ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Health Tips: ಜೀರ್ಣಕ್ರಿಯೆ ಹೆಚ್ಚಿಸಲು ಯಾವೆಲ್ಲ ಆಹಾರ ಸೇವಿಸಬೇಕು? ಕಾಂಬಿನೇಷನ್ ಹೇಗಿರಬೇಕು? ಇಲ್ಲಿದೆ ಸಂಪೂರ್ಣ ಗೈಡ್‌

Food For Better Digestion: ನೀವು ಯಾವುದೇ ಆಹಾರ ಹೇಗೆ ಬಳಸುತ್ತೀರಿ ಮತ್ತು ಯಾವ ಆಹಾರದ ಜತೆ ಸಂಯೋಜಿಸಿ ತಿನ್ನುತ್ತೀರಿ ಅನ್ನೋದು ಮುಖ್ಯ. ದಿನ ನಿತ್ಯ ಆಹಾರ ಸೇವನೆಯಲ್ಲೆ ಕೆಲವು ಬದಲಾವಣೆ ಮಾಡಿಕೊಳ್ಳುವ ಮೂಲಕ ಜೀರ್ಣಕ್ರಿಯೆ ಹೆಚ್ಚಿಸಿ ಆರೋಗ್ಯಪೂರ್ಣ ಕೊಬ್ಬು ಹೆಚ್ಚಿಸಬಹುದು. ಇದಕ್ಕಾಗಿ ಟಿಪ್ಸ್‌ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಇಂದು ಗ್ಯಾಸ್ಟ್ರಿಕ್‌ ಅನ್ನೋದು ಪ್ರತಿಯೊಬ್ಬರಿಗೂ ಕಾಡುವ ಸಾಮಾನ್ಯ ಸಮಸ್ಯೆ. ಕೆಲವರಿಗೆ ಊಟ ಮಾಡಿದ ತಕ್ಷಣಕ್ಕೆ ಹೊಟ್ಟೆ ಉಬ್ಬರ, ಅಜೀರ್ಣದಂತ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣವೇನು ಎಂಬುದನ್ನು ಆಹಾರ ತಜ್ಞರೊಬ್ಬರು ವಿವರಿಸಿದ್ದಾರೆ. ನೀವು ಯಾವುದೇ ಆಹಾರ ಸೇವಿಸುವಾಗ ಅದನ್ನು ಹೇಗೆ ಬಳಸುತ್ತೀರಿ ಮತ್ತು ಯಾವ ಆಹಾರದ ಜತೆ ಸಂಯೋಜಿಸಿ ತಿನ್ನುತ್ತೀರಿ ಅನ್ನೋದು ಮುಖ್ಯ. ದಿನ ನಿತ್ಯ ಸೇವಿಸುವ ಆಹಾರದಲ್ಲೇ ಕೆಲವು ಬದಲಾವಣೆ ಮಾಡಿಕೊಳ್ಳುವ ಮೂಲಕ ಜೀರ್ಣಕ್ರಿಯೆ ಹೆಚ್ಚಿಸಿ ಆರೋಗ್ಯಪೂರ್ಣ ಕೊಬ್ಬುಗಳು ತುಂಬುವಂತೆ ಮಾಡಬಹುದು‌. ಹಾಗದರೆ ನಿಮ್ಮ ಆಹಾರ ಸಂಯೋಜನೆ ಹೇಗಿರಬೇಕು? ಇಲ್ಲಿದೆ ವಿವರ.

ಮಜ್ಜಿಗೆ ಮತ್ತು ಹುರಿದ ಜೀರಿಗೆ ಸೇರಿಸಿ: ಊಟದ ನಂತರ ಹುರಿದ ಜೀರಿಗೆಯನ್ನು ಮಜ್ಜಿಗೆ ಜತೆ ಸೇರಿಸಿ ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ. ಈ ಸಂಯೋಜನೆಯು ಉತ್ತಮ ಜೀರ್ಣಕ್ರಿಯೆಗೆ ಮತ್ತು ಊಟದ ನಂತರ ಕಾಡುವ ಹೊಟ್ಟೆ ಉಬ್ಬರ ಸಮಸ್ಯೆ ನಿಯಂತ್ರಿಸಲು, ಅಜೀರ್ಣ ನಿಯಂತ್ರಿಸಲು ನೆರವಾಗುತ್ತದೆ.

ಮೊಳಕೆಕಾಳುಗಳ ಜತೆ ತಾಜಾ ನಿಂಬೆ: ದೇಹ ಕಬ್ಬಿಣ ಪ್ರಮಾಣವನ್ನು ಹೀರಿಕೊಳ್ಳಬೇಕಾದರೆ ಮೊಳಕೆಕಾಳುಗಳನ್ನು ನಿಂಬೆಯ ಜತೆ ಸೇವಿಸಬಹುದು. ನಿಂಬೆಯಲ್ಲಿ ಇರುವ ವಿಟಮಿನ್ ಸಿ ಮೊಳಕೆಕಾಳುನಲ್ಲಿ ಕಂಡುಬರುವ ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

30ರ ಹರೆಯದಲ್ಲಿದ್ದೀರಾ? ನಿಮ್ಮ ಆರೋಗ್ಯ ಕಾಪಾಡಲು ತಜ್ಞರ ಈ ಟಿಪ್ಸ್ ಪಾಲಿಸಿ!

ಹಣ್ಣುಗಳ ಜತೆ ಬೀಜಗಳ ಸೇವನೆ: ಹಣ್ಣುಗಳ ಸೇವನೆಗೆ ಪ್ರತಿಯೊಬ್ಬರು ಆದ್ಯತೆ ನೀಡುತ್ತಾರೆ. ಇದರ ಜತೆಗೆ ಬಾದಾಮಿ, ವಾಲ್‌ನಟ್ಸ್ ಸೇವನೆ ಉತ್ತಮ ಆರೋಗ್ಯಕ್ಕೆ ಪೂರಕ. ಒಣಹಣ್ಣುಗಳಲ್ಲಿರುವ ಪ್ರೋಟಿನ್‌ ಮತ್ತು ಪೋಷಕಾಂಶಗಳು ಹಣ್ಣಿನಲ್ಲಿರುವ ಸಕ್ಕರೆ ರಕ್ತಕ್ಕೆ ಬೇಗನೆ ಸೇರದಂತೆ ನಿಯಂತ್ರಿಸುತ್ತದೆ.

ಹಸಿರು ಎಲೆಗಳು ಮತ್ತು ಆಲಿವ್ ಎಣ್ಣೆ: ಆರೋಗ್ಯಪೂರ್ಣ ಕೊಬ್ಬು ದೇಹಕ್ಕೆ ಉತ್ತಮ. ಹಾಗಾಗಿ ಸೊಪ್ಪುಗಳ ಸೇವನೆ ಜತೆಗೆ ಹೆಚ್ಚುವರಿ ಆಲಿವ್ ಎಣ್ಣೆಯನ್ನು ಸೇರಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ಇದರಿಂದ ಅವುಗಳ ಪೋಷಕಾಂಶಗಳನ್ನು ಹೆಚ್ಚು ಬಳಸಿಕೊಳ್ಳಬಹುದು.

ಬೇಳೆ ಸಾರು ಮತ್ತು ಅನ್ನ: ಸಾಮಾನ್ಯವಾಗಿ ಅನ್ನದ ಜತೆ ಹೆಚ್ಚಿನವರು ದಾಲ್ ಇಷ್ಟ ಪಡುತ್ತಾರೆ. ಬೇಳೆ-ಅನ್ನ ಅತ್ಯುತ್ತಮ ಪ್ರೋಟೀನ್ ಆಹಾರ. ಬೇಳೆ ಮತ್ತು ಅನ್ನದ ಸಂಯೋಜನೆಯಲ್ಲಿ ಅಮೈನೋ ಆಮ್ಲ ಹೆಚ್ಚಾಗಬಹುದು.

ರಾಗಿ ಮತ್ತು ತುಪ್ಪ: ಉತ್ತಮ ಕೊಬ್ಬಿನ ಸಂಯೋಜನೆಗಾಗಿ ರಾಗಿಯನ್ನು ತುಪ್ಪದೊಂದಿಗೆ ಸೇವಿಸಬಹುದು. ರಾಗಿ ಪ್ರಿಬಯಾಟಿಕ್ ಫೈಬರ್ ಒದಗಿಸುತ್ತದೆ.