ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಮಳೆಗಾಲದಲ್ಲಿ ಚರ್ಮದ ಸಮಸ್ಯೆ: ನಿಭಾಯಿಸುವುದು ಹೇಗೆ?

ವಾತಾವರಣದಲ್ಲಿ ಬಿಸಿಲು, ಶುಷ್ಕತೆ ಹೆಚ್ಚಿದ್ದಾಗ ಬರುವ ಸಮಸ್ಯೆಗಳು ಈಗ ಕಾಣಿಸುವುದಿಲ್ಲ ಎಂಬುದು ನಿಜ. ಹಾಗಂತ ತೇವಾಂಶ ಹೆಚ್ಚಿದ್ದಾಗಲೂ ಚರ್ಮಕ್ಕೆ ಹಲವು ರೀತಿಯ ತೊಂದರೆಗಳು ಕಾಡಬಹುದು. ಫಂಗಸ್‌ ಸೋಂಕುಗಳು ಮಳೆಗಾಲದಲ್ಲಿ ಚರ್ಮವನ್ನು ಕಾಡುವ ಅತಿ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಶೀತದ ವಾತಾವರಣಕ್ಕೆ ಬೆಚ್ಚಗೆ ಉಣ್ಣೆಯ ಬಟ್ಟೆಗಳನ್ನು ಧರಿಸಿದಾಗ, ಚರ್ಮ ಹೆಚ್ಚು ಬೆವರಬಹುದು. ಜತೆಗೆ ತೇವದಿಂದ ವಾತಾವರಣದಿಂದ ಚರ್ಮದ ಸೂಕ್ಷ್ಮ ರಂಧ್ರಗಳು ಕಟ್ಟಿಕೊಂಡು ಮೊಡವೆಗಳು ಮೂಡಬಹುದು. ಇಂಥ ಸಂದರ್ಭವನ್ನು ನಿಭಾಯಿಸುವುದು ಹೇಗೆ? ಇಲಲಿದೆ ಟಿಪ್ಸ್‌.

ಮಳೆಗಾಲದ ಚರ್ಮದ ಸಮಸ್ಯೆಗೆ ಇಲ್ಲಿದೆ ಪರಿಹಾರ!

Profile Pushpa Kumari Aug 13, 2025 10:05 AM

ನವದೆಹಲಿ: ಮಳೆಗಾಲದಲ್ಲಿ ಚರ್ಮದ ಆರೋಗ್ಯ (Skin Care) ಕಾಪಾಡಿಕೊಳ್ಳುವುದರತ್ತ ನಮ್ಮ ಆದ್ಯತೆ ಕನಿಷ್ಠ ಮಟ್ಟದಲ್ಲಿರುತ್ತದೆ. ಕಾರಣ ಉಳಿದಂತೆ ದೇಹದ ಆರೋಗ್ಯ ಏನಕ್ಕೇನೋ ಆಗಿ, ಅವೆಲ್ಲ ಸರಿಯಾದರೆ ಸಾಕು ಎನ್ನುವ ಭಾವದಲ್ಲಿ ಇರುತ್ತೇವೆ. ಜತೆಗೆ ಬೇಸಿಗೆಯಂತೆ ಬೆವರುಸಾಲೆ, ದದ್ದುಗಳು ಕಾಡುವುದಿಲ್ಲ; ಚಳಿಗಾಲದಂತೆ ಚರ್ಮವೆಲ್ಲ ಒಣಗಿ, ಬಿರಿದು ಕೆಂಪಾಗಿ ಉರಿಯಾಗುವುದಿಲ್ಲ. ಹಾಗಾಗಿ ಮಳೆಗಾಲದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳದ ವಿಷಯವೆಂದರೆ ನಮ್ಮ ಚರ್ಮ.

ವಸ್ತುಸ್ಥಿತಿ ಹಾಗೇನಿರುವುದಿಲ್ಲ. ವಾತಾವರಣದಲ್ಲಿ ಬಿಸಿಲು, ಶುಷ್ಕತೆ ಹೆಚ್ಚಿದ್ದಾಗ ಬರುವ ಸಮಸ್ಯೆಗಳು ಈಗ ಕಾಣಿಸುವುದಿಲ್ಲ ಎಂಬುದು ನಿಜ. ಹಾಗಂತ ತೇವಾಂಶ ಹೆಚ್ಚಿದ್ದಾಗಲೂ ಚರ್ಮಕ್ಕೆ ಹಲವು ರೀತಿಯ ತೊಂದರೆಗಳು ಕಾಡಬಹುದು. ಫಂಗಸ್‌ ಸೋಂಕುಗಳು ಮಳೆಗಾಲದಲ್ಲಿ ಚರ್ಮವನ್ನು ಕಾಡುವ ಅತಿ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಶೀತದ ವಾತಾವರಣಕ್ಕೆ ಬೆಚ್ಚಗೆ ಉಣ್ಣೆಯ ಬಟ್ಟೆಗಳನ್ನು ಧರಿಸಿದಾಗ, ಚರ್ಮ ಹೆಚ್ಚು ಬೆವರಬಹುದು. ಜತೆಗೆ ತೇವದಿಂದ ಕೂಡಿದ ವಾತಾವರಣದಿಂದ ಚರ್ಮದ ಸೂಕ್ಷ್ಮ ರಂಧ್ರಗಳು ಕಟ್ಟಿಕೊಂಡು ಮೊಡವೆಗಳು ಮುಖದ ಒಡವೆಗಳಾಗಬಹುದು. ಇಂಥ ಸಂದರ್ಭವನ್ನು ನಿಭಾಯಿಸುವುದು ಹೇಗೆ?

ಸ್ವಚ್ಛತೆಗೆ ಆದ್ಯತೆ: ಇದು ಎಲ್ಲ ಕಾಲದಲ್ಲೂ ಮಹತ್ವದ್ದು. ಪ್ರತಿದಿನವೂ ನಿಮ್ಮ ಚರ್ಮಕ್ಕೆ ಸರಿಹೊಂದುವಂಥ ಕ್ಲೆನ್ಸರ್‌/ ಸಾಬೂನು ಉಪಯೋಗಿಸಿಯೇ ಸ್ನಾನ ಮಾಡಿ. ಇದರಿಂದ ಕೊಳೆ, ಬೆವರು ಮತ್ತು ಬ್ಯಾಕ್ಟೀರಿಯಗಳನ್ನು ನಿರ್ಮೂಲ ಮಾಡಬಹುದು. ಅದರಲ್ಲೂ ಹೆಚ್ಚು ಬೆವರುವ ಕಂಕುಳು, ಚರ್ಮದ ಮಡಿಕೆಗಳಂಥ ಭಾಗಗಳ ಸ್ವಚ್ಛತೆಯನ್ನು ಉದಾಸೀನ ಮಾಡಬೇಡಿ. ಸ್ನಾನದ ನಂತರ ಮೈ ಒದ್ದೆಯನ್ನೂ ಸಂಪೂರ್ಣವಾಗಿ ತೆಗೆದೇ ಸ್ವಚ್ಛ, ಒಣಗಿದ ವಸ್ತ್ರಗಳನ್ನು ಧರಿಸಿ. ತೇವ ಅಥವಾ ತಣ್ಣಗಿರುವ ವಸ್ತ್ರಗಳು ಸೋಂಕಿನ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

ಇದನ್ನು ಓದಿ:Health Tips: ಹಬ್ಬದ ಸಿಹಿ ಇಷ್ಟವೇ? ಹಲ್ಲುಗಳಿಗೆ ಕಷ್ಟವಾಗಬಹುದು!

ಫಂಗಸ್‌ ಚಿಕಿತ್ಸೆ: ಮಳೆಗಾಲದಲ್ಲಿ ಫಂಗಸ್‌ ಸೋಂಕು ಕಾಡುವುದು ಸಾಮಾನ್ಯ. ಚರ್ಮದ ಮೇಲೆ ಗುಳ್ಳೆಗಳು, ದದ್ದಾಗುವುದು, ಕೆಂಪಾಗಿ ತುರಿಕೆ, ಕಾಲು ಬೆರಳಿನ ಸಂದುಗಳು ಕರಗಿದಂತೆ ಕಾಣುವುದು- ಇಂಥ ಹಲವು ತೊಂದರೆಗಳಿಗೆ ಫಂಗಸ್‌ ಸೋಂಕೇ ಕಾರಣ. ಇದಕ್ಕೆ ಜಿಂಕ್‌ ಆಕ್ಸೈಡ್‌ ಅಥವಾ ಕ್ಲೋಟ್ರಿಮಜೋಲ್‌ ಹೊಂದಿದ ಫಂಗಸ್‌ ನಾಶಕ ಪೌಡರ್‌ಗಳು ಲಭ್ಯವಿವೆ. ಆದರೆ ಇದಕ್ಕೆಲ್ಲ ಸ್ವಯಂ ವೈದ್ಯ ಮಾಡುವ ಮುನ್ನ ಚರ್ಮ ವೈದ್ಯರ ಸಲಹೆ ಪಡೆದು ಮುಂದುವರಿಯಿರಿ.

ವಸ್ತ್ರಗಳು: ಬೆವರು, ತೇವ ಹೀರುವಂಥ ಹತ್ತಿಯ ವಸ್ತ್ರಗಳನ್ನು ಅಥವಾ ಗಾಳಿ ಆಡುವಂಥ ವಸ್ತ್ರಗಳನ್ನು ಧರಿಸಿ. ಯಾವುದೇ ರೀತಿಯ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ವಸ್ತ್ರಗಳು ಈ ನಿಟ್ಟಿನಲ್ಲಿ ಸಹಕಾರಿ. ತೀರಾ ಸಿಂಥೆಟಿಕ್‌ ಮಾದರಿಯ ವಸ್ತ್ರಗಳು ಬೆವರು ಹೀರುವುದಿಲ್ಲ, ಗಾಳಿ ಯಾಡುವುದಕ್ಕೂ ಅವಕಾಶ ನೀಡುವುದಿಲ್ಲ. ಈಗಾಗಲೇ ಚರ್ಮದ ಸಮಸ್ಯೆ ಕಾಣಿಸಿದ್ದರೆ, ಬಿಗಿಯಾದ ವಸ್ತ್ರಗಳ ಬದಲಿಗೆ ಸಡಿಲವಾದವು ನೆರವಾಗುತ್ತವೆ.

ನೀರು, ಆಹಾರ: ಚೆನ್ನಾಗಿ ನೀರು ಕುಡಿಯಿರಿ. ಮಳೆಗಾಲದ ವಾತಾವರಣಕ್ಕೆ ಬಾಯಾರಿಕೆ ಅನುಭವಕ್ಕೇ ಬರುವುದಿಲ್ಲ ಎಂಬ ನೆವ ಮಾಡಿ, ನೀರು ಕಡಿಮೆ ಮಾಡಿದರೆ, ಅದರ ಪರಿಣಾಮ ತ್ವಚೆಯ ಮೇಲೆ ಕಂಡುಬರುತ್ತದೆ. ವಿಟಮಿನ್‌, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಿರುವಂಥ ಹಣ್ಣು-ತರಕಾರಿಗಳನ್ನು ಸೇವಿಸಿ. ಋತುಮಾನದಲ್ಲಿ ದೊರೆಯುವ ಆಹಾರಗಳಿಗೆ ಆದ್ಯತೆ ನೀಡಿ.

ಕ್ರೀಮ್‌ಗಳು: ಯಾವುದೇ ಋತುವಿನಲ್ಲಿ, ಆಯಾ ವಾತಾವರಣಕ್ಕೆ ಸೂಕ್ತವಾದ ಮಾಯಿಶ್ಚರೈಸಿಂಗ್‌ ಕ್ರೀಮ್‌/ ಲೋಶನ್‌ಗಳನ್ನು ಆರಿಸಿಕೊಳ್ಳಿ. ಈ ದಿನಗಳಲ್ಲಿ ತೇವ ಹೆಚ್ಚಿರುವ ಕ್ರೀಮ್‌ಗಳು ಬೇಕಾಗುವುದಿಲ್ಲ. ಹಾಗೆಯೇ ಗಾಢವಾದ ಪರಿಮಳವಿರುವ ಕ್ರೀಮ್‌ಗಳು ಚರ್ಮದ ರಂಧ್ರಗಳನ್ನು ಮುಚ್ಚಿಬಿಡಬಹುದು. ಬದಲಿಗೆ ಅಲೋವೇರ, ಕ್ಯಾಮೊಮೈಲ್‌ ಮುಂತಾದ ವಸ್ತಗಳನ್ನು ಹೊಂದಿದ ಕ್ರೀಮ್‌ ಬಳಸುವುದು ಸೂಕ್ತ.