ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸುಸ್ತು-ಆಯಾಸವೇ? ನಿಮ್ಮ ಹಿಮೋಗ್ಲೋಬಿನ್ ಹೆಚ್ಚಿಸಲು ಈ ಆಹಾರ ಸೇವಿಸಿ

ಕೆಲಸದ ಒತ್ತಡ ಮತ್ತು ಆಹಾರ ಪದ್ದತಿಯಿಂದ ಸದಾ ಸುಸ್ತು ಮತ್ತು ಆಯಾಸ ಅನುಭವಿಸುವುದು ಸಾಮಾನ್ಯ. ಇದು ರಕ್ತದಲ್ಲಿನ ಹಿಮೋಗ್ಲೋಬಿನ್ ಕೊರತೆಯಿಂದಲೂ ಆಗಿರಬಹುದು. ದೇಹದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾದಾಗ ಅಥವಾ ವಿಟಮಿನ್ಸ್‌ಗಳಾದ ಬಿ12 ಮತ್ತು ಬಿ9ನಂತಹ ಪೋಷಕಾಂಶಗಳು ಕಡಿಮೆಯಾದಾಗ ಈ ಸಮಸ್ಯೆ ಉಂಟಾಗಬಹುದು. ಹಾಗಾಗಿ ಇದನ್ನು ನಿವಾರಿಸಲು ಸರಿಯಾದ ಆಹಾರ ಕ್ರಮ ಪಾಲಿಸದರೆ ಹಿಮೋಗ್ಲೋಬಿನ್ ಮಟ್ಟ ಸುಧಾರಿಸಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ. 26: ಆಧುನಿಕ ಜೀವನಶೈಲಿಯಿಂದಾಗಿ ಅನೇಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಕೆಲಸದ ಒತ್ತಡ ಮತ್ತು ಆಹಾರ ಪದ್ದತಿಯಿಂದ ಸದಾ ಸುಸ್ತು ಮತ್ತು ಆಯಾಸ ಅನುಭವಿಸುವುದು ಸಾಮಾನ್ಯ. ಆದರೆ ಕೆಲವರು ಇದನ್ನು ನಿರ್ಲಕ್ಷಿಸುತ್ತಾರೆ. ಇದಕ್ಕೆ ರಕ್ತದಲ್ಲಿನ ಹಿಮೋಗ್ಲೋಬಿನ್ (Hemoglobin) ಕೊರತೆಯೂ ಕಾರಣವಾಗಿರಬಹುದು. ದೇಹದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾದಾಗ ಅಥವಾ ವಿಟಮಿನ್ಸ್‌ಗಳಾದ ಬಿ12 ಮತ್ತು ಬಿ9ನಂತಹ ಪೋಷಕಾಂಶಗಳು ಕಡಿಮೆಯಾದಾಗ ಈ ಸಮಸ್ಯೆ ಉಂಟಾಗಬಹುದು. ಹಾಗಾಗಿ ಇದನ್ನು ನಿವಾರಿಸಲು ಸರಿಯಾದ ಆಹಾರ ಕ್ರಮ ಪಾಲಿಸದರೆ ಹಿಮೋಗ್ಲೋಬಿನ್ ಮಟ್ಟ ಸುಧಾರಿಸಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಕಬ್ಬಿಣಾಂಶಯುಕ್ತ ಆಹಾರ

ಕಬ್ಬಿಣದ ಅಂಶ ಇರುವ ಆಹಾರಗಳನ್ನು ಸೇವಿಸಿದರೆ ಹಿಮೋಗ್ಲೋಬಿನ್ ಮಟ್ಟ ಸುಧಾರಣೆಯಾಗುತ್ತದೆ. ಕೆಲವು ಉತ್ತಮ ಮೂಲಗಳಾದ ದಾಳಿಂಬೆ, ಖರ್ಜೂರ, ಬೀಟ್‌ರೂಟ್, ದ್ವಿದಳ ಧಾನ್ಯಗಳು, ಕುಂಬಳಕಾಯಿ ಬೀಜ, ಎಳ್ಳು, ಮಸೂರ, ಮೀನು, ಕೋಳಿ, ಕೆಂಪು ಮಾಂಸ, ಡಾರ್ಕ್ ಚಾಕೊಲೇಟ್, ಮೊಟ್ಟೆಗಳು ಮತ್ತು ಹಸಿರು ಎಲೆಗಳನ್ನು ಸೇವಿಸಿ.

ವಿಟಮಿನ್ ಬಿ12 ಇರುವ ಆಹಾರ

ಹಾಲು, ಮೊಸರು ಮತ್ತು ಚೀಸ್ ವಿಟಮಿನ್ ಬಿ12ರ ಉತ್ತಮ ಮೂಲವಾಗಿದ್ದು, ಇದು ಹಿಮೋಗ್ಲೋಬಿನ್ ಉತ್ಪಾದನೆಗೆ ಅಗತ್ಯ. ಮಾಂಸಾಹಾರದಲ್ಲಿ ಮೊಟ್ಟೆ ಉತ್ತಮ ಮೂಲ.

ದ್ವಿದಳ ಧಾನ್ಯಗಳು

ಹಿಮೋಗ್ಲೋಬಿನ್ ಹೆಚ್ಚಿಸಲು ದ್ವಿದಳ ಧಾನ್ಯಗಳು ಹೆಚ್ಚು ಪ್ರಯೋಜನಕಾರಿ. ಮಸೂರ, ಕಡಲೆ ಮತ್ತು ಕಿಡ್ನಿ ಬೀನ್ಸ್ ಕಬ್ಬಿಣ ಮತ್ತು ಪ್ರೋಟೀನಿಂದ ಸಮೃದ್ಧವಾಗಿವೆ.

ಇಂತಹ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಿ

ಫೋಲೇಟ್ ಆಹಾರ

ರಕ್ತದ ಕಣಗಳ ಅಭಿವೃದ್ಧಿಗೆ ಫೋಲೇಟ್ ಎಂಬ ಪೋಷಕಾಂಶ ಬೇಕು. ಕಿತ್ತಳೆ, ನಿಂಬೆಹಣ್ಣಿನಂತಹ ಸಿಟ್ರಸ್ ಹಣ್ಣುಗಳು ಮತ್ತು ಪಾಲಕ್ ಸೊಪ್ಪಿನಲ್ಲಿ ಫೋಲೇಟ್ ಹೆಚ್ಚಾಗಿರುತ್ತದೆ.

ಡ್ರೈ ಫ್ರೂಟ್ಸ್

ರಕ್ತ ಹೀನತೆ ಸಮಸ್ಯೆ ಇದ್ದವರು ಡ್ರೈ ಫ್ರೂಟ್ಸ್ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಲ್ಲಿ ಸಾಕಷ್ಟು ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆ ಸಮಸ್ಯೆ ಹೋಗಲಾಡಿಸಬಹುದು.

ಇವುಗಳಿಂದ ದೂರವಿರಿ

ಚಹಾ ಮತ್ತು ಕಾಫಿ: ಊಟದ ಮೊದಲು ಅಥವಾ ನಂತರ ಕನಿಷ್ಠ 1-2 ಗಂಟೆಗಳ ಕಾಲ ಚಹಾ ಕಾಫಿಯಿಂದ ದೂರವಿರಿ. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕಬ್ಬಿಣಾಂಶ ಹೆಚ್ಚಿರುವ ಊಟದ ಜತೆಗೆ ಸೇವಿಸಬಾರದು.