ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೆಡ್ ಜಿನೋಮ್ ನಿಂದ ಭಾರತದಲ್ಲಿ ಸುಧಾರಿತ ನಿಖರ ಕ್ಯಾನ್ಸರ್ ಆರೈಕೆಗೆ ಆಂಕೋಟ್ರ್ಯಾಕ್ ಎಂ.ಆರ್.ಡಿ ಬಿಡುಗಡೆ

ಭಾರತದಲ್ಲಿ ಕ್ಯಾನ್ಸರ್ ಪ್ರಮಾಣವು ತೀವ್ರವಾಗಿ ಹೆಚ್ಚುತ್ತಿದ್ದು, ಪ್ರತಿವರ್ಷ ಅಂದಾಜು 1.5 ಮಿಲಿಯನ್ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಮುಖ ಸವಾಲೆಂದರೆ ಆರಂಭಿಕ ಹಂತದಲ್ಲೇ ರೋಗವನ್ನು ಪತ್ತೆಹಚ್ಚುವುದು ಮತ್ತು ರೋಗದ ಯಾವುದೇ ಬಾಹ್ಯ ಲಕ್ಷಣಗಳು ಕಾಣಿಸದಿರುವಾಗಲೂ, ಕ್ಯಾನ್ಸರ್ ಮರುಕಳಿಸುವ ಅಪಾಯವಿರುವ ರೋಗಿಗಳನ್ನು ಗುರುತಿಸುವುದು.

ಬೆಂಗಳೂರು: ನಿಖರ ಕ್ಯಾನ್ಸರ್ ಆರೈಕೆ (Precision Cancer Care) ಕ್ಷೇತ್ರದಲ್ಲಿ ನೂತನ ಅಧ್ಯಾಯ ವನ್ನು ಪ್ರಾರಂಭಿಸುತ್ತಾ, ಭಾರತದ ಪ್ರಮುಖ ಜೀನೋಮಿಕ್ಸ್ ಆಧಾರಿತ ರೋಗನಿರ್ಣಯ ಮತ್ತು ಸಂಶೋಧನಾ ಸೇವೆಗಳ ಸಂಸ್ಥೆಯಾದ ಮೆಡ್‌ಜಿನೋಮ್ (MedGenome), ವೈಯಕ್ತಿಕರಿಸಿದ (personalized) ಹಾಗೂ ಅತ್ಯಂತ ಸೂಕ್ಷ್ಮವಾದ NGS-ಆಧಾರಿತ ಟ್ಯೂಮರ್-ಇನ್‌ಫಾರ್ಮ್ಡ್ ಮೊಲಿಕ್ಯುಲರ್ ರೆಸಿಡ್ಯುಯಲ್ ಡಿಸೀಸ್ (MRD) ಪರೀಕ್ಷೆಯಾದ 'ಆಂಕೋಟ್ರಾಕ್ ಎಮ್‌ಆರ್‌ಡಿ' (OncoTrack MRD) ಅನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಪ್ರಮುಖ ಕ್ಯಾನ್ಸರ್ ತಜ್ಞರಾದ (ಆಂಕಾಲಜಿಸ್ಟ್) ಡಾ. ನೀತಿ ರೈಜಾದಾ, ಡಾ. ವಿನಾಯಕ್ ಮಕಾ, ಡಾ. ರಾಜೀವ್ ವಿಜಯಕುಮಾರ್ ಮತ್ತು ಮೆಡ್‌ ಜಿನೋಮ್ ಲ್ಯಾಬ್ಸ್ ಲಿಮಿಟೆಡ್‌ನ ಸಿಇಒ ರಾಮಪ್ರಸಾದ್ ವೇದಂ (ಪಿಎಚ್‌ಡಿ) ಅವರು ಈ ನೂತನ ಪರೀಕ್ಷೆಯನ್ನು ಜಂಟಿಯಾಗಿ ಅನಾವರಣಗೊಳಿಸಿದರು. ಭಾರತದಲ್ಲಿ ವೈಯಕ್ತಿಕರಿಸಿದ ಕ್ಯಾನ್ಸರ್ ಆರೈಕೆಯಲ್ಲಿನ ಪ್ರಗತಿ, ಕ್ಯಾನ್ಸರ್ ಮರುಕಳಿಸುವುದನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವ ಪ್ರಾಮುಖ್ಯತೆ ಮತ್ತು ಕ್ಯಾನ್ಸರ್ ಆರೈಕೆಯಲ್ಲಿ 'ಮೊಲಿಕ್ಯುಲರ್ ಮಾನಿಟರಿಂಗ್' ವಹಿಸುವ ಪಾತ್ರದ ಕುರಿತು ಈ ಸಂದರ್ಭದಲ್ಲಿ ತಜ್ಞರು ಸುದೀರ್ಘ ಚರ್ಚೆ ನಡೆಸಿದರು.

ಭಾರತದಲ್ಲಿ ಕ್ಯಾನ್ಸರ್ ಪ್ರಮಾಣವು ತೀವ್ರವಾಗಿ ಹೆಚ್ಚುತ್ತಿದ್ದು, ಪ್ರತಿವರ್ಷ ಅಂದಾಜು 1.5 ಮಿಲಿಯನ್ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಮುಖ ಸವಾಲೆಂದರೆ ಆರಂಭಿಕ ಹಂತದಲ್ಲೇ ರೋಗವನ್ನು ಪತ್ತೆಹಚ್ಚುವುದು ಮತ್ತು ರೋಗದ ಯಾವುದೇ ಬಾಹ್ಯ ಲಕ್ಷಣಗಳು ಕಾಣಿಸದಿರುವಾಗಲೂ, ಕ್ಯಾನ್ಸರ್ ಮರುಕಳಿಸುವ ಅಪಾಯವಿರುವ ರೋಗಿಗಳನ್ನು ಗುರುತಿಸುವುದು.

ಇದನ್ನೂ ಓದಿ: Vishwavani Health: ಅತಿಯಾದ ಮೊಬೈಲ್‌ ಬಳಕೆಯಿಂದ ಜೆನ್ ಝೀಗಳಲ್ಲಿ ಹೆಚ್ಚುತ್ತಿದೆ ಮಾನಸಿಕ ಅನಾರೋಗ್ಯ; ಹೆತ್ತವರು ಮಾಡಬೇಕಾದ್ದೇನು?

ಈ ರೋಗನಿರ್ಣಯದ ಕೊರತೆಯನ್ನು ನೀಗಿಸಲು, ಮೆಡ್‌ಜಿನೋಮ್ ಸಂಸ್ಥೆಯು ಆಂಕೋಟ್ರ್ಯಾಕ್ ಎಂ.ಆರ್‌.ಡಿ ಎಂಬ ಭಾರತದ ಮೊದಲ ವೈಯಕ್ತಿಕಗೊಳಿಸಿದ, ಅತ್ಯಂತ ಸಂವೇದನಾಶೀಲ ನೆಕ್ಸ್ಟ್-ಜನರೇಷನ್ ಸೀಕ್ವೆನ್ಸಿಂಗ್ (ಎನ್.ಜಿ.ಎಸ್.) ಆಧಾರಿತ ಟ್ಯೂಮರ್-ಇನ್‌ಫಾರ್ಮ್ಡ್ ಮಾಲಿಕ್ಯುಲರ್ ರೆಸಿಡ್ಯುಯಲ್ ಡಿಸೀಸ್ ಪರೀಕ್ಷೆಯನ್ನು ಪರಿಚಯಿಸಿದೆ. ಈ ಪರೀಕ್ಷೆಯು ರೋಗಿಯ ಮೂಲ ಜೀವಕೋಶ ಮತ್ತು ರಕ್ತದ ಮಾದರಿಯಿಂದ ಕಸ್ಟಮೈಸ್ ಮಾಡಿದ ಮಾಲಿಕ್ಯುಲರ್ ಪ್ರೊಫೈಲ್ ಅನ್ನು ರೂಪಿಸುವ ಮೂಲಕ, ರಕ್ತನಾಳಗಳಲ್ಲಿ ಹರಿಯುವ ಟ್ಯೂಮರ್ ಡಿಎನ್‌ಎ (ಸಿ.ಟಿ.ಡಿ.ಎನ್.ಎ) ಅನ್ನು ಪತ್ತೆ ಮಾಡುತ್ತದೆ. ಮುಂದಿನ ಹಂತದ ನಿರಂತರ ಗಮನಿಸುವಿಕೆಗೆ ಕೇವಲ ಸಾಧಾರಣ ರಕ್ತದ ಮಾದರಿಯಷ್ಟೇ ಸಾಕಾಗುತ್ತದೆ. ಇದು ಸಾಂಪ್ರದಾಯಿಕ ತಪಾಸಣಾ ವಿಧಾನಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಾ, ಕ್ಯಾನ್ಸರ್ ಮರುಕಳಿಸುವ ಅಪಾಯವನ್ನು ಮೊದಲೇ ಪತ್ತೆಹಚ್ಚಲು ಕ್ಯಾನ್ಸರ್ ತಜ್ಞರಿಗೆ ನೆರವಾಗುತ್ತದೆ.

Health 2

ಈ ಬಿಡುಗಡೆ ಕುರಿತು ಮಾತನಾಡಿದ ಮೆಡ್‌ಜಿನೋಮ್ ಲ್ಯಾಬ್ಸ್ ಲಿಮಿಟೆಡ್‌ ಸಿಇಒ ಡಾ. ವೇದಂ ರಾಮ್‌ ಪ್ರಸಾದ್, "ಭಾರತದಲ್ಲಿ ಕ್ಯಾನ್ಸರ್ ಪ್ರಮಾಣವು ನಿರಂತರವಾಗಿ ಹೆಚ್ಚಾಗುತ್ತಿದೆ. ರೋಗದ ಯಾವುದೇ ಲಕ್ಷಣಗಳು ಕಾಣಿಸದಿರುವಾಗಲೂ, ಕ್ಯಾನ್ಸರ್ ಮರುಕಳಿಸುವ ಅಪಾಯವಿರುವ ರೋಗಿಗಳನ್ನು ಗುರುತಿಸುವುದು ಕ್ಯಾನ್ಸರ್ ತಜ್ಞರಿಇಗೆ ಎದುರಾಗುವ ಅತಿ ದೊಡ್ಡ ಸವಾಲಾಗಿದೆ. ನಮ್ಮ ವೈಯಕ್ತಿಕಗೊಳಿಸಿದ ಮತ್ತು ಅತ್ಯಂತ ಸೂಕ್ಷ್ಮವಾದ ಎನ್.ಜಿ.ಎಸ್. ಆಧಾರಿತ ಟ್ಯೂಮರ್-ಇನ್‌ಫಾರ್ಮ್ಡ್ ಎಂ.ಆರ್‌.ಡಿ ಪರೀಕ್ಷೆಯು ಪ್ರಸ್ತುತ ಇರುವ ಕ್ಲಿನಿಕಲ್ ಮೌಲ್ಯಮಾಪನ ಮತ್ತು ಇಮೇಜಿಂಗ್‌ ಗಳಿಗೆ ಪ್ರಮುಖ ಮಾಲಿಕ್ಯುಲರ್ ಒಳನೋಟವನ್ನು ನೀಡುತ್ತದೆ. ಇದು ವೈದ್ಯರಿಗೆ ಚಿಕಿತ್ಸೆ ಮತ್ತು ಮುಂದಿನ ಆರೈಕೆಯ ಕುರಿತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಆಂಕೋಟ್ರ್ಯಾಕ್ ಎಂ.ಆರ್‌.ಡಿ ಪರೀಕ್ಷೆಯು ದೇಶದಾದ್ಯಂತ ರೋಗಿಗಳಿಗೆ ಮತ್ತು ವೈದ್ಯರಿಗೆ ಸುಧಾರಿತ ನಿಖರ ಆಂಕಾಲಾಜಿಯನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವ ನಮ್ಮ ನಿರಂತರ ಬದ್ಧತೆಯನ್ನು ತೋರಿಸುತ್ತದೆ," ಎಂದು ಹೇಳಿದರು.

ಮನೆಯಿಂದಲೇ ಉಚಿತ ಮಾದರಿ ಸಂಗ್ರಹಣೆ ಮತ್ತು ದೇಶಾದ್ಯಂತ ಲಭ್ಯವಿರುವ ಆಂಕೋಟ್ರ್ಯಾಕ್ ಎಂ.ಆರ್‌.ಡಿ ಪರೀಕ್ಷೆಯನ್ನು ವೈದ್ಯಕೀಯ ಅಗತ್ಯಕ್ಕೆ ಅನುಗುಣವಾಗಿ ವರ್ಷಕ್ಕೆ ಹಲವು ಬಾರಿ ಮಾಡಿಸಿಕೊಳ್ಳಬಹುದು. ಇದನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಸ್ತನ, ಶ್ವಾಸಕೋಶ, ಕೊಲೊರೆಕ್ಟಲ್ ಮತ್ತು ಸ್ತ್ರೀರೋಗ ಸಂಬಂಧಿತ ಕ್ಯಾನ್ಸರ್‌ಗಳು ಸೇರಿದಂತೆ ಪ್ರಮುಖ ಸಾಲಿಡ್ ಟ್ಯೂಮರ್‌ ಗಳಿಗೆ ಇದು ಬಳಸಲ್ಪಡುತ್ತದೆ.

ಆಂಕೋಟ್ರ್ಯಾಕ್ ಎಂ.ಆರ್‌.ಡಿ ಬಿಡುಗಡೆಯು ಭಾರತದಲ್ಲಿ ಸುಧಾರಿತ ಜಿನೋಮಿಕ್ ರೋಗ ನಿರ್ಣಯದ ಲಭ್ಯತೆಯನ್ನು ವಿಸ್ತರಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ನಿಖರ ಆಂಕಾಲಾಜಿ ತಂತ್ರಜ್ಞಾನವು ಬೆಳೆಯುತ್ತಿದ್ದಂತೆ, ಇಮೇಜಿಂಗ್ ಮತ್ತು ಕ್ಲಿನಿಕಲ್ ಮೌಲ್ಯಮಾಪನದ ಜೊತೆಗೆ ಇಂತಹ ಮಾಲಿಕ್ಯುಲರ್ ಗಮನಿಸುವಿಕೆ ವೈದ್ಯರಿಗೆ ಚಿಕಿತ್ಸೆಯ ನಿರ್ಧಾರಗಳನ್ನು ವೈಯಕ್ತಿಕಗೊಳಿ ಸಲು ಮತ್ತು ಕ್ಯಾನ್ಸರ್ ರೋಗಿಗಳ ದೀರ್ಘಕಾಲೀನ ನಿರ್ವಹಣೆಯನ್ನು ಸುಧಾರಿಸಲು ಪ್ರಮುಖ ಪಾತ್ರ ವಹಿಸಲಿದೆ.