ನವದೆಹಲಿ,ಆ.5: ನಾವು ಅಂದವಾಗಿ ಕಾಣಬೇಕಾದರೆ ನಮ್ಮ ಬಗ್ಗೆಯೂ ನಾವು ಕಾಳಜಿಯನ್ನು ವಹಿಸಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ಚರ್ಮದ (Healthy Skin) ಆರೈಕೆ. ಯೌವನದಿಂದ ಕಾಣುವಂತೆ ಹಾಗೂ ಚರ್ಮ ನೈಸರ್ಗಿಕವಾಗಿ ಹೊಳೆಯುವಂತೆ ಮಾಡಲು ಅದ್ಬುತ ಆಹಾರ ಸೇವೆನೆ ಕಡೆಗೆ ಆದ್ಯತೆ ಯನ್ನು ನೀಡಬೇಕಾಗುತ್ತದೆ. ಅದರಲ್ಲೂ ಕಾಲಜನ್ ಅನ್ನೋದು ಯೌವ್ವನದ ಮತ್ತು ಕಾಂತಿಯುತ ಚರ್ಮದ ಹಿಂದಿನ ರಹಸ್ಯವಾಗಿದೆ. ಇದು ನಮ್ಮ ದೇಹದಲ್ಲಿ ಹೇರಳವಾಗಿರುವ ಪ್ರೋಟೀನ್ ಆಗಿದ್ದು, ಚರ್ಮ, ಸ್ನಾಯುಗಳು ಹಾಗೂ ಮೂಳೆಗಳಿಗೆ ಬೆಂಬಲ ನೀಡುತ್ತದೆ. ಕಾಲಜನ್ ಅಭಿವೃದ್ಧಿ ಪಡಿಸಲು ಕೆಲವೊಂದು ಪಾನೀಯಗಳ ಸೇವನೆ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ.
ಎಲುಬಿನ ಸೂಪ್:
ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಪಾನೀಯಗಳು ಚರ್ಮದ ಆರೈಕೆಗೆ ಸಹಾಯಕವಾಗುತ್ತದೆ. ಚಿಕನ್ ಅಥವಾ ಮಟನ್ ಸೂಪ್ ಗಳು ಚರ್ಮದ ಆರೈಕೆಗೆ ಅಗತ್ಯವಾಗಿದೆ. ಇದು ಚರ್ಮದ ಸುಕ್ಕನ್ನು ತಡೆದು ರಕ್ಷಣೆ ಮಾಡುತ್ತದೆ.
ವಿಟಮಿನ್ ಸಿ ಹಣ್ಣುಗಳು:
ಕಿತ್ತಳೆ, ನಿಂಬೆ ಮತ್ತು ದ್ರಾಕ್ಷಿಹಣ್ಣಿನಂತಹ ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಯಿಂದ ಕೂಡಿದೆ. ಇದು ಕಾಲಜನ್ ಅಭಿವೃದ್ಧಿಗೆ ಪ್ರಮುಖ ಪೋಷಕಾಂಶವಾಗಿದೆ. ಚರ್ಮವನ್ನು ಕಾಂತಿಯುತವಾಗಿ ಇರಿಸಲು ಹಾಗೂ ವಯಸ್ಸು ಆಗುವಿಕೆಯ ಲಕ್ಷಣವನ್ನು ಕಡಿಮೆ ಗೊಳಿಸುತ್ತದೆ.
Health Tips: ತ್ವಚೆಯ ಸೌಂದರ್ಯ ಹೆಚ್ಚಿಸಬೇಕೇ? ಅಕ್ಕಿ ತೊಳೆದ ನೀರು ಕುಡಿಯಿರಿ!
ಹಸಿರು ಸ್ಮೂಥಿಗಳು:
ಪಾಲಕ್ ಮತ್ತು ಮೆಂತೆ ಎಲೆಗಳ ಸೊಪ್ಪನ್ನು ಬಾಳೆಹಣ್ಣು, ಅಥವಾ ಆವಕಾಡೊಗಳಂತಹ ಹಣ್ಣುಗಳೊಂದಿಗೆ ಬೆರೆಸಿ ಸೇವಿಸಿದರೆ ಚರ್ಮಕ್ಕೆ ಉತ್ತಮ. ಇವುಗಳೊಂದಿಗೆ ನಟ್ಸ್ ಅಥವಾ ಬಟರ್ ಸೇರಿಸಿ ಸೇವನೆ ಮಾಡಿದರೆ ಚರ್ಮದ ಸುಕ್ಕು ತಡೆಯಬಹುದು.
ಅರಿಶಿನ ಹಾಲು:
ಚರ್ಮದ ಒಳಿತಿಗಾಗಿ "ಗೋಲ್ಡನ್ ಮಿಲ್ಕ್" ಎಂದು ಕರೆಯಲ್ಪಡುವ ಅರಿಶಿನ ಹಾಲು ಪ್ರಮುಖವಾಗಿದೆ. ಇದು ಹಿತವಾದ ಹಾಗೂ ಉರಿಯೂತ ಹೋಗಲಾಡಿಸುವ ಪಾನೀಯ ವಾಗಿದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಕಾಲಜನ್ ರಚನೆಯನ್ನು ಉತ್ತೇಜಿಸುತ್ತದೆ.
ಬೆರ್ರಿ ಸ್ಮೂಥಿ:
ಸ್ಟ್ರಾಬೆರಿಗಳು, ಬೆರಿಹಣ್ಣುಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಿ ಮತ್ತು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಹಾಗಾಗಿ ಬಾದಾಮಿ ಹಾಲಿನ ಜೊತೆ ಹಾಲು ಸೇರಿಸಿ ಕುಡಿಯಬಹುದು.
ಎಳನೀರು:
ನೈಸರ್ಗಿಕ ಪಾನೀಯ ಇದಾಗಿದ್ದು ಎಳೆನೀರಿನಲ್ಲಿ ಎಲೆಕ್ಟ್ರೋಲೈಟ್‌ಗಳು, ಖನಿಜಗಳು ಮತ್ತು ಸೈಟೋಕಿನಿನ್‌ಗಳು ಹೇರಳವಾಗಿವೆ. ಇವು ಚರ್ಮವನ್ನು ಹೈಡ್ರೇಟ್ ಆಗಿಟ್ಟು ಹೊಳೆಯುವಂತೆ ಮಾಡುತ್ತದೆ.