ನಿವಾ ಬೂಪಾ ಹೆಲ್ತ್ ಇನ್ಶೂರೆನ್ಸ್, ಬೂಪಾ ಗ್ಲೋಬಲ್ ಸಹಯೋಗದಲ್ಲಿ, ‘ಮೆರಿಡಿಯನ್’ ಎಂಬ ತನ್ನ ಪ್ರಮುಖ ಅಂತರರಾಷ್ಟ್ರೀಯ ಖಾಸಗಿ ವೈದ್ಯಕೀಯ ವಿಮಾ (IPMI) ಯೋಜನೆಯನ್ನು ಬಿಡುಗಡೆಗೊಳಿಸಿದೆ. ಜಾಗತಿಕವಾಗಿ ಕಾರ್ಯನಿರ್ವಹಿಸುವ ವೃತ್ತಿಪರರು, ಉದ್ಯಮ ನಾಯಕರು, ಸಿಎಕ್ಸ್ಒಗಳು, ಅನಿವಾಸಿ ಭಾರತೀಯರು (NRI) ಹಾಗೂ ಅಂತರರಾಷ್ಟ್ರೀಯ ಸಂಪರ್ಕ ಹೊಂದಿ ರುವ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ. ವಿಶ್ವದ ಯಾವುದೇ ಭಾಗದಲ್ಲಿದ್ದರೂ ಸಮಗ್ರ ಆರೋಗ್ಯ ರಕ್ಷಣೆ ಹಾಗೂ ಅತ್ಯುತ್ತಮ ವೈದ್ಯಕೀಯ ತಜ್ಞರ ಸೇವೆಯನ್ನು ಪಡೆಯಲು ಬಯಸುವವರಿಗೆ ಇದು ನೆರವಾಗಲಿದೆ.
ವೃತ್ತಿಪರ ಮತ್ತು ವೈಯಕ್ತಿಕ ಜೀವನವು ದಿನದಿಂದ ದಿನಕ್ಕೆ ಭೌಗೋಳಿಕ ಗಡಿಗಳನ್ನು ಮೀರುತ್ತಿರುವ ಹಿನ್ನೆಲೆಯಲ್ಲಿ, ವಿಶ್ವದಾದ್ಯಂತ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯಲು ಗ್ರಾಹಕರಿಗೆ ಅಗತ್ಯವಿರುವ ಸ್ವಾತಂತ್ರ್ಯ ಮತ್ತು ವಿಶ್ವಾಸವನ್ನು ಒದಗಿಸುವ ಉದ್ದೇಶದಿಂದ ಮೆರಿಡಿಯನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಮೆರಿಡಿಯನ್ ಗ್ರಾಹಕರ ಸೇವೆ ಮತ್ತು ಕ್ಲೇಮ್ಗಳ ನಿರ್ವಹಣೆಯಲ್ಲಿ ನಿವಾ ಬೂಪಾ, ಬೂಪಾ ಗ್ಲೋಬಲ್ ಮತ್ತು ಬ್ಲೂ ಕ್ರಾಸ್ ಬ್ಲೂ ಶೀಲ್ಡ್ (BCBS) ಸಂಸ್ಥೆಗಳ ಸಾಮರ್ಥ್ಯ ಗಳನ್ನು ಒಗ್ಗೂಡಿಸಿ, ಸುಗಮ ಅಂತರರಾಷ್ಟ್ರೀಯ ಸೇವಾ ಅನುಭವ ಒದಗಿಸಲಾಗುತ್ತದೆ.
ಇದನ್ನೂ ಓದಿ: Insurance fraud: ರಾಜ್ಯದಲ್ಲಿ ವಿಮೆ ವಂಚನೆ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ ರಚನೆ
ಭಾರತದಲ್ಲಿ ಕ್ಲೇಮ್ಗಳ ನಿರ್ವಹಣೆಯನ್ನು ನಿವಾ ಬೂಪಾ ನಿರ್ವಹಿಸಲಿದೆ. ಅಮೆರಿಕವನ್ನು ಹೊರತುಪಡಿಸಿ ಭಾರತದ ಹೊರಗಿನ ಕ್ಲೇಮ್ಗಳನ್ನು ಬೂಪಾ ಗ್ಲೋಬಲ್ ನಿರ್ವಹಿಸಲಿದೆ. ಅಮೆರಿಕದಲ್ಲಿ ಕ್ಲೇಮ್ಗಳ ನಿರ್ವಹಣೆಯನ್ನು ಬ್ಲೂ ಕ್ರಾಸ್ ಬ್ಲೂ ಶೀಲ್ಡ್ (BCBS) ಮೂಲಕ ಸುಗಮಗೊಳಿಸಲಾಗುತ್ತದೆ. ಇದು 33 ಸ್ವತಂತ್ರವಾಗಿ ಸ್ಥಳೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ವಿಮಾ ಕಂಪನಿಗಳ ರಾಷ್ಟ್ರೀಯ ಒಕ್ಕೂಟವಾಗಿದ್ದು, ಒಟ್ಟಾಗಿ 115 ಮಿಲಿಯನ್ಗೂ ಅಧಿಕ ಅಮೆರಿಕನ್ನರಿಗೆ ವಿಮಾ ರಕ್ಷಣೆಯನ್ನು ಒದಗಿಸುತ್ತಿದೆ.
ಜಾಗತಿಕವಾಗಿ ಸಂಚರಿಸುವ ಗ್ರಾಹಕರಿಗೆ ಕೇವಲ ಸಮಗ್ರ ಆರೋಗ್ಯ ವಿಮಾ ರಕ್ಷಣೆ ಮಾತ್ರವಲ್ಲದೆ, ಸುಗಮ ಮತ್ತು ವೈಯಕ್ತಿಕ ಸೇವಾ ಅನುಭವವೂ ಅಗತ್ಯವೆಂಬುದನ್ನು ಗುರುತಿಸಿರುವ ಮೆರಿಡಿಯನ್, ಈ ಎರಡೂ ಅಂಶಗಳಿಗೆ ಸಮಾನ ಆದ್ಯತೆ ನೀಡುತ್ತದೆ. ಪ್ರತಿಯೊಬ್ಬ ಗ್ರಾಹಕರಿಗೂ ವರ್ಷವಿಡೀ ಲಭ್ಯವಿರುವ 24x7 ಮೀಸಲಾದ ಕನ್ಸಿಯರ್ಜ್ ಸೇವಾ ಕೇಂದ್ರದ ಸೌಲಭ್ಯ ದೊರೆಯಲಿದೆ. ಇದು ಗ್ರಾಹಕರಿಗೆ ಒಂದೇ ಸಂಪರ್ಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ನೆರವು ನೀಡುವ ಈ ಸೇವೆಯು, ಗ್ರಾಹಕರು ಭಾರತದಲ್ಲಿರಲಿ ಅಥವಾ ವಿದೇಶದಲ್ಲಿರಲಿ, ಅವರ ಆರೋಗ್ಯ ಸೇವೆಯ ಪ್ರಯಾಣವನ್ನು ಸುಲಭ, ನಿರಂತರ ಮತ್ತು ನಿರಾಳವಾಗಿಸಲು ಸಹಾಯ ಮಾಡಲಿದೆ.
‘ಗಡಿಗಳಿಲ್ಲದ ಆರೋಗ್ಯ ಸೇವೆ’ ಎಂಬ ಪರಿಕಲ್ಪನೆಯ ಆಧಾರದ ಮೇಲೆ ರೂಪಿಸಲಾಗಿರುವ ಈ ಯೋಜನೆಯು ಏಷ್ಯಾ, ಯುರೋಪ್, ಮಧ್ಯಪ್ರಾಚ್ಯ, ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ ಹಾಗೂ ಉತ್ತರ ಮತ್ತು ದಕ್ಷಿಣ ಅಮೆರಿಕಾದ ಪ್ರಮುಖ ವೈದ್ಯಕೀಯ ತಜ್ಞರೊಂದಿಗಿನ ಪಾಲುದಾರಿಕೆ ಗಳ ಮೂಲಕ ವ್ಯಾಪಕ ಅಂತರರಾಷ್ಟ್ರೀಯ ಆರೋಗ್ಯ ಸೇವಾ ಜಾಲವನ್ನು ಒದಗಿಸುತ್ತದೆ. ಇದರಿಂದ ಗ್ರಾಹಕರು ಜಾಗತಿಕ ಮಟ್ಟದ ಆರೋಗ್ಯ ಸೇವಾ ಜಾಲವನ್ನು ಬಳಸಿಕೊಂಡು ವಿವಿಧ ದೇಶಗಳಲ್ಲಿ ವೈದ್ಯಕೀಯ ಸಮಾಲೋಚನೆ ಮತ್ತು ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗಲಿದೆ.
ಜೀವನದ ಯಾವುದೇ ಹಂತದಲ್ಲಿದ್ದರೂ ಸಮಗ್ರ ಆರೋಗ್ಯ ರಕ್ಷಣೆ
ಸಾಂಪ್ರದಾಯಿಕ ಆಸ್ಪತ್ರೆ ದಾಖಲಾತಿ ಆಧಾರಿತ ವಿಮಾ ರಕ್ಷಣೆಯನ್ನು ಮೀರಿ, ತಡೆಗಟ್ಟುವಿಕೆ, ರೋಗನಿರ್ಣಯ, ಚಿಕಿತ್ಸೆ ಮತ್ತು ಚೇತರಿಕೆ ಸೇರಿದಂತೆ ಗ್ರಾಹಕರ ಸಂಪೂರ್ಣ ಆರೋಗ್ಯ ಅಗತ್ಯ ಗಳನ್ನು ಪೂರೈಸುವ ಸಮಗ್ರ ಪ್ರಯೋಜನಗಳೊಂದಿಗೆ ಮೆರಿಡಿಯನ್ ಅನ್ನು ರೂಪಿಸಲಾಗಿದೆ.
ಪ್ರಮುಖ ಪ್ರಯೋಜನಗಳು:
- ಜಾಗತಿಕ ಹೊರರೋಗಿ ವಿಭಾಗದ (OPD) ವಿಮಾ ರಕ್ಷಣೆ: ವಿಶ್ವದಾದ್ಯಂತ ಹೊರರೋಗಿ ವೈದ್ಯಕೀಯ ಸಮಾಲೋಚನೆಗಳಿಗೆ ಅವಕಾಶ. ಪ್ರಮುಖ ಅಂತರರಾಷ್ಟ್ರೀಯ ಆರೋಗ್ಯ ಸೇವಾ ಜಾಲಗಳಲ್ಲಿ ಕ್ಯಾಶ್ಲೆಸ್ ಸೌಲಭ್ಯ ಹಾಗೂ ಇತರ ಕಡೆಗಳಲ್ಲಿ ಸರಳ ಮರುಪಾವತಿ ಪ್ರಕ್ರಿಯೆ ಲಭ್ಯವಿರಲಿದೆ. ಇದರಿಂದ ಗ್ರಾಹಕರು ವಿವಿಧ ದೇಶಗಳಲ್ಲಿ ವೈದ್ಯಕೀಯ ಸಲಹೆ ಮತ್ತು ಸಮಾಲೋಚನೆ ಪಡೆಯಬಹುದು.
- ಸುಧಾರಿತ ಆಧುನಿಕ ಚಿಕಿತ್ಸೆಗಳು: ವೈದ್ಯಕೀಯವಾಗಿ ಅಗತ್ಯವಿರುವ, ಪ್ರಮಾಣೀಕೃತ ತಜ್ಞರಿಂದ ನೀಡಲಾಗುವ ಮತ್ತು ಚಿಕಿತ್ಸೆ ನಡೆಯುವ ದೇಶದಲ್ಲಿ ಅನುಮೋದನೆ ಪಡೆದಿರುವ ನವೀನ ಹಾಗೂ ಸುಧಾರಿತ ಚಿಕಿತ್ಸಾ ವಿಧಾನಗಳಿಗೆ ವಿಮಾ ರಕ್ಷಣೆ ಒದಗಿಸಲಾಗುತ್ತದೆ.
- ವೈದ್ಯಕೀಯ ಬಳಕೆಯ ಸಾಮಗ್ರಿಗಳಿಗೆ ವಿಮಾ ರಕ್ಷಣೆ: ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂದರ್ಭದಲ್ಲಿ ಬಳಸುವ ವೈದ್ಯಕೀಯ ಉಪಭೋಗ್ಯ ಸಾಮಗ್ರಿಗಳ ವೆಚ್ಚವನ್ನು ಈ ಯೋಜನೆ ಒಳಗೊಂಡಿದ್ದು, ಗ್ರಾಹಕರ ಸ್ವಂತ ಜೇಬಿನಿಂದ ಭರಿಸಬೇಕಾದ ವೆಚ್ಚವನ್ನು ಕಡಿಮೆ ಮಾಡಲು ನೆರವಾಗುತ್ತದೆ.
- ಜೀನೋಮಿಕ್ ತಪಾಸಣೆ: ಆನುವಂಶಿಕ ದುರ್ಬಲತೆಗಳು ಹಾಗೂ ಗಂಭೀರ ಆರೋಗ್ಯ ಅಪಾಯಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಲು ಸುಧಾರಿತ ರೋಗನಿರ್ಣಯ ಮತ್ತು ಜೀನೋಮಿಕ್ ತಪಾಸಣೆ ಸೌಲಭ್ಯವನ್ನು ಒದಗಿಸುತ್ತದೆ. ಇದರಿಂದ ಗ್ರಾಹಕರು ತಮ್ಮ ದೀರ್ಘಕಾಲೀನ ಆರೋಗ್ಯ ಮತ್ತು ಕ್ಷೇಮದ ಕುರಿತು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬಹುದು.
- ಮಾತೃತ್ವ ಮತ್ತು ನವಜಾತ ಶಿಶು ಆರೈಕೆ: ಮೂಲ ಯೋಜನೆಯಲ್ಲಿಯೇ ಸಮಗ್ರ ಪ್ರಯೋ ಜನವಾಗಿ ಸೇರಿಸಲಾಗಿರುವ ಈ ಸೌಲಭ್ಯವು ಮಾತೃತ್ವದ ವೆಚ್ಚಗಳ ಜೊತೆಗೆ ನವಜಾತ ಶಿಶುಗಳ ಆರೈಕೆ ಹಾಗೂ ನವಜಾತ ಶಿಶುಗಳ ತೀವ್ರ ನಿಗಾ ಘಟಕದ (NICU) ಅಗತ್ಯಗಳನ್ನೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಳಗೊಂಡಿದೆ.
ಇದಲ್ಲದೆ, ಮೆರಿಡಿಯನ್ ಹಲವು ಹೆಚ್ಚುವರಿ ಪ್ರಯೋಜನಗಳನ್ನು ಸಹ ಒದಗಿಸುತ್ತದೆ:
- ಕೃತಕ ಅಂಗಗಳ ವಿಮಾ ರಕ್ಷಣೆ: ಅನಾರೋಗ್ಯ, ಗಾಯ ಅಥವಾ ಶಸ್ತ್ರಚಿಕಿತ್ಸೆಯ ನಂತರ ವೈದ್ಯಕೀಯವಾಗಿ ಅಗತ್ಯವಿರುವ ಕೃತಕ ಸಾಧನಗಳು ಮತ್ತು ಕೃತಕ ಅಂಗಗಳ ವೆಚ್ಚಕ್ಕೆ ವಿಮಾ ರಕ್ಷಣೆ ಒದಗಿಸಲಾಗುತ್ತದೆ. ಇದು ಚಲನವಲನ ಮತ್ತು ಸ್ವಾವಲಂಬನೆಯನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ.
- ಅಂತರರಾಷ್ಟ್ರೀಯ ಪ್ರಯಾಣ ವಿಮಾ ರಕ್ಷಣೆ: ಉದ್ಯೋಗ ಅಥವಾ ವಿರಾಮದ ಉದ್ದೇಶಕ್ಕಾಗಿ ಪ್ರಯಾಣಿಸುವಾಗ ಎದುರಾಗಬಹುದಾದ ಪ್ರಮುಖ ಪ್ರಯಾಣ ಅಡಚಣೆಗಳು, ವೈದ್ಯಕೀಯ ತುರ್ತು ಪರಿಸ್ಥಿತಿಗಳು ಹಾಗೂ ಅನಿರೀಕ್ಷಿತ ಪ್ರಯಾಣ ಯೋಜನೆಗಳ ಬದಲಾವಣೆಗಳಿಂದ ಉಂಟಾಗುವ ಆರ್ಥಿಕ ನಷ್ಟಗಳಿಗೆ ರಕ್ಷಣೆ ಒದಗಿಸುತ್ತದೆ.
- ದಂತ ಚಿಕಿತ್ಸೆಯ ವಿಮಾ ರಕ್ಷಣೆ: ವರ್ಷಕ್ಕೆ ಎರಡು ದಂತ ತಪಾಸಣೆಗಳವರೆಗೆ ವಿಮಾ ರಕ್ಷಣೆ ಲಭ್ಯವಿರುತ್ತದೆ. ಜೊತೆಗೆ 12 ತಿಂಗಳ ಕಾಯುವಿಕೆ ಅವಧಿಯ ನಂತರ ತಡೆಗಟ್ಟುವ, ಸಾಮಾನ್ಯ ಹಾಗೂ ಆರ್ಥೊಡಾಂಟಿಕ್ ದಂತ ಚಿಕಿತ್ಸೆಗಳಿಗೂ ರಕ್ಷಣೆ ದೊರೆಯಲಿದೆ. ಇದು ದೀರ್ಘಕಾಲೀನ ಬಾಯಿಯ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.
ಮೆರಿಡಿಯನ್ ಮೇಜರ್ ಮೆಡಿಕಲ್, ಸೆಲೆಕ್ಟ್, ಪ್ರೀಮಿಯರ್, ಎಲೈಟ್ ಮತ್ತು ಅಲ್ಟಿಮೇಟ್ ಎಂಬ ಐದು ವಿಭಿನ್ನ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಗ್ರಾಹಕರು ತಮ್ಮ ವೈಯಕ್ತಿಕ ಆರೋಗ್ಯ ಅಗತ್ಯಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಸೂಕ್ತ ವಿಮಾ ರಕ್ಷಣೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಇವುಗಳಲ್ಲಿ ಅತ್ಯುನ್ನತ ಆಯ್ಕೆಯಾಗಿರುವ ‘ಅಲ್ಟಿಮೇಟ್’ ಅನಿಯಮಿತ ವಿಮಾ ಮೊತ್ತವನ್ನು (Unlimited Sum Insured) ಒದಗಿಸುತ್ತದೆ. ಇದರೊಂದಿಗೆ ಆನುವಂಶಿಕ ಕ್ಯಾನ್ಸರ್ ಅಪಾಯಗಳನ್ನು ಗುರುತಿಸಲು DNA ಪರೀಕ್ಷೆಯನ್ನು ಒಳಗೊಂಡಿರುವ ‘ಜೆನೆಟಿಕ್ ಕ್ಯಾನ್ಸರ್ ಸ್ಕ್ರೀನಿಂಗ್’ ಸೇರಿದಂತೆ ವಿಶೇಷ ಪ್ರಯೋಜನಗಳು ಲಭ್ಯವಿರುತ್ತವೆ. ಇದರಲ್ಲಿ BRCA1/2 ಪರೀಕ್ಷೆಯ ಜೊತೆಗೆ ಪರೀಕ್ಷೆಗೂ ಮುನ್ನ ಮತ್ತು ನಂತರದ ಸಮಾಲೋಚನೆಗಳೂ ಸೇರಿವೆ.
ಮೆರಿಡಿಯನ್ ಮೂಲಕ ನಿವಾ ಬೂಪಾ ಮತ್ತು ಬೂಪಾ ಗ್ಲೋಬಲ್ ಜಾಗತಿಕ ಮಟ್ಟದ ಸಮಗ್ರ ವಿಮಾ ರಕ್ಷಣೆ, ಪ್ರಮುಖ ವೈದ್ಯಕೀಯ ತಜ್ಞರ ಸೇವೆ ಹಾಗೂ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ದಿನದ 24 ಗಂಟೆಯೂ ಲಭ್ಯವಿರುವ ನೆರವನ್ನು ಒಂದೇ ಸಮಗ್ರ ಯೋಜನೆಯಡಿ ಒದಗಿಸುವ ಮೂಲಕ ಅಂತರರಾಷ್ಟ್ರೀಯ ಆರೋಗ್ಯ ವಿಮಾ ಅನುಭವವನ್ನು ಮರು ವ್ಯಾಖ್ಯಾನಿಸುವ ಗುರಿ ಹೊಂದಿವೆ. ದೇಶಗಳು ಮತ್ತು ಖಂಡಗಳನ್ನು ಮೀರಿ ಜೀವನ ನಡೆಸುವ ವ್ಯಕ್ತಿಗಳು ಹಾಗೂ ಕುಟುಂಬಗಳಿಗೆ, ಗುಣಮಟ್ಟದ ಆರೋಗ್ಯ ಸೇವೆ ಯಾವಾಗಲೂ ಕೈಗೆಟುಕುವಂತಿದೆ ಎಂಬ ವಿಶ್ವಾಸವನ್ನು ಮೆರಿಡಿಯನ್ ಒದಗಿಸುತ್ತದೆ.
ಈ ಬಿಡುಗಡೆಯ ಕುರಿತು ಮಾತನಾಡಿದ ನಿವಾ ಬೂಪಾ ಹೆಲ್ತ್ ಇನ್ಶೂರೆನ್ಸ್ನ ಡಿಜಿಟಲ್ ಬಿಸಿನೆಸ್ ಯುನಿಟ್ ನಿರ್ದೇಶಕ ಮತ್ತು ಮುಖ್ಯ ಮಾರುಕಟ್ಟೆ ಅಧಿಕಾರಿ ನಿಮಿಷ್ ಅಗರ್ವಾಲ್ ಅವರು, “ಇಂದಿನ ದಿನಗಳಲ್ಲಿ ಆರೋಗ್ಯ ಸೇವೆಗಳು ಭೌಗೋಳಿಕ ಗಡಿಗಳಿಗೆ ಸೀಮಿತವಾಗಿಲ್ಲ. ವ್ಯಕ್ತಿಗಳು ಮತ್ತು ಕುಟುಂಬಗಳು ಜಾಗತಿಕ ದೃಷ್ಟಿಕೋನವನ್ನು ಹೊಂದಿರುವಂತೆ, ಆರೋಗ್ಯ ವಿಮೆಯ ಕುರಿತಾದ ಅವರ ನಿರೀಕ್ಷೆಗಳೂ ಬದಲಾಗುತ್ತಿವೆ. ಆಸ್ಪತ್ರೆ ದಾಖಲಾತಿಯ ಸಂದರ್ಭದಲ್ಲಿ ಆರ್ಥಿಕ ರಕ್ಷಣೆ ಪಡೆಯುವುದನ್ನು ಮೀರಿ, ಗಡಿಗಳನ್ನು ಮೀರಿ ಗುಣಮಟ್ಟದ ಆರೋಗ್ಯ ಸೇವೆ, ತಡೆಗಟ್ಟುವ ಆರೋಗ್ಯ ಮತ್ತು ವೈಯಕ್ತಿಕ ನೆರವನ್ನು ಸುಲಭವಾಗಿ ಪಡೆಯುವ ನಿರೀಕ್ಷೆ ಹೆಚ್ಚಾಗಿದೆ.
ಈ ಹೊಸ ಯೋಜನೆಯ ಮೂಲಕ ಬದಲಾಗುತ್ತಿರುವ ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿಟ್ಟು ಕೊಂಡು ರೂಪಿಸಲಾದ ಸಮಗ್ರ ಪ್ರಯೋಜನಗಳನ್ನು ಒಟ್ಟುಗೂಡಿಸಿದ್ದೇವೆ. ಆರೋಗ್ಯ ಸೇವೆಗಳನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ, ಸಮಗ್ರವಾಗಿ ಮತ್ತು ಗ್ರಾಹಕ ಕೇಂದ್ರಿತವಾಗಿ ರೂಪಿಸುವ ನಮ್ಮ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ. ಗ್ರಾಹಕರು ತಮ್ಮ ಜೀವನಶೈಲಿ ಮತ್ತು ಆಕಾಂಕ್ಷೆಗಳಿಗೆ ಸೂಕ್ತವಾಗಿ ಹೊಂದಿಕೆಯಾಗುವ ಅಂತರರಾಷ್ಟ್ರೀಯ ಆರೋಗ್ಯ ವಿಮಾ ರಕ್ಷಣೆಯ ಮಟ್ಟವನ್ನು ಆಯ್ಕೆ ಮಾಡಿಕೊಳ್ಳಲು ಅಗತ್ಯವಿರುವ ಸ್ವಾತಂತ್ರ್ಯವನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ,” ಎಂದು ಹೇಳಿದರು.
ಬೂಪಾ ಗ್ಲೋಬಲ್ನ ಪಾಲುದಾರಿಕೆ ಮತ್ತು ಹಣಕಾಸು ನಿರ್ದೇಶಕ ನಿಕ್ ಬ್ರೌನ್ ಅವರು ಮಾತ ನಾಡಿ, “ನಿಜವಾದ ಸಮಗ್ರ ಅಂತರರಾಷ್ಟ್ರೀಯ ಆರೋಗ್ಯ ಸೇವೆ ಎಂದರೆ ಸಮಸ್ಯೆ ಎದುರಾದಾಗ ಮಾತ್ರ ವಿಮಾ ರಕ್ಷಣೆ ಒದಗಿಸುವುದಲ್ಲ. ಜನರು ಆರೋಗ್ಯವಾಗಿರಲು ನೆರವಾಗುವುದು, ಜೀವನದ ಪ್ರತಿಯೊಂದು ಹಂತದಲ್ಲಿಯೂ ಅವರಿಗೆ ಬೆಂಬಲ ನೀಡುವುದು ಹಾಗೂ ಅವರು ವಿಶ್ವದ ಯಾವುದೇ ಭಾಗದಲ್ಲಿದ್ದರೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯೊಂದಿಗೆ ಸಂಪರ್ಕ ಕಲ್ಪಿಸುವುದಾಗಿದೆ. ಮೆರಿಡಿಯನ್, ಬೂಪಾ ಗ್ಲೋಬಲ್ನ ಅಂತರರಾಷ್ಟ್ರೀಯ ಪರಿಣತಿಯನ್ನು ಮತ್ತು ಭಾರತದಲ್ಲಿನ ಗ್ರಾಹಕರ ಅಗತ್ಯಗಳ ಕುರಿತು ನಿವಾ ಬೂಪಾ ಹೊಂದಿರುವ ಆಳವಾದ ತಿಳುವಳಿಕೆಯನ್ನು ಒಗ್ಗೂಡಿಸುತ್ತದೆ. ಇದರಿಂದ ಜಾಗತಿಕ ದೃಷ್ಟಿಕೋನ ಹೊಂದಿರುವ ವ್ಯಕ್ತಿಗಳು ಮತ್ತು ಕುಟುಂಬಗಳು ತಮ್ಮ ಜೀವನದ ವಿವಿಧ ಹಂತಗಳಲ್ಲಿ ತಮ್ಮೊಂದಿಗೆ ಸಾಗುವ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ,” ಎಂದು ತಿಳಿಸಿದರು.
ಮೆರಿಡಿಯನ್ ಬಿಡುಗಡೆಯೊಂದಿಗೆ ನಿವಾ ಬೂಪಾ ಸಾಂಪ್ರದಾಯಿಕ ವಿಮಾ ಗಡಿಗಳನ್ನು ಮೀರಿ ಗ್ರಾಹಕ ಕೇಂದ್ರಿತ ಆರೋಗ್ಯ ಸೇವಾ ಪರಿಹಾರಗಳನ್ನು ಬಲಪಡಿಸುವ ತನ್ನ ಪ್ರಯತ್ನವನ್ನು ಮುಂದುವರಿಸಿದೆ. ಸಮಗ್ರ ವೈದ್ಯಕೀಯ ರಕ್ಷಣೆ, ಅಂತರರಾಷ್ಟ್ರೀಯ ಆರೋಗ್ಯ ಸೇವೆಗಳ ಲಭ್ಯತೆ, ತಡೆಗಟ್ಟುವ ಆರೋಗ್ಯ ಮತ್ತು ವಿಭಿನ್ನ ಸದಸ್ಯತ್ವ ಸೇವಾ ಅನುಭವಗಳನ್ನು ಒಗ್ಗೂಡಿಸುವ ಮೂಲಕ, ಹೆಚ್ಚುತ್ತಿರುವ ಜಾಗತಿಕ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಈ ಯೋಜನೆ ಉದ್ದೇಶಿಸಿದೆ. ತಮ್ಮ ಆರೋಗ್ಯ ವಿಮಾ ರಕ್ಷಣೆಯೂ ತಮ್ಮೊಂದಿಗೆ ವಿಶ್ವದ ಯಾವುದೇ ಭಾಗಕ್ಕೆ ಸಾಗಲಿದೆ ಎಂಬ ವಿಶ್ವಾಸದೊಂದಿಗೆ ವ್ಯಕ್ತಿಗಳು ಮತ್ತು ಕುಟುಂಬಗಳು ತಮ್ಮ ಮಹತ್ವಾಕಾಂಕ್ಷೆ ಗಳನ್ನು ಸಾಕಾರಗೊಳಿಸಲು ಇದು ನೆರವಾಗಲಿದೆ.
ನಿವಾ ಬೂಪಾ ಕುರಿತು: ನಿವಾ ಬೂಪಾ ಹೆಲ್ತ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲ್ಪಟ್ಟಿರುವ ಸಾರ್ವಜನಿಕ ಕಂಪನಿಯಾಗಿದೆ. ಪ್ರತಿಯೊಬ್ಬ ಭಾರತೀಯ ನಿಗೂ ಅತ್ಯುತ್ತಮ ಆರೋಗ್ಯ ಸೇವೆಗಳನ್ನು ಪಡೆಯುವ ವಿಶ್ವಾಸವನ್ನು ಒದಗಿಸುವುದು ಕಂಪನಿಯ ಉದ್ದೇಶವಾಗಿದೆ. ತನ್ನ ಗ್ರಾಹಕರ ಜೀವನದಲ್ಲಿ ಸಕ್ರಿಯ ಸಹಭಾಗಿಯಾಗಿ, ಯಾವುದೇ ನಿರ್ಬಂಧಗಳಿಲ್ಲದೆ ಜೀವನವನ್ನು ನಡೆಸಲು ಅವರಿಗೆ ನೆರವಾಗುವ ಗುರಿಯನ್ನು ಕಂಪನಿ ಹೊಂದಿದೆ. ಇದರ ಪ್ರತಿಬಿಂಬವೇ ಕಂಪನಿಯ ಬ್ರ್ಯಾಂಡ್ ಪರಿಕಲ್ಪನೆಯಾದ ‘ಜಿಂದಗಿ ಕೋ ಕ್ಲೇಮ್ ಕರ್ ಲೇ’.
ಸೆಪ್ಟೆಂಬರ್ 30, 2026ರ ವೇಳೆಗೆ ನಿವಾ ಬೂಪಾ ಭಾರತದಾದ್ಯಂತ 225ಕ್ಕೂ ಹೆಚ್ಚು ಭೌತಿಕ ಶಾಖೆಗಳನ್ನು ಹೊಂದಿತ್ತು. ಇದರ ಜೊತೆಗೆ ಸುಮಾರು 2.7 ಲಕ್ಷ ಏಜೆಂಟ್ಗಳು, 620ಕ್ಕೂ ಹೆಚ್ಚು ಬ್ರೋಕರ್ಗಳು ಹಾಗೂ 135ಕ್ಕೂ ಹೆಚ್ಚು ಬ್ಯಾಂಕಾಸುರನ್ಸ್ ಮತ್ತು ಇತರ ಕಾರ್ಪೊರೇಟ್ ಏಜೆನ್ಸಿ ಪಾಲುದಾರರನ್ನು ಒಳಗೊಂಡ ತನ್ನ ಪಾಲುದಾರರ ಜಾಲದ ಮೂಲಕವೂ ಆರೋಗ್ಯ ವಿಮಾ ಸೇವೆಗಳನ್ನು ಒದಗಿಸುತ್ತಿದೆ.
ಪ್ರಸ್ತುತ ಕಂಪನಿಯು ಸುಮಾರು 27 ಮಿಲಿಯನ್ ಜನರಿಗೆ ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸುತ್ತಿದೆ. ತನ್ನ ಆಸ್ಪತ್ರೆಗಳ ಜಾಲದಲ್ಲಿ 16,000ಕ್ಕೂ ಹೆಚ್ಚು ವೈದ್ಯಕೀಯ ಸೇವಾ ಪೂರೈಕೆ ದಾರರು, ವಾರ್ಷಿಕ ಆರೋಗ್ಯ ತಪಾಸಣಾ ಕೇಂದ್ರಗಳು, ಪಾಲಿಸಿಗೂ ಮುನ್ನದ ವೈದ್ಯಕೀಯ ತಪಾಸಣಾ ಕೇಂದ್ರಗಳು ಸೇರಿದಂತೆ ಹಲವು ಆರೋಗ್ಯ ಸೇವಾ ಸಂಸ್ಥೆಗಳನ್ನು ನೋಂದಾಯಿಸಿ ಕೊಂಡಿದೆ.
ಕಳೆದ ಐದು ಹಣಕಾಸು ವರ್ಷಗಳಲ್ಲಿ ನಿವಾ ಬೂಪಾ ನಿರಂತರವಾಗಿ ಶೇ. 90ಕ್ಕೂ ಅಧಿಕ ಕ್ಲೇಮ್ ಸೆಟಲ್ಮೆಂಟ್ ಅನುಪಾತವನ್ನು ಕಾಯ್ದುಕೊಂಡಿದೆ. FY26ರ ಅಂತ್ಯಕ್ಕೆ ಕಂಪನಿಯ ಕ್ಲೇಮ್ ಸೆಟಲ್ಮೆಂಟ್ ಅನುಪಾತ ಶೇ. 94.4ರಷ್ಟಿತ್ತು. 11,200 ಉದ್ಯೋಗಿಗಳನ್ನು ಹೊಂದಿರುವ ಕಂಪನಿಯು ಸತತ ಆರು ಬಾರಿ ‘ಗ್ರೇಟ್ ಪ್ಲೇಸ್ ಟು ವರ್ಕ್’ ಪ್ರಮಾಣೀಕರಣವನ್ನು ಪಡೆದು ಕೊಂಡಿದೆ.