ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಬೃಹತ್ 'ಜಿಸಿಸಿ' ಸ್ಥಾಪನೆ ಘೋಷಿಸಿದ ಮೆಡ್‌ಟೆಕ್‌ ದೈತ್ಯ 'ಡಿಪ್ಯೂ ಸಿಂಥೆಸ್', 500ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ

ರೋಗಿಗಳಿಗೆ, ವೈದ್ಯಕೀಯ ಪಾಲುದಾರರಿಗೆ ಹಾಗೂ ಶಸ್ತ್ರಚಿಕಿತ್ಸಕರಿಗೆ ಅತ್ಯಾಧುನಿಕ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಕೇಂದ್ರವು ಕೆಲಸ ಮಾಡಲಿದೆ. ಮುಖ್ಯವಾಗಿ ಸಾಫ್ಟ್‌ವೇರ್ ಡೆವಲಪ್ಮೆಂಟ್, ಡೇಟಾ ಮತ್ತು ಕೃತಕ ಬುದ್ಧಿಮತ್ತೆ, ಎಂಟರ್‌ಪ್ರೈಸ್ ಅಪ್ಲಿಕೇಶನ್ಸ್, ಸೈಬರ್ ಸೆಕ್ಯುರಿಟಿ ಸೇರಿದಂತೆ ಹಲವು ನವೀನ ತಂತ್ರಜ್ಞಾನಗಳ ಅಭಿವೃದ್ಧಿಗೆ ಈ ಜಿಸಿಸಿ ವೇದಿಕೆಯಾಗಲಿದೆ.

ಬೆಂಗಳೂರು: ಜಾನ್ಸನ್‌ ಆಂಡ್‌ ಜಾನ್ಸನ್‌ ಸಮೂಹಕ್ಕೆ ಸೇರಿದ ಮೂಳೆ ಚಿಕಿತ್ಸಾ ಉಪಕರಣಗಳ ತಯಾರಿಕೆಯಲ್ಲಿ ಜಾಗತಿಕ ಮಟ್ಟದಲ್ಲೇ ಮುಂಚೂಣಿಯಲ್ಲಿರುವ ದೈತ್ಯ ಡಿಪ್ಯೂ ಸಿಂಥೆಸ್ ಬೆಂಗಳೂರಿನಲ್ಲಿ ತನ್ನ ನೂತನ ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್ (ಜಿಸಿಸಿ) ಸ್ಥಾಪಿಸುವುದಾಗಿ ಘೋಷಿಸಿದೆ. ಈ ಹೂಡಿಕೆಯು ಆರೋಗ್ಯ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ಜೊತೆಗೆ, ಸ್ಥಳೀಯವಾಗಿ ವಿಪುಲ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.

ರೋಗಿಗಳಿಗೆ, ವೈದ್ಯಕೀಯ ಪಾಲುದಾರರಿಗೆ ಹಾಗೂ ಶಸ್ತ್ರಚಿಕಿತ್ಸಕರಿಗೆ ಅತ್ಯಾಧುನಿಕ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಕೇಂದ್ರವು ಕೆಲಸ ಮಾಡಲಿದೆ. ಮುಖ್ಯವಾಗಿ ಸಾಫ್ಟ್‌ವೇರ್ ಡೆವಲಪ್ಮೆಂಟ್, ಡೇಟಾ ಮತ್ತು ಕೃತಕ ಬುದ್ಧಿಮತ್ತೆ, ಎಂಟರ್‌ಪ್ರೈಸ್ ಅಪ್ಲಿಕೇಶನ್ಸ್, ಸೈಬರ್ ಸೆಕ್ಯುರಿಟಿ ಸೇರಿದಂತೆ ಹಲವು ನವೀನ ತಂತ್ರಜ್ಞಾನಗಳ ಅಭಿವೃದ್ಧಿಗೆ ಈ ಜಿಸಿಸಿ ವೇದಿಕೆಯಾಗಲಿದೆ.

ಇದನ್ನೂ ಓದಿ: Bangalore News: ಹೊಸೂರಿನಲ್ಲಿ ಬೃಹತ್ 'ಏರೋಸ್ಪೇಸ್-ಡಿಫೆನ್ಸ್' ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ ಬೆಂಗಳೂರಿನ 'ಹಿಕಲ್ ಟೆಕ್ನಾಲಜೀಸ್'

ಬೆಂಗಳೂರಿಗರಿಗೆ 500ಕ್ಕೂ ಹೆಚ್ಚು ಉದ್ಯೋಗಾವಕಾಶ

ಮುಂದಿನ 18 ರಿಂದ 24 ತಿಂಗಳುಗಳಲ್ಲಿ ಈ ಕೇಂದ್ರವು ಸಂಪೂರ್ಣವಾಗಿ ಕಾರ್ಯಾಚರಣೆ ಆರಂಭಿಸ ಲಿದ್ದು, ಆರಂಭಿಕ ಹಂತದಲ್ಲಿ ಅಂದಾಜು 500 ತಂತ್ರಜ್ಞಾನ ವೃತ್ತಿಪರರಿಗೆ ಉದ್ಯೋಗಾವ ಕಾಶ ಒದಗಿಸುವ ಗುರಿಯನ್ನು ಕಂಪನಿ ಹೊಂದಿದೆ. ಭವಿಷ್ಯದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ವಿಶೇಷವೆಂದರೆ, 2026ರ ಆಗಸ್ಟ್ ತಿಂಗಳಿನಿಂದಲೇ ನೇಮಕಾತಿ ಪ್ರಕ್ರಿಯೆಗಳು ಹಂತ ಹಂತವಾಗಿ ಶುರುವಾಗಲಿವೆ.

ಭಾರತದ ಮಾರುಕಟ್ಟೆಯ ಮೇಲೆ ಒಲವು

ಜಿಸಿಸಿ ಸ್ಥಾಪನೆ ಸಂಬಂಧ ಮತ್ತಷ್ಟು ವಿವರಗಳನ್ನು ಹಂಚಿಕೊಂಡಿರುವ ಡಿಪ್ಯೂ ಸಿಂಥೆಸ್‌ನ ಜಾಗತಿಕ ಅಧ್ಯಕ್ಷ ನಮಲ್ ನವಾನಾ, "ಆರ್ಥೋಪೆಡಿಕ್ (ಮೂಳೆ ಚಿಕಿತ್ಸೆ) ವಿಭಾಗದಲ್ಲಿ ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ. ಬೆಂಗಳೂರಿನಲ್ಲಿ ನಾವು ಮಾಡುತ್ತಿರುವ ಈ ಹೂಡಿಕೆಯು ಭಾರತದ ರೋಗಿಗಳು ಹಾಗೂ ವೈದ್ಯರ ಮೇಲಿನ ನಮ್ಮ ದೀರ್ಘ ಕಾಲದ ಬದ್ಧತೆಯನ್ನು ತೋರಿಸುತ್ತದೆ. ಜೊತೆಗೆ ಇಲ್ಲಿನ ವಿಶ್ವದರ್ಜೆಯ ಪ್ರತಿಭೆಗಳನ್ನು ಬಳಸಿಕೊಳ್ಳಲು ನೆರವಾಗಲಿದೆ,” ಎಂದು ಹೇಳಿದ್ದಾರೆ.

ಈ ನೂತನ ಕೇಂದ್ರದ ನೇತೃತ್ವವನ್ನು ಡಿಪ್ಯೂ ಸಿಂಥೆಸ್‌ನ ಮುಖ್ಯ ಮಾಹಿತಿ ಅಧಿಕಾರಿ (ಸಿಐಒ) ನಿಕೋಲಸ್ ಪೆರೋಟಾ ವಹಿಸಲಿದ್ದಾರೆ. ಅವರಿಗೆ ಬೆಂಬಲವಾಗಿ ಪ್ರಮುಖ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸಲಿದೆ.

ಚೀಫ್ ಟೆಕ್ನಾಲಜಿ ಆಫೀಸರ್ ಡಾ. ಜೈ ಗಣೇಶ್ ಅವರು ಈ ಿಸಿಸಿ ಕೇಂದ್ರದ ತಂತ್ರಜ್ಞಾನ, ಸೈಬರ್ ಭದ್ರತೆ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಜವಾಬ್ದಾರಿ ನಿರ್ವಹಿಸಲಿದ್ದಾರೆ. ನಾಗರಾಜ್ ಭಟ್ (ಜಿಸಿಸಿ ಲೀಡರ್) ಅವರು ಬೆಂಗಳೂರಿನ ಸ್ಥಳೀಯ ಕಾರ್ಯಾಚರಣೆಗಳ ಉಸ್ತುವಾರಿ ಹಾಗೂ ನಾಯಕತ್ವ ತಂಡವನ್ನು ಮುನ್ನಡೆಸುವ ಕೆಲಸ ಮಾಡಲಿದ್ದಾರೆ.

ಒಟ್ಟಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿ ಮಾಡಲು ಹೊರಟಿರುವ 'ಡಿಪ್ಯೂ ಸಿಂಥೆಸ್', ಭಾರತದ ಟೆಕ್ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಬೇರುಗಳನ್ನು ಭದ್ರಪಡಿಸಿಕೊಳ್ಳಲು ಮುಂದಾ ಗಿದೆ.