ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆರೋಗ್ಯದ ತೊಂದರೆಗಳು ಮೊದಲೇ ಪ್ರಾರಂಭವಾಗಿ ದೀರ್ಘಕಾಲ ಗೋಪ್ಯ: ಅಪೋಲೋ ಹಾಸ್ಪಿಟಲ್ಸ್ ನ ಹೆಲ್ತ್ ಆಫ್ ನೇಷನ್ 2026 ವರದಿ

ಭಾರತದ ಆರೋಗ್ಯಕ್ಷೇತ್ರವು ವಿಕಾಸಗೊಳ್ಳುತ್ತಿದ್ದು ಅದರಲ್ಲಿ ಮೂವರು ಯುವ ವಯಸ್ಕರಲ್ಲಿ ಇಬ್ಬರಿಗೆ ಈಗಾಗಲೇ ಎನ್.ಸಿ.ಡಿ.ಗಳ ರಿಸ್ಕ್ ಇದೆ. ದುಡಿಯುವ ಜನಸಂಖ್ಯೆಯಲ್ಲಿ ಸುಮಾರು ಅರ್ಧರಷ್ಟು ಮಂದಿ ಮಧುಮೇಹಪೂರ್ವ ಸ್ಥಿತಿ ಅಥವಾ ಮಧುಮೇಹ ಹೊಂದಿದ್ದಾರೆ ಮತ್ತು 10 ಮಂದಿಯಲ್ಲಿ 8 ಮಂದಿ ಅತಿಯಾದ ತೂಕ ಹೊಂದಿರುವುದು ಜೀವನಶೈಲಿ-ಪ್ರೇರಿತ ಸುಧಾರಣೆಗೆ ಸ್ಪಷ್ಟ ಅವಕಾಶಗಳನ್ನು ಪ್ರಸ್ತುತಪಡಿಸಿದೆ.

ಬೆಂಗಳೂರು: ಭಾರತದ ಅತ್ಯಂತ ಸಾಮಾನ್ಯ ಆರೋಗ್ಯದ ತೊಂದರೆಗಳು ಮೊದಲೇ ಪ್ರಾರಂಭ ವಾಗುತ್ತವೆ ಮತ್ತು ಬಹಳ ದೀರ್ಘಕಾಲ ಗೋಪ್ಯವಾಗಿರುತ್ತವೆ ಎಂದು ಇಂದು ಬಿಡುಗಡೆಯಾದ ಅಪೋಲೋ ಹಾಸ್ಪಿಟಲ್ಸ್ ನ ಹೆಲ್ತ್ ಆಫ್ ನೇಷನ್ 2026 (ಎಚ್.ಒ.ಎನ್. 2026) ವರದಿ ಹೇಳಿದೆ. 2025ರಲ್ಲಿ ಅಪೋಲೋ ಇಕೊಸಿಸ್ಟಂನಲ್ಲಿ ನಡೆಸಿದ ಮೂರು ಮಿಲಿಯನ್ ಗೂ ಹೆಚ್ಚು ರೋಗ ತಡೆಯ ಆರೋಗ್ಯದ ಮೌಲ್ಯಮಾಪನಗಳನ್ನು ಆಧರಿಸಿದ ಈ ವರದಿಯು ವ್ಯಕ್ತಿಗಳಿಗೆ ಅವರ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ನೆರವಾಗುವ ರೋಗತಡೆಯ ಆಚೆಗೂ ಇರುವ ಕ್ರಿಯಾ ಶೀಲ ಆರೋಗ್ಯಸೇವೆ ಕುರಿತು ಮತ್ತು ಅವರ ಅತ್ಯುತ್ತಮ ಆವೃತ್ತಿಯಾಗಲು ಪ್ರಬಲ ದೃಷ್ಟಾಂತ ಒದಗಿಸಿದೆ.

ಭಾರತದ ಆರೋಗ್ಯಕ್ಷೇತ್ರವು ವಿಕಾಸಗೊಳ್ಳುತ್ತಿದ್ದು ಅದರಲ್ಲಿ ಮೂವರು ಯುವ ವಯಸ್ಕರಲ್ಲಿ ಇಬ್ಬರಿಗೆ ಈಗಾಗಲೇ ಎನ್.ಸಿ.ಡಿ.ಗಳ ರಿಸ್ಕ್ ಇದೆ. ದುಡಿಯುವ ಜನಸಂಖ್ಯೆಯಲ್ಲಿ ಸುಮಾರು ಅರ್ಧರಷ್ಟು ಮಂದಿ ಮಧುಮೇಹಪೂರ್ವ ಸ್ಥಿತಿ ಅಥವಾ ಮಧುಮೇಹ ಹೊಂದಿದ್ದಾರೆ ಮತ್ತು 10 ಮಂದಿಯಲ್ಲಿ 8 ಮಂದಿ ಅತಿಯಾದ ತೂಕ ಹೊಂದಿರುವುದು ಜೀವನಶೈಲಿ-ಪ್ರೇರಿತ ಸುಧಾರಣೆಗೆ ಸ್ಪಷ್ಟ ಅವಕಾಶಗಳನ್ನು ಪ್ರಸ್ತುತಪಡಿಸಿದೆ. ಲಿಂಗ ಸಂಬಂಧಿತ ಒಳನೋಟಗಳು ಮತ್ತು ಬಿ12 ಕೊರತೆಗಳು ಕುಸಿಯುತ್ತಿರುವ ಫಿಟ್ನೆಸ್ ಅಂತರಗಳೊಂದಿಗೆ ಈ ಸದ್ದಿಲ್ಲದ ಆರೋಗ್ಯದ ತೊಂದರೆ ಗಳನ್ನು ಮತ್ತಷ್ಟು ಹೆಚ್ಚಿಸಿವೆ. ವಯಸ್ಸು, ಲಿಂಗ ಮತ್ತು ಜೀವನಶೈಲಿಯೊಂದಿಗೆ ರಿಸ್ಕ್ ಗಳು ವ್ಯತ್ಯಾಸ ಗೊಳ್ಳುವುದರಿಂದ ಬರೀ ಪ್ರತ್ಯೇಕ ರೋಗಲಕ್ಷಣಗಳಲ್ಲದೆ ಇಡಿಯಾಗಿ ವ್ಯಕ್ತಿಯನ್ನು ನೋಡುವುದು ಅರ್ಥಪೂರ್ಣ, ದೀರ್ಘಕಾಲೀನ ಆರೋಗ್ಯದ ಪರಿವರ್ತನೆ ತರಲು ಮುಖ್ಯವಾಗಿದೆ.

ಇದನ್ನೂ ಓದಿ: Bangalore News: ಭಾರತದಲ್ಲಿ ಅನಿಮೆ ಹವಾ: 3 ಕೋಟಿ ರೂಪಾಯಿ ಬಹುಮಾನದೊಂದಿಗೆ ಗಿನ್ನೆಸ್ ದಾಖಲೆಯ ಗುರಿ ಹೊಂದಿರುವ ‘ದಿ ಜೈಂಟ್ ಹಂಟ್’

ಬೆಂಗಳೂರಿನಲ್ಲಿ ದತ್ತಾಂಶದಿಂದ ನಿರ್ದಿಷ್ಟ ಆರೋಗ್ಯದ ಮಾದರಿಗಳು ಹೊರಹೊಮ್ಮುತ್ತಿವೆ. ಪರೀಕ್ಷೆಗೆ ಒಳಪಟ್ಟವರಲ್ಲಿ ಮಧುಮೇಹವು ಶೇ.17ರಷ್ಟು, ರಕ್ತದೊತ್ತಡ ಶೇ.23ರಷ್ಟು ಜನಸಂಖ್ಯೆಗೆ ಬಾಧಿಸಿದೆ. ರಕ್ತಹೀನತೆ ಶೇ.14ರಷ್ಟು ಮಂದಿಯಲ್ಲಿ ಕಂಡು ಬಂದಿದೆ ಮತ್ತು ಪರೀಕ್ಷೆಗೆ ಒಳಪಟ್ಟ ಶೇ.78ರಷ್ಟು ಮಂದಿ ಬೊಜ್ಜು ಹೊಂದಿದ್ದಾರೆ. ಈ ಅಂಕಿ ಅಂಶಗಳು ಉದ್ದೇಶಿತ ಆರೋಗ್ಯದ ಮಧ್ಯಪ್ರವೇಶಗಳ ಅಗತ್ಯ ಮತ್ತು ನಗರದ ಒಳಗಡೆ ಈ ಆರೋಗ್ಯದ ತೊಂದರೆಗಳನ್ನು ನಿರ್ವಹಿಸಲು ಕ್ರಿಯಾಶೀಲ ನಿರ್ವಹಣೆಯ ಕಾರ್ಯತಂತ್ರಗಳ ಅಗತ್ಯ ಎತ್ತಿ ತೋರಿಸಿದೆ.

ಅಪೋಲೋ ಹಾಸ್ಪಿಟಲ್ಸ್ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರತಾಪ್ ಸಿ. ರೆಡ್ಡಿ, “ದೇಶದ ನೈಜ ಸಾಮರ್ಥ್ಯವು ತನ್ನ ಜನರ ಸ್ವಾಸ್ಥ್ಯದ ಮೇಲೆ ಆಧಾರಪಟ್ಟಿರುತ್ತದೆ. ಬಹಳ ದೀರ್ಘ ಕಾಲದಿಂದ ಆರೋಗ್ಯ ಪರೀಕ್ಷೆ ಗಳು ಎಂದರೆ ಅವುಗಳನ್ನು ಭಯದಿಂದ ಪ್ರೇರಿತವಾದ ಪ್ರತಿಕ್ರಿಯೆಯಾದ ನಿಯಮಿತ ರಕ್ತಪರೀಕ್ಷೆ ಗಳು ಮತ್ತು ಪ್ರಮುಖ ಅಂಶಗಳನ್ನು ಒಳಗೊಂಡಿರುತ್ತವೆ. ಇಂದು, ನಾವು ಗಮನಾರ್ಹ ಬದಲಾವಣೆ ಯ ಸಂಕೇತ ನೀಡುತ್ತಿದ್ದೇವೆ. ನೈಜ ಆರೋಗ್ಯವು ವೈಯಕ್ತಿಕ, ಕ್ರಿಯಾಶೀಲ ಮತ್ತು ಅತ್ಯಂತ ನಿಖರವಾಗಿರುತ್ತದೆ. ನಾವು ಕರುಳಿನ ಸೂಕ್ಷ್ಮಜೀವಿಗಳ ಆರೋಗ್ಯದಿಂದ ಸುಧಾರಿತ ದೀರ್ಘಾವಧಿ ರಿಸ್ಕ್ ಮಾದರಿಗಳವರೆಗೆ ವಿಜ್ಞಾನದ ಗಡಿಗಳನ್ನು ವಿಸ್ತರಿಸುತ್ತಿದ್ದು ಅದಕ್ಕೆ ಸಮಗ್ರ ಆರೋಗ್ಯಪರೀಕ್ಷೆಯು ಸ್ವಯಂ-ಉಸ್ತುವಾರಿಯ ಅಂತಿಮ ಕ್ರಿಯೆಯಾಗಿದೆ” ಎಂದರು.

ಆರೋಗ್ಯದ ತೊಂದರೆಗಳು ಈಗಾಗಲೇ ಯುವ ಮತ್ತು ದುಡಿಯುವ ಜನಸಂಖ್ಯೆಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಮುಂಚೆಯೇ ಈಗಾಗಲೇ ಉಪಸ್ಥಿತವಾಗಿವೆ

  • ನಮ್ಮ ದತ್ತಾಂಶದಲ್ಲಿ 30ಕ್ಕಿಂತ ಕಡಿಮೆ ವಯಸ್ಸಿನ 5ರಲ್ಲಿ 1 ವ್ಯಕ್ತಿ ಮಧುಮೇಹಪೂರ್ವ ಸ್ಥಿತಿ ಹೊಂದಿದ್ದಾರೆ. ಈ ಹಂತದಲ್ಲಿ ಇದನ್ನು ಈಗಲೂ ಹಿಮ್ಮುಖಗೊಳಿಸಬಹುದು- ಮಧ್ಯಪ್ರವೇಶ ಮಾಡಿದವರಲ್ಲಿ ಶೇ.28ರಷ್ಟು ಮಂದಿ ಸಹಜ ಸ್ಥಿತಿಗೆ ಬಂದಿದ್ದಾರೆ. 50 ಮೀರಿದವರಲ್ಲಿ ಶೇ.7ರಷ್ಟು ಮಂದಿ ರೋಗವನ್ನು ಹಿಮ್ಮುಖಗೊಳಿಸಿದ್ದಾರೆ.
  • ಅರ್ಧಕ್ಕಿಂತ ಹೆಚ್ಚು ಮಂದಿ ಬೊಜ್ಜಿನವರು ಮತ್ತು ಅರ್ಧಕ್ಕಿಂತ ಹೆಚ್ಚು ಮಂದಿ ಅಸಹಜ ಕೊಲೆಸ್ಟರಾಲ್ ಹೊಂದಿದ್ದಾರೆ.
  • 10 ಮಂದಿಯಲ್ಲಿ ಸುಮಾರು 7 ಮಂದಿಗೆ ವಿಟಮಿನ್ ಡಿ ಕೊರತೆ ಇದೆ, ಮತ್ತು ಅರ್ಧದಷ್ಟು ಮಂದಿಗೆ ಕಡಿಮೆ ವಿಟಮಿನ್ ಬಿ12 ಹೊಂದಿದ್ದಾರೆ
  • 30ಕ್ಕಿಂತ ಕಡಿಮೆ ವಯಸ್ಸಿನ ಮೂರನೇ ಎರಡರಷ್ಟು ಮಂದಿಯಲ್ಲಿ ದುರ್ಬಲ ನಮ್ಯತೆ, ಶಕ್ತಿ ಅಥವಾ ಸಮತೋಲನ ಹೊಂದಿದ್ದಾರೆ. ದುರ್ಬಲ ದೈಹಿಕ ಕಾರ್ಯವು ಬಿಗಿ ಅಪಧಮನಿಗಳು, ಬೀಳುವ ಹೆಚ್ಚಿನ ರಿಸ್ಕ್ ಮತ್ತು ಕಿರಿದಾದ ಜೀವಿತಾವಧಿ ಮತ್ತು ನೀವು ಭಾವಿಸುವ ಮುನ್ನವೇ ಅದು ಕುಸಿಯುತ್ತದೆ
  • ಅಪೋಲೋ ಶೈನ್ ಫೌಂಡೇಷನ್ ಪರೀಕ್ಷೆ ನಡೆಸಿದ 20,164 ವಿದ್ಯಾರ್ಥಿಗಳಲ್ಲಿ (17-25ರ ವಯಸ್ಸು) ಮೂವರಲ್ಲಿ ಇಬ್ಬರಿಗೆ ಕನಿಷ್ಠ ಒಂದು ಆಂತರಿಕ ರಿಸ್ಕ್ ಹೊಂದಿದ್ದರು
  • ದುಡಿಯುವ ಜನಸಂಖ್ಯೆಯಲ್ಲಿ (ಸರಾಸರಿ ವಯಸ್ಸು 38):
    • 10ರಲ್ಲಿ 8 ಮಂದಿ ಅತಿಯಾದ ತೂಕ ಹೊಂದಿದ್ದಾರೆ
    • ಸುಮಾರು ಅರ್ಧದಷ್ಟು ಮಧುಮೇಹಪೂರ್ವ ಸ್ಥಿತಿ ಅಥವಾ ಮಧುಮೇಹ ಹೊಂದಿದ್ದಾರೆ
    • 4ರಲ್ಲಿ 1 ಅಧಿಕ ರಕ್ತದೊತ್ತಡ ಹೊಂದಿದ್ದಾರೆ.

ಈ ಫಲಿತಾಂಶಗಳು ವೈದ್ಯರು ಗುರುತಿಸುವ ಮುನ್ನವೇ ಯುವ ಮತ್ತು ದುಡಿಯುವ ಜನಸಂಖ್ಯೆ ಗಳಲ್ಲಿ ಈಗಾಗಲೇ ಇರುವುದನ್ನು ಸೂಚಿಸುತ್ತವೆ.

ಅಪೋಲೋ ಹಾಸ್ಪಿಟಲ್ಸ್ ಎಕ್ಸಿಕ್ಯೂಟಿವ್ ವೈಸ್ ಚೇರ್ ಪರ್ಸನ್ ಡಾ.ಪ್ರೀತಾ ರೆಡ್ಡಿ, “ಪ್ರತಿ ಮಹಿಳೆಯ ಸ್ವಾಸ್ಥ್ಯವು ಕುಟುಂಬಗಳು, ಸಮುದಾಯಗಳು ಮತ್ತು ಅರ್ಥವ್ಯವಸ್ಥೆಯನ್ನು ಸದೃಢಗೊಳಿಸುವ ಬಲ ಗುಣಕವಾಗಿದೆ. ಅಂದಾಜುಗಳ ಪ್ರಕಾರ ಮಹಿಳೆಯರ ಆರೋಗ್ಯದ ಅಂತರ ತುಂಬುವುದು 2040ರ ವೇಳೆಗೆ ಜಾಗತಿಕ ಅರ್ಥವ್ಯವಸ್ಥೆಗೆ 1 ಟ್ರಿಲಿಯನ್ ಡಾಲರ್ ಸೇರ್ಪಡೆ ಮಾಡುತ್ತದೆ. ಹಾಗಿದ್ದರೂ ನಮ್ಮ ದತ್ತಾಂಶದ ಪ್ರಕಾರ ಭಾರತದಲ್ಲಿ ಮಹಿಳೆಯರು ಬಹುತೇಕ ಪತ್ತೆಯಾಗದ ಗಮನಾರ್ಹ ಆರೋಗ್ಯದ ಹೊರೆಯನ್ನು ಹೊತ್ತಿರುವುದನ್ನು ಮುಂದುವರಿಸಿದ್ದಾರೆ ಎನ್ನುವುದನ್ನು ತೋರಿಸಿದೆ.

ಅಪೋಲೋದಲ್ಲಿ ನಾವು ಮಹಿಳೆಯರ ಆರೋಗ್ಯವನ್ನು ರಾಷ್ಟ್ರೀಯ ಆದ್ಯತೆ ಮತ್ತು ಹಂಚಿಕೊಂಡ ಜವಾಬ್ದಾರಿ ಎಂದು ಕಾಣುತ್ತೇವೆ. ಇದು ಹೆಚ್ಚು ವೈಯಕ್ತಿಕಗೊಳಿಸಿದ ಕಣ್ಣುಗಳಲ್ಲಿ ಆರೈಕೆಯ ಕುರಿತು ಮರು ಆಲೋಚನೆ ಮಾಡುವಂತೆ ಮಾಡುತ್ತದೆ, ಅದು ಮಹಿಳೆಯರ ಜೀವಶಾಸ್ತ್ರ, ಜೀವನದ ಹಂತ ಮತ್ತು ರಿಸ್ಕ್ ಪ್ರೊಫೈಲ್ ಗೆ ಪೂರಕವಾಗಿರುತ್ತದೆ. ಸ್ವಯಂ-ಆರೈಕೆಯು ಸೌಕರ್ಯವಲ್ಲ; ಇದು ಶಕ್ತಿಮತ್ತು ಇದು ಆರೋಗ್ಯಕರ, ಸದೃಢ ಮತ್ತು ಹೆಚ್ಚು ಸಂಪದ್ಭರಿತ ಭಾರತಕ್ಕೆ ಕೊಡುಗೆ ನೀಡು ತ್ತದೆ” ಎಂದರು.

ಆರೋಗ್ಯದ ತೊಂದರೆ ಜನರಲ್ಲಿ ವ್ಯತ್ಯಾಸವಾಗುತ್ತದೆ, ಪರೀಕ್ಷೆಯು ರೋಗಲಕ್ಷಣಗಳಿಲ್ಲದ ರೋಗವನ್ನು ಪತ್ತೆ ಮಾಡುತ್ತದೆ

  • ಮಹಿಳೆಯರು ವಿಶಿಷ್ಟ ರಿಸ್ಕ್ ಮಾದರಿಗಳನ್ನು ಪ್ರದರ್ಶಿಸುತ್ತಾರೆ, ಅದರಲ್ಲಿ ರಕ್ತಹೀನತೆ ಮತ್ತು ವಯಸ್ಸಾಗುತ್ತಿದ್ದಂತೆ ಹೆಚ್ಚಾಗುವ ಮಧ್ಯದ ಬೊಜ್ಜು
  • ಅಪೋಲೋ ದತ್ತಾಂಶದ ಪ್ರಕಾರ ನಿಯಮಿತ ಮ್ಯಾಮೊಗ್ರಫಿಯ ಮೂಲಕ ಸ್ತನ ಕ್ಯಾನ್ಸರ್ ಪತ್ತೆಯ ವಯಸ್ಸು ಪಾಶ್ಚಿಮಾತ್ಯ ಜನಸಂಖ್ಯೆಗಳಿಗಿಂತ ಒಂದು ದಶಕ ಮುಂಚೆ 51 ಇತ್ತು. ಭಾರತದಲ್ಲಿ ಸ್ತನ ಕ್ಯಾನ್ಸರ್ ಬೇಗನೆ ಬರುತ್ತಿದೆ. ಆದ್ದರಿಂದ ಪರೀಕ್ಷೆ ಅಗತ್ಯ.
  • ಪರೀಕ್ಷೆಗೆ ಒಳಪಟ್ಟ 40 ವಯಸ್ಸು ಮೀರಿದ ಮಹಿಳೆಯರಲ್ಲಿ 359ರಲ್ಲಿ 1 ಸ್ತನ ಕ್ಯಾನ್ಸರ್ ಇದ್ದು ಯಾವುದೇ ರೋಗಲಕ್ಷಣಗಳಿಲ್ಲ. ಇದು ಆರೋಗ್ಯದ ತೊಂದರೆ ಸಮಾನವಲ್ಲ ಮತ್ತು ರಚನಾ ತ್ಮಕ ಪರೀಕ್ಷೆಯು ರೋಗಲಕ್ಷಣಗಳನ್ನು ಮೊದಲೇ ಕಂಡುಕೊಳ್ಳಬಲ್ಲವು ಎಂದು ತೋರಿಸಿದೆ.

ಕಲ ಸನ್ನಿವೇಶಗಳಲ್ಲಿ ಮೊದಲೇ ರೋಗಪತ್ತೆ ಮಾಡಲು ಇಮೇಜಿಂಗ್ ಮತ್ತು ಸುಧಾರಿತ ರೋಗನಿರ್ಣಯ ಅಗತ್ಯ

  • ಅಲ್ಟ್ರಾಸೌಂಡ್ ಮೂಲಕ ಫ್ಯಾಟಿ ಲಿವರ್ ಹೊಂದಿರುವ ವ್ಯಕ್ತಿಗಳು, ಶೇ.74ರಷ್ಟು ಮಂದಿಗೆ ಸಹಜ ಎಂಝೈಮ್ ಮಟ್ಟಗಳಿರುತ್ತವೆ
  • ಕರೊನರಿ ಕ್ಯಾಲ್ಷಿಯಂ ಸ್ಕೋರಿಂಗ್ ಗೆ ಒಳಗಾದ ರೋಗಲಕ್ಷಣಗಳಿಲ್ಲದವರು, ಶೇ.45ರಷ್ಟು ಮಂದಿಗೆ ಪ್ರಾರಂಭಿಕ ಅಥೆರೊಸ್ಲೆರೋಸಿಸ್ ಕಂಡುಬಂದಿದೆ
  • ಆರೋಗ್ಯಕರ ಜನರಲ್ಲಿ ಹೆಚ್ಚಿನ ವಿಸ್ತಾರ ಕರುಳಿನ ಸೂಕ್ಷ್ಮ ಜೀವಿಗಳಿರುತ್ತವೆ. ಮಧುಮೇಹ, ಬೊಜ್ಜು ಮತ್ತು ಹೆಚ್ಚು ಕೊಲೆಸ್ಟರಾಲ್ ಸಂಗ್ರಹವಾದಂತೆ ಕರುಳಿನ ವೈವಿಧ್ಯತೆಯು ಹಲವು ಸಮಸ್ಯೆಗಳಿದ್ದವರಲ್ಲಿ ಶೇ.9ರಷ್ಟು ಕುಸಿಯುತ್ತದೆ. ನಿಮ್ಮ ಕರುಳು ಅದು ಎದುರಿಸುವ ಮುನ್ನವೇ ಚಯಾಪಚಯ ಸಮಸ್ಯೆಗಳನ್ನು ತೋರುತ್ತದೆ.

ಈ ಫಲಿತಾಂಶಗಳಿಂದ ನಿಯಮಿತ ರಕ್ತ ಪರೀಕ್ಷೆಗಳಿಂದ ಮಾತ್ರ ಆಂತರಿಕ ರೋಗಲಕ್ಷಣಗಳನ್ನು ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ತೋರಿಸಿವೆ.

ಅಪೋಲೋ ಹಾಸ್ಪಿಟಲ್ಸ್ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಗೀತಾ ರೆಡ್ಡಿ, “ಆರೋಗ್ಯಕರ ದೀರ್ಘಾಯಸ್ಸು ಅದೃಷ್ಟವಲ್ಲ, ಅದಕ್ಕೆ ಪ್ರಾರಂಭಿಕ, ಸತತ ಕ್ರಮ ಅಗತ್ಯ. ಸರಿಯಾದ ಸಮಯದಲ್ಲಿ ಸರಿಯಾದ ಆರೋಗ್ಯಪರೀಕ್ಷೆಯು ಹೃದಯ ರೋಗವನ್ನು ಹಾಗೂ ಕ್ಯಾನ್ಸರ್ ಅನ್ನು ಸ್ಟೇಜ್ 1ರಲ್ಲಿ, ಅದಕ್ಕೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿಯೇ ಪತ್ತೆ ಮಾಡಬಲ್ಲದು” ಎನ್ನುತ್ತಾರೆ.

ಆರೋಗ್ಯಕ್ಷೇತ್ರದ ಭವಿಷ್ಯವು ಜನಸಂಖ್ಯೆಯ ದತ್ತಾಂಶ, ಭೌಗೋಳಿಕ ಒಳನೋಟಗಳು ಮತ್ತು ಜೀವನಶೈಲಿ ಮತ್ತು ಎಪಿಜೆನೆಟಿಕ್ಸ್ ಮೂಲಕ ಕಂಡುಕೊಳ್ಳುವುದರಲ್ಲಿ ಅಡಗಿದೆ. ಅಪೋಲೋ ಪ್ರೊ ಹೆಲ್ತ್ ಇದಕ್ಕೆ ಸಂಬಂಧಿಸಿದ ಪ್ರಿಡಿಕ್ಟಿವ್ ರಿಸ್ಕ್ ಅಸೆಸ್ ಮೆಂಟ್, ಸುಧಾರಿತ ರೋಗನಿರ್ಣಯ ಮತ್ತು ವೈದ್ಯರ ಮೌಲ್ಯಮಾಪನವನ್ನು ವಯಸ್ಸು, ಲಿಂಗ ಮತ್ತು ರಿಸ್ಕ್ ಪ್ರೊಫೈಲ್ ಆಧರಿಸಿ ವೈಯಕ್ತಿಕ ಗೊಳಿಸುತ್ತದೆ.

ಭಾರತವು ರೋಗಲಕ್ಷಣದ ಆರೈಕೆಯಿಂದ ರೋಗ ಮುನ್ಸೂಚನೆಯ, ಸತತ ಮತ್ತು ವೈಯಕ್ತಿಕ ವಿಧಾನದತ್ತ ಮುನ್ನಡೆಯಬೇಕಿದೆ. ನಿಮ್ಮ ಆರೋಗ್ಯವನ್ನು ಮುಂದೂಡಬೇಡಿ, ಇಂದೇ ಚೆಕಪ್ ಮಾಡಿಸಿ” ಎಂದರು.

ಈ ವರದಿಯು ದತ್ತಾಂಶದಲ್ಲಿ ಸ್ಥಿರವಾದ ಮಾದರಿಯನ್ನು ತೋರಿಸುತ್ತದೆ: ಆರೋಗ್ಯದ ರಿಸ್ಕ್ ಗಳನ್ನು ರೋಗಲಕ್ಷಣಗಳಿಲ್ಲದ ಸಂದರ್ಭದಲ್ಲಿ ಮುಂಚೆಯೇ ಗುರುತಿಸಬೇಕು ಮತ್ತು ಹಲವು ಆಯಾಮಗಳಲ್ಲಿರಬೇಕು ಎಂದು ತೋರಿಸಿದೆ. ಇದು ಸುಧಾರಿತ ಫಲಿತಾಂಶಗಳಿಗೆ ಫಾಲೋ-ಅಪ್ ಮತ್ತು ಆರೈಕೆಯ ಮುಂದುವರಿಕೆ ತೋರಿಸಿದೆ. ಶಿಫಾರಸು ಮಾಡಿದ ಆರೈಕೆಯ ನಂತರ ಶೇ.56ರಷ್ಟು ಅಧಿಕ ರಕ್ತದೊತ್ತಡ ಮತ್ತು ಶೇ.34ರಷ್ಟು ಮಧುಮೇಹವು ಸುಧಾರಿಸಿದೆ. ಆರೋಗ್ಯಪರೀಕ್ಷೆಯಲ್ಲಿ ಸಮಸ್ಯೆ ಕಂಡು ಬರುತ್ತದೆ-ಅದನ್ನು ಸರಿಪಡಿಸಲು ಕ್ರಮ ಅಗತ್ಯ.

ಈ ವರದಿಯ ಒಳನೋಟಗಳನ್ನು ಗುರುತಿಸಲಾದ ಎಲೆಕ್ಟ್ರಾನಿಕ್ ವೈದ್ಯಕೀಯ ದಾಖಲೆಗಳು, ರಚನಾತ್ಮಕ ಕ್ಲಿನಿಕಲ್ ಮೌಲ್ಯಮಾಪನಗಳು, ಎಐ- ಪ್ರೇರಿತ ರಿಸ್ಕ್ ಶ್ರೇಣೀಕರಣ ಮತ್ತು ಅಪೋಲೋ ಆಸ್ಪತ್ರೆಗಳು, ಕ್ಲಿನಿಕ್ ಗಳು, ಡಯಾಗ್ನೋಸ್ಟಿಕ್ ಲ್ಯಾಬ್ ಗಳು ಮತ್ತು ವೆಲ್ನೆಸ್ ಸೆಂಟರ್ ಗಳಲ್ಲಿನ ಫಾಲೋ-ಅಪ್ ದತ್ತಾಂಶದಿಂದ ಪಡೆಯಲಾಗಿದೆ.

ಭಾರತದಲ್ಲಿ ಆರೋಗ್ಯದ ತೊಂದರೆಗಳು ಬಹಳ ಮುಂಚೆಯೇ ಕಾಣಿಸಿಕೊಳ್ಳುತ್ತಿವೆ, ಬಹಳ ಕಾಲ ಗೋಪ್ಯವಾಗಿರುತ್ತವೆ ಮತ್ತು ಬಹುತೇಕ ಗೊತ್ತೇ ಆಗುವುದಿಲ್ಲ: ಅಪೋಲೋ ಹಾಸ್ಪಿಟಲ್ಸ್ ನ ಹೆಲ್ತ್ ಆಫ್ ನೇಷನ್ 2026 ಈ ಮೌನ ಬದಲಾವಣೆಯನ್ನು ಗುರುತಿಸಿದೆ.

ಹೆಲ್ತ್ ಆಫ್ ನೇಷನ್ 2026, ಸಂಪೂರ್ಣ ಚಿತ್ರಣ ಅನಾವರಣ

ಬೆಂಗಳೂರಿನಲ್ಲಿ ಪರೀಕ್ಷಿಸಿದವರಲ್ಲಿ ಶೇ.17ರಷ್ಟು ಮಧುಮೇಹ, ಶೇ.23ರಷ್ಟು ರಕ್ತದೊತ್ತಡ, ಶೇ.14ರಷ್ಟು ರಕ್ತಹೀನತೆ ಮತ್ತು ಶೇ.78ರಷ್ಟು ಬೊಜ್ಜು ಹೊಂದಿದ್ದಾರೆ