Stretch Marks Solutions: ಸ್ಟ್ರೆಚ್ ಮಾರ್ಕ್ ತಡೆಯಲು ಇಲ್ಲಿದೆ ಪರಿಹಾರ ಕ್ರಮ!
ಸ್ಟ್ರೆಚ್ ಮಾರ್ಕ್ ಎನ್ನುತ್ತಿದ್ದಂತೆ, ಈ ಲೇಖನ ʻಗರ್ಭಿಣಿಯರಿಗೆ ಮಾತ್ರʼ ಎಂದು ಭಾವಿಸ ಬೇಕಿಲ್ಲ. ಯಾರಿಗೆ ಬೇಕಿದ್ದರೂ ಕಾಣಬರುವಂಥ ಕಲೆಗಳಿವು..ದೇಹದ ತೂಕ ಇದ್ದಕ್ಕಿದ್ದಂತೆ ಹೆಚ್ಚು- ಕಡಿಮೆಯಾದರೆ, ತೋಳು, ತೊಡೆಗಳು, ಹೊಟ್ಟೆಯ ಭಾಗ ದಲ್ಲೆಲ್ಲಾ ಬಿಳಿಯ ಬರೆ ಎಳೆದಂತೆ ಕಂಡು ಬರುವ ಕಲೆಗಳಿವು. ಇವು ಯಾಕಾಗಿ ಬರುತ್ತವೆ ಮತ್ತು ಬರದಂತೆ ತಡೆಯಲು ಸಾಧ್ಯವೇ ಎಂಬುದನ್ನು ನೋಡೋಣ.
ಸ್ಟ್ರೆಚ್ ಮಾರ್ಕ್(ಸಾಂದರ್ಭಿಕ ಚಿತ್ರ) -
ನವದೆಹಲಿ: ಸ್ಟ್ರೆಚ್ ಮಾರ್ಕ್ (Stretch Marks) ಎನ್ನುತ್ತಿದ್ದಂತೆ, ಈ ಲೇಖನ ʻಗರ್ಭಿಣಿಯರಿಗೆ ಮಾತ್ರʼ ಎಂದು ಭಾವಿಸಬೇಕಿಲ್ಲ. ಯಾರಿಗೆ ಬೇಕಿದ್ದರೂ ಕಾಣಬರುವಂಥ ಕಲೆಗಳಿವು. ಗರ್ಭಿಣಿ ಯರಲ್ಲಿ ಇವು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂಬುದು ನಿಜವಾದರೂ, ಉಳಿದವರಿಗೆ ಬಾಹಿರವಲ್ಲ. ದೇಹದ ತೂಕ ಇದ್ದಕ್ಕಿದ್ದಂತೆ ಹೆಚ್ಚು- ಕಡಿಮೆಯಾದರೆ, ತೋಳು, ತೊಡೆಗಳು, ಹೊಟ್ಟೆಯ ಭಾಗ ದಲ್ಲೆಲ್ಲಾ ಬಿಳಿಯ ಬರೆ ಎಳೆದಂತೆ ಕಂಡುಬರುವ ಕಲೆಗಳಿವು. ಇವು ಯಾಕಾಗಿ ಬರುತ್ತವೆ ಮತ್ತು ಬರದಂತೆ ತಡೆಯಲು ಸಾಧ್ಯವೇ ಎಂಬುದನ್ನು ನೋಡೋಣ.
ದೇಹದಲ್ಲಿ ಬಹಳ ಕ್ಷಿಪ್ರವಾಗಿ ತೂಕದ ಏರಿಳಿತವಾದಾಗ ಕಂಡು ಬರುವ ಗುರುತುಗಳಿವು. ಇವು ಚರ್ಮದ ನಡುವಿನ ಹೊದಿಕೆ ಯಲ್ಲಿರುವ ಸೂಕ್ಷ್ಮ ಫೈಬರ್‌ನಂಥವು ಮುರಿದಂತಾಗಿ ಉಂಟಾಗುವ ಕಲೆಗಳು. ಸರಳವಾಗಿ ಹೇಳುವುದಾದರೆ, ಚರ್ಮ ಇದ್ದಕ್ಕಿದ್ದಂತೆ ಎಳೆದಂತಾದಾಗ ಅಲ್ಲಿರುವ ಕೊಲಾ ಜಿನ್ ದುರ್ಬಲಗೊಂಡು, ಸಾಮಾನ್ಯವಾಗಿ ಉತ್ಪಾದನೆಗೊಳ್ಳುವ ಕೊಲಾಜಿನ್ ಮಟ್ಟವೂ ಏರು ಪೇರಾಗುತ್ತದೆ. ಇದರಿಂದಾಗಿ ಚರ್ಮದ ನಡುವಿನ ಸ್ತರದಲ್ಲಿ ಇಂಥ ಕಲೆಗಳು ಕಂಡುಬರುತ್ತವೆ. ಇವುಗಳು ಬಾರದಂತೆ ತಡೆಯುವುದು ಅಸಾಧ್ಯವೇನಲ್ಲ. ಆದರೆ ಕೆಲವು ವಿಷಯಗಳನ್ನು ತಪ್ಪದೆ ಮಾಡುವುದು ಅಗತ್ಯ.
ವ್ಯಾಯಾಮ: ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಅತಿಯಾಗಿ ತೂಕ ಹೆಚ್ಚುವುದನ್ನು ತಡೆಯಬಹುದು. ಮಾತ್ರವಲ್ಲ, ಚರ್ಮದ ಹಿಗ್ಗುವ ಸಾಮರ್ಥ್ಯವನ್ನು ವೃದ್ಧಿಸಬಹುದು. ಗರ್ಭಿಣಿ ಯರಲ್ಲಿ ಹೊಟ್ಟೆಯ ಭಾಗದಲ್ಲಿ ಸ್ಟ್ರೆಚ್ ಮಾರ್ಕ್ ಬರುವುದನ್ನು ಸಂಪೂರ್ಣ ತಡೆಯಲು ಕಷ್ಟಸಾಧ್ಯ. ಆದರೆ ದೇಹದ ಉಳಿದೆಡೆಗಳಲ್ಲಿ ಇವು ಬಾರದಂತೆ ಮಾಡಬಹುದು.
ಸನ್‌ಸ್ಕ್ರೀನ್: ಮನೆಯಿಂದ ಹೊರಗೆ ಹೋಗುವಾಗ ಬಿಸಿಲಿಗೆ ಒಡ್ಡಿಕೊಳ್ಳುವ ಭಾಗಗಳಾದ ತೋಳು, ಕುತ್ತಿಗೆಗಳಿಗೆಲ್ಲಾ ಮರೆ ಯದೆ ಸನ್‌ಸ್ಕ್ರೀನ್ ಹಚ್ಚಿ. ಇದರಿಂದ ಹಾನಿ ಹೆಚ್ಚುವುದನ್ನು ತಡೆಯ ಬಹುದು. ಆದರೆ ಸ್ಟ್ರೆಚ್ ಮಾರ್ಕ್ ಬರುವುದನ್ನು ತಡೆಯುವುದಾಗಿ ಹೇಳುವಂಥ ಯಾವ್ಯಾವುದೋ ಕ್ರೀಮುಗಳನ್ನು ಬಳಸಬೇಡಿ. ಇಂಥ ಕಲೆಗಳನ್ನು ದಿಢೀರನೆ ಮಾಯ ಮಾಡುವ ಮಾಂತ್ರಿಕ ಕ್ರೀಮುಗಳಿಲ್ಲ. ಅಷ್ಟು ಅಗತ್ಯವಿದ್ದರೆ ವೈದ್ಯರನ್ನು ಭೇಟಿ ಮಾಡಿ.
ಒಣಚರ್ಮ ತೆಗೆಯಿರಿ: ದೇಹದ ಮೇಲಿನ ಪದರದಲ್ಲಿರುವ ಒಣಚರ್ಮ ಅಥವಾ ಸತ್ತ ಚರ್ಮದ ಪದರವನ್ನು ವಾರಕ್ಕೊಮ್ಮೆ ಸ್ವಚ್ಛ ಮಾಡಿ. ಇದರಿಂದ ಚರ್ಮದ ಹಿಗ್ಗುವಿಕೆ ಮತ್ತು ರಕ್ತ ಪರಿಚಲನೆ ಎರಡೂ ವೃದ್ಧಿಸುತ್ತದೆ. ಹಾಗೆಂದು ಅತಿಯಾಗಿ ಉಜ್ಜಿದರೆ ಅಥವಾ ಸ್ಕ್ರಬ್ಬಿಂಗ್ ಮಾಡಿದರೆ ಚರ್ಮದ ಕೋಶಗಳಿಗೆ ತೊಂದರೆ. ಹಾಗಾಗಿ ಈ ಕೆಲಸ ಹಿತ-ಮಿತವಾಗಿ ಇರಲಿ.
ಇದನ್ನೂ ಓದಿ:Health Tips: ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಅರಿಶಿನದ ನೀರು ಕುಡಿದರೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?
ನೈಸರ್ಗಿಕ ತೈಲ: ತ್ವಚೆಗೆ ತೈಲದಂಶ ಅಗತ್ಯವಾಗಿ ಬೇಕು. ಹಾಗಾಗಿ ನೈಸರ್ಗಿಕ ತೈಲದಿಂದ ತಯಾರಿಸಿದ ಮಾಯಿಸ್ಚರೈಸರ್ ಬಳಸಿ. ಸಾಧ್ಯವಾದರೆ, ಆಗಾಗ ಕೊಬ್ಬರಿ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ತ್ವಚೆಗೆ ಲೇಪಿಸಿಕೊಳ್ಳಬಹುದು. ಯಾವುದೇ ಕ್ಲೆನ್ಸರ್‌ಗಳನ್ನು ಬಳಸುವಾಗ ತ್ವಚೆಯ ನೈಸರ್ಗಿಕ ತೈಲದಂಶ ತೆಗೆದುಬಾರದಂತೆ ಜಾಗ್ರತೆ ಮಾಡಿ, ಮೃದುವಾದ ಕ್ಲೆನ್ಸರ್ ಬಳಸಿ.
ನೀರು ಮತ್ತು ಆಹಾರ: ದಿನಕ್ಕೆ ಮೂರು ಲೀಟರ್‌ನಷ್ಟು ನೀರು ಬೇಕೆಬೇಕು. ಇದರಿಂದ ದೇಹದ ಉಳಿದ ಸ್ವಾಸ್ಥ್ಯ ಮಾತ್ರವಲ್ಲ, ಚರ್ಮದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಹಾಗೆಯೇ ಆಹಾರದಲ್ಲೂ ಸಮತೋಲನ ಇಲ್ಲದಿದ್ದರೆ ಚರ್ಮವನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಕರಿದ, ಎಣ್ಣೆಯ ಮತ್ತು ಮಸಾಲೆ ಯುಕ್ತ ಆಹಾರಗಳನ್ನು ಕಡಿಮೆ ಮಾಡಿ. ನಾರು, ಖನಿಜಗಳು ಮತ್ತು ಜೀವಸತ್ವಗಳುಳ್ಳ ಆಹಾರಗಳಿಗೆ ದಾಕ್ಷಿಣ್ಯ ಮಾಡಿಕೊಳ್ಳಬೇಡಿ.
ಬೇಕಾದ ಸತ್ವಗಳು: ವಿಟಮಿನ್ ಡಿ ಹೇರಳವಾಗಿರುವ ಮೀನುಗಳು, ಮತ್ತು ಮೊಟ್ಟೆಯ ಹಳದಿ ಭಾಗದಿಂದ ಚರ್ಮದ ಆರೋಗ್ಯ ಹೆಚ್ಚಿಸಬಹುದು. ಹಸುವಿನ ತುಪ್ಪ ಮತ್ತು ಆಲಿವ್ ಎಣ್ಣೆಯಂಥ ಒಮೇಗಾ ೩ ಫ್ಯಾಟಿ ಆಮ್ಲ ಹೆಚ್ಚಿರುವ ಆಹಾರ ಗಳಿಂದ ಚರ್ಮದ ಹಿಗ್ಗುವಿಕೆಯನ್ನು ಹೆಚ್ಚಿಸ ಬಹುದು. ವಿಟಮಿನ್ ಸಿ ಹೆಚ್ಚಿರುವ ಕಿತ್ತಳೆಯಂಥ ಹಣ್ಣುಗಳಿಂದಲೂ ಚರ್ಮ ಹಿಗ್ಗುವುದು ಹೆಚ್ಚುತ್ತದೆ. ವಿಟಮಿನ್ ಎ ಸಾಂದ್ರವಾದ ಬೀಜಗಳು ಮತ್ತು ಟೊಮೇಟೊದಂಥ ಆಹಾರಗಳಿಂದ ಚರ್ಮದ ಅಂಗಾಂಶಗಳ ಸಾಮರ್ಥ್ಯ ಹಿಗ್ಗುತ್ತದೆ. ವಿಟಮಿನ್ ಎ ಸಮೃದ್ಧವಾಗಿರುವ ಗೆಣಸು, ಕುಂಬಳಕಾಯಿ, ಮಾವಿನಂಥವು ಹೊಸ ಚರ್ಮ ಬೆಳೆಯಲು ಅನುಕೂಲ ಮಾಡುತ್ತವೆ.