ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೆಚ್ಚುತ್ತಿರುವ ಸೆಕೆ; ಕೂಲರ್ ಅಥವಾ ಎಸಿ ಆರೋಗ್ಯಕ್ಕೆ ಯಾವುದು ಉತ್ತಮ ?

ದೇಶಾದ್ಯಂತ ಬೇಸಗೆಯ ತೀವ್ರತೆ ಹೆಚ್ಚಾಗಿದೆ. ಅದರಲ್ಲೂ ಬಿಸಿಲಿಗೆ ಮೈಯೊಡ್ಡುವುದು ತೀವ್ರ ಕಷ್ಟಕರವಾಗಿದೆ. ಮನೆಯಲ್ಲಿ, ಕಚೇರಿಯಲ್ಲಿ ಆರಾಮವಾಗಿರಲು ಫ್ಯಾನ್ ಗಾಳಿ ಹಿತವೆನಿಸುತ್ತಿಲ್ಲ. ಹೀಗಾಗಿ ಎಸಿ ಅಥವಾ ಕೂಲರ್ ಬಗ್ಗೆಯೇ ಎಲ್ಲರ ಚಿಂತೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದೇ ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ? ಇಲ್ಲಿದೆ ಸಂಪೂರ್ಣ ಮಾಹಿತಿ.

ಸಂಗ್ರಹ ಚಿತ್ರ

ಬೆಂಗಳೂರು: ಹೊರಗೆ ಹೋದರೆ ಬಿಸಿಲು, ಫ್ಯಾನ್ ಗಾಳಿಗೆ ಮೈಯೊಡ್ಡಿ ಕುಳಿತರೆ ಬಿಸಿ ಗಾಳಿ (Heatwaves) ಯಾವಾಗ ಮಳೆ ಬರುವುದೋ, ವಾತಾವರಣ ತಂಪಾಗುವುದೋ ಎನ್ನುವ ನಿರೀಕ್ಷೆಯಲ್ಲಿ ಧಗೆ ಮತ್ತಷ್ಟು ಹೆಚ್ಚಾದಂತ ಅನುಭವ. ಈ ನಡುವೆ ಎಸಿ (Benefits of AC) ಅಥವಾ ಕೂಲರ್ (Heatwaves) ಖರೀದಿ ಮಾಡುವ ಯೋಚನೆಯು ಹುಟ್ಟಿಕೊಳ್ಳುತ್ತಿದೆ. ಆದರೆ ಎಸಿ ಅಥವಾ ಕೂಲರ್ ಆರೋಗ್ಯಕ್ಕೆ ಒಳ್ಳೆಯದೇ ಚಿಂತೆ. ಎಸಿ ಅಥವಾ ಕೂಲರ್ ಇವುಗಳಲ್ಲಿ ಯಾವುದು ಉತ್ತಮ, ಆರೋಗ್ಯದ ಮೇಲೆ ಇವು ಬೀರುವ ದುಷ್ಪರಿಣಾಮ ಏನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ದೇಶಾದ್ಯಂತ ಬಿಸಿಲು ತೀವ್ರವಾಗಿದೆ. ವಿವಿಧ ಭಾಗಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ದಾಟಿದೆ. ಶಾಖದ ಅಲೆಯಿಂದ ತಪ್ಪಿಸಿಕೊಳ್ಳಲು ತಂಪಾಗಿರುವುದು ಕೂಡ ಮುಖ್ಯವಾಗಿದೆ.ಇದು ಕೇವಲ ಆರಾಮದ ಸಂಗತಿಯಲ್ಲ ಆರೋಗ್ಯದ ಅವಶ್ಯಕತೆಯೂ ಆಗಿದೆ. ಇದಕ್ಕಾಗಿ ಎಸಿ ಅಥವಾ ಏರ್ ಕೂಲರ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯತೆಯಾಗಿದೆ.

ಬೇಸಿಗೆಯ ಬಿಸಿಲಿಗೆ ಯಾವ ಹಣ್ಣುಗಳನ್ನು ಸೇವನೆ ಮಾಡಿದರೆ ಉತ್ತಮ?

ಎಸಿ ಅಥವಾ ಕೂಲರ್ ಎರಡು ಕೂಡ ತನ್ನದೇ ಆದಂತಹ ಅನುಕೂಲತೆ ಮತ್ತು ಅನಾನುಕೂಲತೆಯನ್ನು ಹೊಂದಿದೆ ಎನ್ನುತ್ತಾರೆ ವೈದ್ಯರು. ಇವುಗಳನ್ನು ವಯಸ್ಸು, ವೈದ್ಯಕೀಯ ಪರಿಸ್ಥಿತಿ, ಆರ್ದ್ರತೆಯ ಮಟ್ಟ ಮತ್ತು ಉಪಕರಣವನ್ನು ಆಧರಿಸಿ ಬಳಸಿಕೊಳ್ಳಬೇಕು. ತೀವ್ರವಾದ ಶಾಖದ ಅಲೆಗಳಿರುವ ಸಂದರ್ಭದಲ್ಲಿ ಎಸಿ ಉತ್ತಮ ಎಂದು ಪರಿಗಣಿಸಲಾಗಿದೆ. ಯಾಕೆಂದರೆ ಅವು ಶಾಖ ಮತ್ತು ತೇವಾಂಶ ಎರಡನ್ನೂ ಕಡಿಮೆ ಮಾಡುತ್ತವೆ. ಆದರೆ ಶುಷ್ಕ ಗಾಳಿ ಅಗತ್ಯವಿರುವ ಮಂದಿಗೆ ಏರ್ ಕೂಲರ್‌ಗಳು ಸೂಕ್ತ ಆಯ್ಕೆಯಾಗಿದೆ.

ಏರ್ ಕೂಲರ್‌ಗಳ ಪರಿಣಾಮ ಏನು?

ನೀರನ್ನು ಆವಿ ಮಾಡುವ ಮೂಲಕ ಕಾರ್ಯನಿರ್ವಹಿಸುವ ಏರ್ ಕೂಲರ್‌ಗಳು ಒಳಾಂಗಣದಲ್ಲಿ ನೈಸರ್ಗಿಕ ಆರ್ದ್ರತೆಯನ್ನು ಕಾಪಾಡುತ್ತದೆ. ಇದು ಶುಷ್ಕ ವಾತಾವರಣ ಅದರಲ್ಲೂ ಮುಖ್ಯವಾಗಿ ಉತ್ತರ ಭಾರತದ ಹವಾಮಾನಗಳಿಗೆ ಸೂಕ್ತವಾಗಿದೆ. ಇವು ಗಂಟಲು, ಚರ್ಮ ಅಥವಾ ಕಣ್ಣುಗಳಿಗೆ ಅತಿಯಾದ ಶುಷ್ಕತೆ ಉಂಟು ಮಾಡುವುದಿಲ್ಲ. ಹೆಚ್ಚಾಗಿ ಕೂಲರ್‌ಗಳು ಆರಾಮದಾಯಕವೆನಿಸುತ್ತದೆ. ಇದು ತಾಜಾ ಗಾಳಿಯನ್ನು ಒದಗಿಸುತ್ತದೆ ಎನ್ನುತ್ತಾರೆ ಫೋರ್ಟಿಸ್ ಆಸ್ಪತ್ರೆಯ ಆಂತರಿಕ ಔಷಧ ನಿರ್ದೇಶಕ ಡಾ. ದಿನೇಶ್ ಕುಮಾರ್.

ಕೂಲರ್ ಗಳನ್ನು ಚೆನ್ನಾಗಿ ನಿರ್ವಹಣೆ ಮಾಡುವುದು ಬಹಳ ಮುಖ್ಯ. ಇಲ್ಲವಾದರೆ ನಿಂತ ನೀರಿನಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿಯಾಗುತ್ತದೆ. ಇದರಿಂದ ಆಸ್ತಮಾ, ಸೈನುಟಿಸ್ ಅಥವಾ ಅಲರ್ಜಿ ಸಮಸ್ಯೆಗಳು ಉಂಟಾಗುತ್ತದೆ ಎನ್ನುತ್ತಾರೆ ಅವರು.

ಎಸಿಗಳಿಂದ ಏನು ಪರಿಣಾಮ ?

ತಾಪಮಾನವು 42 ಡಿಗ್ರಿ ಸೆಲ್ಸಿಯಸ್‌ನಿಂದ ಹೆಚ್ಚಾದಾಗ ಏರ್ ಕಂಡಿಷನರ್‌ಗಳ ಆಯ್ಕೆ ಸೂಕ್ತವಾಗಿದೆ. ಇದು ಗಾಳಿಯನ್ನು ತಂಪಾಗಿರಿಸುತ್ತದೆ. ಆರ್ದ್ರತೆಯನ್ನು ಕಡಿಮೆ ಮಾಡುತ್ತದೆ. ತೀವ್ರ ಬಿಸಿಲು ಇರುವ ಪ್ರದೇಶಗಳಿಗೆ ಇದು ಸೂಕ್ತವಾಗಿದೆ. ಇದು ಶಾಖದಿಂದ ಉಂಟಾಗುವ ಸುಸ್ತು, ನಿರ್ಜಲೀಕರಣ ಮತ್ತು ಶಾಖದ ಹೊಡೆತದ ಅಪಾಯವನ್ನು ಕಡಿಮೆ ಮಾಡುತ್ತದೆ. ವಯಸ್ಸಾದ ವ್ಯಕ್ತಿಗಳು, ಹೃದಯ ರೋಗಿಗಳು, ಮಧುಮೇಹಿಗಳು, ಅಧಿಕ ರಕ್ತದೊತ್ತಡ ಹೊಂದಿರುವ ಜನರು, ಗರ್ಭಿಣಿಯರು ಮತ್ತು ಮಕ್ಕಳನ್ನು ಇದು ತೀವ್ರ ಬಿಸಿಲಿನ ಸಂದರ್ಭದಲ್ಲಿ ಹೆಚ್ಚು ಸುರಕ್ಷಿತವಾಗಿರುತ್ತವೆ ಎನ್ನುತ್ತಾರೆ ಡಾ. ದಿನೇಶ್ ಕುಮಾರ್.

ಸ್ಥಿರವಾದ ಒಳಾಂಗಣ ತಾಪಮಾನವನ್ನು ಕಾಪಾಡುವ ಎಸಿಗಳು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಅತಿಯಾದ ಶಾಖದಿಂದ ಉಂಟಾಗುವ ದೈಹಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಆದರೆ ಎಸಿ ಬಳಸುವುದು ಅಪಾಯಕಾರಿಯೂ ಹೌದು. ಯಾಕೆಂದರೆ ಇದು ಒಣ ಗಂಟಲು, ಒಣ ಚರ್ಮ, ಸ್ನಾಯು ಬಿಗಿತ, ತಲೆನೋವು ಮತ್ತು ಸೈನಸ್ ಗೆ ಕಾರಣವಾಗುತ್ತದೆ. ಇವುಗಳ ನಿರ್ವಹಣೆಯನ್ನು ಸರಿಯಾಗಿ ಮಾಡದೇ ಇದ್ದರೆ ಅಲರ್ಜಿ ಮತ್ತು ಉಸಿರಾಟದ ತೊಂದರೆಗಳನ್ನು ಉಂಟು ಮಾಡುತ್ತದೆ. ತೀವ್ರವಾದ ಬಿಸಿಲಿನಿಂದ ಬಂದು ತಕ್ಷಣ ಅತ್ಯಂತ ಶೀತ ಒಳಾಂಗಣ ತಾಪಮಾನಕ್ಕೆ ಒಡ್ಡಿಕೊಳ್ಳುವುದು ದೇಹದ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಇದರಿಂದ ಆರೋಗ್ಯದ ಅಪಾಯಗಳು ಹೆಚ್ಚಾಗುತ್ತವೆ ಎನ್ನುತ್ತಾರೆ ಅವರು.

ಬೇಸಿಗೆಯಲ್ಲಿ ಎಸಿ ತಾಪಮಾನ 18 ಡಿಗ್ರಿ ಯಿಂದ 20 ಡಿಗ್ರಿ ವರೆಗೆ ಸಾಮಾನ್ಯವಾಗಿ ಇಡಲಾಗುತ್ತದೆ. ಆದರೆ ಇದು ಅಸ್ವಸ್ಥತೆ, ನಿರ್ಜಲೀಕರಣ ಮತ್ತು ಉಸಿರಾಟದ ತೊಂದರೆಯನ್ನು ಉಂಟು ಮಾಡುತ್ತದೆ. ಕೂಲರ್‌ ಅಥವಾ ಎಸಿಯನ್ನು ಹೆಚ್ಚಾಗಿ ಬಳಸುವವರಲ್ಲಿ ನಿರ್ಜಲೀಕರಣದ ಅಪಾಯ ಹೆಚ್ಚಾಗಿರುತ್ತದೆ ಎನ್ನುತ್ತಾರೆ ಡಾ. ದಿನೇಶ್.

ಮೊಸರು ಅಥವಾ ಗ್ರೀಕ್‌ ಯೋಗರ್ಟ್‌: ಯಾವುದು ಹಿತ ಈ ಎರಡರೊಳಗೆ?

ಎಸಿ ಬಳಸುವುದಾದರೆ ಅದರ ತಾಪಮಾನವನ್ನು 24 ಡಿಗ್ರಿಯಿಂದ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇಡುವುದು ಸೂಕ್ತ. ಇದು ಹಠಾತ್ ಉಷ್ಣ ಒತ್ತಡವನ್ನು ಕಡಿಮೆ ಮಾಡಲು ದೇಹಕ್ಕೆ ತಂಪು ವಾತಾವರಣಕ್ಕೆ ಹೊಂದಿಕೊಳ್ಳಲು ಸಹಕಾರಿಯಾಗಿದೆ. ಅಲ್ಲದೇ ಎಸಿ ಮತ್ತು ಕೂಲರ್ ಗಳ ಸರಿಯಾದ ನಿರ್ವಹಣೆ ಮಾಡುವುದು ಕೂಡ ಮುಖ್ಯವಾಗಿದೆ ಎನ್ನುತ್ತಾರೆ ತಜ್ಞರು.

ವಿದ್ಯಾ ಇರ್ವತ್ತೂರು

View all posts by this author