ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಈ ಹಣ್ಣುಗಳನ್ನೂ ಒಟ್ಟಿಗೆ ಸೇವಿಸುತ್ತೀರಾ? ಅಪಾಯ ತಪ್ಪಿದ್ದಲ್ಲ!

Health Tips: ಮುಖ್ಯವಾಗಿ ಹಣ್ಣುಗಳು ನಮ್ಮ ದೇಹಕ್ಕೆ ಪೋಷಕಾಂಶ ಹಾಗೂ ಜೀವಸತ್ವಗಳನ್ನು ಒದಗಿಸುತ್ತದೆ. ಆದರೆ ನಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ತಿಳಿದಿದ್ದರೂ ಕೆಲವು ಹಣ್ಣುಗಳನ್ನು ಒಟ್ಟಿಗೆ ಸೇವಿಸುವುದು ನಿಜವಾಗಿಯೂ ಅಪಾಯಕಾರಿ ಎಂಬುದು ನಿಮಗೆ ತಿಳಿದಿದೆಯೇ? ಆಯುರ್ವೇದ ಆರೋಗ್ಯ ತಜ್ಞರ ಪ್ರಕಾರ, ಕೆಲವು ಹಣ್ಣುಗಳು ಹೊಟ್ಟೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು..

ಸಂಗ್ರಹ ಚಿತ್ರ

ನವದೆಹಲಿ,ಆ.7: ನಮ್ಮ ಆರೋಗ್ಯವನ್ನು ಸರಿಯಾಗಿ ಇರಿಸಬೇಕಾದರೆ ನಾವು ಸೇವಿಸುವ ಆಹಾರ ಕೂಡ ಪ್ರಮುಖವಾಗುತ್ತದೆ. ಮುಖ್ಯವಾಗಿ ಹಣ್ಣುಗಳು (Fruits For health) ನಮ್ಮ ದೇಹಕ್ಕೆ ಪೋಷಕಾಂಶ ಹಾಗೂ ಜೀವಸತ್ವಗಳನ್ನು ಒದಗಿಸುತ್ತದೆ. ಆದರೆ ನಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ತಿಳಿದಿದ್ದರೂ ಕೆಲವು ಹಣ್ಣುಗಳನ್ನು ಒಟ್ಟಿಗೆ ಸೇವಿಸುವುದು ನಿಜವಾಗಿಯೂ ಅಪಾಯಕಾರಿ ಎಂಬುದು ನಿಮಗೆ ತಿಳಿದಿದೆಯೇ? ಆಯುರ್ವೇದ ಆರೋಗ್ಯ ತಜ್ಞರ ಪ್ರಕಾರ, ಕೆಲವು ಹಣ್ಣುಗಳು ಹೊಟ್ಟೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಕೆಲವು ಹಣ್ಣುಗಳನ್ನು ಒಟ್ಟಿಗೆ ಸೇವನೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯು ಒತ್ತಡಕ್ಕೊಳಗಾಗಬಹುದು. ಅಥವಾ ಅಜೀರ್ಣ, ಹೊಟ್ಟೆ ನೋವು ಮತ್ತು ಉಬ್ಬರದಂತಹ ಸಮಸ್ಯೆ ಗಳಿಗೆ ಕಾರಣವಾಗಬಹುದು. ಹಾಗಾಗಿ ಸೂಕ್ತ ಮಾಹಿತಿಯಿಲ್ಲದೆ ಇವುಗಳನ್ನು ಸೇವಿಸುವುದರಿಂದ ಆರೋಗ್ಯ ಹದಗೆಡಬಹುದು.

ಬಾಳೆಹಣ್ಣು ಮತ್ತು ಕಿತ್ತಳೆ:

ಬಾಳೆಹಣ್ಣು ಮತ್ತು ಕಿತ್ತಳೆ ವಿಭಿನ್ನ ಜೀರ್ಣಕಾರಿ ಸ್ವಭಾವವನ್ನು ಹೊಂದಿವೆ. ಬಾಳೆಹಣ್ಣುಗಳು ಸಿಹಿ ಇದ್ದರೆ ಕಿತ್ತಳೆ ಹುಳಿ ಮತ್ತು ಆಮ್ಲೀಯವಾಗಿರುತ್ತದೆ. ಒಟ್ಟಿಗೆ ಸೇವಿಸಿದಾಗ, ಜೀರ್ಣಕ್ರಿಯೆ ಪ್ರಕ್ರಿಯೆ ಮೇಲೆ ಪ್ರಭಾವ ಬೀರಬಹುದು.ಅಷ್ಟೇ ಅಲ್ಲದೆ ಅಲರ್ಜಿ ಯಾಗಿ ಶೀತ, ಕೆಮ್ಮು ಮತ್ತು ಲೋಳೆಯ ದಟ್ಟಣೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

Health Tips: ಕರುಳಿನ ಆರೋಗ್ಯ ಸುಧಾರಿಸುವ ನೀವು ಸೇವಿಸಬೇಕಾದ ಆಹಾರಗಳಿವು

ಕಲ್ಲಂಗಡಿ ಮತ್ತು ಬಾಳೆಹಣ್ಣು:

ಕಲ್ಲಂಗಡಿ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ಹಣ್ಣಾಗಿದ್ದು ಬೇಗನೆ ತಿಂದ ಆಹಾರ ಜೀರ್ಣ ಮಾಡುತ್ತದೆ. ಆದರೆ ಬಾಳೆಹಣ್ಣು ಹೊಟ್ಟೆ ಭಾರವಾಗಿ ಇರಿಸಲಿದ್ದು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅವುಗಳನ್ನು ಒಟ್ಟಿಗೆ ತಿನ್ನುವುದರಿಂದ ಜೀರ್ಣಕ್ರಿಯೆಯ ವೇಗವನ್ನು ಅಡ್ಡಿಪಡಿಸುತ್ತದೆ. ಇದು ಉಬ್ಬುವುದು ಮತ್ತು ಅಜೀರ್ಣಕ್ಕೆ ಕಾರಣವಾಗುತ್ತದೆ.

ಪೇರಳೆ ಮತ್ತು ಬಾಳೆಹಣ್ಣು:

ಪೇರಳೆ ಮತ್ತು ಬಾಳೆಹಣ್ಣು ಎರಡೂ ದೇಹಕ್ಕೆ ಒಳಿತಾದದರೂ ಎರಡು ಒಟ್ಟಿಗೆ ಸೇವನೆ ಮಾಡಬಾರದು. ಅವುಗಳನ್ನು ಒಟ್ಟಿಗೆ ಸೇವಿಸುವುದು ಜೀರ್ಣಾಂಗ ವ್ಯವಸ್ಥೆಗೆ ಸೂಕ್ತವಲ್ಲ . ಬಾಳೆ ಹಣ್ಣುಗಳು ಭಾರ ಮತ್ತು ಪಿಷ್ಟವಾಗಿದ್ದು, ಪೇರಳೆಗಳು ಹೆಚ್ಚಿನ ಫೈಬರ್ ಮತ್ತು ನೀರಿನ ಅಂಶವನ್ನು ಹೊಂದಿದ್ದು ಬೇಗ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

ಪಪ್ಪಾಯಿ ಮತ್ತು ನಿಂಬೆಹಣ್ಣು:

ಪಪ್ಪಾಯಿ ಮತ್ತು ನಿಂಬೆ ಎರಡೂ ಹೆಚ್ಚು ಆಮ್ಲಗಳನ್ನು ಹೊಂದಿರುತ್ತವೆ. ಅವುಗಳನ್ನು ಒಟ್ಟಿಗೆ ಸೇವಿಸುವುದರಿಂದ ಹೊಟ್ಟೆಯಲ್ಲಿ ಆಮ್ಲೀಯತೆಯ ಪ್ರಭಾವ ಬೀರಬಹುದು.ಇದು ಹೊಟ್ಟೆಯ ಅಸ್ವಸ್ಥತೆಗೆ ಕಾರಣವಾಗುತ್ತದೆ. ಈಗಾಗಲೇ ಆಮ್ಲೀಯತೆಯ ಸಮಸ್ಯೆ ಇದ್ದವರು ಈ ಹಣ್ಣುಗಳ ಸೇವನೆ ತಪ್ಪಿಸಬೇಕು.