ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಮ್ಮೆ ಡೆಂಗ್ಯೂ ಬಂದು ಗುಣವಾಗಿದ್ಯಾ? ಮತ್ತೊಮ್ಮೆ ಬಂದ್ರೆ ನಿರ್ಲಕ್ಷ್ಯ ಮಾಡಿದ್ರೆ ಈ ಅಪಾಯ ಕಟ್ಟಿಟ್ಟ ಬುತ್ತಿ

Health Tips: ಪ್ರಸ್ತುತ ದಿನಗಳಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಸಾರ್ವಜನಿಕರ ಆರೋಗ್ಯಕ್ಕೆ ಭಾರಿ ಸವಾಲಾಗಿ ಪರಿಣಮಿಸಿದ್ದು, ರೋಗ ಬರದಂತೆ ತಡೆಗಟ್ಟುವುದುದೇ ಅತ್ಯಂತ ಮುಖ್ಯವಾದ ಮಾರ್ಗವಾಗಿದೆ. ಡೆಂಗ್ಯೂ ವೈರಸ್ ಮುಖ್ಯವಾಗಿ ಸೋಂಕಿತ ರೋಗವಾಗಿದ್ದು, ಒಮ್ಮೆ ಬಂದರೇ ಮತ್ತೆ ಕಾಣಿಸಿಕೊಳ್ಳುವ ಅಪಾಯಕಾರಿ ಖಾಯಿಲೆಯಾಗಿದೆ.

ಸಂಗ್ರಹ ಚಿತ್ರ

ಬೆಂಗಳೂರು: ಯಾವದೇ ಒಂದು ಸಾಂಕ್ರಾಮಿಕ ರೋಗ ಅಥವಾ ಸಾಂಕ್ರಾಮಿಕ ಜ್ವರ ಒಮ್ಮೆ ಬಂದು ಹೋದರೆ, ನಮ್ಮ ದೇಹದಲ್ಲಿ ಆ (Health Tips) ರೋಗದ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮತ್ತು ಎರಡನೇ ಬಾರಿ ಆ ರೋಗ ಬರುವುದಿಲ್ಲ ಅಥವಾ ಬಂದರೂ ತೀವ್ರತೆ ಕಡಿಮೆಯಿರುತ್ತದೆ ಎಂಬ ನಂಬಿಕೆ ಜನರಲ್ಲಿರುತದೆ. ಆದರೆ ಡೆಂಗ್ಯೂ (Dengue) ವಿಷಯದಲ್ಲಿ ಈ ನಿಯಮ ಉಲ್ಟಾ. ಒಮ್ಮೆ ಡೆಂಗ್ಯೂ ಜ್ವರದಿಂದ ಚೇತರಿಸಿಕೊಂಡ ವ್ಯಕ್ತಿಗೆ ಎರಡನೇ ಬಾರಿ ಮತ್ತೆ ಡೆಂಗ್ಯೂ ಸೋಕು ತಗಲಿದರೆ, ಅದು ಮೊದಲ ಬಾರಿಗಿಂತ ಅತ್ಯಂತ ಭೀಕರ ಹಾಗೂ ಜೀವಕ್ಕ ಅಪಾಯಕಾರಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ವೈದ್ಯಕೀಯ ಲೋಕದಲ್ಲಿ ಇದನ್ನು ಆಂಟಿಬಾಡಿ-ಡಿಪೆಂಡೆಂಟ್ ಅನ್‌ಹಾನ್ಸ್‌ಮೆಂಟ್‌ ಎಂದು ಕರೆಯಲಾಗುತ್ತದೆ.

ಎರಡನೇ ಬಾರಿ ಡೆಂಗ್ಯೂ ಹೆಚ್ಚು ಭೀಕರ ಏಕೆ?

ಡೆಂಗ್ಯೂ ಈಡಿಸ್ ತಳಿಯ ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಈ ಸೊಳ್ಳೆ ಹೆಚ್ಚಾಗಿ ಹಗಲು ವೇಳೆಯಲ್ಲೇ ಕಚ್ಚುತ್ತವೆ ಹಾಗೂ ಮನೆಯ ಸುತ್ತಮುತ್ತ ನಿಂತಿರುವ ನೀರನ್ನೇ ತಮ್ಮ ಸಂತಾನೋತ್ಪತಿಗೆ ಬಳಸಿಕೊಳ್ಳುತ್ತವೆ. ಡೆಂಗ್ಯೂ ವೈರಸ್‌ನಲ್ಲಿ ಕೇವಲ ಒಂದೇ ರೀತಿಯ ವೈರಸ್ ಇರುವುದಿಲ್ಲ, ಬದಲಾಗಿ ನಾಲ್ಕು ರೀತಿಯ ವಿಭಿನ್ನ ತಳಿಗಳು DENV-1, DENV-2, DENV-3, DENV-4 ಇರುತ್ತವೆ. ಒಬ್ಬ ವ್ಯಕ್ತಿಗೆ ಮೊದಲ ಬಾರಿ ಸೋಂಕು ತಗುಲಿದಾಗ ಉದಾಹರಣೆಗೆ DENV-1 ತಳಿಯ ಡೆಂಗ್ಯೂ ಬಂದಾಗ, ಆತನ ದೇಹವು ಆ ತಳಿಯ ವಿರುದ್ಧ ಹೋರಾಡಲು ಆಂಟಿಬಾಡಿಗಳನ್ನು ಉತ್ಪಾದಿಸುತ್ತದೆ. ಈ ಆಂಟಿಬಾಡಿಗಳು ಆ ನಿರ್ದಿಷ್ಟ ತಳಿಯ ವಿರುದ್ಧ ಜೀವನಪೂರ್ತಿ ರಕ್ಷಣೆ ನೀಡುತ್ತದೆ.

ಕೆಲ ವರ್ಷಗಳ ನಂತರ ಅದೇ ವ್ಯಕ್ತಿಗೆ DENV-2 ನಂತಹ ಮತ್ತೊಂದು ತಳಿಯ ಡೆಂಗ್ಯೂ ವೈರಸ್ ತಗುಲಿದಾಗ, ದೇಹದಲ್ಲಿ ಹಳೆಯ ಆಂಟಿಬಾಡಿಗಳು ಹೊಸ ತಳಿಯ ವೈರಸ್ ಅನ್ನು ಸಂಪೂರ್ಣವಾಗಿ ನಾಶಪಡಿಸಲು ಸಾಧ್ಯವಾಗುವುದಿಲ್ಲ. ಹಳೆಯ ಆಂಟಿಬಾಡಿಗಳು ಹೊಸ ವೈರಸ್‌ಗೆ ಅಂಟಿಕೊಳ್ಳುತ್ತವೆ ಆದರೆ ಅದನ್ನು ಕೊಲ್ಲುವುದಿಲ್ಲ. ಬದಲಾಗಿ ಈ ವೈರಸ್‌ಗಳು ನಮ್ಮ ರಕ್ತದಲ್ಲಿರುವ ಬಿಳಿ ರಕ್ತಕಣಗಳ ಒಳಗೆ ಸುಲಭವಾಗಿ ಪ್ರವೇಶಿಸಲು ಆ ಆಂಟಿಬಾಡಿಗಳನ್ನೇ ದಾರಿಯಾಗಿ ಬಳಸಿಕೊಳ್ಳುತ್ತವೆ. ಇದರಿಂದ ದೇಹದಲ್ಲಿ ಅತ್ಯಂತ ವೇಗವಾಗಿ ಇವು ಪ್ರಸರಣಗೊಳ್ಳುತ್ತವೆ.

ಎರಡನೇ ಬಾರಿ ಡೆಂಗ್ಯೂನಿಂದ ಎದುರಾಗುವ ಗಂಭೀರ ಲಕ್ಷಣಗಳು

ಎರಡನೇ ಬಾರಿಯ ಸೋಂಕಿನಲ್ಲಿ ವೈರಸ್ ಸಾಂದ್ರತೆ ಗಣನೀಯವಾಗಿ ಹೆಚ್ಚಾಗಿರುವುದರಿಂದ ದೇಹದಲ್ಲಿ ತೀವ್ರ ಸ್ವರೂಪದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಡೆಂಗ್ಯೂ ಹೆಮರಾಜಿಕ್ ಜ್ವರ್: ರಕ್ತನಾಳಗಳು ಹಾನಿಗೊಳಗಾಗಿ ಆಂತರಿಕ ರಕ್ತಸ್ರಾವ ಆರಂಭವಾಗುತ್ತದೆ.

ಥ್ರಂಬೋಸೈಟೋಪೆನಿಯಾ: ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆ ಗಣನೀಯವಾಗಿ ಕುಸಿಯುವುದು.

ಡೆಂಗ್ಯೂ ಶಾಕ್‌ ಸಿಂಡ್ರೋಮ್: ರಕ್ತನಾಳಗಳಿಂದ ಪ್ಲಾಸ್ಮಾ ಸೋರಿಕೆಯಾಗಿ ರಕ್ತದೊತ್ತಡ ದಿಢೀರನೆ ಕುಸಿಯುತ್ತದೆ. ಇದರಿಂದ ಹಾರ್ಟ್, ಲಿವರ್, ಕಿಡ್ನಿ ಮುಂತಾದ ಅಂಗಗಳು ವಿಫಲಗೊಳ್ಳುವ ಅಪಾಯವಿರುತ್ತದೆ.

ಮುನ್ನೆಚ್ಚರಿಕೆ ಕ್ರಮಗಳು

  • ನಿಮಗೂ ಅಥವಾ ನಿಮ್ಮ ಕುಟುಂಬದವರಿಗೆ ಹಿಂದೆ ಡೆಂಗ್ಯೂ ಬಂದಿದ್ದರೆ, ಎರಡನೇ ಬಾರಿ ಬಂದಾಗ ನಿರ್ಲಕ್ಷಿಸಬೇಡಿ.
  • ಜ್ವರ ಅಥವಾ ಯಾವುದೇ ಲಕ್ಷಣಗಳು ಕಂಡ ಕೂಡಲೆ ವೈದ್ಯರನ್ನು ಸಂಪರ್ಕಿಸಿ ರಕ್ತದ ಪರೀಕ್ಷೆ ಮಾಡಿಸಿಕೊಳ್ಳಿ.
  • ಹೆಚ್ಚೆಚ್ಚು ನೀರು, ಎಳನೀರು ಒಆರ್‌ಎಸ್ ಸೇವಿಸುವ ಮೂಲಕ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಿ.
  • ಜ್ವರ ಬಂದಾಗ ನೋವು ನಿವಾರಕ ಮಾತ್ರಗಳನ್ನು ತೆಗೆದುಕೊಳ್ಳಬಾರದು. ಬದಲಿಗೆ ವೈದ್ಯರು ಸೂಚಿಸುವ ಪ್ಯಾರಸಿಟಮಲ್ ಮಾತ್ರ ಬಳಸಿ
  • ಮನೆಯ ಸುತ್ತಮುತ್ತ ಹಾಗೂ ಟೆರೇಸ್ ಮೇಲಿರುವ ಹಳೆಯ ಟೈರ್‌ಗಳು, ಖಾಲಿ ಕುಂಡಗಳು ಹಾಗೂ ಡಬ್ಬಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ.
  • ಕುಡಿಯುವ ಮತ್ತು ಬಳಸುವ ನೀರಿನ ಟ್ಯಾಂಕ್ ಹಾಗೂ ಬಕೆಟ್‌ಗಳುನ್ನು ಮುಚ್ಚಿಡಿ.
  • ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆ ಪರದೆ, ಮಾಸ್ಕಿಟೋ ರಿಪೆಲ್ಲೆಂಟ್‌ಗಳು, ಜೆಲ್‌ಗಳು ಹಾಗೂ ಕಾಯಿಲ್‌ಗಳನ್ನು ಬಳಸಿ.
  • ಸೊಳ್ಳೆ ಕಚ್ಚದಂತೆ ಕೈ-ಕಾಲುಗಳನ್ನು ಸಂಪೂರ್ಣವಾಗಿ ಮುಚ್ಚುವಂತಹ ಬಟ್ಟೆಗಳನ್ನು ಧರಿಸಿ.

Dengue Case: ಸಾವಿರ ಗಡಿ ದಾಟಿದ ಡೆಂಗ್ಯೂ ಪ್ರಕರಣ- ಪೋಷಕರೇ ಎಚ್ಚರ !

ಒಮ್ಮೆ ಡೆಂಗ್ಯೂ ಬಂದು ಗುಣವಾದ ಮೇಲೆ ಎರಡನೇ ಬಾರಿ ಮತ್ತೆ ಸೋಂಕು ತಗುಲುವ ಅಪಾಯ ಇದ್ದೇ ಇರುತ್ತದೆ. ಎರಡನೇ ಬಾರಿ ಡೆಂಗ್ಯೂ ವೈರಸ್ ಹೆಚ್ಚು ಅಪಾಯಕಾರಿಯಾಗಿದು, ಹೆಚ್ಚು ಜಾಗರೋಕರಾಗಿರಬೇಕು. ಸೊಳ್ಳೆಗಳ ನಿಯಂತ್ರಣ, ಸುರಕ್ಷಿತ ಉಡುಪು ಹಾಗೂ ಅರಂಭಿಕ ಹಂತದಲ್ಲೇ ವೈದ್ಯರ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.

Vishakha Bhat Heggar

View all posts by this author