ನವ ದೆಹಲಿ: ಪ್ರತಿದಿನ ಅಡುಗೆ ಮಾಡಲು ವಿವಿಧ ತರಕಾರಿಗಳು, ತಿನ್ನೋದಕ್ಕೆ ಹಣ್ಣುಗಳು ಇತ್ಯಾದಿಯನ್ನು ಒಂದೇ ಬಾರಿಗೆ ಖರೀದಿ ಮಾಡಿ ಅವುಗಳನ್ನು ರೆಫ್ರಿಜರೇಟ್‌ನಲ್ಲಿ (Refrigerator) ಸಂಗ್ರಹಿಸಿ ಇಡುತ್ತೇವೆ. ಆದರಲ್ಲೂ ಈ ಬೇಸಗೆಯಲ್ಲಿ ಆಹಾರವನ್ನು ಸುರಕ್ಷಿತವಾಗಿ ಮತ್ತು ತಾಜಾವಾಗಿಡಲು ರೆಫ್ರಿಜರೇಟರ್ ಬಳಕೆ ಹೆಚ್ಚಾಗಿದೆ. ಆದರೆ ಕೆಲವು ಹಣ್ಣುಗಳನ್ನು ಶೈತ್ಯೀಕರಣಗೊಳಿಸಬಾರದು ಅಂದರೆ ಫ್ರಿಡ್ಜ್‌ನಲ್ಲಿ ಇಡಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಯಾಕೆಂದರೆ ಅದು ಅವುಗಳ ರುಚಿ, ತಾಜಾತನ ಮತ್ತು ಪೌಷ್ಟಿಕಾಂಶದ ಮೇಲೆ ಪರಿಣಾಮ ಬೀರುತ್ತದೆ (Health Tips). ಆಹಾರ ತಜ್ಞರ ಪ್ರಕಾರ ಕೆಲವೊಂದು ಹಣ್ಣುಗಳು ಫ್ರಿಡ್ಜ್‌ಗಿಂತ ಹೊರಗಡೆ ಇದ್ದರೆ, ಅವುಗಳ ತಾಜಾತನ ದೀರ್ಘಕಾಲ ಉಳಿಯುತ್ತದೆ. ಅದರ ಜತೆ ರೆಫ್ರಿಜರೇಟರ್ ಬಿಡುಗಡೆ ಮಾಡುವ ರಾಸಾಯನಿಕ ದೇಹಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆಯು ಇದೆ. ಹಾಗಾಗಿ ಕೆಲವೊಂದು ಹಣ್ಣನ್ನು ಫ್ರಿಡ್ಜ್‌ನಲ್ಲಿ ಇರಿಸಬಾರದು.
ಬಾಳೆಹಣ್ಣುಗಳು
ಬಾಳೆಹಣ್ಣುಗಳನ್ನು ಎಂದಿಗೂ ರೆಫ್ರಿಜರೇಟರ್‌ನಲ್ಲಿ ಇಡಬಾರದು. ಇದನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಅವುಗಳ ಸಿಪ್ಪೆಗಳು ಕಪ್ಪು ಬಣ್ಣಕ್ಕೆ ತಿರುಗಿ ಬಹಳ ಬೇಗನೆ ಹಣ್ಣಾಗಿ ಬಿಡುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ ತಾಜಾತನ ಮತ್ತು ರುಚಿಗಾಗಿ ಕೋಣೆಯ ಉಷ್ಣಾಂಶದಲ್ಲಿ ಸಂಗ್ರಹಿಸಲು ಸಲಹೆ ನೀಡಲಾಗುತ್ತದೆ.
ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣನ್ನು ರೆಫ್ರಿಜಿರೇಟರ್‌ನಲ್ಲಿ ಇಟ್ಟರೆ ಬೇಗನೆ ಹಾಳಾಗುತ್ತದೆ. ಇದರಿಂದ ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು ಕಡಿಮೆಯಾಗುತ್ತದೆ ಮತ್ತು ಅದರ ಪೌಷ್ಟಿಕಾಂಶದ ಮೌಲ್ಯವೂ ಕಡಿಮೆಯಾಗುತ್ತದೆ. ಇದಕ್ಕಾಗಿ ಯೇ ತಜ್ಞರು ಕಲ್ಲಂಗಡಿಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸದಂತೆ ಶಿಫಾರಸು ಮಾಡುತ್ತಾರೆ.
ಪಪ್ಪಾಯಿ
ಪಪ್ಪಾಯಿ ಹಣ್ಣನ್ನು ಕೂಡ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ ಇಡಬಾರದು. ಇದರ ರುಚಿ ಮತ್ತು ಹಣ್ಣಿನಲ್ಲಿ ಬದಲಾವಣೆಗಳು ಉಂಟಾಗಲಿದೆ. ರೆಫ್ರಿಜರೇಟರ್‌ನ ಕಡಿಮೆ ತಾಪಮಾನವು ಪಪ್ಪಾಯಿಯ ನೈಸರ್ಗಿಕ ರುಚಿ ಹಾಳು ಮಾಡುತ್ತದೆ. ಆದ್ದರಿಂದ ಪಪ್ಪಾಯಿಯನ್ನು ಸಂಪೂರ್ಣವಾಗಿ ಹಣ್ಣಾಗುವವರೆಗೆ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವುದನ್ನು ತಪ್ಪಿಸಿ.
ಸೇಬುಹಣ್ಣು
ಸೇಬು ಹಣ್ಣಿನ ಬೆಲೆ ಜಾಸ್ತಿಯಾದರೂ ದಿನವೂ ಸೇಬು ತಿಂದರೆ ಉತ್ತಮ ಎಂದು ಖರೀದಿಸಿ ರೆಫ್ರಿಜರೇಟರ್‌ನಲ್ಲಿ ಇಡುತ್ತಾರೆ. ಆದರೆ ಸೇಬು ಹಣ್ಣನ್ನು ಫ್ರಿಜ್ ನಲ್ಲಿಟ್ಟರೆ ಇದರ ಲ್ಲಿರುವ ಕಿಣ್ವಗಳು ಬೇಗನೆ ಹಣ್ಣಾಗುಂತೆ ಮಾಡಲಿದೆ. ಹಾಗಾಗಿ ಸೇಬನ್ನು ಯಾವಾಗಲೂ ಫ್ರಿಡ್ಜ್‌ನಲ್ಲಿ ಇಡಬೇಡಿ. ಸೇಬಿನ ಹೊರತಾಗಿ, ಪ್ಲಮ್, ಚೆರ್ರಿ ಮತ್ತು ಪೀಚ್‌ಗಳಂತಹ ಹಣ್ಣುಗಳನ್ನು ಸಹ ಫ್ರಿಡ್ಜ್‌ನಲ್ಲಿ ಇಡುವುದನ್ನು ತಪ್ಪಿಸಬೇಕು.
ಸಿಟ್ರಸ್ ಹಣ್ಣುಗಳು
ನಿಂಬೆ ಮತ್ತು ಕಿತ್ತಳೆಯಂತಹ ಹಣ್ಣುಗಳನ್ನು ಕೂಡ ಫ್ರಿಡ್ಜ್‌ನಲ್ಲಿಟ್ಟು ತಿನ್ನಬಾರದು. ಅವುಗಳಲ್ಲಿ ಸಿಟ್ರಿಕ್ ಆಮ್ಲ ಅಧಿಕವಾಗಿದ್ದು ಸಿಟ್ರಿಕ್ ಆಮ್ಲ ಅಧಿಕವಿರುವ ಹಣ್ಣುಗಳು ಶೀತ ವಾತಾವರಣದಲ್ಲಿ ಬೇಗನೆ ಹಾಳಾಗಿ ಹೋಗುತ್ತವೆ. ಹಾಗಾಗಿ ಅವುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟಾಗ ಅವುಗಳಲ್ಲಿರುವ ಪೋಷಕಾಂಶಗಳು ನಾಶವಾಗಲಿದ್ದು ಇತರ ಹಣ್ಣು ತರಕಾರಿ ಯೊಂದಿಗೆ ಇಟ್ಟಾಗ ಬೇಗನೆ ಹಾಳಾಗಲಿದೆ.
ಇದನ್ನು ಓದಿ: Health Tips: ಮೊಳಕೆ ಬಂದ ಆಲೂಗಡ್ಡೆಯನ್ನು ಬಳಸಬಹುದೇ?
ಮಾವಿನ ಹಣ್ಣು
ಮಾವಿನ ಹಣ್ಣನ್ನು ಫ್ರಿಡ್ಜ್‌ನಲ್ಲಿ ಇರಿಸಿದರೆ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟುಗಳ ಪ್ರಮಾಣ ಕಡಿಮೆಯಾಗಲಿದೆ. ಹಾಗಾಗಿ ಮಾವಿನ ಹಣ್ಣಿನ ಪೌಷ್ಟಿಕ ಮೌಲ್ಯಗಳು ಕಡಿಮೆಯಾಗುತ್ತವೆ. ಹಾಗಾಗಿ ಮಾವಿನ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿರಿಸಿದರೆ ಮಾವಿನ ಹಣ್ಣು ವಿಷಕಾರಿಯಾಗಬಹುದು. ಹೀಗಾಗಿ ಇದನ್ನು ಬೆಚ್ಚಗಿರುವ ಮತ್ತು ನೆರಳಿನ ಸ್ಥಳದಲ್ಲಿ ಇರಿಸಿ ಒಂದೆರಡು ದಿನಗಳ ಬಳಿಕ ಸ್ವಾಭಾವಿಕವಾಗಿ ಹಣ್ಣಾಗುವಂತೆ ಮಾಡಿ ಸೇವಿಸಿ.
ಅವಕಾಡೊ
ಅವಕಾಡೊ ಹಣ್ಣಾಗದೆ ಇದ್ದರೆ ಆಗ ನೀವು ಅದನ್ನು ಫ್ರಿಡ್ಜ್ ನಲ್ಲಿ ಇಡಲು ಹೋಗಬೇಡಿ. ಯಾಕೆಂದರೆ ಇದರಿಂದ ಅವಕಾಡೊ ಹಣ್ಣಗುವ ಬದಲು ಬೇಗನೆ ಹಳಾಗಲಿದೆ. ಇದನ್ನು ನೀವು ಕೋಣೆಯ ತಾಪಮಾನದಲ್ಲಿ ಇಟ್ಟರೆ ಆಗ ಅದು ಬೇಗನೆ ಹಣ್ಣಾಗುವುದು.