ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅತಿಯಾದ ಶಾಖ ಮತ್ತು ಆರ್ದ್ರತೆಯ ವಾತಾವರಣದಿಂದ ಉಸಿರಾಟಕ್ಕೆ ಅಪಾಯ

ನಮ್ಮ ಶ್ವಾಸಕೋಶಗಳು ಸದಾ ನಮ್ಮ ಸುತ್ತಲಿನ ವಾತಾವರಣಕ್ಕೆ ಒಡ್ಡಿಕೊಳ್ಳುತ್ತಿರುತ್ತವೆ. ಆದ್ದರಿಂದ ತಾಪಮಾನ, ಆರ್ದ್ರತೆ, ಧೂಳು, ಮತ್ತು ವಾಯು ಮಾಲಿನ್ಯದಲ್ಲಿನ ಬದಲಾವಣೆಗಳು ಉಸಿರಾಟದ ಮಾರ್ಗಗಳ ಮೇಲೆ ಪ್ರಭಾವ ಬೀರಬಹುದು. ಅದರಲ್ಲೂ ವಿಶೇಷವಾಗಿ ವಿಪರೀತ ಬಿಸಿಯಿರುವ ದಿನಗಳಲ್ಲಿ, ವ್ಯಾಯಾಮ ಮಾಡುವಾಗ ಅಥವಾ ದೀರ್ಘಕಾಲ ಹೊರಾಂಗಣದಲ್ಲಿ ಸಮಯ ಕಳೆಯುವಾಗ ಕೆಲವರಲ್ಲಿ ಕೆಮ್ಮು, ವ್ಹೀಜಿಂಗ್, ಎದೆ ಬಿಗಿತ ಅಥವಾ ಉಸಿರಾಟದ ತೊಂದರೆ ಹೆಚ್ಚಾಗಿ ಕಂಡುಬರಬಹುದು.

ಡಾ. ಹರಿಪ್ರಸಾದ್, ಶ್ವಾಸಕೋಶ ತಜ್ಞ, ಅಪೋಲೊ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು

ತಾಪಮಾನ ಹೆಚ್ಚಾದಾಗ ನಿರ್ಜಲೀಕರಣ, ಆಯಾಸ ಮತ್ತು ಬಿಸಿಲಿನಾಘಾತ ಮೊದಲು ನೆನಪಿಗೆ ಬರುವ ಆರೋಗ್ಯ ಸಮಸ್ಯೆಗಳು. ಆದರೆ ತೀವ್ರವಾದ ಶಾಖವು ಮತ್ತೊಂದು ಪ್ರಮುಖ ಕಾರ್ಯವಾದ ಉಸಿರಾಟದ ಮೇಲೆಯೂ ಪರಿಣಾಮ ಬೀರಬಹುದು. ಬಿಸಿ ಮತ್ತು ಆರ್ದ್ರತೆಯಿಂದ ಕೂಡಿದ ವಾತಾವರಣವು ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು ಹಾಗೂ ಉಬ್ಬಸ, ಸಿಒಪಿಡಿ, ಶ್ವಾಸಕೋಶದ ರೋಗಗಳು ಮತ್ತು ಇತರ ಉಸಿರಾಟದ ತೊಂದರೆ ಇರುವವರು ತಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡುವುದನ್ನು ಕಷ್ಟಕರಗೊಳಿಸಬಹುದು.

ನಮ್ಮ ಶ್ವಾಸಕೋಶಗಳು ಸದಾ ನಮ್ಮ ಸುತ್ತಲಿನ ವಾತಾವರಣಕ್ಕೆ ಒಡ್ಡಿಕೊಳ್ಳುತ್ತಿರುತ್ತವೆ. ಆದ್ದರಿಂದ ತಾಪಮಾನ, ಆರ್ದ್ರತೆ, ಧೂಳು, ಮತ್ತು ವಾಯು ಮಾಲಿನ್ಯದಲ್ಲಿನ ಬದಲಾವಣೆಗಳು ಉಸಿರಾಟದ ಮಾರ್ಗಗಳ ಮೇಲೆ ಪ್ರಭಾವ ಬೀರಬಹುದು. ಅದರಲ್ಲೂ ವಿಶೇಷವಾಗಿ ವಿಪರೀತ ಬಿಸಿಯಿರುವ ದಿನಗಳಲ್ಲಿ, ವ್ಯಾಯಾಮ ಮಾಡುವಾಗ ಅಥವಾ ದೀರ್ಘಕಾಲ ಹೊರಾಂಗಣದಲ್ಲಿ ಸಮಯ ಕಳೆಯುವಾಗ ಕೆಲವರಲ್ಲಿ ಕೆಮ್ಮು, ವ್ಹೀಜಿಂಗ್, ಎದೆ ಬಿಗಿತ ಅಥವಾ ಉಸಿರಾಟದ ತೊಂದರೆ ಹೆಚ್ಚಾಗಿ ಕಂಡುಬರಬಹುದು.

ಬಿಸಿಯು ಗಾಳಿಯ ಕಳಪೆ ಗುಣಮಟ್ಟವನ್ನು ಮತ್ತಷ್ಟು ಹದಗೆಡಿಸಬಹುದು. ಹೆಚ್ಚಿನ ತಾಪಮಾನವು ತಳಮಟ್ಟದ ಓಝೋನ್ ರಚನೆಗೆ ಕಾರಣವಾಗಬಹುದು, ಇದು ಉಸಿರಾಟದ ಮಾರ್ಗಗಳಲ್ಲಿ ಕಿರಿಕಿರಿ ಯನ್ನು ಉಂಟುಮಾಡಬಹುದು. ಆಸ್ತಮಾ ಅಥವಾ ಇತರ ದೀರ್ಘಕಾಲದ ಉಸಿರಾಟದ ತೊಂದರೆ ಇರುವವರಿಗೆ, ಒಂದೇ ಸಮಯದಲ್ಲಿ ಶಾಖ ಮತ್ತು ಕಲುಷಿತ ಗಾಳಿ ಎರಡನ್ನೂ ಎದುರಿಸುವುದು ಹೆಚ್ಚು ಸವಾಲಿನದ್ದಾಗಬಹುದು.

ಇದನ್ನೂ ಓದಿ: Health Tips: ಬೆಲ್ಲದ ಸೇವನೆ ಸಕ್ಕರೆಗಿಂತ ನಿಜವಾಗಿಯೂ ಉತ್ತಮವೇ? ತಜ್ಞರು ಹೇಳೋದೇನು?

ಆರ್ದ್ರತೆಯು ಮತ್ತೊಂದು ಪ್ರಮುಖ ಅಂಶವಾಗಿದೆ. ತೇವಾಂಶದಿಂದ ಕೂಡಿದ ಗಾಳಿಯು ನೇರವಾಗಿ ಶ್ವಾಸಕೋಶದ ಕಾಯಿಲೆಗೆ ಕಾರಣವಾಗದಿದ್ದರೂ, ಮನೆಯೊಳಗಿನ ಹೆಚ್ಚಿನ ಆರ್ದ್ರತೆ ಮತ್ತು ಗಾಳಿ ಯಾಡದಿರುವುದು ತೇವ ಹಾಗೂ ಬೂಷ್ಟು ಬೆಳೆಯಲು ಕಾರಣವಾಗಬಹುದು. ಬೂಷ್ಟು ಅಥವಾ ಮನೆಯೊಳಗಿನ ಇತರ ಅಲರ್ಜಿನ್ ಗಳ ಸೂಕ್ಷ್ಮತೆ ಹೊಂದಿರುವವರು ಇದರ ಪರಿಣಾಮವಾಗಿ ಉಸಿರಾಟದ ತೊಂದರೆಗಳು ಹೆಚ್ಚಾಗುವುದನ್ನು ಅನುಭವಿಸಬಹುದು.

ವಿಪರೀತ ಬಿಸಿಯಾದ ವಾತಾವರಣದಲ್ಲಿ ಜನರು ಹೆಚ್ಚು ಸಮಯ ಮನೆಯೊಳಗೇ ಇದ್ದಾಗ ಇದು ವಿಶೇಷವಾಗಿ ಕಂಡುಬರುತ್ತದೆ. ಹವಾನಿಯಂತ್ರಣ ಮನೆಯೊಳಗಿನ ಜಾಗವನ್ನು ಹೆಚ್ಚು ಆರಾಮ ದಾಯಕವಾಗಿಸಬಲ್ಲದು, ಆದರೆ ಅದರ ನಿಯಮಿತ ನಿರ್ವಹಣೆ, ಸೂಕ್ತ ಗಾಳಿಯಾಡುವಿಕೆ ಮತ್ತು ಒಟ್ಟಾರೆ ಮನೆಯೊಳಗಿನ ಗಾಳಿಯ ಗುಣಮಟ್ಟ ಕಾಪಾಡಿಕೊಳ್ಳುವುದು ಎಂದಿನಂತೆ ಮುಖ್ಯ ವಾಗಿರುತ್ತದೆ.

ಬಿಸಿಯಾದ ದಿನದಂದು ಉಸಿರಾಟದ ತೊಂದರೆ ಕಾಣಿಸಿಕೊಳ್ಳುವ ಪ್ರತಿಯೊಂದು ಬಾರಿಯೂ ಅದು ಅಪಾಯದ ಮುನ್ಸೂಚನೆಯೇನಲ್ಲ. ದೇಹವನ್ನು ತಣ್ಣಗಾಗಿಸಲು ನಮ್ಮ ಶರೀರವು ಸ್ವಾಭಾವಿಕ ವಾಗಿಯೇ ಹೆಚ್ಚು ಶ್ರಮ ವಹಿಸುತ್ತದೆ, ಮತ್ತು ಕಠಿಣ ಚಟುವಟಿಕೆಗಳ ಸಮಯದಲ್ಲಿ ಉಸಿರಾಟವು ವೇಗವಾಗಬಹುದು. ಆದರೆ, ನಿಮಗಿರುವ ಸಾಮಾನ್ಯ ಸ್ಥಿತಿಗಿಂತ ಬೇರೆಯಾದ ಹಠಾತ್ ಬದಲಾವಣೆ ಕಂಡುಬರುವುದೇ ಇಲ್ಲಿ ಮುಖ್ಯ ವಿಷಯವಾಗಿದೆ.

ಮರುಕಳಿಸುವ ಕೆಮ್ಮು, ಸ್ಪಷ್ಟ ಕಾರಣವಿಲ್ಲದ ವ್ಹೀಜಿಂಗ್, ದೈನಂದಿನ ಚಟುವಟಿಕೆಗಳ ಸಮಯ ದಲ್ಲಿ ಉಸಿರಾಟದ ತೊಂದರೆ ಅಥವಾ ವ್ಯಾಾಯಾಮ ಮಾಡುವ ಸಾಮರ್ಥ್ಯದಲ್ಲಿ ಎದ್ದು ಕಾಣುವ ಇಳಿತವನ್ನು ಯಾವಾಗಲೂ ಕೇವಲ ವಾತಾವರಣದ ಪ್ರಭಾವ ಎಂದು ನಿರ್ಲಕ್ಷಿಸಬಾರದು.

ಈಗಾಗಲೇ ಉಸಿರಾಟದ ತೊಂದರೆ ಇರುವವರು ವಿಪರೀತ ಶಾಖದ ಸಮಯದಲ್ಲಿ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ದೇಹದಲ್ಲಿ ನೀರಿನ ಅಂಶವನ್ನು ಕಾಯ್ದುಕೊಳ್ಳುವುದು, ದಿನದ ಅತ್ಯಂತ ಬಿಸಿಯಾದ ಸಮಯದಲ್ಲಿ ಹೊರಾಂಗಣದಲ್ಲಿ ಕಠಿಣ ಚಟುವಟಿಕೆಗಳನ್ನು ಮಾಡದೇ ಇರುವುದು ಮತ್ತು ಹೊರಾಂಗಣದಲ್ಲಿ ವ್ಯಾಯಾಮ ಮಾಡುವ ಮೊದಲು ಗಾಳಿಯ ಗುಣಮಟ್ಟವನ್ನು ಪರಿಶೀಲಿಸುವುದು ಅಲರ್ಜಿ ಅಥವಾ ತೊಂದರೆ ಹೆಚ್ಚಿಸುವ ಅಂಶಗಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಔಷಧ ತೆಗೆದುಕೊಳ್ಳುವವರು ವೈದ್ಯರು ಸೂಚಿಸಿದಂತೆಯೇ ಅದನ್ನು ಮುಂದುವರಿಸಬೇಕು.

ಮತ್ತೆ ಕೆಲವರಿಗೆ, ನಿರಂತರವಾಗಿ ಉಳಿದುಕೊಳ್ಳುವ ರೋಗಲಕ್ಷಣಗಳು ವೈದ್ಯಕೀಯ ಸಲಹೆಯನ್ನು ಪಡೆಯಲು ಮುಖ್ಯ ಕಾರಣವಾಗಿವೆ. ವಾತಾವರಣ ಉತ್ತಮಗೊಂಡ ಮೇಲೆಯೂ ಉಸಿರಾಟದ ತೊಂದರೆ, ಕೆಮ್ಮು ಅಥವಾ ವ್ಹೀಜಿಂಗ್ ಮುಂದುವರಿದಿದ್ದರೆ, ವೈದ್ಯರು ಹೆಚ್ಚಿನ ತಪಾಸಣೆಯನ್ನು ಶಿಫಾರಸು ಮಾಡಬಹುದು. ರೋಗಲಕ್ಷಣಗಳು ಮತ್ತು ವೈದ್ಯಕೀಯ ಇತಿಹಾಸವನ್ನು ಆಧರಿಸಿ, ಸ್ಪೈರೋಮೆಟ್ರಿಯಂತಹ ಪರೀಕ್ಷೆಗಳು ಶ್ವಾಾಸಕೋಶಗಳು ಎಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತವೆ.

ಭಾರತವು ಹೆಚ್ಚು ತಾಪಮಾನದ ದಿನಗಳನ್ನು ಮತ್ತು ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿ ಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ಉಸಿರಾಟದ ಆರೋಗ್ಯಕ್ಕೂ ಶಾಖದ ಕುರಿತಾದ ಪ್ರಮುಖ ಚರ್ಚೆಗಳಲ್ಲಿ ಆದ್ಯತೆ ದೊರೆಯಬೇಕಿದೆ. ಹೊರಗಿನ ತಾಪಮಾನವನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಿಲ್ಲದಿದ್ದರೂ, ಅದಕ್ಕೆ ನಮ್ಮ ಉಸಿರಾಟವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಗಮನಿಸಬಹುದು. ವಿಪರೀತ ಹವಾಮಾನದ ಸಮಯದಲ್ಲಿ ಸರಳ ಮುನ್ನೆಚ್ಚರಿಕೆಗಳನ್ನು ತೆಗೆದು ಕೊಳ್ಳುತ್ತಾ, ಅಸಾಮಾನ್ಯ ಅಥವಾ ನಿರಂತರವಾಗಿ ಕಾಡುವ ರೋಗಲಕ್ಷಣಗಳನ್ನು ಆರಂಭದಲ್ಲೇ ಗುರುತಿಸುವುದು ಸುದೀರ್ಘ ಅವಧಿಯಲ್ಲಿ ಶ್ವಾಸಕೋಶದ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.