ನವದೆಹಲಿ,ಜೂ.26: ನಾವೆಲ್ಲರೂ ಮಳೆಗಾಲದ ನಿರೀಕ್ಷೆಯಲ್ಲಿದ್ದೇವೆ..ತೀವ್ರ ಬಿಸಿಲಿನಿಂದ ಕಂಗೆಟ್ಟ ಜನರು ಮಳೆಯ ಆಗಮನಕ್ಕಾಗಿ ಕಾಯುತ್ತಿದ್ದಾರೆ.ಇದರ ನಡುವೆ ಮಳೆಗಾಲದಲ್ಲಿ ಕಾಡುವ ರೋಗ (Rainy Season for health) ಗಳ ಭೀತಿಯೂ ನಮ್ಮಲ್ಲಿ ಎದುರಾಗುತ್ತಿದೆ. ಅತಿಯಾದ ಮಳೆ, ನೀರು ನಿಲ್ಲುವುದು, ಸೊಳ್ಳೆಗಳ ಕಾಟ ಇತ್ಯಾದಿ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಬಹುದು. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮಳೆ, ತೇವಾಂಶದಂತಹ ಹವಾಮಾನ ಅಂಶಗಳು ಸೊಳ್ಳೆಗಳು ಮತ್ತು ಕಲುಷಿತ ನೀರಿನಿಂದ ಹರಡುವ ರೋಗಗಳನ್ನು ಹೆಚ್ಚಿಸುತ್ತವೆ ಎಂದು ಎಚ್ಚರಿಕೆಯನ್ನು ನೀಡಿದೆ. ಹೀಗಾಗಿ ಈ ಮೊದಲೇ ನಾವು ಮಳೆಗಾಲದಲ್ಲಿ ಕೆಲವು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.
ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗಗಳನ್ನು ಅರ್ಥಮಾಡಿಕೊಳ್ಳುವುದರಿಂದ ರೋಗಲಕ್ಷಣಗಳನ್ನು ಮೊದಲೇ ಗುರುತಿಕೊಳ್ಳಲು ಹಾಗೂ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯಾ, ಟೈಫಾಯಿಡ್ ಮತ್ತು ಜಠರಗರುಳಿನ ಸೋಂಕುಗಳು ಹೆಚ್ಚಾಗುತ್ತವೆ. ವಿಶೇಷವಾಗಿ ಜನನಿಬಿಡ ನಗರ ಪ್ರದೇಶಗಳಲ್ಲಿ, ನಿಂತ ನೀರು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಬಹುದು.
ಮಳೆಗಾಲದಲ್ಲಿ ಹರಡುವ ಪ್ರಮುಖ ಕಾಯಿಲೆಗಳು:
ಡೆಂಗ್ಯೂ:
ಡೆಂಗ್ಯೂ ಮಳೆಗಾಲದಲ್ಲಿ ಕಾಡುವ ಅತಿದೊಡ್ಡ ಖಾಯಿಲೆ. ಈ ರೋಗವು ಡೆಂಗ್ಯೂ ವೈರಸ್‌ನಿಂದ ಉಂಟಾಗುತ್ತದೆ. ಕೂಲರ್‌ಗಳು, ಹೂವಿನ ಕುಂಡ, ಬಕೆಟ್ ಮತ್ತು ಮೇಲ್ಛಾವಣಿ ನೀರಿನ ಟ್ಯಾಂಕ್ ಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುವ ಏಡಿಸ್ ಈಜಿಪ್ಟಿ ಸೊಳ್ಳೆಯಿಂದ ಈ ರೋಗ ಕಾಣಿಸಿಕೊಳ್ಳುತ್ತವೆ. ಇದಕ್ಕೆ ತಕ್ಷಣ ಚಿಕಿತ್ಸೆ ನೀಡದಿದ್ದರೆ ತೀವ್ರವಾದ ಡೆಂಗ್ಯೂ ರಕ್ತಸ್ರಾವದ ತೊಂದರೆಗಳು, ಆಘಾತ ಮತ್ತು ಅಂಗಾಂಗ ದುರ್ಬಲತೆಗೆ
Vishwavani Health: ಮಕ್ಕಳಾಗದಿರಲೂ ಬೊಜ್ಜು ಕಾರಣ; ಆಘಾತಕಾರಿ ಅಂಶ ಬಿಚ್ಚಿಟ್ಟ ತಜ್ಞರುಕಾರಣವಾಗಬಹುದು..
ಮಲೇರಿಯಾ:
ಅನಾಫಿಲಿಸ್ ಎಂಬ ಸೊಳ್ಳೆಗಳು ಕಡಿಯುವುದರಿಂದ ಮಲೇರಿಯಾ ಹರಡುತ್ತದೆ. ಇವು ಹೊರಾಂಗಣ ದಲ್ಲಿ ಸಂಗ್ರಹವಾಗುವ ಮಳೆನೀರಿನಿಂದ ಸಂತಾನೋತ್ಪತ್ತಿ ಮಾಡುತ್ತವೆ. ಮಲೇರಿಯಾ ರಕ್ತಹೀನತೆ, ಅಂಗಾಂಗ ವೈಫಲ್ಯ ಮತ್ತು ಸಾವು ಸೇರಿದಂತೆ ತೀವ್ರ ತೊಡಕುಗಳಿಗೆ ಕಾರಣವಾಗಬಹುದು.
ಚಿಕೂನ್‌ಗುನ್ಯಾ:
ಇದು ಕೂಡ ಡೆಂಗ್ಯೂ ಹರಡುವ ಈಡಿಸ್ ಸೊಳ್ಳೆಗಳಿಂದಲೇ ಹರಡುವ ಮತ್ತೊಂದು ವೈರಲ್ ಜ್ವರವಾಗಿದೆ.ತೀವ್ರ ಜ್ವರದ ಜೊತೆಗೆ ಕೀಲುಗಳಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.
ಟೈಫಾಯ್ಡ್ :
ಇದು ಕಲುಷಿತ ಆಹಾರ ಮತ್ತು ನೀರಿನ ಮೂಲಕ ಹರಡುವ ತೀವ್ರ ಬ್ಯಾಕ್ಟೀರಿಯಾ ಸೋಂಕಾಗಿದೆ. ಮಳೆಗಾಲದಲ್ಲಿ ಒಳಚರಂಡಿ ನಿಂತ ನೀರು ಮಿಶ್ರಣವಾಗುವುದರಿಂದ ರೋಗ ಹರಡಬಹುದು.
ಕಾಲರಾ:
ಕಲುಷಿತ ನೀರು ಮತ್ತು ಆಹಾರದಲ್ಲಿರುವ 'ವಿಬ್ರಿಯೋ ಕಾಲರಾ' ಬ್ಯಾಕ್ಟೀರಿಯಾದಿಂದ ಈ ಕಾಯಿಲೆ ಬರುತ್ತದೆ. ಮಳೆಗಾಲದಲ್ಲಿ ಆಹಾರ ಪದಾರ್ಥಗಳು ಬೇಗನೆ ಕೆಡುತ್ತವೆ. ಅದರಲ್ಲೂ ರಸ್ತೆ ಬದಿಯ ತೆರೆದಿಟ್ಟ ಆಹಾರ ಸೇವಿಸಿದಾಗ ಹೊಟ್ಟೆ ನೋವಿಗೆ ಕಾರಣವಾಗಬಹುದು. ಹಾಗಾಗಿ ಮನೆಯ ಸುತ್ತ ನೀರು ನಿಲ್ಲದಂತೆ ಜಾಗೃತೆ ವಹಿಸಿ. ಮನೆಯಲ್ಲೇ ತಯಾರಿಸಿದ ಬಿಸಿಬಿಸಿಯಾದ ತಾಜಾ ಆಹಾರಕ್ಕೆ ಆಧ್ಯತೆ ನೀಡಿ.