ಬೆಂಗಳೂರು: ಗುಣಮಟ್ಟದ ಆರೋಗ್ಯ ಸೇವೆಯನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತರುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ 'ಹ್ಯಾಪಿಯೆಸ್ಟ್ ಹೆಲ್ತ್' ಸಂಸ್ಥೆಯು, ಬೆಂಗಳೂರಿನ ಕೋರಮಂಗಲದಲ್ಲಿ ನೂತನ ಸ್ಪೆಷಾಲಿಟಿ ಕ್ಲಿನಿಕ್‌ಗಳನ್ನು ಲೋಕಾರ್ಪಣೆಗೊಳಿಸಿದೆ.
ಸಾಂಪ್ರದಾಯಿಕ ಆಸ್ಪತ್ರೆಗಳ ವಾತಾವರಣಕ್ಕಿಂತ ಭಿನ್ನವಾಗಿ, ಜನಸ್ನೇಹಿ ಕ್ಲಿನಿಕ್‌ಗಳನ್ನು ನಿರ್ಮಿ ಸುವ ಗುರಿಯೊಂದಿಗೆ ಕೋರಮಂಗಲದ 6ನೇ ಬ್ಲಾಕ್‌ನಲ್ಲಿರುವ 'ಕರ್ತವ್ಯ'ದಲ್ಲಿ ಈ ನೂತನ ಕೇಂದ್ರ ವನ್ನು ಆರಂಭಿಸಿದೆ. ಬರೋಬ್ಬರಿ 9,000 ಚದರ ಅಡಿ ವಿಸ್ತೀರ್ಣದಲ್ಲಿ ನಾಲ್ಕು ಮಹಡಿಗಳಲ್ಲಿ ಹರಡಿಕೊಂಡಿರುವ ಈ ಕ್ಲಿನಿಕ್ ವಿಶಿಷ್ಟ ಆರೋಗ್ಯ ಸೇವೆಗೆ ನಾಂದಿ ಹಾಡಿದೆ.
ಯಾವೆಲ್ಲಾ ಸೌಲಭ್ಯಗಳಿವೆ?
ಈ ನೂತನ ಕ್ಲಿನಿಕ್‌ನಲ್ಲಿ ಮಕ್ಕಳ ವಿಭಾಗ (ಪೀಡಿಯಾಟ್ರಿಕ್ಸ್), ಮೂಳೆ ರೋಗ (ಆರ್ಥೋಪೆಡಿಕ್ಸ್), ಸ್ತ್ರೀರೋಗ (ಗೈನಕಾಲಜಿ), ಎಂಡೋಕ್ರೈನಾಲಜಿ ಮತ್ತು ಪರ್ಸನಲ್ ಫಿಸಿಶಿಯನ್ ಸೇವೆಗಳು ಲಭ್ಯ ವಿವೆ. ರೋಗಿಗಳು ತಜ್ಞ ವೈದ್ಯರನ್ನು ಭೇಟಿಯಾಗುವುದರ ಜೊತೆಗೆ, ಎನ್‌ಎಬಿಎಲ್ ಮಾನ್ಯತೆ ಪಡೆದ ಅತ್ಯಾಧುನಿಕ ಡಯಗ್ನೊಸ್ಟಿಕ್ಸ್ ಕೇಂದ್ರ ಮತ್ತು ಫಾರ್ಮಸಿ ಸೌಲಭ್ಯವನ್ನು ಒಂದೇ ಸೂರಿನಡಿ ಪಡೆದುಕೊಳ್ಳಬಹುದು. ಪ್ರಸ್ತುತ ಎಕ್ಸ್-ರೇ ಹಾಗೂ ಸುಧಾರಿತ ಇಮೇಜಿಂಗ್ ಸೌಲಭ್ಯವಿದ್ದು, ಶೀಘ್ರ ದಲ್ಲೇ 'ಹೈಪರ್‌ಬಾರಿಕ್ ಆಕ್ಸಿಜನ್ ಥೆರಪಿ'ಯನ್ನೂ ಪರಿಚಯಿಸಲು ಸಂಸ್ಥೆ ಸಜ್ಜಾಗಿದೆ.
ತಜ್ಞರ ನೇತೃತ್ವದಲ್ಲಿ ಅತ್ಯುತ್ತಮ ಸೇವೆ
ಕ್ಲಿನಿಕ್‌ನ ವಿವಿಧ ವಿಭಾಗಗಳನ್ನು ಪರಿಣತ ವೈದ್ಯರಾದ ಡಾ.ಅಬ್ರಾರ್ ಶರೀಫ್ (ಮಕ್ಕಳ ತಜ್ಞರು), ಡಾ. ನಿಖಿಲ್ ಶಾಂತಪ್ಪ (ಮೂಳೆ ರೋಗ ತಜ್ಞರು), ಡಾ.ವೀಣಾ ದೇವಿ (ಸ್ತ್ರೀರೋಗ ತಜ್ಞರು) ಹಾಗೂ ಡಾ. ರಕ್ಷಿತ್ ಶೆಟ್ಟಿ (ಎಂಡೋಕ್ರೈನಾಲಜಿ ಮತ್ತು ಪರ್ಸನಲ್ ಫಿಸಿಶಿಯನ್) ಮುನ್ನಡೆಸಲಿದ್ದಾರೆ. ಕೇವಲ ಕಾಯಿಲೆ ಬಂದಾಗ ಚಿಕಿತ್ಸೆ ನೀಡುವುದಷ್ಟೇ ಅಲ್ಲ, ರೋಗ ಬಾರದಂತೆ ತಡೆಯುವ ಮುನ್ನೆಚ್ಚರಿಕೆ ಗಳು ಹಾಗೂ ದೀರ್ಘಕಾಲದ ಆರೋಗ್ಯ ನಿರ್ವಹಣೆಯ ಬಗ್ಗೆ ಈ ವೈದ್ಯರ ತಂಡ ಮಾರ್ಗದರ್ಶನ ನೀಡಲಿದೆ.
ಇದೇ ಸಂದರ್ಭದಲ್ಲಿ ನೂತನ ಕ್ಲಿನಿಕ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಡಾ. ಅಬ್ರಾರ್ ಶರೀಫ್, "ಮನೆಯ ಸಮೀಪದ ಕ್ಲಿನಿಕ್‌ಗಳು ತುರ್ತು ಸಂದರ್ಭದಲ್ಲಿ ತ್ವರಿತ ಚಿಕಿತ್ಸೆಗೆ ನೆರವಾಗು ತ್ತವೆ," ಎಂದು ಅಭಿಪ್ರಾಯಪಟ್ಟರು.
ಇನ್ನು ಮಹಿಳೆಯರ ಆರೋಗ್ಯದ ಪ್ರತಿಯೊಂದು ಹಂತದಲ್ಲೂ ನಿರಂತರ ಬೆಂಬಲ ಒದಗಿಸಲು ತಾವು ಸಿದ್ಧರಿರುವುದಾಗಿ ಡಾ. ವೀಣಾ ದೇವಿ ಭರವಸೆ ನೀಡಿದರು.
ಮನೆ ಸಮೀಪವೇ ಆರೋಗ್ಯ ಜಾಲ
ತಮ್ಮ ಸಂಸ್ಥೆಯ ಹೊಸ ಹೆಜ್ಜೆಯ ಬಗ್ಗೆ ಮತ್ತಷ್ಟು ವಿವರಗಳನ್ನು ಹಂಚಿಕೊಂಡಿರುವ ಚೇರ್ಮನ್ ಅಶೋಕ್ ಸೂಟಾ, "ಇಂದಿನ ವೇಗದ ಬದುಕಿನಲ್ಲಿ ಗುಣಮಟ್ಟದ ಚಿಕಿತ್ಸೆಯು ಸುಲಭವಾಗಿ ಹಾಗೂ ಜನರ ದೈನಂದಿನ ಜೀವನಕ್ಕೆ ಹತ್ತಿರವಾಗಿ ಸಿಗಬೇಕು. ಪರಿಣಿತ ವೈದ್ಯರು, ಸುಧಾರಿತ ತಂತ್ರಜ್ಞಾನ ಮತ್ತು ರೋಗ ತಡೆಗಟ್ಟುವ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರ ಆರೈಕೆ ನೀಡುವುದೇ ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ ಅತ್ಯಂತ ವಿಶ್ವಾಸಾರ್ಹವಾದ 'ಮನೆಯ ಸಮೀಪದ ಆರೋಗ್ಯ ರಕ್ಷಣಾ ಜಾಲ'ವನ್ನು ದೇಶದೆಲ್ಲೆಡೆ ನಿರ್ಮಿಸುವುದು ನಮ್ಮ ಗುರಿಯಾಗಿದೆ," ಎಂದು ತಿಳಿಸಿದರು.
ಈ ಕ್ಲಿನಿಕ್ ಸೋಮವಾರದಿಂದ ಶನಿವಾರದವರೆಗೆ ತೆರೆದಿರುತ್ತದೆ. ಮಕ್ಕಳ ವಿಭಾಗ ಬೆಳಗ್ಗೆ 8:00 ರಿಂದ ರಾತ್ರಿ 8:00 ರವರೆಗೆ ತೆರೆದಿರಲಿದೆ. ಮೂಳೆ ರೋಗ, ಎಂಡೋಕ್ರೈನಾಲಜಿ ಮತ್ತು ಫಿಸಿಶಿಯನ್ ವೈದ್ಯರು ಬೆಳಗ್ಗೆ 8:00 ರಿಂದ ಮಧ್ಯಾಹ್ನ 4:00 ರವರೆಗೆ ಲಭ್ಯವಿರಲಿದ್ದಾರೆ. ಸ್ತ್ರೀರೋಗ ವಿಭಾಗ ಬೆಳಗ್ಗೆ 10ರಿಂದ ಸಂಜೆ 6:00 ರವರೆಗೆ ಇರಲಿದೆ. ಸಾರ್ವಜನಿಕರು ನೇರವಾಗಿ ಕ್ಲಿನಿಕ್‌ಗೆ ಭೇಟಿ ನೀಡಬಹುದು. ಅಥವಾ ಹ್ಯಾಪಿಯೆಸ್ಟ್ ಹೆಲ್ತ್ ವೆಬ್‌ಸೈಟ್ ಮೂಲಕವೂ ಮುಂಚಿತವಾಗಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಬಹುದು.
ಅಶೋಕ್ ಸೂಟಾ ಅವರ ನೇತೃತ್ವದಲ್ಲಿ ಆರಂಭವಾದ 'ಹ್ಯಾಪಿಯೆಸ್ಟ್ ಹೆಲ್ತ್' ಕೇವಲ ಕ್ಲಿನಿಕ್ ಗಳಿಗಷ್ಟೇ ಸೀಮಿತವಾಗಿಲ್ಲ. ಇದೊಂದು ಸಮಗ್ರ 'ವೆಲ್‌ನೆಸ್ ಎಂಟರ್‌ಪ್ರೈಸ್' ಆಗಿದ್ದು, ಇಂದಿರಾ ನಗರ ಮತ್ತು ವೈಟ್‌ಫೀಲ್ಡ್‌ನಲ್ಲಿ ದಂತ ಚಿಕಿತ್ಸೆ, ಜಯನಗರದಲ್ಲಿ ಆಯುರ್ವೇದ, ಹಾಗೂ ಜಯನಗರ ಮತ್ತು ಕೋರಮಂಗಲದಲ್ಲಿ ಫಿಸಿಯೋಥೆರಪಿ ಮತ್ತು ಯೋಗ ಸೇವೆಗಳನ್ನು ಒದಗಿಸುತ್ತಿದೆ.
ಇದರ ಜೊತೆಗೆ ಎಐ ತಂತ್ರಜ್ಞಾನ ಆಧಾರಿತ ಲ್ಯಾಬ್‌ಗಳು, ಆನ್‌ಲೈನ್ ಮೂಲಕ ವರ್ಚುವಲ್ ವೈದ್ಯರ ಸಮಾಲೋಚನೆ ಹಾಗೂ 'ಹ್ಯಾಪಿಯೆಸ್ಟ್ ಹೆಲ್ತ್ ಮ್ಯಾಗಜೀನ್' ಮೂಲಕ ಆರೋಗ್ಯ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದೆ.