ಬೆಂಗಳೂರು, ಎ.15: ನಮ್ಮ ದೇಹದ ಪ್ರತಿಯೊಂದು ಅಂಗದ ರಕ್ಷಣೆ ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಕಣ್ಣು ಮನುಷ್ಯನ ಪ್ರಮುಖ ಅಂಗವಾಗಿದ್ದು ಕಣ್ಣಿನ ದೃಷ್ಟಿ (Eye Health) ಕಾಪಾಡಿಕೊಳ್ಳುವುದು ಅಗತ್ಯ. ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್,ಲ್ಯಾಪ್‌ಟಾಪ್ ಬಳಕೆ ಹೆಚ್ಚಾಗಿದ್ದು ಹೆಚ್ಚಿನ ಜನರಿಗೆ ದೃಷ್ಟಿ ದೋಷ ಸಮಸ್ಯೆಯಾಗುತ್ತಿದೆ. ಕಣ್ಣಿನ ಸ್ನಾಯುಗಳಿಗೆ ವಿಶ್ರಾಂತಿ ಒದಗಿಸಲು ಮತ್ತು ದೃಷ್ಟಿ ಉತ್ತಮಪಡಿಸಿಕೊಳ್ಳಲು ಸುಲಭ ಪರಿಹಾರ ಕ್ರಮ ಇಲ್ಲಿದೆ.
ಕೆಲವು ಯೋಗ ಆಸನಗಳು ಕಣ್ಣಿನ ಆರೋಗ್ಯವನ್ನು ರಕ್ಷಣೆ ಮಾಡಲು ಸಹಾಯ ಮಾಡುತ್ತದೆ. ಯೋಗವು ಗಂಭೀರ ದೃಷ್ಟಿ ಸಮಸ್ಯೆಗಳನ್ನು ಗುಣಪಡಿಸಲು ಸಾಧ್ಯವಿಲ್ಲವಾದರೂ, ಕೆಲವು ಆಸನಗಳು ಮತ್ತು ಕಣ್ಣಿನ ವ್ಯಾಯಾಮಗಳು ಒತ್ತಡವನ್ನು ಕಡಿಮೆ ಮಾಡಲು ಮತ್ತು ಕಣ್ಣುಗಳನ್ನು ವಿಶ್ರಾಂತಿ ಗೊಳಿಸಲು ಸಾಧ್ಯವಾಗುತ್ತದೆ.
ಪಾಮಿಂಗ್: ಅಂಗೈಗಳ ಮೃದು ಸ್ಪರ್ಶ
ಪಾಮಿಂಗ್ ಕಣ್ಣುಗಳಿಗೆ ಸರಳ ಮತ್ತು ಅತ್ಯಂತ ವಿಶ್ರಾಂತಿ ನೀಡುವ ವ್ಯಾಯಾಮಗಳಲ್ಲಿ ಒಂದಾಗಿದೆ. ಇದನ್ನು ಮಾಡಲು, ಎರಡೂ ಅಂಗೈಗಳು ಬೆಚ್ಚಗಾಗುವವರೆಗೆ ಒಟ್ಟಿಗೆ ಉಜ್ಜಿ, ನಂತರ ನಿಧಾನವಾಗಿ ನಿಮ್ಮ ಮುಚ್ಚಿದ ಕಣ್ಣುಗಳ ಮೇಲೆ ಇರಿಸಿ.. ಆದರೆ ಕಣ್ಣುಗುಡ್ಡೆಗಳ ಮೇಲೆ ಒತ್ತಬೇಡಿ, ಕೆಲವು ನಿಮಿಷಗಳ ಕಾಲ ಶಾಂತವಾಗಿ ಕುಳಿತು ನಿಧಾನವಾಗಿ ಉಸಿರಾಡಿ. ಈ ಕ್ರಮವು ದಣಿದ ಕಣ್ಣುಗಳನ್ನು ಶಾಂತಗೊಳಿಸಲು ಸಹಾಯ ಮಾಡಲಿದೆ.
ಕಣ್ಣು ಮಿಟುಕಿಸುವುದು:
ದೀರ್ಘಾವಧಿಯವರೆಗೆ ಲ್ಯಾಪ್ ಟಾಪ್ ನೋಡುವ ಅನೇಕ ಜನರು ಸರಿಯಾಗಿ ಮಿಟುಕಿಸಲು ಮರೆತುಬಿಡುತ್ತಾರೆ. ಇದು ಕಣ್ಣುಗಳನ್ನು ಒಣಗಿಸುತ್ತದೆ ಮತ್ತು ದಣಿವುಂಟು ಮಾಡುತ್ತದೆ. ಹಾಗಾಗಿ ಆರಾಮವಾಗಿ ಕುಳಿತು ಕೆಲವು ಸೆಕೆಂಡುಗಳ ಕಾಲ ಕಣ್ಣುಗಳನ್ನು ವೇಗವಾಗಿ ಮಿಟುಕಿಸಿ, ನಂತರ ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ವಿಶ್ರಾಂತಿ ಪಡೆಯಿರಿ. ಇದು ಕಣ್ಣಿನಲ್ಲಿ ತೇವಾಂಶವನ್ನು ಕಾಪಾಡಲು ಸಹಾಯ ಮಾಡುತ್ತದೆ
Health Tips: ಬಳಲದೆಯೇ ತೂಕ ಇಳಿಸಬಹುದೇ? ಈ ಟಿಪ್ಸ್ ಅನುಸರಿಸಿದರೆ ಸಾಧ್ಯವಿದೆ
ಕಣ್ಣಿನ ತಿರುಗುವಿಕೆ:
ಕಣ್ಣಿನ ತಿರುಗುವಿಕೆಯು ಕಣ್ಣುಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಆರಾಮದಾಯಕ ಸ್ಥಾನದಲ್ಲಿ ಕುಳಿತು ನಿಮ್ಮ ಕಣ್ಣುಗಳನ್ನು ವೃತ್ತದಲ್ಲಿ ನಿಧಾನವಾಗಿ ತಿರುಗಿಸಿ.. ಇದು ಕಣ್ಣಿನ ಸ್ನಾಯುಗಳನ್ನು ಬಲ ಪಡಿಸುತ್ತದೆ.
ಮೇಲೆ- ಕೆಳಗೆ ಕಣ್ಣು ಹಾಯಿಸಿ:
ಈ ವ್ಯಾಯಾಮದಲ್ಲಿ, ನಿಮ್ಮ ತಲೆಯನ್ನು ಸ್ಥಿರವಾಗಿ ಇರಿಸಿ ಮತ್ತು ನಿಮ್ಮ ಕಣ್ಣುಗಳನ್ನು ಮಾತ್ರ ಚಲಿಸಿ. ನಿಧಾನವಾಗಿ ಮೇಲಕ್ಕೆ ನೋಡಿ ಬಳಿಮ ನಿಮ್ಮ ನೋಟವನ್ನು ಕೆಳಕ್ಕೆ ತನ್ನಿ. ಈ ಚಲನೆ ಯನ್ನು ಕೆಲವು ಬಾರಿ ಪುನರಾವರ್ತಿಸಿ.
ಫೋಕಸ್ ಶಿಫ್ಟಿಂಗ್:
ಫೋಕಸ್ ಶಿಫ್ಟಿಂಗ್ ಕಣ್ಣುಗಳು ಹತ್ತಿರದ ಮತ್ತು ದೂರದ ವಸ್ತುಗಳ ನಡುವೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಬ್ಬೆರಳನ್ನು ನಿಮ್ಮ ಮುಖದ ಮುಂದೆ ಹಿಡಿದು ಕೆಲವು ಸೆಕೆಂಡುಗಳ ಕಾಲ ಅದನ್ನು ನೋಡಿ. ನಂತರ ನಿಮ್ಮ ನೋಟವನ್ನು ಗೋಡೆ, ಮರ ಅಥವಾ ಕಿಟಕಿಯಂತಹ ದೂರಕ್ಕೆ ಹಾಯಿಸಿ.