ನವದೆಹಲಿ, ಮೆ 9: ಬೇಸಿಗೆಯಲ್ಲಿ (Summer Food) ದೇಹದ ರಕ್ಷಣೆಗಾಗಿ ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳಷ್ಟು ಅವಶ್ಯಕ. ದೇಹವನ್ನು ತಂಪಾಗಿಸಲು ಸಾಕಷ್ಟು ಪ್ರಮಾಣದ ನೀರು ಕುಡಿಯುವುದು, ತರಕಾರಿ-ಹಣ್ಣುಗಳ ಸೇವನೆಯೂ ಅಗತ್ಯವಾಗಿರುತ್ತದೆ. ಶಾಖದ ಪರಿಣಾಮ ದಿಂದ ದೇಹವು ನಿರ್ಜಲೀಕರಣಗೊಂಡಾಗ ಅತೀ ಆಯಾಸಕ್ಕೆ ಕಾರಣವಾಗಬಹುದು, ಈ ಸಂದರ್ಭದಲ್ಲಿ ಅತಿ ಹೆಚ್ಚಿನ ಉಷ್ಣಾಂಶವನ್ನು ಉಂಟು ಮಾಡುವ ಆಹಾರಗಳನ್ನು ಸೇವನೆ ಮಾಡಿದರೆ ಹಲವು ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು. ಕೆಲವೊಂದು ಆಹಾರಗಳು ತಂಪು ನೀಡುತ್ತವೆ ಎಂದು ಸೇವಿಸಿ ಅವು ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತವೆ. ಹಾಗಿದ್ರೆ ಯಾವುದು ಅಂತಹ ಆಹಾರಗಳು?
ಐಸ್ ಕ್ರೀಮ್:
ಐಸ್ ಕ್ರೀಮ್ ತಿಂದಾಗ ದೇಹ ತಂಪಾದ ವಾತಾವರಣ ನೀಡಬಹುದು. ಆದರೆ ಅದರ ಹೆಚ್ಚಿನ ಕೊಬ್ಬು ಮತ್ತು ಸಕ್ಕರೆ ಅಂಶವು ಕರಗಿಸಿಕೊಳ್ಳಲು ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಬೇಕಾಗಿ ಬರಬಹುದು. ಈ ಪ್ರಕ್ರಿಯೆಯಲ್ಲಿ ದೇಹದ ಒಳಭಾಗದಲ್ಲಿ ಶಾಖ ಉತ್ಪತ್ತಿಯಾಗುತ್ತದೆ. ಇದರಿಂದ ದೇಹಕ್ಕೆ ಅಸ್ವಸ್ಥತೆ ಕಾಡಬಹುದು.
ಮಸಾಲೆಯುಕ್ತ ಆಹಾರಗಳು:
ಮೆಣಸಿನಕಾಯಿಯಂತಹ ಮಸಾಲೆಯುಕ್ತ ಪದಾರ್ಥಗಳನ್ನು ಒಳಗೊಂಡಿರುವ ಭಕ್ಷ್ಯಗಳು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸಬಹುದು. ಹೆಚ್ಚಿನ ಉಪ್ಪು ಮತ್ತು ಸಕ್ಕರೆ ಇರುವ ಪ್ಯಾಕ್ ಮಾಡಿದ ಆಹಾರಗಳು ದೇಹದಲ್ಲಿ ಹೆಚ್ಚಿನ ನಿರ್ಜಲೀಕರಣ ಉಂಟು ಮಾಡಬಹುದು.
ಸಂಸ್ಕರಿಸಿದ ಆಹಾರಗಳು:
ಸಾಮಾನ್ಯವಾಗಿ ಸೋಡಿಯಂ ಮತ್ತು ಸಕ್ಕರೆಗಳಿಂದ ತುಂಬಿರುವ ಸಂಸ್ಕರಿಸಿದ ಆಹಾರಗಳು ಸಾಕಷ್ಟು ಹಾನಿಕಾರಕವಾಗಬಹುದು. ಈ ವಸ್ತುಗಳನ್ನು ಸೇವಿಸುವುದರಿಂದ ಆಲಸ್ಯ ಮತ್ತು ಆಯಾಸದ ಭಾವನೆ ಉಂಟಾಗುತ್ತದೆ.
ಆಲ್ಕೋಹಾಲ್:
ಇದು ರಿಫ್ರೆಶ್ ಆಗಿರಬಹುದು ಆದರೆ ಮದ್ಯಪಾನವು ದೇಹದಿಂದ ನೀರನ್ನು ಹೊರಹಾಕುವಂತೆ ಮಾಡಿ ಮೆಟಬಾಲಿಸಂ ಮೇಲೆ ಪ್ರಭಾವ ಬೀರಿ ಉಷ್ಣತೆ ಹೆಚ್ಚಿಸುತ್ತದೆ.
ಗೆಡ್ಡೆ, ಗೆಣಸು ಬೇರು ತರಕಾರಿಗಳು:
ಕ್ಯಾರೆಟ್, ಮೂಲಂಗಿನಂತ ತರಕಾರಿಗಳಲ್ಲಿ ಕಾರ್ಬೋ ಹೈಡ್ರೇಟ್‌ಗಳು ಮತ್ತು ಫೈಬರ್‌ನಲ್ಲಿ ಅಧಿಕವಾಗಿದ್ದರೂ ಈ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಇದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ.
ಮಾವಿನ ಹಣ್ಣು:
ಬೇಸಿಗೆಯ ಹಣ್ಣು ಮಾವಿನ ಹಣ್ಣು ಸ್ವಾಭಾವಿಕವಾಗಿ 'ಥರ್ಮೋಜೆನಿಕ್' ಗುಣ ಹೊಂದಿದೆ. ಇದು ದೇಹದಲ್ಲಿ ಶಾಖ ಹೆಚ್ಚಿಸುತ್ತದೆ. ಇದನ್ನು ತಿನ್ನುವ ಮುನ್ನ ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡುವುದು ಉತ್ತಮ
ಶುಂಠಿ:
ಶುಂಠಿಯಲ್ಲಿ ಜಿಂಜರಾಲ್ ಮತ್ತು ಶೋಗೋಲ್ ಇದ್ದು, ಇದು ರಕ್ತನಾಳಗಳನ್ನು ಹಿಗ್ಗಿಸುತ್ತದೆ ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ, ಆದರೆ ದೇಹದಾದ್ಯಂತ ಬೆಚ್ಚಗಿನ ಉಷ್ಣತೆ ಸಂವೇದನೆಯನ್ನು ಉಂಟುಮಾಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಸೌತೆಕಾಯಿ, ಕಲ್ಲಂಗಡಿ, ಪುದೀನ, ಮೊಸರು ಮತ್ತು ತೆಂಗಿನ ನೀರಿನಂತ ಆಹಾರ ಸೇವಿಸಬಹುದು.