ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚಳಿಗಾಲದಲ್ಲಿ ತ್ವಚೆ ಆರೈಕೆ ಹೇಗಿರಬೇಕು? ಒಣ ಚರ್ಮದ ಸಮಸ್ಯೆಗೆ ಪರಿಹಾರವೇನು?

ಚಳಿಗಾಲದ ಆರಂಭವಾಗಿದ್ದು, ವಾತಾವರಣದಲ್ಲಿನ ತೇವಾಂಶದ ಕೊರತೆಯಿಂದಾಗಿ ಸಾರ್ವಜನಿಕರಲ್ಲಿ ತ್ವಚೆ (ಚರ್ಮ) ಒಣಗುವಿಕೆ, ತುರಿಕೆ ಹಾಗೂ ಬಿರುಕು ಬಿಡುವ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ಈ ಚಳಿಯ ದಿನಗಳಲ್ಲಿ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ಹಾಗೂ ಆರೋಗ್ಯಕರವಾಗಿಡಲು ದೈನಂದಿನ ಜೀವನಶೈಲಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ.

ಸಂಗ್ರಹ ಚಿತ್ರ

ಚಳಿಗಾಲದ ಆರಂಭವಾಗಿದ್ದು, ವಾತಾವರಣದಲ್ಲಿನ ತೇವಾಂಶದ ಕೊರತೆಯಿಂದಾಗಿ ಸಾರ್ವಜನಿಕರಲ್ಲಿ ತ್ವಚೆ (ಚರ್ಮ) ಒಣಗುವಿಕೆ, ತುರಿಕೆ ಹಾಗೂ ಬಿರುಕು ಬಿಡುವ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ಈ ಚಳಿಯ ದಿನಗಳಲ್ಲಿ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ಹಾಗೂ ಆರೋಗ್ಯಕರವಾಗಿಡಲು ದೈನಂದಿನ ಜೀವನಶೈಲಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ ಎಂದು ಚರ್ಮರೋಗ ತಜ್ಞರು ಸಲಹೆ ನೀಡುತ್ತಾರೆ. ದೇಹದ ಆರೈಕೆಗೆ ಇಲ್ಲಿದೆ ಕೆಲ ಟಿಪ್ಸ್‌.

ಕ್ಲೆನ್ಸರ್ ಬಳಕೆ: ಚಳಿಗಾಲದಲ್ಲಿ ಮುಖ ತೊಳೆಯಲು ಅತಿ ಹೆಚ್ಚು ನೊರೆ ಬರುವ ಅಥವಾ ಕಠಿಣ ರಾಸಾಯನಿಕ ಇರುವ ಫೇಸ್ ವಾಶ್‌ಗಳನ್ನು ಬಳಸಬಾರದು. ಇವು ಚರ್ಮದ ನೈಸರ್ಗಿಕ ಎಣ್ಣೆಯಂಶವನ್ನು ಹೀರಿಕೊಳ್ಳುತ್ತವೆ. ಬದಲಿಗೆ, ಕ್ರೀಮ್ ಆಧಾರಿತ ಸೌಮ್ಯ ಕ್ಲೆನ್ಸರ್‌ಗಳನ್ನು ಬಳಸುವುದು ಸೂಕ್ತ.

ಮಾಯಿಶ್ಚರೈಸರ್ ಕಡ್ಡಾಯ: ಮುಖ ತೊಳೆದ ತಕ್ಷಣ, ಚರ್ಮದಲ್ಲಿ ಸ್ವಲ್ಪ ಹಸಿ ಇರುವಾಗಲೇ ಮಾಯಿಶ್ಚರೈಸರ್ ಹಚ್ಚಬೇಕು. ಚಳಿಗಾಲದಲ್ಲಿ ಹಗುರವಾದ ಲೋಷನ್‌ಗಳಿಗಿಂತ ದಪ್ಪನೆಯ ತೈಲ ಆಧಾರಿತ ಅಥವಾ 'ಸೆರಾಮೈಡ್ಸ್' ಹೊಂದಿರುವ ಕ್ರೀಮ್‌ಗಳು ಹೆಚ್ಚು ಪರಿಣಾಮಕಾರಿ.

ಸನ್‌ಸ್ಕ್ರೀನ್ ನಿರ್ಲಕ್ಷಿಸಬೇಡಿ: ವಾತಾವರಣ ತಂಪಾಗಿದ್ದರೂ ಅಥವಾ ಮೋಡ ಕವಿದಿದ್ದರೂ ಸೂರ್ಯನ ಹಾನಿಕಾರಕ ಯುವಿ (UV) ಕಿರಣಗಳು ಚರ್ಮಕ್ಕೆ ಹಾನಿ ಮಾಡುತ್ತವೆ. ಹೀಗಾಗಿ ಹೊರಗೆ ಹೋಗುವ ಮುನ್ನ ಸನ್‌ಸ್ಕ್ರೀನ್ ಹಚ್ಚುವುದು ಕಡ್ಡಾಯ.

ಹೆಚ್ಚು ನೀರು ಕುಡಿಯಬೇಕು: ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ ಇರುವುದರಿಂದ ಹಲವರು ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾರೆ. ಇದು ಚರ್ಮದ ಶುಷ್ಕತೆಗೆ ಮುಖ್ಯ ಕಾರಣ. ದಿನಕ್ಕೆ ಕನಿಷ್ಠ 2-3 ಲೀಟರ್ ನೀರು ಕುಡಿಯಬೇಕು ಹಾಗೂ ಆಹಾರದಲ್ಲಿ ಹಣ್ಣು, ಹಸಿರು ತರಕಾರಿಗಳು ಮತ್ತು ಒಣಹಣ್ಣುಗಳನ್ನು ಹೆಚ್ಚಾಗಿ ಬಳಸಬೇಕು.

ಆರೋಗ್ಯಕರ ಕೊಬ್ಬಿನಾಂಶ ಸೇವನೆ: ನಿಮ್ಮ ದೈನಂದಿನ ಆಹಾರದಲ್ಲಿ ಒಮೆಗಾ-೩ ಕೊಬ್ಬಿನಾಮ್ಲ (Omega-3 fatty acids) ಸಮೃದ್ಧವಾಗಿರುವ ಬಾದಾಮಿ, ಅಕ್ರೋಟ್, ಅಗಸೆ ಬೀಜ ಮತ್ತು ಒಣಹಣ್ಣುಗಳನ್ನು ಸೇರಿಸಿ. ಇವು ಚರ್ಮಕ್ಕೆ ಒಳಗಿನಿಂದ ನೈಸರ್ಗಿಕ ತೇವಾಂಶವನ್ನು ಒದಗಿಸುತ್ತವೆ.

Vishakha Bhat Heggar

View all posts by this author