Shishir Shastry: ಬಿಗ್ ಬಾಸ್ ಶಿಶಿರ್ ಶಾಸ್ತ್ರೀ ಮದುವೆ ಬಗ್ಗೆ ಹೊರಬಿತ್ತು ದೊಡ್ಡ ಸುದ್ದಿ
ಶಿಶಿರ್-ಐಶ್ವರ್ಯಾ ಹೆಚ್ಚಾಗಿ ಜೊತೆಯಲ್ಲೇ ಕಾಣಿಸಿಕೊಳ್ಳುತ್ತಿದ್ದು, ವಾರಕ್ಕೊಂದು ಫೋಟೋ ಶೂಟ್ ವಿಡಿಯೋ ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಒಟ್ಟೊಟ್ಟಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದೀಗ ಶಿಶಿರ್ ಮದುವೆ ಬಗ್ಗೆ ದೊಡ್ಡ ಅಪ್ಡೇಟ್ ಒಂದು ಹೊರಬಿದ್ದಿದೆ. ಈ ಕುರಿತು ಮಾಹಿತಿ ನೀಡಿರುವುದು ಮತ್ಯಾರು ಅಲ್ಲ.. ಸ್ವತಃ ಶಿಶಿರ್ ಅವರ ತಂದೆ ಸುಗ್ಗನಹಳ್ಳಿ ಷಡಕ್ಷರಿ.

Aishwarya and Shishir

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ಶಿಶಿರ್ ಶಾಸ್ತ್ರೀ (Shishir shastry) ಮನೆಯೊಳಗೆ ಇದ್ದಾಗ ಐಶ್ವರ್ಯಾ ಸಿಂಧೋಗಿ ಜೊತೆ ಹೆಚ್ಚು ಕ್ಲೋಸ್ ಇದ್ದರು. ಇವರು ಒಂದೇ ಬೆಡ್ ಶೀಟ್ ಹೊದ್ದುಕೊಂಡು ಒಂದೇ ಕಾಫಿ ಕಪ್ ನಲ್ಲಿ ಜೊತೆಯಲ್ಲಿಯೇ ಕಾಫಿ ಕುಡಿದಿದ್ದರು. ಹೊರಬಂದ ಬಳಿಕ ಕೂಡ ಇವರಿಬ್ಬರು ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮೊನ್ನೆಯಷ್ಟೆ ಐಶ್ವರ್ಯಾ ಅವರ ಹಬ್ಬದ ಸಂದರ್ಭ ಸ್ಪೆಷಲ್ ಆಗಿ ವಿಶ್ ಮಾಡಿ ಶಿಶಿರ್ ಫೋಟೋ ಹಂಚಿಕೊಂಡಿದ್ದರು.
ಶಿಶಿರ್ ಹಾಗೂ ಐಶ್ವರ್ಯಾ ಹೊಸ ಬ್ಯುಸಿನೆಸ್ ಕೂಡ ಸ್ಟಾರ್ಟ್ ಮಾಡಿದ್ದಾರೆ. ಮೇಲ್ನೋಟಕ್ಕೆ ಇವರಿಬ್ಬರನ್ನು ಕಂಡರೆ ಲವ್ವರ್ಸ್ ಎಂದು ಅಂದುಕೊಳ್ಳಬೇಕು. ಕೆಲ ಸಂದರ್ಶನದಲ್ಲಿ ಐಶ್ವರ್ಯಾ ಬಳಿ ಶಿಶಿರ್ ಬಗ್ಗೆ ಕೇಳಿದಾಗ ನಾಚಿ ನೀರಾಗಿದ್ದೂ ಉಂಟು. ಆದ್ರೆ ಎಲ್ಲಿ ಕೇಳಿದರು.. ನಾವಿಬ್ರು ಒಳ್ಳೆಯ ಫ್ರೆಂಡ್ಸ್, ನಮ್ಮಿಬ್ಬರ ಮಧ್ಯೆ ಉತ್ತಮ ಸ್ನೇಹದ ಬಾಂಧವ್ಯ ಇದೆ ಎಂದಷ್ಟೆ ಹೇಳಿಕೊಂಡು ಬಂದಿದ್ದಾರೆ.
ಆದರೆ, ಶಿಶಿರ್-ಐಶ್ವರ್ಯಾ ಹೆಚ್ಚಾಗಿ ಜೊತೆಯಲ್ಲೇ ಕಾಣಿಸಿಕೊಳ್ಳುತ್ತಿದ್ದು, ವಾರಕ್ಕೊಂದು ಫೋಟೋ ಶೂಟ್ ವಿಡಿಯೋ ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಒಟ್ಟೊಟ್ಟಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದೀಗ ಶಿಶಿರ್ ಮದುವೆ ಬಗ್ಗೆ ದೊಡ್ಡ ಅಪ್ಡೇಟ್ ಒಂದು ಹೊರಬಿದ್ದಿದೆ. ಈ ಕುರಿತು ಮಾಹಿತಿ ನೀಡಿರುವುದು ಮತ್ಯಾರು ಅಲ್ಲ.. ಸ್ವತಃ ಶಿಶಿರ್ ಅವರ ತಂದೆ ಸುಗ್ಗನಹಳ್ಳಿ ಷಡಕ್ಷರಿ.
ನ್ಯೂಸೋ ನ್ಯೂಸು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮಗನ ಮದುವೆ ಮಾತನಾಡಿದ ಇವರು, ಅವನಿಗೆ ಗೊತ್ತಿದೆ, ಒಂದು ಹಂತಕ್ಕೆ ಬಂದಮೇಲೆ ಯಾವುದಕ್ಕೂ ತಡೆ ಹಾಕೋದನ್ನ ನಾವು ಯಾವತ್ತೂ ಮಾಡಿಲ್ಲ. ಶಿಶಿರ್ ಈಗ ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದಾನೆ, ನಮಗೆ ಅದೆಲ್ಲ ಏನೂ ಅಂತ ಗೊತ್ತೇ ಇಲ್ಲ. ಅವನ ಗುರಿ ಬೇರೆ ಇದೆ, ಯಾವಾಗ ಮದುವೆ ಮಾಡಿಕೊಳ್ಳಬೇಕು ಅನ್ನೋದು ಅವನಿಗೆ ಗೊತ್ತು. ಹಾಗೆಯೇ ಅವನು ಮದುವೆ ಮಾಡಿಕೊಳ್ಳುತ್ತಾನೆ. ಇಂಥಹ ದಿನ, ಇಂಥಹ ಹುಡುಗಿಯನ್ನು ನಾನು ಮದುವೆ ಮಾಡಿಕೊಳ್ಳುತ್ತೀನಿ ಅಂದಾಗ, ಅಂಥಹ ಹುಡುಗಿ ಜೊತೆ ಮದುವೆ ಮಾಡೋಕೆ ನಾವು ಯಾವ ಟೈಮ್‌ನಲ್ಲೂ ರೆಡಿ ಇರ್ತೇವೆ ಎಂದು ಹೇಳಿದ್ದಾರೆ.
BB 19: ಬಿಗ್ ಬಾಸ್ಗೆ 19 ಸ್ಪರ್ಧಿಗಳ ಹೆಸರನ್ನು ಲಾಕ್ ಮಾಡಿದ ಆಯೋಜಕರು: ಇಲ್ಲಿದೆ ಲಿಸ್ಟ್
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಶಿಶಿರ್ ಮದುವೆ ಬಗ್ಗೆ ಹರಿದಾಡುವ ವಿಷಯಗಳ ಬಗ್ಗೆ ಮಾತನಾಡಿದ ಅವರು, ಈ ಫೀಲ್ಡ್‌ನಲ್ಲಿ ನಾನು ಇಲ್ಲದೇ ಇದ್ದರೂ, ನನಗೆ ಅಪರಿಚಿತವಾದಂತಹ ಫೀಲ್ಡ್ ಏನೂ ಅಲ್ಲ. ಆ ಫೀಲ್ಡ್‌ನಲ್ಲಿ ನಾನೂ ಇದ್ದು ಬಂದಿದ್ದೇನೆ. ಒಂದು ಏಳೆಂಟು ಸೀರಿಯಲ್, ಒಂದು ಸಿನಿಮಾ ಮಾಡಿದ್ದೇನೆ. ಈಗಿನ ನಟರು, ಡೈರೆಕ್ಟರ್‌ಗಳ ಪರಿಯವಿದೆ. ಹಾಗಾಗಿ ಇಂಡಸ್ಟ್ರೀಯಲ್ಲಿ ಏನು ನಡೆಯುತ್ತಿದೆ ಅನ್ನೋದರ ಬಗ್ಗೆ ನನಗೆ ಗೊತ್ತಿದೆ. ಈ ಟ್ರೆಂಡ್ ಎಲ್ಲವೂ ನಡೆಯುತ್ತೆ, ಆ ಬಗ್ಗೆ ನಾನು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಗಾಸಿಪ್ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ.
ಇನ್ನು ಶಿಶಿರ್ ಬಗ್ಗೆ ಹೇಳುವುದಾದರೆ ಇವರು ಬಿಗ್ ಬಾಸ್ಗೆ ಬರುವ ಮುನ್ನ ಹಲವಾರು ವರ್ಷಗಳಿಂದ ಕನ್ನಡ ಸೀರಿಯಲ್ ಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಸಿನಿಮಾಗಳಲ್ಲೂ ನಟಿಸಿದ್ದಾರೆ. ಕಳೆದ 13 ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದಾರೆ. ಕುಲವಧು ಧಾರಾವಾಹಿಯಲ್ಲಿ ವೇದ್ ಆಗಿ ಗುರುತಿಸಿಕೊಂಡಿದ್ದ ಶಿಶಿರ್, ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲೂ ನಟಿಸಿದ್ದರು. ದಶಕದ ಹಿಂದೆ ಪ್ರಸಾರವಾಗುತ್ತದ್ದ ಸೊಸೆ ತಂದ ಸೌಭಾಗ್ಯ ಧಾರಾವಾಹಿಯಲ್ಲಿ ನಾಯಕ ನಟನಾಗಿ ಕಿರುತೆರೆಗೆ ಪದಾರ್ಪಣೆ ಮಾಡಿದ್ದರು.