ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Health Tips: ದೇಹದಲ್ಲಿ ಉತ್ತಮ ಕೊಬ್ಬು ಹೆಚ್ಚಿಸಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

Healthy Fats: ಹೆಚ್ಚಿನ ಜನರು ಉಪಾಹಾರಕ್ಕಾಗಿ ಪ್ರೋಟಿನ್‌ಗಳು ಮತ್ತು ಕಾರ್ಬೋಹೈಡ್ರೇಟ್‌ ಆಹಾರದ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ಆದರೆ ಬೆಳಗ್ಗಿನ ಸಮಯಕ್ಕೆ ಮೊದಲು ನಮ್ಮ ದೇಹಕ್ಕೆ ಆರೋಗ್ಯಕರ ಕೊಬ್ಬನ್ನು ಒದಗಿಸುವ ಮೂಲಕ‌ ಹಲವು ಪ್ರಯೋಜನಗಳನ್ನು ಪಡೆಯಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಮಾ. 29: ದೇಹದ ಆರೋಗ್ಯ ಕಾಪಾಡಿಕೊಳ್ಳಲು ನಾವು ಸೇವಿಸುವ ಆಹಾರ ಕೂಡ ಪ್ರಮುಖವಾಗಿರುತ್ತದೆ. ಪ್ರತಿನಿತ್ಯವೂ ತಾಜಾ ಹಣ್ಣು, ತರಕಾರಿ, ಧಾನ್ಯಗಳ ಸೇವನೆಗೆ ಒತ್ತು ನೀಡಬೇಕು. ಹೆಚ್ಚಿನ ಜನರು ಉಪಾಹಾರಕ್ಕಾಗಿ ಪ್ರೋಟಿನ್‌ಗಳು ಮತ್ತು ಕಾರ್ಬೋಹೈಡ್ರೇಟ್‌ ಆಹಾರದ ಮೇಲೆ ಕೇಂದ್ರೀಕರಿಸುತ್ತಾರೆ. ಆದರೆ ಬೆಳಗ್ಗಿನ ಸಮಯಕ್ಕೆ ಮೊದಲು ನಮ್ಮ ದೇಹಕ್ಕೆ ಆರೋಗ್ಯಕರ ಕೊಬ್ಬನ್ನು (Healthy Fats) ಒದಗಿಸುವ ಮೂಲಕ‌ ಹಲವು ಪ್ರಯೋಜನಗಳನ್ನು ಪಡೆಯಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ತುಪ್ಪದ ಬಳಕೆ

ಉಪಹಾರಕ್ಕಿಂತ ಮೊದಲು ಖಾಲಿ ಹೊಟ್ಟೆಯಲ್ಲಿ ತುಪ್ಪದ ಬಳಕೆ ಉತ್ತಮ. ಇದು ನಿಮ್ಮ ಕರುಳಿನಲ್ಲಿ ಬ್ಯುಟರಿಕ್ ಆಮ್ಲದ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅದೇ ರೀತಿ ಕರುಳನ್ನು ರಕ್ಷಣೆ ಮಾಡಿ ದೇಹವನ್ನು ಬಲಪಡಿಸುತ್ತದೆ. ಬೆಚ್ಚಗಿನ ನೀರಿನ ಜತೆ ಎರಡು ಸ್ಪೂನ್ ತುಪ್ಪ ತೆಗೆದು ಕೊಳ್ಳುವುದು ಉತ್ತಮ. ಆದರೆ ಕೊಲೆಸ್ಟ್ರಾಲ್ ಅಥವಾ ಪಿತ್ತಕೋಶದ ಸಮಸ್ಯೆಗಳಿದ್ದರೆ ಅದನ್ನು ತಪ್ಪಿಸಬೇಕು

ಈ ಆಹಾರ ಅರಿವಿಲ್ಲದೆಯೇ ನಿಮ್ಮ ರಕ್ತದೊತ್ತಡ ಹೆಚ್ಚಿಸಬಹುದು

ಬೀಜಗಳ ಸೇವನೆ

ದೇಹಕ್ಕೆ ಬೀಜಗಳ ಬಳಕೆ ಕೂಡ ಅಗತ್ಯ. ನೀವು ವಾಲ್‌ನಟ್‌, ಬಾದಾಮಿಯಂತ ಬೀಜಗಳ ಸೇವನೆ ಉತ್ತಮ. ಇದು ಆರೋಗ್ಯಕರ ಕೊಬ್ಬನ್ನು ಹೊಂದಿದ್ದು, ವಾಸ್ತವವಾಗಿ ನಮ್ಮ ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ. ಮೊದಲು ಅವುಗಳನ್ನು ನೆನೆಸಿ ತಿನ್ನುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಬಹುದು.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯೂ ಕೂಡ ಖಾಲಿ ಹೊಟ್ಟೆಯಲ್ಲಿ ಸೇವಿಸಲು ಉತ್ತಮ ಗುಣಮಟ್ಟದ ಆಯ್ಕೆ. ಇದು 90% ಸ್ಯಾಚು ರೇಟೆಡ್ ಕೊಬ್ಬನ್ನು ನೀಡುತ್ತದೆ. ಇದು ದೇಹಕ್ಕೆ ಶಕ್ತಿ ಹೆಚ್ಚಿಸಲು ಮತ್ತು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ.

ಉಪ್ಪುರಹಿತ ಬೆಣ್ಣೆ

ಉಪ್ಪುರಹಿತ ಬೆಣ್ಣೆಯು ದೇಹಕ್ಕೆ ಶಕ್ತಿಯನ್ನು ಒದಗಿಸಲು ಹಾಗೂ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ. ಇದು ಖಾಲಿ ಹೊಟ್ಟೆಯಲ್ಲಿ ಸೇವಿಸಲು ಅತ್ಯುತ್ತಮ ಆಯ್ಕೆ. ಬೆಣ್ಣೆಯು ನಿಮ್ಮ ರಕ್ತದಲ್ಲಿನ ಸಕ್ಕರೆ ಮತ್ತು‌ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.