯಕರ ಜೀವನ ಶೈಲಿಯನ್ನು ರಕ್ಷಿಸುತ್ತದೆ. ನಾವು ಪ್ರಾಣಾಯಾಮ ಮತ್ತು ಯೋಗಾಭ್ಯಾಸ, ಧ್ಯಾನ ಇತ್ಯಾದಿಗಳನ್ನು ಮಾಡುವ ಮೂಲಕ ಮನಸ್ಸಿಗೆ ನೆಮ್ಮದಿ ನೀಡಬಹುದು.

ಹಾಗೆಯೇ ನಮ್ಮ ಮನೋಮಯ ಕೋಶವನ್ನು ಅಭಿವೃದ್ಧಿ ಪಡಿಸುವುದು. ಮನಸ್ಸಿನಲ್ಲಿ ಉಂಟಾಗುವ ಆಲೋಚನೆಗಳಿಗೆ ನಾವೇ ಪರಿಹಾರ ಕಂಡು ಕೊಳ್ಳುವುದು. ಇದು ನಮ್ಮ ಆಲೋಚನೆ ಗಳು, ಭಾವನೆಗಳು ಇತ್ಯಾದಿ ವ್ಯಕ್ತಿತ್ವವನ್ನು ಒಳಗೊಂಡಿದೆ. ಹಾಗಾಗಿ ಮಾನಸಿಕ ಒತ್ತಡ, ಭಯ, ಕೋಪ, ಆತಂಕ ಕಡಿಮೆ ಮಾಡಿ ಮನಸ್ಸಿಗೆ ನೆಮ್ಮದಿ ನೀಡುವುದು. ಪುಸ್ತಕ ಓದುವುದು, ನಮ್ಮ ಇಷ್ಟದ ವ್ಯಕ್ತಿಗಳ ಜೊತೆ ಮಾತನಾಡುವುದು ಇತ್ಯಾದಿ

Health Tips: ಆಹಾರಕ್ಕೆ ಸೋಡಾ ಹಾಕುವ ಅಭ್ಯಾಸ ನಿಮಗಿದೆಯೆ? ಆರೋಗ್ಯಕ್ಕೆ ಎಷ್ಟು ಸೇಫ್‌? ಇಲ್ಲಿದೆ ನೋಡಿ ಮಾಹಿತಿ

ವಿಜ್ಞಾನಮಯ ಕೋಶ ಅಂದ್ರೆ ನಮ್ಮ ಬುದ್ಧಿಶಕ್ತಿಯನ್ನು ಗ್ರಹಿಸಿಕೊಳ್ಳುವುದು. ಇದು ಬುದ್ಧಿ, ವಿವೇಚನೆಗೆ ಮಹತ್ವ ನೀಡುವಂತದ್ದು. ಉತ್ತಮ ಕಲಿಕೆಗೆ, ಸರಿಯಾದ ನಿರ್ಧಾರಕ್ಕೆ ಇದು ಅಗತ್ಯವಾಗಿದೆ

ಆನಂದಮಯ ಕೋಶವು ಮನಸ್ಸಿಗೆ ಖುಷಿ ನೀಡುವ ಕೋಶವಾಗಿದೆ.ಇದು ಹೊರಗಿನ ವಸ್ತುಗಳಿಂದ ಬರುವ ಸಂತೋಷವಲ್ಲ, ಬದಲಾಗಿ ಮನಸ್ಸಿನ ಒಳಗಿನಿಂದ ಬರುವ ಸಹಜ ಖುಷಿ. ನಮ್ಮ ದೈನಂದಿನ ದಿನದಲ್ಲಿ ಏನು ಬದಲಾವಣೆ ಮಾಡಿ ಕೊಂಡಿದ್ದೇವೆ ಅನ್ನೋದಕ್ಕೆ ಇದು ಪರಿಣಾಮ ಕಾರಿಯಾಗಿದೆ. ಉದಾಹರಣೆ ಇಷ್ಟದ ಆಹಾರ ಸೇವನೆ ಮಾಡುವುದು, ಇಷ್ಟದ ಕೆಲಸ ಮಾಡುವುದು ಇತ್ಯಾದಿ. ಹೀಗೆಲ್ಲ ದಿನನಿತ್ಯದಲ್ಲಿ ಬದಲಾವಣೆ ಮಾಡಿ ಕೊಳ್ಳುವ ಮೂಲಕ ನಾವು ಖುಷಿಯಾಗಿರಬಹುದು.