ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Health Tips: ಎಳನೀರು ಎಲ್ಲರಿಗೂ ಒಳಿತಲ್ಲ: ಈ ಆರೋಗ್ಯ ಸಮಸ್ಯೆ ಇದ್ದವರು ಅಪ್ಪಿ ತಪ್ಪಿಯೂ ಸೇವಿಸಬೇಡಿ

Coconut Water: ಆರೋಗ್ಯ ರಕ್ಷಣೆ ಎಂದಾಗ ಜನರು ಎಳನೀರು ಸೇವನೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ.ಇದು ಅತ್ಯಂತ ಕಡಿಮೆ ಕ್ಯಾಲೋರಿ ಹೊಂದಿದ್ದು ದೇಹಕ್ಕೆ ಬೇಕಾದ ಅಗತ್ಯ ಪೋಷ ಕಾಂಶಗಳನ್ನು ಒದಗಿಸುತ್ತವೆ. ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಸಮೃದ್ಧವಾಗಿರುವ ಎಳನೀರು ಜೀರ್ಣಕ್ರಿಯೆ, ಹೃದಯದ ಆರೋಗ್ಯ ,ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಹೀಗೆ ಹಲವು ಆರೋಗ್ಯ ಲಾಭವನ್ನು ನೀಡುತ್ತದೆ‌.

ಸಂಗ್ರಹ ಚಿತ್ರ

ಬೆಂಗಳೂರು ಜು.26: ಬೇಸಿಗೆ ಇರಲಿ, ಅಥವಾ ಮಳೆಗಾಲವೇ ಇರಲಿ ಆರೋಗ್ಯ ರಕ್ಷಣೆ ಎಂದಾಗ ಜನರು ಎಳನೀರು ಸೇವನೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಇದು ಅತ್ಯಂತ ಕಡಿಮೆ ಕ್ಯಾಲೋರಿ ಹೊಂದಿದ್ದು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಸಮೃದ್ಧವಾಗಿರುವ ಎಳನೀರು ಜೀರ್ಣಕ್ರಿಯೆ, ಹೃದಯದ ಆರೋಗ್ಯ ,ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಹೀಗೆ ಹಲವು ಆರೋಗ್ಯ ಲಾಭವನ್ನು ನೀಡುತ್ತದೆ‌. ಆದರೆ ಇತ್ತೀಚಿನ ಕೆಲವು ತಜ್ಞರ ಪ್ರಕಾರ ಎಳನೀರು (Coconut Water) ಆರೋಗ್ಯಕ್ಕೆ ಒಳ್ಳೆಯದಲ್ಲ, ಈ ಸಮಸ್ಯೆ ಇದ್ದವರು ಕುಡಿಯಲೇಬಾರದು ಎಂದು ಸಲಹೆ ನೀಡಿದ್ದಾರೆ. ಹಾಗಿದ್ರೆ ಏಳನೀರಿನ ಸೇವನೆ ಯಾರಿಗೆ ಒಳಿತಲ್ಲ?

ಮಕ್ಕಳಿಂದ ವಯಸ್ಕರವರೆಗೆ ಎಲ್ಲರೂ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತೆಂಗಿನ ನೀರನ್ನು ಕುಡಿಯಲು ಹೆಚ್ಚು ಇಷ್ಟ ಪಡುತ್ತಾರೆ. ಆದರೆ ಇದು ಎಲ್ಲರಿಗೂ ಪ್ರಯೋಜನಕಾರಿಯಲ್ಲ ಎಂದು ನಿಮಗೆ ಗೊತ್ತಿದೆಯೇ?ಮೂತ್ರಪಿಂಡ ಕಾಯಿಲೆ ಇರುವ ಜನರು ಅದರಲ್ಲಿರುವ ಹೆಚ್ಚಿನ ಪೊಟ್ಯಾಸಿ ಯಮ್ ಅಂಶವನ್ನು ತಪ್ಪಿಸಬೇಕು. ಅದೇ ರೀತಿ, ಕಡಿಮೆ ರಕ್ತದೊತ್ತಡ ಮತ್ತು ಮಧುಮೇಹ ಹೊಂದಿರುವ ರೋಗಿಗಳು ಕೂಡ ಇದನ್ನು ತಪ್ಪಿಸಬೇಕಾಗುತ್ತದೆ.

​ ಕಿಡ್ನಿ ಕಾಯಿಲೆ ಇರುವವರು ಇದನ್ನು ತಪ್ಪಿಸಬೇಕು:

ತೆಂಗಿನ ನೀರಿನಲ್ಲಿ ಪೊಟ್ಯಾಸಿಯಮ್ ಪ್ರಮಾಣ ತುಂಬಾ ಹೆಚ್ಚಾಗಿರುತ್ತದೆ. ಹಾಗಾಗಿ ಮೂತ್ರಪಿಂಡ ಕಾಯಿಲೆ ಇದ್ದರೆ, ನಿಮ್ಮ ಮೂತ್ರಪಿಂಡಗಳು ಪೊಟ್ಯಾಸಿಯಮ್ ಪ್ರಮಾಣವನ್ನು ಫಿಲ್ಟರ್ ಮಾಡಲು ಸಾಧ್ಯವಾಗುವುದಿಲ್ಲ. ಇದು ಹೃದಯದ ಬಡಿತದಲ್ಲಿ ಏರುಪೇರಾಗಿ ಹೃದಯದ ಖಾಯಿಲೆಗೆ ಕಾರಣವಾಗಬಹುದು‌

ರಕ್ತದೊತ್ತಡದ ಔಷಧಿಯನ್ನು ತೆಗೆದುಕೊಳ್ಳುವ ಜನರು:

ತೆಂಗಿನ ನೀರು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಈಗಾಗಲೇ ರಕ್ತದೊತ್ತಡಕ್ಕೆ ಔಷಧ ತೆಗೆದುಕೊಳ್ಳುತ್ತಿದ್ದರೆ, ತೆಂಗಿನ ನೀರು ಕುಡಿಯುವುದರಿಂದ ಲೋ ಬಿಪಿಗೆ ಕಾರಣವಾಗಬಹುದು‌, ಇದು ತಲೆತಿರುಗುವಿಕೆ ಅಥವಾ ಮೂರ್ಛೆ ಹೋಗುವಿಕೆ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು.

Health Tips: 40 ವರ್ಷ ದಾಟಿದ ನಂತರವೂ ಫಿಟ್ ಆಗಿರಲು ಈ ಆಹಾರ ಸೇವಿಸಿ

ಅಲರ್ಜಿ ಇರುವ ಜನರು:

ಕೆಲವರಿಗೆ ಎಳನೀರು ಅಲರ್ಜಿ ಉಂಟುಮಾಡಬಹುದು‌. ಇದರಿಂದ ಚರ್ಮದ ದದ್ದುಗಳು, ತುರಿಕೆ ಹಾಗೂ ಉಸಿರಾಟದ ಸಮಸ್ಯೆಗಳು ಕಾಡಬಹುದು.ಅಂತಹ ಸಂದರ್ಭದಲ್ಲಿ ಹೊಟ್ಟೆಯ ಸಮಸ್ಯೆಗಳು ಅಥವಾ ಅನಾಫಿಲ್ಯಾಕ್ಸಿಸ್ ಅನ್ನು ಅನುಭವಿ ಸಬಹುದು. ಒಂದು ವೇಳೆ ನಿಮಗೆ ಎಳನೀರಿನ ಅಲರ್ಜಿ ಇದ್ದಲ್ಲಿ ಕುಡಿಯುವುದನ್ನು ತಪ್ಪಿಸಿ.

ಮಧುಮೇಹ ಇದ್ದವರು ತಪ್ಪಿಸಿ:

ತೆಂಗಿನ ನೀರಿನಲ್ಲಿ ನೈಸರ್ಗಿಕ ಸಕ್ಕರೆ ಇರುತ್ತದೆ. ನೀವು ಮಧುಮೇಹ ಹೊಂದಿದ್ದರೆ ಅಥವಾ ಇನ್ಸುಲಿನ್ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಹೆಚ್ಚು ತೆಂಗಿನ ನೀರು ಕುಡಿಯುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಜಾಸ್ತಿಯಾಗುತ್ತವೆ. ಹಾಗಾಗಿ ಮಧುಮೇಹ ಇದ್ದವರು ಇದನ್ನು ತಪ್ಪಿಸಿ.

ಹೆಚ್ಚಿನ ಸೋಡಿಯಂ ಅಗತ್ಯವಿರುವ ಕ್ರೀಡಾಪಟುಗಳು:

ವ್ಯಾಯಾಯ ಅಥವಾ ಯಾವುದೇ ಕ್ರೀಡೆ ನಂತರ ಕ್ರೀಡಾಪಟುಗಳಿಗೆ ಜಲಸಂಚಯನ ಮುಖ್ಯ, ಆದರೆ ಏಳನೀರಿನಲ್ಲಿ ಪೊಟ್ಯಾಸಿಯಮ್ ಅಧಿಕ ಮತ್ತು ಸೋಡಿಯಂ ಕಡಿಮೆ ಇರುತ್ತದೆ. ಹಾಗಾಗಿ ಅತಿಯಾದ ಬೆವರುವುದು ದೇಹದಿಂದ ಸೋಡಿಯಂ ನಷ್ಟಕ್ಕೆ ಕಾರಣವಾಗಬಹುದು.