Health Tips: ಚಳಿಗಾಲದ ಕೀಲುನೋವಿಗೆ ಅಡುಗೆ ಮನೆಯಲ್ಲಿದ್ದ ಈ ಮದ್ದುಗಳೇ ಪರಿಹಾರ!
ಶೀತ ವಾತಾವರಣದಿಂದಾಗಿ ಜ್ವರ, ಕೆಮ್ಮು, ಒಣ ಚರ್ಮ, ಕೀಲು ನೋವಿನಂತ ಅನೇಕ ಸಮಸ್ಯೆಗಳು ಕಾಡುತ್ತವೆ. ವಿಶೇಷವಾಗಿ 30 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ಕೀಲು ನೋವಿನಂತ ಸಮಸ್ಯೆ ಉಲ್ಬಣ ಗೊಳ್ಳುತ್ತದೆ. ವಾತಾವರಣದಲ್ಲಿನ ಉಷ್ಣಾಂಶ ಕಡಿಮೆಯಾದಂತೆ ದೇಹದ ರಕ್ತ ಪರಿಚಲನೆ ಕಡಿಮೆಯಾಗಿ ಮತ್ತು ಸ್ನಾಯುಗಳು ಬಿಗಿಯುವುದು ಈ ನೋವಿಗೆ ಪ್ರಮುಖ ಕಾರಣ. ಆದರೆ ನಾವು ಅಡುಗೆ ಮನೆಯಲ್ಲಿ ಬಳಸುವ ಕೆಲವೊಂದು ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಈ ನೋವನ್ನು ತಗ್ಗಿಸುವ ಅದ್ಭುತ ಶಕ್ತಿ ಯಿದೆ.
ಸಂಗ್ರಹ ಚಿತ್ರ -
ಬೆಂಗಳೂರು,ಡಿ. 30: ಚಳಿಗಾಲ ಬಂತೆಂದಾಗ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ನಮಗೆ ಕಾಡಲು ಪ್ರಾರಂಭ ಆಗುತ್ತವೆ. ಶೀತ ವಾತಾವರಣದಿಂದಾಗಿ ಜ್ವರ, ಕೆಮ್ಮು, ಒಣ ಚರ್ಮ, ಕೀಲು ನೋವಿನಂತ ಅನೇಕ ಸಮಸ್ಯೆಗಳು ಕಾಡುತ್ತವೆ. ವಿಶೇಷವಾಗಿ 30 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ಕೀಲು ನೋವಿನಂತ (Joint Pain) ಸಮಸ್ಯೆ ಉಲ್ಬಣಗೊಳ್ಳುತ್ತದೆ. ವಾತಾವರಣದಲ್ಲಿನ ಉಷ್ಣಾಂಶ ಕಡಿಮೆ ಯಾದಂತೆ ದೇಹದ ರಕ್ತ ಪರಿಚಲನೆ ಕಡಿಮೆಯಾಗಿ ಮತ್ತು ಸ್ನಾಯುಗಳು ಬಿಗಿಯುವುದು ಈ ನೋವಿಗೆ ಪ್ರಮುಖ ಕಾರಣ. ಆದರೆ ನಾವು ಅಡುಗೆ ಮನೆಯಲ್ಲಿ ಬಳಸುವ ಕೆಲವೊಂದು ಸಾಂಪ್ರ ದಾಯಿಕ ಆಹಾರ ಪದ್ಧತಿಯಲ್ಲಿ ಈ ನೋವನ್ನು ತಗ್ಗಿಸುವ ಅದ್ಭುತ ಶಕ್ತಿ ಯಿದೆ. ಹಾಗಾಗಿ ಚಳಿಗಾಲ ದಲ್ಲಿ ಕೀಲುಗಳ ಆರೋಗ್ಯ ಕಾಪಾಡುವ ಪ್ರಮುಖ ಆಹಾರಗಳ ಮಾಹಿತಿ ಇಲ್ಲಿದೆ.
ಅರಿಶಿನ:
ಅರಿಶಿನದ ಕರ್ಕ್ಯುಮಿನ್ ಎನ್ನುವ ಅಂಶವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಅದರ ಉರಿಯೂತದ ಗುಣಲಕ್ಷಣಗಳು ಕೀಲು ನೋವು ಮತ್ತು ಬಿಗಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಒಂದು ಚಿಟಿಕೆ ಅರಿಶಿನ ಹಾಕಿ ಹಾಲು ಕುಡಿಯುವುದರಿಂದ ಕೀಲುಗಳ ಊತ ಮತ್ತು ನೋವು ಬಹಳ ಬೇಗನೆ ಕಡಿಮೆಯಾಗುತ್ತದೆ.
Health Tips: ಮೊಟ್ಟೆಗಳ ಸೇವನೆ ಮಿತವಾಗಿದ್ದರೆ ಸುರಕ್ಷಿತ; ತಜ್ಞರ ಕಿವಿಮಾತು ಇಲ್ಲಿದೆ
ಶುಂಠಿ:
ಶುಂಠಿಯು ನೈಸರ್ಗಿಕ ಉರಿಯೂತ ನಿವಾರಕ ಮತ್ತು ನೋವು ನಿವಾರಕ ಗುಣವನ್ನು ಹೊಂದಿದೆ. ಹಾಗಾಗಿ ಕೀಲುಗಳಲ್ಲಿ ನೋವು ಮತ್ತು ಊತವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಪ್ರತಿದಿನ ಶುಂಠಿ ಚಹಾ ಅಥವಾ ಅಡುಗೆಯಲ್ಲಿ ಶುಂಠಿ ಬಳಸುವುದರಿಂದ ಕೀಲುಗಳ ಶಕ್ತಿ ಕೂಡ ಹೆಚ್ಚುತ್ತದೆ
ಎಳ್ಳು:
ಎಳ್ಳು ಬೀಜಗಳು ಚಳಿಗಾಲದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಅವು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಅಧಿಕವಾಗಿದ್ದು, ಇದು ಮೂಳೆಯ ಸಾಂದ್ರತೆ ಬೆಂಬಲಿ ಸುತ್ತದೆ. ಇದು ಮೂಳೆ ನಷ್ಟ ಮತ್ತು ಕೀಲು ಅಸ್ವಸ್ಥತೆಯ ಅಪಾಯವನ್ನು ಕಡಿಮೆ ಮಾಡುವ ಮೂಲಕ ವಿಶೇಷವಾಗಿ ವಯಸ್ಸಾದ ವಯಸ್ಕರಿಗೆ ಎಳ್ಳು ಸೇವನೆ ಬಹಳ ಮುಖ್ಯವಾಗಿದೆ.
ಸಾಸಿವೆ ಸೊಪ್ಪು:
ಸಾಸಿವೆ ಸೊಪ್ಪುಗಳು ಉತ್ಕರ್ಷಣ ನಿರೋಧಕಗಳು, ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿವೆ. ಇವು ಮೂಳೆ ಮತ್ತು ಕೀಲುಗಳ ಆರೋಗ್ಯಕ್ಕೆ ಅಗತ್ಯವಾದ ಪೋಷ ಕಾಂಶಗಳಾಗಿವೆ. ಇವು ಉತ್ಕರ್ಷಣ ನಿರೋಧಕಗಳು ಕೀಲುಗಳ ಕ್ಷೀಣತೆಗೆ ಸಂಬಂಧಿಸಿದ ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯಕವಾಗುತ್ತದೆ.
ಮೆಂತ್ಯ ಸೊಪ್ಪು:
ಮೆಂತ್ಯ ಕಾಳುಗಳಲ್ಲಿ ರೋಗನಿರೋಧಕ ಮತ್ತು ಉರಿಯೂತ ಶಮನಕಾರಿ ಗುಣಗಳಿದ್ದು ಇವುಗಳ ಸೇವನೆ ಬಹಳ ಉತ್ತಮ. ರಾತ್ರಿ ನೆನೆಸಿಟ್ಟ ಮೆಂತ್ಯ ನೀರು ಅಥವಾ ಮೆಂತ್ಯ ಸೊಪ್ಪಿನ ಬಳಕೆ ಕೀಲು ನೋವಿಗೆ ರಾಮಬಾಣವಾಗಿದೆ.
ನೆಲ್ಲಿಕಾಯಿ:
ಕೀಲುಗಳ ನಡುವೆ ಇರುವ 'ಕಾರ್ಟಿಲೆಜ್' ಎಂಬ ಮೂಳೆಗಳನ್ನು ರಕ್ಷಿಸಲು ವಿಟಮಿನ್ ಸಿ ಅತ್ಯಗತ್ಯ. ನೆಲ್ಲಿಕಾಯಿ ಸೇವನೆಯಿಂದ ದೇಹದಲ್ಲಿ ಕೊಲಾಜೆನ್ ಉತ್ಪತ್ತಿಯಾಗಿ ಕೀಲುಗಳು ಸವೆಯದಂತೆ ಸಹಾಯಕಾರಿ.
ತುಪ್ಪ:
ತುಪ್ಪವು ಕೊಬ್ಬು ಕರಗುವ ಜೀವಸತ್ವಗಳು ಮತ್ತು ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ಇದು ಪೋಷಕಾಂಶಗಳ ಹೀರಿಕೊಳ್ಳುವಿಕೆ ಮತ್ತು ಕರುಳಿನ ಆರೋಗ್ಯವನ್ನು ರಕ್ಷಣೆ ಮಾಡಲು ಸಹಾಯ ಮಾಡುತ್ತದೆ
ಬೆಳ್ಳುಳ್ಳಿ:
ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ಅಂಶವು ಸಂಧಿವಾತದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ದೇಹವನ್ನು ಬೆಚ್ಚಗಿಡಲು ಹೆಚ್ಚು ಸಹಕಾರಿಯಾಗಿದೆ.
ರಾಗಿ:
ರಾಗಿ ಅತ್ಯುತ್ತಮ ಕ್ಯಾಲ್ಸಿಯಂನ ಮೂಲವಾಗಿದೆ. ರಾಗಿ ಮುದ್ದೆ ಅಥವಾ ರೊಟ್ಟಿ ಸೇವಿಸುವುದರಿಂದ ಮೂಳೆಗಳ ಸಾಂದ್ರತೆ ಹೆಚ್ಚಿ, ಕೀಲುಗಳ ಮೇಲಿನ ಒತ್ತಡ ಕೂಡ ಕಡಿಮೆಯಾಗಲಿದೆ..