ಬೆಂಗಳೂರು, ಜೂ. 15: ಇತ್ತೀಚಿನ ದಿನಗಳಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಸಣ್ಣ ಮಕ್ಕಳಲ್ಲಿ ಬೊಜ್ಜು (Obesity) ಕಾಣಿಸಿಕೊಳ್ಳುತ್ತಿದೆ. ಇದರಿಂದ ಮುಂದೆ ನಾನಾ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ ಮೈಸೂರು ವಿವಿಯ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಅಧ್ಯಕ್ಷೆ (Dr. Suttur Malini). 'ವಿಶ್ವವಾಣಿ ಹೆಲ್ತ್' (Vishwavani Health) ಯುಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಒಬಿಸಿಟಿನೇ ಎಲ್ಲ ಕಾಯಿಲೆಗಳ ತಾಯಿ. ಇದಕ್ಕೂ ಬಂಜೆತನಕ್ಕೂ ನೇರವಾದ ಸಂಬಂಧವಿದೆ ಎಂದು ಹೇಳಿದರು.
ಸ್ಥೂಲಕಾಯ ಅಥವಾ ಒಬಿಸಿಟಿ ಅಥವಾ ಬೊಜ್ಜು ಮತ್ತು ಬಂಜೆತನಕ್ಕೆ ನೇರ ಸಂಬಂಧವಿದೆ. ಯಾಕೆಂದರೆ ಇದು ವೀರ್ಯಾಣು ಬಿಡುಗಡೆಯ ಮೇಲೆ ಪರಿಣಾಮ ಬೀರುತ್ತದೆ. ಬೊಜ್ಜು ಹೆಚ್ಚಾದಂತೆ ವೀರ್ಯಾಣು ಸಂಖ್ಯೆ, ಅವುಗಳ ಗುಣಮಟ್ಟ, ಚಲಿಸುವ ಸಾಮರ್ಥ್ಯ ಎಲ್ಲವೂ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಅವರು ಹೇಳಿದರು.
ವಿಡಿಯೊ ಇಲ್ಲಿದೆ:
ದೇಹದಲ್ಲಿ ಶೇಖರಣೆಯಾಗುವ ಕೊಬ್ಬು ಫ್ಯಾಟ್ ಸೆಲ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ನೇರವಾಗಿ ಮೆದುಳು, ಸ್ಪರ್ಮ್ ಸೆಲ್ ಮೇಲೆ ಪರಿಣಾಮ ಬೀರುತ್ತದೆ. ಇದು ಮಹಿಳೆಯರಲ್ಲಿ ಪಿಸಿಒಡಿ ಸಮಸ್ಯೆಗೂ ಕಾರಣವಾಗುತ್ತದೆ. ಅಲ್ಲದೇ ಹಾರ್ಮೋನ್ ಪ್ರೊಫೈಲ್ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಕರುಳಿನ ಆರೋಗ್ಯ ಸುಧಾರಿಸುವ ನೀವು ಸೇವಿಸಬೇಕಾದ ಆಹಾರಗಳಿವು
ಹೆಚ್ಚು ಕ್ಯಾಲೋರಿ ಇರುವ ಆಹಾರ ಸೇವನೆಯಿಂದ ಲೆಫ್ಟಿಮ್ ಪ್ರಮಾಣ ದೇಹದಲ್ಲಿ ಜಾಸ್ತಿಯಾಗುತ್ತದೆ. ಇದರಿಂದ ಕೆಲವೊಂದು ಹಾರ್ಮೋನ್ ಬಿಡುಗಡೆಯಾಗುವುದಿಲ್ಲ. ಇದು ಬಂಜೆತನಕ್ಕೆ ಮುಖ್ಯ ಕಾರಣ ಎನ್ನುವ ಸುತ್ತೂರು ಮಾಲಿನಿ, ಇವತ್ತು ಸಣ್ಣ ವಯಸ್ಸಿನ ಮಕ್ಕಳು ಋತುಮತಿಯಾಗಲು ಕೂಡ ಬೊಜ್ಜು ಮುಖ್ಯ ಕಾರಣ ಎಂದು ಹೇಳಿದರು.
ಹೆಚ್ಚು ಕ್ಯಾಲೋರಿ ಹೊಂದಿರುವ ಆಹಾರಗಳು, ಎಲ್ಲ ಜಂಕ್ ಫುಡ್‌ಗಳು ಕೂಡ ದೇಹಕ್ಕೆ ಅಪಾಯಕಾರಿ. ಇತ್ತೀಚಿನ ದಿನಗಳಲ್ಲಿ ಚೀಸ್, ಬರ್ಗರ್, ನಾನ್ ವೆಜ್ ಆಹಾರ ಸೇವನೆ ಹೆಚ್ಚಾಗಿದೆ. ಹೊರಗೆ ಹೋಗಿ ಆಟವಾಡುವುದು ಮಕ್ಕಳಲ್ಲಿ ಕಡಿಮೆಯಾಗಿದೆ. ಇದರಿಂದ ದೇಹಕ್ಕೆ ಸರಿಯಾಗಿ ವ್ಯಾಯಾಮ ಸಿಗುತ್ತಿಲ್ಲ, ವಿಟಮಿನ್ ಡಿ ಸಿಗ್ತಾ ಇಲ್ಲ ಎಂದು ಅವರು ತಿಳಿಸಿದರು.
ದೇಹದಲ್ಲಿ ಕೊಬ್ಬು ಹೆಚ್ಚಾದಾಗ ಮೆದುಳಿಗೆ ಸಿಗ್ನಲ್ ಸಿಗುತ್ತೆ. ಇದರಿಂದ 8-9 ವರ್ಷದ ಮಕ್ಕಳಲ್ಲಿ ಲೈಂಗಿಕ ಆಕರ್ಷಣೆಗಳು ಉಂಟಾಗುತ್ತದೆ. ಹಿಂದೆ ಸೋಷಿಯಲ್ ಮೀಡಿಯಾ ಇರಲಿಲ್ಲ, ಆಹಾರವು ಸರಿಯಾಗಿ ಸಿಗುತ್ತಿರಲಿಲ್ಲ. ಹೀಗಾಗಿ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆ ನಿಧಾನ ಗತಿಯಲ್ಲಿ ನಡೆಯುತ್ತಿತ್ತು. ಈಗ ಎಲ್ಲವೂ ವೇಗವಾಗಿ ಆಗುತ್ತಿದೆ ಎಂದರು.
ಗ್ರೂಪ್ ಫಾರ್ಮಸ್ಯುಟಿಕಲ್ಸ್ ಬಿಡುಗಡೆ ಮಾಡುತ್ತಿದೆ 'ಏಬಲ್‌ಡೆಂಟ್' - ದಂತ ಆರೈಕೆ ಪರಿಸರ ವ್ಯವಸ್ಥೆ
ದೇಹದಲ್ಲಿ ಫ್ಯಾಟ್ ಸೆಲ್ ಜಾಸ್ತಿಯಾದಾಗ ಪುರುಷರಲ್ಲಿ ಅತಿಯಾಗಿ ಇರಬೇಕಾದ ಟೆಸ್ಟೋಸ್ಟಿರಾನ್ ಹಾರ್ಮೋನ್ ಎಸ್ಟ್ರೋಜನ್ ಹಾರ್ಮೋನ್ ಆಗಿ ಬದಲಾಗುತ್ತದೆ. ಇದರಿಂದ ಸ್ಪರ್ಮ್ ಗುಣಮಟ್ಟದ ಮೇಲೆ ಪರಿಣಾಮ ಬೀಳುತ್ತದೆ. ಹೀಗಾಗಿ ಅತಿಯಾಗಿ ಕೊಬ್ಬಿನ ಆಹಾರ ಸೇವನೆ ಮಾಡುವಾಗ ನಾವು ಯೋಚಿಸಬೇಕು ಎಂದು ಪ್ರೊ. ಸುತ್ತೂರು ಮಾಲಿನಿ ತಿಳಿಸಿದರು.