ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಷ್ಟೊಂದು ಉಪ್ಪುಗಳ ಪೈಕಿ ಅಯೋಡಿನ್‌ಗಾಗಿ ಯಾವುದು ಉತ್ತಮ? ಪ್ರತಿದಿನ ಎಷ್ಟು ಸೇವಿಸಬೇಕು?

Types of Salts: ಮಾರುಕಟ್ಟೆಯಲ್ಲಿ ವಿವಿಧ ಥರದ ಉಪ್ಪುಗಳು ಕಾಣ ಸಿಗುತ್ತವೆ. ಉಪ್ಪು ಆಹಾರಕ್ಕೆ ರುಚಿ ಹೆಚ್ಚಿಸುವುಸಷ್ಟೇ ಅಲ್ಲದೆ ಆಯೋಡಿನ್‌ನ ಮುಖ್ಯ ಮೂಲವಾಗಿಯೂ ಪ್ರಾಮುಖ್ಯತೆ ಪಡೆದುಕೊಂಡಿದೆ. ಹಾಗಾದರೆ ದಿನ ನಿತ್ಯ ಬಳಕೆಗೆ ಯಾವ ಉಪ್ಪು ಮುಖ್ಯ?

ಚಾಟ್‌ಜಿಪಿಟಿ ಚಿತ್ರ

ಬೆಂಗಳೂರು: ಉಪ್ಪು ತಿಂದವ ನೀರು ಕುಡಿಯಲೇಬೇಕೆಂಬ ಮಾತನ್ನು ಕೇಳಿರಬಹುದು. ಆದರೆ ಯಾವ ಉಪ್ಪು ತಿನ್ನಬೇಕು? ಟೇಬಲ್‌ ಸಾಲ್ಟ್‌, ಪಿಂಕ್‌ ಸಾಲ್ಟ್‌, ರಾಕ್‌ ಸಾಲ್ಟ್‌ ಎನ್ನುತ್ತಾ ಹಲವು ಬಗೆಯ ಉಪ್ಪುಗಳು ಮಾರುಕಟ್ಟೆಯಲ್ಲಿ ದೊರೆಯುವಾಗ ಯಾವುದನ್ನು ತಿಂದು ನೀರು ಕುಡಿಯುವುದು? ಅದರಲ್ಲೂ ಮುಖ್ಯವಾಗಿ ನಮ್ಮ ದೇಹಕ್ಕೆ ಬೇಕಾದ ಅಯೋಡಿನ್‌ ಅಂಶಕ್ಕಾಗಿ ಹೆಚ್ಚಿನವರು ಪ್ರಧಾನವಾಗಿ ಉಪ್ಪನ್ನೇ ನೆಚ್ಚಿಕೊಂಡಿರುವುದರಿಂದ, ಥರಾವರಿ ಉಪ್ಪುಗಳಲ್ಲಿ ಯಾವುದು ನಮಗೆ ಹಿತ? ಇಲ್ಲಿದೆ ಮಾಹಿತಿ.

ನಮಗೇಕೆ ಬೇಕು?: ಅಯೋಡಿನ್‌ ಅಂಶ ನಮಗೇಕೆ ಬೇಕು ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ಮೊದಲಿಗೆ ತಿಳಿಯಬೇಕಾದ್ದು, ಅಯೋಡಿನ್‌ ಅಂಶವನ್ನು ತಯಾರಿಸಲು ನಮ್ಮ ದೇಹಕ್ಕೆ ಸಾಧ್ಯವಿಲ್ಲ; ಅದನ್ನು ಆಹಾರದಿಂದಲೇ ಪೂರೈಸಬೇಕು. ನಮಗಿದು ಏಕೆ ಬೇಕೆಂದರೆ- ಟಿ3 ಮತ್ತು ಟಿ4 (T3, T4) ಎಂಬ ಎರಡು ಹಾರ್ಮೋನುಗಳು ನಮ್ಮ ದೇಹದ ಚಯಾಪಚಯದ ವೇಗವನ್ನು ನಿರ್ಧರಿಸಿ, ದೇಹದ ಉಷ್ಣತೆಯನ್ನು ಸ್ಥಿರಗೊಳಿಸಿ, ಅಂಗಾಂಗಗಳ ಕೆಲಸಗಳಿಗೆ ನೆರವಾಗುತ್ತವೆ. ಇವಿಷ್ಟೂ ವಯಸ್ಕರಲ್ಲಾದರೆ, ಮಕ್ಕಳಲ್ಲಿ ದೇಹ, ಮೆದುಳು ಮತ್ತು ನರಗಳ ಬೆಳವಣಿಗೆಗೆ ನೆರವಾಗುತ್ತವೆ. ಈ ಹಾರ್ಮೋನುಗಳನ್ನು ತಯಾರಿಸುವುದು ನಮ್ಮ ಥೈರಾಯ್ಡ್‌ ಗ್ರಂಥಿ. ಈ ಗ್ರಂಥಿಗೆ ಕೆಲಸ ಮಾಡುವುದಕ್ಕೆ ಅಯೋಡಿನ್‌ ಬೇಕು. ಹಾಗಾಗಿ ಅಯೋಡಿನ್‌ ಕಡಿಮೆಯಾದರೆ ಥೈರಾಯ್ಡ್‌ ಸ್ರವಿಸುವುದು ಕಡಿಮೆಯಾಗುತ್ತದೆ, T3, T4 ಸಹ ಕಡಿಮೆಯಾಗುತ್ತದೆ. ಆಗ ಥೈರಾಯ್ಡ್‌ ಮಾತ್ರೆ ನುಂಗುವುದು ಅನಿವಾರ್ಯವಾಗುತ್ತದೆ.

Crystal Salt

ಟೇಬಲ್‌ ಸಾಲ್ಟ್‌: ನಾವು ಖರೀದಿಸುವ ಮಾಮೂಲಿ ಉಪ್ಪಿನ ಪೊಟ್ಟಣದ ಮೇಲೆ ʻಅಯೋಡೈಸ್ಡ್‌ʼ ಎನ್ನುವ ಹಣೆಪಟ್ಟಿ ಇದೆಯೆಂದರೆ, ಇದಕ್ಕಿಂತ ಸಮರ್ಪಕವಾದ ಅಯೋಡಿನ್‌ ಮೂಲ ಇನ್ನೊಂದಿಲ್ಲ. ಅರ್ಥಾತ್‌, ಮಾಮೂಲಿ ಉಪ್ಪಿಗೆ ಸಣ್ಣ ಪ್ರಮಾಣದಲ್ಲಿ ಅಯೋಡಿನ್‌ ಅಂಶವನ್ನು ಸೇರಿಸಲಾಗಿದೆ. ಇದನ್ನು ನಿತ್ಯವೂ ಸೇವಿಸುವಾಗ ದೇಹಕ್ಕೆ ಬೇಕಾದಷ್ಟು ಅಯೋಡಿನ್‌ ದೊರೆಯುತ್ತದೆ. ಹಾಗಾಗಿ ಉಪ್ಪು ಖರೀದಿಸುವಾಗ ಅದರ ಮೇಲೆ ಅಯೋಡೈಸ್ಡ್‌ ಎನ್ನುವ ಉಲ್ಲೇಖವಿದೆಯೇ ಎನ್ನುವುದನ್ನು ಪರಿಶೀಲಿಸಬೇಕು.

ಜಿರಳೆ ಕಾಟ ಎಂದು ನ್ಯಾಫ್ತಲೀನ್‌ ಗುಳಿಗೆ ಬಳಸ್ತೀರಾ? ಈ ವಿಚಾರ ನಿಮಗೆ ತಿಳಿದಿರಲೇ ಬೇಕು

ಪಿಂಕ್‌ ಸಾಲ್ಟ್‌: ಹಿಮಾಲಯನ್‌ ಸಾಲ್ಟ್‌ ಎಂದೆಲ್ಲಾ ಕರೆಸಿಕೊಳ್ಳುವ ಇದಕ್ಕಿರುವ ತೆಳು ಗುಲಾಬಿ ಬಣ್ಣಕ್ಕೆ ಕಾರಣ, ಇದರಲ್ಲಿರುವ ನೈಸರ್ಗಿಕ ಖನಿಜಗಳು. ಆದರೆ ಈ ಖನಿಜಗಳ ಪೈಕಿ ಪ್ರಾಕೃತಿಕವಾಗಿ ಅಯೋಡಿನ್‌ ಇರುವ ಸಾಧ್ಯತೆ ಕಡಿಮೆ. ಈ ಉಪ್ಪಿನ ಪ್ಯಾಕೆಟ್‌ ಮೇಲೆ ಅಯೋಡೈಸ್ಡ್‌ ಎನ್ನುವ ಉಲ್ಲೇಖವಿದ್ದರೆ, ಅದು ಉತ್ತಮ ಆಯ್ಕೆ. ಹಾಗಿಲ್ಲದಿದ್ದರೆ, ಈ ಉಪ್ಪಿನ ಮೂಲಕ ಅಯೋಡಿನ್‌ ದೇಹಕ್ಕೆ ದೊರೆಯುವ ಸಾಧ್ಯತೆ ಕಡಿಮೆ. ಇದ್ದರೂ ಸಮರ್ಕಪವಾಗಿ ಇರುವುದಿಲ್ಲ.

ರಾಕ್‌ ಸಾಲ್ಟ್‌: ಹಲವಾರು ಬಗೆಯ ವ್ರತ-ಕತೆಗಳಲ್ಲಿ ಈ ಉಪ್ಪಿನ ಬಳಕೆಯಿದೆ. ಕಾರಣ, ಈ ಉಪ್ಪು ಅತಿ ಕಡಿಮೆ ಸಂಸ್ಕರಿತ. ಆದರೆ ಇದರಲ್ಲಿಯೂ ನಿಗದಿತ ಪ್ರಮಾಣದ ನೈಸರ್ಗಿಕ ಅಯೋಡಿನ್‌ ಇರುವುದೆಂದು ಹೇಳಲು ಸಾಧ್ಯವಿಲ್ಲ. ಈ ಉಪ್ಪನ್ನು ಯಾವ ಪ್ರದೇಶದಿಂದ ತೆಗೆಯಲಾಗಿದೆ ಎನ್ನುವುದರ ಮೇಲೂ ಇದರಲ್ಲಿನ ಖನಿಜಾಂಶಗಳು ಭಿನ್ನವಾಗುತ್ತವೆ. ಹಾಗಾಗಿ ಈ ಉಪ್ಪಿನ ಪೊಟ್ಟಣದ ಮೇಲೆ ಅಯೋಡೈಸ್ಡ್‌ ಎನ್ನುವ ಹಣೆಬರಹವಿದ್ದರೆ ಮಾತ್ರವೇ ಇದನ್ನು ಅಯೋಡಿನ್‌ಗಾಗಿ ನೆಚ್ಚಿಕೊಳ್ಳಬಹುದು.

ಎಷ್ಟು ಬೇಕು?: ದಿನವೊಂದಕ್ಕೆ ಸಾಮಾನ್ಯ ವಯಸ್ಕರಿಗೆ ಎಷ್ಟು ಅಯೋಡಿನ್‌ ಬೇಕು? 150 ಮೈಕ್ರೋ ಗ್ರಾಂ ಅಯೋಡಿನ್‌ ಅಂಶ ಬೇಕು ಎನ್ನುತ್ತವೆ ವೈದ್ಯಕೀಯ ಸಂಶೋಧನೆಗಳು. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಇದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೇಕು. ಹಾಲು, ಮೊಸರು, ಮೊಟ್ಟೆ, ಮೀನು ಮುಂತಾದ ಆಹಾರಗಳ ಮೂಲಕವೂ ಅಲ್ಪ ಪ್ರಮಾಣದಲ್ಲಿ ಅಯೋಡಿನ್‌ ದೊರೆಯುತ್ತದೆ

Ramesh Ballamoole

View all posts by this author