ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಹಿಳೆಯರೇ ಎಚ್ಚರ; ನೀವು ಮಾಡುವ ಈ ಸಣ್ಣ ತಪ್ಪು ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು!

Health Tips: ಇಂಟರ್‌ ನ್ಯಾಷನಲ್‌ ಸೊಸೈಟಿ ಆಫ್ ನೆಫ್ರಾಲಜಿ ಪ್ರಕಾರ, ವಿಶ್ವಾದ್ಯಂತ 850 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ಕಿಡ್ನಿ ಸಮಸ್ಯೆಯಿಂದ. ಮಧುಮೇಹ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಯಿಂದ ಕಿಡ್ನಿ ವೈಫಲ್ಯ ಉಂಟಾಗುತ್ತದೆ. ವಿಶೇಷವಾಗಿ 40 ವರ್ಷಕ್ಕಿಂತ ಹಿರಿಯ ಮಹಿಳೆಯರು ತಮ್ಮ ದೈನಂದಿನ ಕೆಲವು ಅಭ್ಯಾಸಗಳಿಂದಾಗಿ ಕಿಡ್ನಿ ವೈಫಲ್ಯದ ಅಪಾಯಕ್ಕೆ ಸಿಲುಕುತ್ತಿದ್ದಾರೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ.

ನವದೆಹಲಿ, ಡಿ‌. 29: ದೇಹದ ಆರೋಗ್ಯ ಮತ್ತು ಶಕ್ತಿಯ ಮಟ್ಟವನ್ನು ಕಾಪಾಡಲು ನಾವು ಸೇವಿಸುವ ಆಹಾರ, ಜೀವನ ಶೈಲಿ, ದೈನಂದಿನ ಚಟುವಟಿಕೆ ಕಾರಣವಾಗುತ್ತದೆ. ಅದರಲ್ಲೂ ಇತ್ತೀಚೆಗೆ ಜಗತ್ತಿನಾದ್ಯಂತ ಮೂತ್ರಪಿಂಡ ಕಾಯಿಲೆಗಳ ಪ್ರಕರಣಗಳು ಬಹಳಷ್ಟು ಹೆಚ್ಚಾಗಿದೆ. ಇಂಟರ್‌ನ್ಯಾಷನಲ್‌ ಸೊಸೈಟಿ ಆಫ್ ನೆಫ್ರಾಲಜಿ ವರದಿ ಪ್ರಕಾರ, ವಿಶ್ವಾದ್ಯಂತ 850 ಮಿಲಿಯನ್‌ಗಿಂತಲೂ ಹೆಚ್ಚು ಜನರು ಮೂತ್ರಪಿಂಡ (Kidney Health) ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಧುಮೇಹ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಯಿಂದ ಕಿಡ್ನಿ ವೈಫಲ್ಯ ಸಮಸ್ಯೆ ಉಂಟಾಗುತ್ತದೆ. ವಿಶೇಷವಾಗಿ 40 ವರ್ಷಕ್ಕಿಂತ ಹಿರಿಯ ಮಹಿಳೆಯರು ತಮ್ಮ ದೈನಂದಿನ ಕೆಲವು ಅಭ್ಯಾಸಗಳಿಂದಾಗಿ ಕಿಡ್ನಿ ವೈಫಲ್ಯದ ಅಪಾಯಕ್ಕೆ ಸಿಲುಕುತ್ತಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ. ಅದೇನು ಎನ್ನುವ ವಿವರ ಇಲ್ಲಿದೆ.

ನೋವು ನಿವಾರಕ ಮಾತ್ರೆಗಳ ಅತಿಯಾದ ಬಳಕೆ

ಮಹಿಳೆಯರು ಸಾಮಾನ್ಯವಾಗಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಾರೆ. ಇದರಿಂದ ರಕ್ತನಾಳಗಳು ಸಂಕುಚಿತಗೊಳಿಸುವ ಮೂಲಕ ಮೂತ್ರಪಿಂಡಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಹಾಗಾಗಿ ದೀರ್ಘಕಾಲದವರೆಗೆ ಐಬುಪ್ರೊಫೇನ್‌ನಂತ ಮಾತ್ರೆಗಳ‌ ಬಳಕೆಯು ಕಿಡ್ನಿಯನ್ನು ಶಾಶ್ವತವಾಗಿ ಹಾನಿಗೊಳಿಸುವ ಸಾಧ್ಯತೆ ಇದೆ.

ಸಾಕಷ್ಟು ನೀರು ಕುಡಿಯದೆ ಇರುವುದು

ಮೂತ್ರಪಿಂಡಗಳ ಆರೋಗ್ಯಕ್ಕೆ ಸಾಕಷ್ಟು ಪ್ರಮಾಣದ ನೀರು ಸೇವಿಸುವುದು ಮುಖ್ಯ. ಆದರೆ ಕೆಲಸದ ಒತ್ತಡದಂತಹ ಸಮಸ್ಯೆಯಿಂದ ಹೆಚ್ಚಿನವರು ನೀರು ಕುಡಿಯುವುದನ್ನೇ ಮರೆತು ಬಿಡುತ್ತಾರೆ. ನೀರಿನ ಸೇವನೆ ಮೂತ್ರಪಿಂಡಗಳು ಸೋಡಿಯಂ, ಯೂರಿಯಾ ದೇಹದಿಂದ ಹೊರ ಹಾಕಲು ನೆರವಾಗುತ್ತದೆ.

ಮೂತ್ರವನ್ನು ತಡೆಹಿಡಿಯುವುದು

ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದರಿಂದ ಬ್ಯಾಕ್ಟೀರಿಯಾಗಳು ಮೂತ್ರಕೋಶದಲ್ಲಿ ಹೆಚ್ಚಾಗಿ ಇದು ಕಿಡ್ನಿಯ ಅಂಗಾಂಶಗಳನ್ನು ಶಾಶ್ವತವಾಗಿ ಹಾನಿಗೊಳಿಸುತ್ತವೆ. ಇದು ಬಹುತೇಕ ಮಹಿಳೆಯರಲ್ಲಿ ಕಂಡುಬರುವ ಅತ್ಯಂತ ಅಪಾಯಕಾರಿ ಅಭ್ಯಾಸ. ಬ್ಯಾಕ್ಟೀರಿಯಾಗಳು ವೃದ್ಧಿಯಾಗಿ ಕಿಡ್ನಿ ಸೋಂಕಿಗೆ ಕಾರಣವಾಗುತ್ತವೆ.

ಚಳಿಗಾಲದಲ್ಲಿ ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳಲು ಈ ಹಣ್ಣುಗಳು ಬೆಸ್ಟ್

ಅತಿಯಾದ ಪ್ರೊಟೀನ್ ಯುಕ್ತ ಆಹಾರ ಸೇವನೆ

ಇತ್ತೀಚಿನ ದಿನಗಳಲ್ಲಿ ತೆಳ್ಳಗೆ ಕಾಣಬೇಕೆಂದು ಮಹಿಳೆಯರು ಪ್ರೊಟೀನ್ ಆಹಾರ ಸೇವಿಸುವ ಪ್ರಮಾಣ ಹೆಚ್ಚಾಗಿದೆ. ಆದರೆಅತಿಯಾದ ಪ್ರೊಟೀನ್ ಆಹಾರ ಕಿಡ್ನಿಯ ಮೇಲೆ ಒತ್ತಡ ಉಂಟು ಮಾಡುತ್ತದೆ.

ಆಗಾಗ್ಗೆ ಮೂತ್ರ ವಿಸರ್ಜನೆ

ರಾತ್ರಿ ಆಗಾಗ್ಗೆ ಮೂತ್ರ ವಿಸರ್ಜಜಿಸುವುದು ಮೂತ್ರಪಿಂಡಕ್ಕೆ ಹಾನಿಯಾಗಿರುವ ಬಗ್ಗೆ ಸೂಚನೆ ನೀಡುತ್ತದೆ. ಇದು ಮೂತ್ರಪಿಂಡ ವೈಫಲ್ಯದ ಆರಂಭಿಕ ಸಂಕೇತ. ಕಿಡ್ನಿಯ ಫಿಲ್ಟರ್‌ಗಳು ಹಾನಿಗೊಳಗಾದಾಗ ಈ ರೀತಿ ಆಗುತ್ತದೆ. ಇದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ ಮಾಡಬೇಡಿ.

ಬಿಪಿ ಮತ್ತು ಶುಗರ್ ನಿಯಂತ್ರಣ ಮಾಡಿ

ಕಿಡ್ನಿ ಕಾಯಿಲೆಗೆ ಪ್ರಮುಖ ಕಾರಣ ಮಧುಮೇಹ ಮತ್ತು ರಕ್ತದೊತ್ತಡ. ಇವುಗಳನ್ನು ಸದಾ ನಿಯಂತ್ರಣದಲ್ಲಿ ಇಡುವ ಮೂಲಕ ವೈದ್ಯರ ಬಳಿ ಪರಿಶೀಲನೆ ಮಾಡಿಕೊಳ್ಳಿ.

ಪರೀಕ್ಷೆ ಮಾಡಿಸಿಕೊಳ್ಳಿ

ವೈದ್ಯರ ಸಲಹೆ ಇಲ್ಲದೆ ಯಾವುದೇ ನೋವು ನಿವಾರಕ ಮಾತ್ರೆ ನೀವೇ ಆಯ್ಕೆ ಮಾಡಿಕೊಳ್ಳಬೇಡಿ. 40 ವರ್ಷ ದಾಟಿದ ಮಹಿಳೆಯರು ವರ್ಷಕ್ಕೊಮ್ಮೆಯಾದರೂದರೂ ಮೂತ್ರ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.