ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gastric Problem Home Remedies: ಎದೆಯುರಿ-ಹುಳಿತೇಗು ಬರುತ್ತಾ? ಇಲ್ಲಿದೆ ಪರಿಹಾರ

Health Tips: ಸಾಮಾನ್ಯವಾಗಿ ಆ್ಯಸಿಡಿಟಿ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆ್ಯಸಿಡಿಟಿ ಮತ್ತು ಎದೆಯುರಿಯ ಸಮಸ್ಯೆ ಬಂದಾಗ ಬಾಯಿಯಲ್ಲಿ ಹುಳಿ ರುಚಿಬಂದು ಹೊಟ್ಟೆ ಕಟ್ಟಿದ ಅನುಭವ ಆಗುತ್ತದೆ. ನಮ್ಮ ಬದಲಾದ ಜೀವನ ಶೈಲಿ, ಮಸಾಲೆಯುಕ್ತ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು ಕೂಡ ಇದಕ್ಕೆ ಮುಖ್ಯ ಕಾರಣ. ಹಾಗಾದರೆ ಈ ಸಮಸ್ಯೆಗೆ ಸುಲಭ ಪರಿಹಾರ ಏನು? ಆ್ಯಸಿಡಿಟಿಯಿಂದ ಕಾಡುವ ಎದೆ ನೋವನ್ನು ಹೇಗೆ ಕಂಡುಹಿಡಿಯುವುದು? ಎನ್ನುವ ಸಂಗತಿಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಯನ್ನು ಡಯಟಿಷಿಯನ್‌ ಅನಿತಾ ವಿವರಿಸಿದ್ದಾರೆ.

ಡಯಟಿಷಿಯನ್‌ ಅನಿತಾ

ಬೆಂಗಳೂರು, ಫೆ.18: ಆ್ಯಸಿಡಿಟಿ (Acidity Problem) ಎನ್ನುವುದು ಹೊಟ್ಟೆಯಲ್ಲಿ ಅತಿಯಾದ ಆಮ್ಲ ಉತ್ಪಾದನೆಯಿಂದ ಉಂಟಾಗುವ ಸಾಮಾನ್ಯ ಸಮಸ್ಯೆ. ಈ ಸಮಸ್ಯೆ ಉಂಟಾದಾಗ ಎದೆಯುರಿ, ಹುಳಿ ತೇಗು, ಹೊಟ್ಟೆ ಉಬ್ಬರದಂತಹ ನೋವು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಗಳು ಕಾಣಿಸಿಕೊಂಡಾಗ ಏನು ಮಾಡಬೇಕು? ಇದಕ್ಕೆ ಸುಲಭ ಪರಿಹಾರ ಏನು? ಆ್ಯಸಿಡಿಟಿಯಿಂದ ಕಾಡುವ ಎದೆ ನೋವನ್ನು ಹೇಗೆ ಕಂಡುಹಿಡಿಯುವುದು? (Gastric Problem Home Remedies) ಎನ್ನುವ ಸಂಗತಿಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಯನ್ನು ವಿಶ್ವವಾಣಿ ಹೆಲ್ತ್‌ ಚಾನೆಲ್‌ನಲ್ಲಿ ಡಯಟಿಷಿಯನ್‌ ಅನಿತಾ ವಿವರಿಸಿದ್ದಾರೆ.

ಸಾಮಾನ್ಯವಾಗಿ ಆ್ಯಸಿಡಿಟಿ ಸಮಸ್ಯೆ ಎಲ್ಲರಲ್ಲಿಯೂ ಹೆಚ್ಚಾಗಿ ಕಂಡುಬರುತ್ತದೆ. ಆ್ಯಸಿಡಿಟಿ ಮತ್ತು ಎದೆಯುರಿಯ ಸಮಸ್ಯೆ ಬಂದಾಗ ಬಾಯಿಯಲ್ಲಿ ಹುಳಿ ರುಚಿಬಂದು ಹೊಟ್ಟೆ ಕಟ್ಟಿದಂತೆ ಅನುಭವ ಆಗುತ್ತದೆ. ನಮ್ಮ ಬದಲಾದ ಜೀವನ ಶೈಲಿ, ಮಸಾಲೆಯುಕ್ತ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು ಕೂಡ ಇದಕ್ಕೆ ಮುಖ್ಯ ಕಾರಣ. ಹೆಚ್ಚಿನವರು ಆರೋಗ್ಯ ಸಮಸ್ಯೆ ಉಂಟಾದಾಗ ವೈದ್ಯರನ್ನು ಭೇಟಿ ಮಾಡದೆ ಮೆಡಿಕಲ್‌ನಲ್ಲಿ ಮಾತ್ರೆ ಪಡೆದುಕೊಳ್ಳುತ್ತಾರೆ. ಇಂತಹ ಔಷಧಗಳು ಕೂಡ ಆಮ್ಲತೆಯನ್ನು ಉಂಟು ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ವಿಡಿಯೊ ನೋಡಿ:



ಕಾರಣವೇನು?

  • ಅಗತ್ಯಕ್ಕಿಂತ ಹೆಚ್ಚು ಆಹಾರ ತಿಂದರೆ ಗ್ಯಾಸ್ಟ್ರಿಕ್‌ ಸಮಸ್ಯೆ ಕಾಡುತ್ತದೆ.
  • ಹೆಚ್ಚಿನ ಮಸಾಲೆಯುಕ್ತ ಅಥವಾ ಖಾರದ ಆಹಾರಗಳನ್ನು ಸೇವಿಸುವುದು.
  • ಅತಿಯಾದ ಒತ್ತಡ, ನಿದ್ದೆ ಇಲ್ಲದೆ ಕೆಲಸ ಮಾಡುವುದು ಇತ್ಯಾದಿ ಜೀವನ ಶೈಲಿಗಳು.
  • ಊಟ ಮಾಡಿದ ತಕ್ಷಣ ಮಲಗುವುದು, ಧೂಮಪಾನ ಮಾಡುವುದು, ಆಲ್ಕೊಹಾಲ್ ಸೇವನೆ ಇತ್ಯಾದಿ.
  • ಅತಿಯಾದ ತೂಕ ಕೂಡ ಗ್ಯಾಸ್ಟ್ರಿಕ್‌ಗೆ ಕಾರಣವಾಗುತ್ತದೆ.

ಚಳಿಗಾಲದಲ್ಲಿ ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ?

ಪರಿಹಾರವೇನು?

  • ಪದೇ ಪದೆ ಗ್ಯಾಸ್ಟ್ರಿಕ್‌ ಸಮಸ್ಯೆ ಉಂಟಾದಾಗ ಮೆಡಿಕಲ್‌ನಲ್ಲಿ ಮಾತ್ರೆ ಪಡೆಯುವುದನ್ನು ತಪ್ಪಿಸಿ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಿ.
  • ಕಾಫಿ, ಚಹಾ, ಕೂಲ್ ಡ್ರಿಂಕ್ಸ್ ಗಳನ್ನು ತಪ್ಪಿಸಿ.
  • ನಿಮ್ಮ ಊಟದಲ್ಲಿ ತರಕಾರಿಗಳು, ಹಣ್ಣುಗಳು, ಕಾಳುಗಳು ಇತ್ಯಾದಿಯನ್ನು ಹೆಚ್ಚು ಬಳಕೆ ಮಾಡಿ.
  • ಕೆಲವು ಔಷಧಗಳ ಅಡ್ಡಪರಿಣಾಮ ಮತ್ತು ಹಾರ್ಮೋನುಗಳ ಬದಲಾವಣೆ ಕೂಡ ಆ್ಯಸಿಡಿಟಿ ಉಂಟು ಮಾಡಬಹುದು.