ಬೆಂಗಳೂರು, ಮಾ. 19: ಪ್ರತಿಯೊಬ್ಬರಿಗೂ ತನ್ನ ಆಯುಷ್ಯವನ್ನು ಹೆಚ್ಚಿಸಬೇಕು ಎನ್ನುವ ಮಹತ್ವಾಕಾಂಕ್ಷೆ ಇದ್ದೇ ಇರುತ್ತದೆ. ಆದರೆ ಇತ್ತೀಚಿನ ವರ್ಷದಲ್ಲಿ ಸಣ್ಣ ವಯಸ್ಸಿನಲ್ಲೇ ವಿವಿಧ ರೋಗಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ನಮ್ಮ ಜೀವನ ಶೈಲಿ, ನಾವು ತೆಗೆದುಕೊಳ್ಳುವ ಆಹಾರ ಇತ್ಯಾದಿ ಪ್ರಮುಖ ಕಾರಣ. ಮನುಷ್ಯನ ಆಯುಷ್ಯ ವೃದ್ಧಿ (Tips to Live Longer) ಹೇಗೆ? ಯಾವ ರೀತಿಯ ಜೀವನ ವಿಧಾನವನ್ನು ನಾವು ಅನುಸರಿಸಬೇಕು? ಎಂಬೆಲ್ಲ ಪ್ರಶ್ನೆಗಳಿಗೆ ʼವಿಶ್ವವಾಣಿ ಹೆಲ್ತ್ʼ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರೊ. ಸುತ್ತೂರು ಎಸ್. ಮಾಲಿನಿ ಉತ್ತರಿಸಿದ್ದಾರೆ.
ಉತ್ತಮ ಜೀವನ ಶೈಲಿಯೂ ನಮ್ಮ ಜೀವಿತಾವಧಿ ಹೆಚ್ಚಿ ಸುತ್ತದೆ ಎಂದು ನೀವು ಕೇಳಿರಬಹುದು. ಹಿಂದಿನ ಕಾಲದಲ್ಲಿ ಕಾಲರಾ, ಪ್ಲೇಗ್ ಇತ್ಯಾದಿ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆ ಹೆಚ್ಚು ಇತ್ತು. ಇದರಿಂದ ಹೆಚ್ಚಿನ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಬಳಿಕ ವೈದ್ಯಕೀಯ ಕ್ಷೇತ್ರ ಅಭಿವೃದ್ಧಿ ಆಗಿ ಅಗತ್ಯ ಸೌಲಭ್ಯಗಳು ಬಂದಿವೆ. ಆದರೆ ಮನುಷ್ಯ ಆಧುನಿಕ ಜೀವನ ಶೈಲಿಯಲ್ಲಿ ಎಷ್ಟು ವರ್ಷ ಬದುಕಿದ್ದಾನೆ ಅನ್ನೋದಕ್ಕಿಂತ ಹೆಚ್ಚಾಗಿ ಎಷ್ಟು ಆರೋಗ್ಯಯುತವಾಗಿ ಬದುಕಿದ್ದಾನೆ ಅನ್ನುವುದು ಮುಖ್ಯವಾಗುತ್ತದೆ.
ವಿಡಿಯೊ ನೋಡಿ:
ಅತ್ಯುತ್ತಮ ಆಹಾರ ಸೇವಿಸುವುದರಿಂದ ನಮ್ಮ ಜೀವಿತಾ ಅವಧಿಯನ್ನು ಹೆಚ್ಚಿಸಬಹುದು. ಆದೇ ರೀತಿ ವೈದ್ಯಕೀಯ ಚಿಕಿತ್ಸೆಯಲ್ಲಿ ಪ್ರಗತಿ ಕಂಡುಬಂದಿದ್ದು, ಇದು ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯವಾಗಿರಿಸಲು ಹೆಚ್ಚು ಪ್ರೇರಣಾದಾಯಕ. ಆದರೆ ಮನುಷ್ಯ ಹೆಚ್ಚು ಆರೋಗ್ಯಯುತವಾಗಿರಲು ಕಡಿಮೆ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕೆಂದು ಪ್ರೊ. ಸುತ್ತೂರು ಎಸ್. ಮಾಲಿನಿ ಸಲಹೆ ನೀಡಿದ್ದಾರೆ.
ಕೇಸರಿ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭ ಗೊತ್ತಾ?
ಇತ್ತೀಚೆಗೆ ನಾವು ಸೇವಿಸುವ ಆಹಾರಗಳೆ ಡಯಾಬಿಟಿಸ್, ರಕ್ತದೊತ್ತಡ, ಇತ್ಯಾದಿ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಅದರಲ್ಲೂ ಲೆಕ್ಕಕ್ಕಿಂತ ಹೆಚ್ಚು ಆಹಾರ ಸೇವಿಸಿದಾಗ ಕೊಬ್ಬು ಹೆಚ್ಚಾಗುತ್ತದೆ. ಇದರಿಂದ ತೂಕ ಜಾಸ್ತಿಯಾಗಿ ವಿವಿಧ ಕಾಯಿಲೆಗಳಿಗೂ ಕಾರಣವಾಗಬಹುದು.
ಈ ಬದಲಾವಣೆ ಮಾಡಿಕೊಳ್ಳಿ
- ಹೆಚ್ಚು ವರ್ಷ ಮತ್ತು ಆರೋಗ್ಯವಾಗಿ ಬದುಕಲು ಪೌಷ್ಟಿಕ ಆಹಾರವನ್ನು ಸೇವಿಸಿ.
- ಪ್ರತಿದಿನ ವ್ಯಾಯಾಮ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
- ಧ್ಯಾನ, ಯೋಗ ಮಾಡುವುದರಿಂದ ಮನಸ್ಸನ್ನು ಸಂತೋಷವಾಗಿರಿಸಿ ಮತ್ತು ಒತ್ತಡವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು.
- ದೇಹಕ್ಕೆ ಅಗತ್ಯವಾದ ಆಹಾರವನ್ನೇ ಸೇವಿಸಿ. ರಾತ್ರಿ ಊಟ ಕಡಿಮೆ ಮಾಡಿಕೊಳ್ಳಿ.
- ನಮ್ಮ ದೇಹದ ಮುಖ್ಯ ಭಾಗವಾದ ಹೃದಯ, ಲಿವರ್, ಮೆದುಳಿನ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು.