ಬೆಂಗಳೂರು: ವಿಶ್ವ ಮೆದುಳು ದಿನದ ಅಂಗವಾಗಿ, ಫೋರ್ಟಿಸ್ ನೆಟ್‌ವರ್ಕ್‌ನ ಭಾಗವಾಗಿರುವ ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆ ತನ್ನ ವಿಶೇಷ ಸಮುದಾಯ ಆರೋಗ್ಯ ಜಾಗೃತಿ ಕಾರ್ಯಕ್ರಮವಾದ ಬ್ರೀತ್ ಫಾರ್ ದಿ ಬ್ರೇನ್ 2.0" ಅನ್ನು ಯಶಸ್ವಿಯಾಗಿ ಆಯೋಜಿಸಿತು. ಸುಮಾರು 250ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆದುಳಿನ ಆರೋಗ್ಯ, ಮಾನಸಿಕ ನೆಮ್ಮದಿ ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ಅರಿವು ಪಡೆದರು.
ಕಳೆದ ವರ್ಷ ಇದೇ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ದೊರೆತ ಅತ್ಯುತ್ತಮ ಸ್ಪಂದನೆಯಿಂದ ಪ್ರೇರಿತವಾಗಿ, ಈ ವರ್ಷ *"ಬ್ರೀತ್ ಫಾರ್ ದಿ ಬ್ರೇನ್ 2.0"* ಅನ್ನು ಮತ್ತಷ್ಟು ವಿಸ್ತೃತವಾಗಿ ಆಯೋಜಿಸಲಾಯಿತು. ಮೆದುಳಿನ ಆರೋಗ್ಯದ ಬಗ್ಗೆ ಜನರಲ್ಲಿ ನಿರಂತರ ಜಾಗೃತಿ ಮೂಡಿಸು ವುದು ಹಾಗೂ ಪ್ರಾಣಾಯಾಮ, ಧ್ಯಾನ ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ತಿಳಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಕಾರ್ಯಕ್ರಮದ ಆರಂಭದಲ್ಲಿ ನಡೆದ ಪ್ರಾಣಾಯಾಮ ಮತ್ತು ಧ್ಯಾನ ಅಧಿವೇಶನದಲ್ಲಿ ಭಾಗ ವಹಿಸಿದವರು ಒತ್ತಡ ನಿವಾರಣೆ, ಏಕಾಗ್ರತೆ ವೃದ್ಧಿ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುವ ವಿವಿಧ ಉಸಿರಾಟದ ಅಭ್ಯಾಸಗಳನ್ನು ಅನುಸರಿಸಿದರು.
ಇದನ್ನೂ ಓದಿ: Health Tips: ನಿದ್ದೆಯಲ್ಲಿ ಬಾಯಲ್ಲೇ ಉಸಿರಾಡುತ್ತೀರಾ? ಈ ಸಮಸ್ಯೆ ಎದುರಾಗಬಹುದು ಎಚ್ಚರ
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ನ್ಯೂರಾಲಜಿ ಮತ್ತು ನ್ಯೂರೋಸರ್ಜರಿ ವಿಭಾಗದ ತಜ್ಞ ವೈದ್ಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ನ್ಯೂರಾಲಜಿ ವಿಭಾಗದ ಡಾ.ಶಿವಕುಮಾರ್ ಹಾಗೂ ಡಾ.ಅವಿನಾಶ್ ಕುಲಕರ್ಣಿ ಮತ್ತು ನ್ಯೂರೋ ಸರ್ಜರಿ ವಿಭಾಗದ ಡಾ.ನವೀನ್ ಮಂಡ್ಯ ಅಪ್ಪಾಜಿಗೌಡ, ಡಾ.ಕೇಶವ್, ಡಾ.ಸಂತೋಷ್ ಹಾಗೂ ಡಾ.ಶ್ರೀಧರ್ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡಿ ಮೆದುಳಿನ ಆರೋಗ್ಯದ ಕುರಿತು ಸಮಗ್ರ ಮಾಹಿತಿ ನೀಡಿದರು.
ಪಕ್ಷಾಘಾತ (ಸ್ಟ್ರೋಕ್), ತಲೆನೋವು, ಅಪಸ್ಮಾರ (ಎಪಿಲೆಪ್ಸಿ), ಮರೆವಿನ ಸಮಸ್ಯೆ, ಪಾರ್ಕಿನ್ಸನ್ಸ್, ಮೆದುಳಿನ ಗಡ್ಡೆಗಳು, ಬೆನ್ನುಹುರಿ ಸಂಬಂಧಿತ ಸಮಸ್ಯೆಗಳು, ಆರಂಭಿಕ ಲಕ್ಷಣಗಳ ಗುರುತಿಸುವಿಕೆ ಹಾಗೂ ಸಮಯೋಚಿತ ಚಿಕಿತ್ಸೆಯ ಮಹತ್ವದ ಬಗ್ಗೆ ವೈದ್ಯರು ವಿವರವಾಗಿ ತಿಳಿಸಿದರು.
ಸಾರ್ವಜನಿಕರು ಕೇಳಿದ ಹಲವು ಪ್ರಶ್ನೆಗಳಿಗೆ ವೈದ್ಯರು ಸರಳವಾಗಿ ಉತ್ತರಿಸಿ ಮೆದುಳಿನ ಕಾಯಿಲೆಗಳ ಬಗ್ಗೆ ಇರುವ ಅನೇಕ ತಪ್ಪು ಕಲ್ಪನೆಗಳನ್ನು ನಿವಾರಿಸಿದರು.
ಈ ಸಂದರ್ಭದಲ್ಲಿ, ಮೆದುಳಿನ ಆರೋಗ್ಯ ಕುರಿತು ವಿಶ್ವಾಸಾರ್ಹ ಮಾಹಿತಿ, ಆರೋಗ್ಯ ಸಲಹೆಗಳು ಹಾಗೂ ಜಾಗೃತಿ ಸಂದೇಶಗಳನ್ನು ಜನರಿಗೆ ನಿರಂತರವಾಗಿ ತಲುಪಿಸುವ ಉದ್ದೇಶದಿಂದ "ಬ್ರೇನ್ ಹೆಲ್ತ್ ವಾಟ್ಸ್ಆಪ್ ಕಮ್ಯೂನಿಟಿಯನ್ನು ಸಹ ಆಸ್ಪತ್ರೆ ಆರಂಭಿಸಿತು.
ಕಾರ್ಯಕ್ರಮದಲ್ಲಿ ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (COO) ಶ್ರೀ ರವಿ ಬಗಲಿ* ಅವರು ಭಾಗವಹಿಸಿ ಸಾರ್ವಜನಿಕರೊಂದಿಗೆ ಪ್ರಾಣಾಯಾಮ ಮತ್ತು ಧ್ಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ರವಿ ಬಗಲಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ (COO), ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆ ಅವರು,
"ಕಳೆದ ವರ್ಷ 'ಬ್ರೀತ್ ಫಾರ್ ದಿ ಬ್ರೇನ್' ಕಾರ್ಯಕ್ರಮಕ್ಕೆ ದೊರೆತ ಅತ್ಯುತ್ತಮ ಸ್ಪಂದನೆಯೇ ಈ ವರ್ಷ 'ಬ್ರೀತ್ ಫಾರ್ ದಿ ಬ್ರೇನ್ 2.0' ಆಯೋಜಿಸಲು ನಮಗೆ ಪ್ರೇರಣೆಯಾಯಿತು.
ಆಸ್ಪತ್ರೆಯ ಜವಾಬ್ದಾರಿ ಕೇವಲ ಚಿಕಿತ್ಸೆ ನೀಡುವುದಷ್ಟೇ ಅಲ್ಲ, ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೂ ಆಗಿದೆ. ಪ್ರಾಣಾಯಾಮ, ಧ್ಯಾನ ಹಾಗೂ ಆರೋಗ್ಯಕರ ಜೀವನಶೈಲಿಯಂತಹ ಸರಳ ಅಭ್ಯಾಸಗಳು ಮೆದುಳಿನ ಆರೋಗ್ಯವನ್ನು ಉತ್ತಮವಾಗಿಡಲು ನೆರವಾಗುತ್ತವೆ. ಈ ಸಂದೇಶವನ್ನು ಹೆಚ್ಚಿನ ಜನರಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿ ದ್ದೇವೆ, ಎಂದು ಹೇಳಿದರು.
'ಬ್ರೀತ್ ಫಾರ್ ದಿ ಬ್ರೇನ್ 2.0' ಮೂಲಕ ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆ ಮತ್ತೊಮ್ಮೆ ತಡೆಗಟ್ಟುವ ಆರೋಗ್ಯ ಸೇವೆ (Preventive Healthcare) ಮತ್ತು ಸಮುದಾಯ ಆರೋಗ್ಯ ಜಾಗೃತಿಗೆ ತನ್ನ ಬದ್ಧತೆ ಯನ್ನು ಪುನರುಚ್ಚರಿಸಿದೆ.