ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗರ್ಭಾಶಯದ ಅಸಹಜ ರಕ್ತಸ್ರಾವ ಕುರಿತು ಉಚಿತ ಆಯುರ್ವೇದ ಸಮಾಲೋಚನೆ ಮತ್ತು ಚಿಕಿತ್ಸಾ ಶಿಬಿರ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಉಡುಪಿ ಇವರ ವತಿಯಿಂದ ಗರ್ಭಾಶಯದ ಆಸಹಜ ರಕ್ತಸ್ರಾವ (Abnormal Uterine Bleeding – AUB) ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗಾಗಿ ಉಚಿತ ಆಯುರ್ವೇದ ಸಮಾಲೋಚನೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.

ಉಚಿತ ಆಯುರ್ವೇದ ಸಮಾಲೋಚನೆ ಮತ್ತು ಚಿಕಿತ್ಸಾ ಶಿಬಿರ

-

Ashok Nayak
Ashok Nayak Jan 27, 2026 11:13 AM

ಉಡುಪಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಉಡುಪಿ ಇವರ ವತಿಯಿಂದ ಗರ್ಭಾಶಯದ ಅಸಹಜ ರಕ್ತಸ್ರಾವ (Abnormal Uterine Bleeding – AUB) ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗಾಗಿ ಉಚಿತ ಆಯುರ್ವೇದ ಸಮಾಲೋಚನೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.

ಗರ್ಭಾಶಯದ ಅಸಹಜ ರಕ್ತಸ್ರಾವ (AUB) ಎಂದರೆ, ಋತುಚಕ್ರದ ನಿಯಮಿತ ಸಮಯ ದಲ್ಲಿ ಅಥವಾ ಎರಡು ಋತುಚಕ್ರಗಳ ಮಧ್ಯದಲ್ಲಿ ಗರ್ಭಾಶಯದಿಂದ ಅಧಿಕ ಪ್ರಮಾಣದ ಹಾಗೂ ದೀರ್ಘಕಾಲದ ರಕ್ತಸ್ರಾವವಾಗುವುದು. ಈ ಸಮಸ್ಯೆ ಮಹಿಳೆಯರ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಒತ್ತಡಕ್ಕೂ ಕಾರಣವಾಗುತ್ತದೆ.

ಇದನ್ನೂ ಓದಿ: Health Tips: ನಿತ್ಯದ ಆರೋಗ್ಯಕ್ಕೆ ಈ ತರಕಾರಿಗಳನ್ನು ಸೇವಿಸಲು ಮರೆಯಬೇಡಿ!

AUB ಸಮಸ್ಯೆಯ ಸಾಮಾನ್ಯ ಲಕ್ಷಣಗಳು:

1.ಋತುಚಕ್ರದ ಸಮಯದಲ್ಲಿ ಅಧಿಕ ಪ್ರಮಾಣದ ರಕ್ತಸ್ರಾವ

2.ಸಾಮಾನ್ಯಕ್ಕಿಂತ ಹೆಚ್ಚು ದಿನಗಳವರೆಗೆ ನಡೆಯುವ ಅಥವಾ ತೀವ್ರ ಹೊಟ್ಟೆನೋವಿನಿಂದ ಕೂಡಿದ ಋತುಸ್ರಾವ

3.ಋತುಚಕ್ರದ ಮಧ್ಯದಲ್ಲೇ ಅನಿಯಮಿತ ರಕ್ತಸ್ರಾವ

4.ಅಧಿಕ ರಕ್ತಸ್ರಾವದಿಂದ ಉಂಟಾಗುವ ರಕ್ತಹೀನತೆ, ದೌರ್ಬಲ್ಯ ಮತ್ತು ದಣಿವು

ಈ ರೀತಿಯ ಲಕ್ಷಣಗಳನ್ನು ಅನುಭವಿಸುತ್ತಿರುವ ಮಹಿಳೆಯರು ತಜ್ಞರ ಸಲಹೆ ಪಡೆಯು ವುದು ಅತ್ಯಂತ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಶಿಬಿರದ ಪ್ರಮುಖ ಪ್ರಯೋಜನಗಳು:

1.ಅನುಭವಸಂಪನ್ನ ಸ್ತ್ರೀರೋಗ ತಜ್ಞರಿಂದ ಉಚಿತ ಆಯುರ್ವೇದ ಸಮಾಲೋಚನೆ

2.ಅರ್ಹ ಮಹಿಳೆಯರಿಗೆ ಉಚಿತ ರಕ್ತ ಪರೀಕ್ಷೆ ಮತ್ತು ಸ್ಕ್ಯಾನಿಂಗ್ ಸೌಲಭ್ಯ

3.ಆಯ್ಕೆಯಾದ ಮಹಿಳೆಯರಿಗೆ 4 ತಿಂಗಳುಗಳ ಕಾಲ ಉಚಿತ ಆಯುರ್ವೇದ ಔಷಧ ವಿತರಣೆ

ಶಿಬಿರದ ವಿವರಗಳು:

ಅರ್ಹ ವಯಸ್ಸು: 18 ರಿಂದ 40 ವರ್ಷಗಳು

ಸಮಯ: ಬೆಳಿಗ್ಗೆ 10.00 ರಿಂದ ಸಂಜೆ 4.00 (ಸೋಮವಾರದಿಂದ ಶನಿವಾರದವರೆಗೆ)

ಸ್ಥಳ: ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ಹೊರರೋಗಿ ವಿಭಾಗ ಸಂಖ್ಯೆ–1,

ಎಸ್.ಡಿ.ಎಮ್. ಆಯುರ್ವೇದ ಆಸ್ಪತ್ರೆ, ಉಡುಪಿ

ಆರೋಗ್ಯದ ಬಗ್ಗೆ ಮೌನ ವಹಿಸುವ ಬದಲು ಸಮಯೋಚಿತ ಚಿಕಿತ್ಸೆ ಪಡೆಯಬೇಕು ಎಂಬ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಆಸಕ್ತ ಮಹಿಳೆಯರು ಈ ಅವಕಾಶ ವನ್ನು ಸದುಪಯೋಗಪಡಿಸಿಕೊಳ್ಳುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಮನವಿ ಮಾಡಿದೆ.