ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Health Tips: ಡಯಾಬಿಟಿಸ್ ನಿಯಂತ್ರಣ ಹೇಗೆ? ವೈದ್ಯರ ಸಲಹೆ‌ ಏನು?

ಮಧುಮೇಹ ಅನ್ನೊದು ವಿಶ್ವದಾದ್ಯಂತ ಕೋಟ್ಯಂತರ ಜನರಿಗೆ ಕಾಡುವ ಸಮಸ್ಯೆಯಾಗಿದೆ. ಇದು ದೇಹದ ಇನ್ಸುಲಿನ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಒಂದು ಕಾಯಿಲೆಯಾಗಿದೆ. . ಈ ಒಂದು ಆರೋಗ್ಯ ಸಮಸ್ಯೆಯನ್ನು ಹೇಗೆ ನಿವಾರಿಸುವುದು? ಹೇಗೆ ಸಮತೋಲನದಲ್ಲಿ ಇಡುವುದು? ಇದಕ್ಕೆ ಮಾತ್ರೆಗಳ ಸಹಾಯ ಇಲ್ಲದೆ ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎಂದು ಮಧುಮೇಹ ತಜ್ಞರಾದ ಡಾ. ಸುಮನ್‌ ಅವರು ಮಾಹಿತಿ ನೀಡಿದ್ದಾರೆ.

ಸಂಗ್ರಹ ಚಿತ್ರ

ಬೆಂಗಳೂರು,ಫೆ.1: ಡಯಾಬಿಟಿಸ್‌ ಜೀವನ ಪರ್ಯಂತ ಕಾಡುವ ಒಂದು ಆರೋಗ್ಯ ಸಮಸ್ಯೆಯಾಗಿದೆ. ನಮ್ಮ ಆಹಾರ ಕ್ರಮ ಹಾಗೂ ಜೀವನ ಶೈಲಿ ಆರೋಗ್ಯಕರವಾಗಿದ್ದಾಗ ಮಾತ್ರ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು. ಈ ಒಂದು ಆರೋಗ್ಯ ಸಮಸ್ಯೆಯನ್ನು ಹೇಗೆ ನಿವಾರಿಸುವುದು? ಹೇಗೆ ಸಮತೋಲನದಲ್ಲಿ ಇಡುವುದು? ಇದಕ್ಕೆ ಮಾತ್ರೆಗಳ ಸಹಾಯ ಇಲ್ಲದೆ ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎಂದು ಮಧುಮೇಹ ತಜ್ಞರಾದ ಡಾ. ಸುಮನ್‌ ಅವರು ಮಾಹಿತಿ ನೀಡಿದ್ದಾರೆ.

ಮಧುಮೇಹ ಅನ್ನೊದು ವಿಶ್ವದಾದ್ಯಂತ ಕೋಟ್ಯಂತರ ಜನರಿಗೆ ಕಾಡುವ ಸಮಸ್ಯೆಯಾಗಿದೆ. ಇದು ದೇಹದ ಇನ್ಸುಲಿನ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಒಂದು ಕಾಯಿಲೆ ಯಾಗಿದೆ. ಹಾಗಾಗಿ ಇದನ್ನು ಈ ಮೊದಲೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮುಖ್ಯ. ಹಾಗಾಗಿ ಮುಖ್ಯ ವಾಗಿ ಸಕ್ಕರೆ ಖಾಯಿಲೆ ಇದ್ದವರು ತೂಕದಲ್ಲಿ ಸಮತೋಲನ ಕಾಯ್ದು ಕೊಳ್ಳಬೇಕು, ಅದೇ ರೀತಿ ಡಯಬಿಟಿಸ್ ಪತ್ತೆ ಹಚ್ಚುವ ಪ್ರಮುಖ ತಂತ್ರಜ್ಞಾನಗಳನ್ನು ಬಳಸಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ವಿಡಿಯೋ ನೋಡಿ:



ತಜ್ಞರು ಹೇಳುವ ಪ್ರಕಾರ ಮಧುಮೇಹಿಗಳು ಕೆಲವು ಆಹಾರ ಕ್ರಮಗಳನ್ನು ಕಡ್ಡಾಯವಾಗಿ ಫಾಲೋ ಮಾಡಬೇಕು. ಯಾವ ಆಹಾರವನ್ನು ಸ್ವೀಕರಿಸಬೇಕು? ಯಾವ ಆಹಾರವನ್ನು ಸ್ವೀಕರಿಸಬಾರದು? ಎನ್ನುವ ಪರಿಜ್ಞಾನ ಇರಬೇಕು‌. ಹೆಚ್ಚಾಗಿ ಮೂಲಂಗಿ, ಹಾಗಲಕಾಯಿ,ಸೊಪ್ಪು ತರಕಾರಿಯನ್ನು ಸೇವಿಸಿದರೆ ಡಯಬಿಟಿಸ್ ಕಂಟ್ರೋಲ್ ಮಾಡಬಹುದು. ಕಡಿಮೆ ಗ್ಲೈಸೆಮಿಕ್ ಹೊಂದಿರುವ ಆಹಾರಗಳಾದ ಹಣ್ಣುಗಳು, ತರಕಾರಿಗಳು, ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸುವ ಅಭ್ಯಾಸ ಮಾಡಿ ಎಂದಿದ್ದಾರೆ.

Health Tips: ರಾತ್ರಿ ಸಮಯದಲ್ಲಿ ಉತ್ತಮ ನಿದ್ರೆ ಮಾಡಬೇಕಾ?; ಹಾಗಾದ್ರೆ ಇಂದಿನಿಂದಲೇ ಮಲಗುವ ಮುನ್ನ ಇಂತಹ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಿ

ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವೇಗದ ನಡಿಗೆ, ವ್ಯಾಯಾಮ,ಅಥವಾ ಯೋಗದಂತಹ ಚಟುವಟಿಕೆಗಳನ್ನು ಮಾಡಬೇಕು. ಇನ್ನು ಡಯಾಬಿಟಿಸ್ ಇದ್ದವರು ಆರೋಗ್ಯಕರ ಆಹಾರ ಪದ್ಧತಿಯ ಜೊತೆಗೆ ಸರಿಯಾಗಿ ನಿದ್ದೆಯನ್ನು ಮಾಡಬೇಕಾಗುತ್ತದೆ. ದಿನದಲ್ಲಿ ಏಳು ಗಂಟೆಗಳು ನಿದ್ದೆ ಅಗತ್ಯವಾಗಿ ಬೇಕು. ಇನ್ನು ಮಧುಮೇಹಿಗಳು ಪಾದಗಳಲ್ಲಿ ಯಾವುದೇ ಗಾಯ, ಸೋಂಕಿನ ಸೂಚನೆಗಳು ಇದೆಯಾ ಎಂದು ಮೊದಲೇ ತಿಳಿದು ಕೊಳ್ಳಬೇಕು. ಅದೇ ರೀತಿ ವರ್ಷಕೊಮ್ಮೆ ಯಾದರೂ ವೈದ್ಯರ ಬಳಿ ದೇಹದ ಆರೋಗ್ಯ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.