-ಡಾ.ರೇಷ್ಮಾ ಆನೆಗುಂಡಿ, ಹೆಡ್ ಅಂಡ್ ಕನ್ಸಲ್ಟೆಂಟ್ ಪೆಥಾಲಜಿಸ್ಟ್, ಅಪೋಲೋ ಆಸ್ಪತ್ರೆ, ಶೇಷಾದ್ರಿಪುರಂ, ಬೆಂಗಳೂರು
ಕುಡಗೋಲು ಕೋಶ ರೋಗ (ಸಿಕಲ್ ಸೆಲ್ ಡಿಸೀಸ್) ಕೆಂಪು ರಕ್ತ ಕಣಗಳ ಅಸಹಜ ಗಾತ್ರವಿರುವ ಅನುವಂಶಿಕ ರೋಗವಾಗಿದೆ. ಕುಡಗೋಲು ಕೋಶ ರೋಗದ ಒಂದು ಬಹಳ ಆತಂಕಕಾರಿ ಅಂಶ ವೆಂದರೆ ಚಿಕಿತ್ಸೆ ಪ್ರಾರಂಭವಾಗುವ ಬಹಳ ಮುಂಚೆಯೇ ಪ್ರಾರಂಭವಾಗಿರುತ್ತದೆ. ಬಹಳಷ್ಟು ಪ್ರಕರಣಗಳಲ್ಲಿ ಕುಟುಂಬಗಳು ಹಲವು ತಿಂಗಳು ಅಥವಾ ಹಲವು ವರ್ಷಗಳು ಮರು ಕಳಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ವ್ಯಯಿಸುತ್ತಾರೆ, ಏಕೆಂದರೆ ಅವರು ಅನುವಂಶಿಕವಾಗಿ ರಕ್ತದ ಸಮಸ್ಯೆ ಉಂಟಾಗಿದೆ ಎಂದು ಕಿಂಚಿತ್ತೂ ಅನುಮಾನಿಸುವುದಿಲ್ಲ. ಸರಿಯಾದ ರೋಗ ನಿರ್ಣಯ ಮಾಡುವ ವೇಳೆಗೆ ರೋಗಿಯು ಬಹಳ ಗಂಭೀರ ಪರಿಸ್ಥಿತಿಗೆ ಒಳಗಾಗಿರುತ್ತಾನೆ.
ಆಗಾಗ್ಗೆ ಆಸ್ಪತ್ರೆ ಭೇಟಿ ಮಾಡುವ ಪೋಷಕರು, ವಿವರಿಸಲಾಗದ ನೋವಿನ ಮರುಕಳಿಕೆ ಮತ್ತು ಸತತ ರಕ್ತಹೀನತೆಯು ಈ ಸಮಸ್ಯೆ ಇರುವುದರ ಸೂಚನೆಯಾಗಿರಬಹುದು. ತಡ ಮಾಡುವುದಕ್ಕೆ ಕಡು ಗೋಲು ರಕ್ತಕಣ ರೋಗದ ಕುರಿತಾದ ಇರುವ ಮಿಥ್ಯೆಗಳು ಕಾರಣವಾಗಿರುತ್ತವೆ.
ಈ ರೋಗವು ಅತ್ಯಂತ ಅಪರೂಪ ಮತ್ತು ಆದ್ದರಿಂದ ಒಬ್ಬರ ಕುಟುಂಬಕ್ಕೆ ಬಾಧಿಸುವ ಸಾಧ್ಯತೆ ಕಡಿಮೆ ಎಂದು ಭಾವಿಸುವುದು ಸಾಮಾನ್ಯ ನಂಬಿಕೆ. ವಾಸ್ತವ ಭಿನ್ನವಾಗಿದೆ. ಭಾರತವು ಮುಖ್ಯವಾಗಿ ಆದಿವಾಸಿ ಮತ್ತು ಮಧ್ಯ ಭಾರತದ ಜನರಲ್ಲಿ ಸಾಕಷ್ಟು ಪ್ರಮಾಣದ ಕುಡುಗೋಲು ರಕ್ತ ಕಣದ ರೋಗವನ್ನು ಎದುರಿಸುತ್ತಿದೆ. ಆದಾಗ್ಯೂ ವೈದ್ಯಕೀಯ ಕ್ಷೇತ್ರದ ಆಚೆಗೆ ಈ ಕುರಿತು ಅರಿವಿನ ಪ್ರಮಾಣ ಸೀಮಿತವಾಗಿದೆ. ಇದರ ಫಲಿತಾಂಶದಿಂದ ಹಲವು ಕುಟುಂಬಗಳು ಮಗು ರೋಗಲಕ್ಷಣ ಗಳನ್ನು ಅಭಿವೃದ್ಧಿಪಡಿಸಿಕೊಂಡ ನಂತರ ಮೊದಲ ಬಾರಿಗೆ ತಿಳಿಯುತ್ತಾರೆ.
ಇದನ್ನೂ ಓದಿ: Health Tips: 30ರ ಹರೆಯದಲ್ಲಿದ್ದೀರಾ? ನಿಮ್ಮ ಆರೋಗ್ಯ ಕಾಪಾಡಲು ತಜ್ಞರ ಈ ಟಿಪ್ಸ್ ಪಾಲಿಸಿ!
ಕುಡುಗೋಲು ರಕ್ತಕಣದ ರೋಗಲಕ್ಷಣ ಮತ್ತು ರೋಗವಿರುವುದರ ನಡುವೆ ಕೂಡಾ ಗೊಂದಲವಿದೆ. ಈ ರೋಗಲಕ್ಷಣವುಳ್ಳ ಜನರು ಸಂಪೂರ್ಣ ಸಾಮಾನ್ಯ ಜೀವನ ನಡೆಸುತ್ತಿರುತ್ತಾರೆ ಮತ್ತು ಎಂದಿಗೂ ರೋಗಲಕ್ಷಣವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದಿಲ್ಲ. ಅಂತಹ ಕಡೆ ಇಬ್ಬರೂ ಪೋಷಕರು ರೋಗ ವನ್ನು ಹೊಂದಿದ್ದಲ್ಲಿ ಮಗುವಿಗೆ ವರ್ಗಾವಣೆಯಾಗುವ ಸಾಧ್ಯತೆ ಇರುತ್ತದೆ.
ಮತ್ತೊಂದು ತಪ್ಪು ಕಲ್ಪನೆ ಎಂದರೆ ಕುಡುಗೋಲು ರಕ್ತಕಣದ ರೋಗ ಹೊಂದಿದ ರೋಗಿಗಳು ಹೊರನೋಟಕ್ಕೆ ರೋಗಿಗಳಂತೆ ಕಾಣುತ್ತಾರೆ ಎನ್ನುವುದು. ಇದು ನಿಜವಾಗಬೇಕಿಲ್ಲ. ಹಲವು ಮಕ್ಕಳು ಶಾಲೆಗೆ ನಿಯಮಿತವಾಗಿ ಹಾಜರಾಗುತ್ತಾರೆ, ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ ಮತ್ತು ಬಹಳ ಕಾಲ ಆರೋಗ್ಯಕರವಾಗಿ ಕಾಣುತ್ತಾರೆ. ಈ ರೋಗವು ನೋವಿನ ಬಿಕ್ಕಟ್ಟು, ತೀವ್ರ ಆಯಾಸ ಅಥವಾ ಪುನರಾವರ್ತಿತ ಸೋಂಕುಗಳಾದಾಗ ಮಾತ್ರ ಕಾಣುತ್ತದೆ. ರೋಗಲಕ್ಷಣಗಳು ಬರಬಹುದು ಹೋಗ ಬಹುದು, ಅವುಗಳನ್ನು ಸಂಬಂಧಿಸದ ಆರೋಗ್ಯ ಸಮಸ್ಯೆಗಳು ಎಂದು ತಳ್ಳಿ ಹಾಕಬಹುದು.
ನೋವನ್ನೇ ಸ್ವತಃ ರೋಗದ ಅತ್ಯಂತ ತಪ್ಪು ತಿಳಿಯಲಾದ ಆಯಾಮಗಳಲ್ಲಿ ಒಂದಾಗಿದೆ. ಮಕ್ಕಳಲ್ಲಿ ಕೀಲುಗಳು, ಮೊಣಕೈ ಅಥವಾ ಹೊಟ್ಟೆನೋವು ಅವರು ಅತಿಯಾಗಿ ಹೇಳಿಕೊಳ್ಳುತ್ತಿರುವ ಪ್ರತಿಕ್ರಿಯೆ ಗಳು ಎಂದು ತಿಳಿಯುತ್ತೇವೆ. ವಾಸ್ತವದಲ್ಲಿ ಇವು ಅಸಹಜ ಗಾತ್ರದ ರಕ್ತಕಣಗಳು ರಕ್ತನಾಳಗಳನ್ನು ತಡೆ ಹಿಡಿದಾಗ ಉಂಟಾಗಿರುತ್ತವೆ. ಅಂತಹ ನೋವು ತೀವ್ರವಾಗಿರುತ್ತದೆ ಮತ್ತು ತಕ್ಷಣವೇ ವೈದ್ಯರ ಪರೀಕ್ಷೆ ಅಗತ್ಯವಾಗಿರುತ್ತದೆ.
ಮತ್ತೊಂದು ಮಿಥ್ಯೆಗೂ ಗಮನ ನೀಡಬೇಕಾಗಿದೆ- ಒಮ್ಮೆ ವ್ಯಕ್ತಿಯಲ್ಲಿ ರೋಗ ಪತ್ತೆಯಾದ ನಂತರ ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು. ಈ ದೃಷ್ಟಿಕೋನ ಹಳೆಯ ಕಾಲದ್ದು ಮತ್ತು ಅಪಾಯ ಕಾರಿ. ಪ್ರಾರಂಭಿಕ ರೋಗಪರೀಕ್ಷೆಯು ಹಲವಾರು ರೋಗಿಗಳಿಗೆ ಫಲಿತಾಂಶ ಉತ್ತಮಪಡಿಸಿವೆ. ಅದು ಸೂಕ್ತ ವೈದ್ಯಕೀಯ ಬೆಂಬಲ, ನಿಯಮಿತ ವೈದ್ಯರ ಮೇಲ್ವಿಚಾರಣೆ ನಂತರ ಮತ್ತಷ್ಟು ಸಂಕೀರ್ಣತೆ ಗಳಿಲ್ಲದೆ ಜೀವನದ ಗುಣಮಟ್ಟ ಸುಧಾರಣೆಗೆ ನೆರವಾಗುತ್ತದೆ.
ಕುಡುಗೋಲು ರಕ್ತಕಣ ರೋವನ್ನು ಸಾಮಾನ್ಯ ರಕ್ತದ ಸಮಸ್ಯೆ ಎಂದು ತಪ್ಪು ತಿಳಿಯಲಾಗುತ್ತದೆ. ಕಾಲ ಕಳೆದಂತೆ ಅದು ಶ್ವಾಸಕೋಶಗಳು, ಮೂತ್ರಪಿಂಡಗಳು, ಮೂಳೆಗಳು ಮತ್ತು ಮೆದುಳಿಗೆ ಹಾನಿಯುಂಟು ಮಾಡಬಲ್ಲದು. ಇದರಿಂದ ರೋಗಿಗಳು “ಚೆನ್ನಾಗಿದ್ದೇವೆ” ಎಂದು ಭಾವಿಸಿದರೂ ಸ್ವಲ್ಪ ಮಟ್ಟಿಗೆ ರಿಸ್ಕ್ ಹೊಂದಿರುತ್ತಾರೆ, ಇದರಿಂದ ದೀರ್ಘಾವಧಿ ಫಾಲೋ-ಅಪ್ ಅಗತ್ಯ ಎನ್ನುವು ದನ್ನು ತೋರುತ್ತದೆ.