ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Manipal Hospital: ಮಂಗಳೂರಿನ ರಿಕ್ಲೇಮ್ ರಿವಿಶನ್ ಹಿಪ್ ಸಿಸ್ಟೆಮ್ ಇಂಪ್ಲಾಟೇಶನ್ ಶಸ್ತ್ರಚಿಕಿತ್ಸೆ ಯಶಸ್ವಿ

ಮಂಗಳೂರಿನಲ್ಲಿ (Manglore) ಮೊದಲ ಬಾರಿಗೆ ಯಶಸ್ವಿ ‘ ರೀಕ್ಲೇಮ್ ರಿವಿಷನ್ ಹಿಪ್ ಸಿಸ್ಟೆಮ್ ಇಂಪ್ಲಾನ್ಟೇಶನ್ (ಸೊಂಟದ ಕೀಲು ಬದಲಾವಣೆ) ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಕೆಎಂಸಿ ಆಸ್ಪತ್ರೆ ಆರ್ಥೋಪೆಡಿಕ್ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ.

ರಿಕ್ಲೇಮ್ ರಿವಿಶನ್ ಹಿಪ್ ಸಿಸ್ಟೆಮ್ ಇಂಪ್ಲಾಟೇಶನ್ ಯಶಸ್ವಿ ಶಸ್ತ್ರಚಿಕಿತ್ಸೆ

Vishakha Bhat Vishakha Bhat Aug 12, 2025 4:44 PM

ಮಂಗಳೂರು : ಮಂಗಳೂರಿನಲ್ಲಿ ಮೊದಲ ಬಾರಿಗೆ ಯಶಸ್ವಿ ‘ ರೀಕ್ಲೇಮ್ ರಿವಿಷನ್ ಹಿಪ್ ಸಿಸ್ಟೆಮ್ ಇಂಪ್ಲಾನ್ಟೇಶನ್ (ಸೊಂಟದ ಕೀಲು ಬದಲಾವಣೆ) ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಕೆಎಂಸಿ ಆಸ್ಪತ್ರೆ ಆರ್ಥೋಪೆಡಿಕ್ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ತೀವ್ರವಾದ ಸೊಂಟದ ಕೀಲು ಮುರಿತಕ್ಕೆ ಒಳಗಾಗಿದ್ದ ಮಹಿಳೆಗೆ ‘ಕೀಲು ಬದಲಾಯಿಸುವ’ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಕೆಎಂಸಿ ಆಸ್ಪತ್ರೆ ಯ ಕನ್ಸಲ್ಟೆಂಟ್ ಆರ್ಥೋಪೆಡಿಕ್ ಡಾ. ವಿಕ್ರಮ್ ಜಿ ಕೆ ಭಟ್ , ಕನ್ಸಲ್ಟೆಂಟ್ ಆರ್ಥೋಪೆಡಿಕ್ ಸುಧೀಂದ್ರ ಕೆ ಮತ್ತು ಅರವಳಿಕೆ ತಜ್ಞೆ ಡಾ ಶಿಲ್ಪಾ ಜಿ ಕೆ ಭಟ್ ಒಳಗೊಂಡ ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ನಡೆಸಿದೆ.

ಚಿಕಿತ್ಸೆ ಹೇಗೆ?

85 ವರ್ಷದ ಜಯಾ (ಹೆಸರು ಬದಲಾವಣೆ) ಸೊಂಟದ ಕೀಲಿನ ಮುರಿತದಿಂದ ಸಾಕಷ್ಟು ನೋವು ಅನುಭವಿಸುತ್ತಿದ್ದು ನಡೆಯಲು ಕೂಡ ಅಸಾಧ್ಯವಾಗಿತ್ತು. ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರು ರೋಗಿಯ ಸಂಪೂರ್ಣ ಪರೀಕ್ಷೆ ನಡೆಸಿದಾಗ ಅವರ ವಯಸ್ಸು, ಆರೋಗ್ಯದ ಮಾಹಿತಿಯನ್ನು ಪರಿಗಣಿಸಿ ರೀಕ್ಲೇಮ್ ರಿವಿಶನ್ ಹಿಪ್ ಸಿಸ್ಟೆಮ್ ಶಸ್ತ್ರಚಿಕಿತ್ಸೆ ಸೂಕ್ತ ಎಂದು ನಿರ್ಧರಿಸಲಾಯಿತು. ಈ ಚಿಕಿತ್ಸೆಯಲ್ಲಿ ಮುರಿತಕ್ಕೊಳಗಾದ ಮೂಳೆಯ ಭಾಗವನ್ನು ಬೈಪಾಸ್ ಮಾಡಿ ಕೃತಕ ಕೀಲು ರೀತಿಯ ವಿಶೇಷ ಇಂಪ್ಲಾಂಟ್ನ್ನು ಅಳವಡಿಸಲಾಗುತ್ತದೆ.

ಶಸ್ತ್ರಚಿಕಿತ್ಸೆ ಕುರಿತು ಮಾತನಾಡಿದ ಡಾ. ವಿಕ್ರಮ್ ಜಿ ಕೆ ಭಟ್ “ ಹಿರಿಯ ವಯಸ್ಸಿನ ವ್ಯಕ್ತಿಗಳಲ್ಲಿ ಈ ರೀತಿಯ ಸೊಂಟದ ಕೀಲು ಮುರಿತಕ್ಕೊಳಗಾದಾಗ ಚಿಕಿತ್ಸೆ ನೀಡುವುದು ಬಹಳ ಸವಾಲಿನದ್ದಾಗಿರುತ್ತದೆ. ಮೂಳೆಯ ಗುಣಮಟ್ಟದ ಜೊತೆಗೆ ಚಿಕಿತ್ಸೆಯ ನಂತರ ಚೇತರಿಕೆಯಲ್ಲಿ ಕೂಡ ಸಮಸ್ಯೆ ಕಂಡುಬರುತ್ತದೆ. ಈ ಪ್ರಕರಣದಲ್ಲಿ ಸಾಂಪ್ರದಾಯಿಕ ವಿಧಾನ ಅನುಸರಿಸಿದ್ದಲ್ಲಿ ರೋಗಿಗೆ ನಡೆದಾಡುವ ಹಂತ ತಲುಪುವಲ್ಲಿ ವಿಳಂಬ ಹಾಗೂ ಕೆಲ ತೊಡಕುಗಳು ಉಂಟಾಗುವ ಸಂಭವವೂ ಇರುತ್ತಿತ್ತು. ಹೀಗಾಗಿ ರೀಕ್ಲೇಮ್ ರಿವಿಶನ್ ಹಿಪ್ ಸಿಸ್ಟೆಮ್ ವಿಧಾನವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಈ ಮೂಲಕ ಮುರಿತಕ್ಕೊಳಗಾದ ಭಾಗವನ್ನು ಬೈಪಾಸ್ ಮಾಡಿದ್ದು ಶಸ್ತಚಿಕಿತ್ಸೆ ಬಳಿಕ ತಕ್ಷಣ ರೋಗಿಯು ನಡೆದಾಡುವಂತೆ ಮಾಡಲಾಗಿದೆ” ಎಂದರು.