ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಾರಣಾಂತಿಕ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 3 ವರ್ಷದ ಮಗುವಿಗೆ ಯಶಸ್ವಿ ಚಿಕಿತ್ಸೆ

ಪ್ರಾರಂಭದಲ್ಲಿ ಸಣ್ಣ ಸಮಸ್ಯೆಯಂತೆ ಕಂಡರೂ, ನಂತರದಲ್ಲಿ ಮಗು ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಕಾರಣ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಿಸಿದರು. ಇಲ್ಲಿ ಮಗುವನ್ನು ಸಂಪೂರ್ಣ ತಪಾ ಸಣೆಗೆ ಒಳಪಡಿಸಿದ ಬಳಿಕ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ ಇರುವುದು ಪತ್ತೆ ಹಚ್ಚಿದರು. ಈ ಮಧ್ಯೆ ಮಗುವಿನ ಬಿಳಿರಕ್ತ ಕಣಗಳ ಕುಸಿತ ಹಾಗೂ ಮೂತ್ರಪಿಂಡದಲ್ಲಿ ಗಾಯ ಸಂಭವಿಸಿತ್ತು

ಬೆಂಗಳೂರು: ಮಾರಣಾಂತಿಕ ರಕ್ತದ ಕ್ಯಾನ್ಸರ್‌ಗೆ ತುತ್ತಾಗಿದ್ದ 3 ವರ್ಷದ ಪುಟ್ಟ ಬಾಲಕಿಗೆ ಬನ್ನೇರು ಘಟ್ಟ ರಸ್ತೆಯ ಫೋರ್ಟಿಸ್‌ ಆಸ್ಪತ್ರೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು, ಮಗುವು ಅಪಾಯದಿಂದ ಪಾರಾಗಿದೆ.

ಈ ಕುರಿತು ಮಾತನಾಡಿದ ಫೋರ್ಟಿಸ್‌ ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೊ-ಆಂಕೊಲಾಜಿಯ ಪ್ರಧಾನ ನಿರ್ದೇಶಕಿ ಡಾ.ನಿತಿ ರೈಜಾದಾ, 3 ವರ್ಷದರಿಯಾ ಎಂಬ ಹೆಣ್ಣು ಮಗು ಪ್ರಿ-ಬಿ ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ (ALL) ಅಪಾಯಕಾರಿ ಕ್ಯಾನ್ಸರ್‌ಗೆ ತುತ್ತಾಗಿತ್ತು. ಎಂದಿನಂತೆಯೇ ಆಟವಾಡುತ್ತಿದ್ದ ಮಗುವಿನ ದೇಹದಲ್ಲಿ ಕ್ಯಾನ್ಸರ್‌ನ ಗುಣಲಕ್ಷಣ ಕಂಡು ಬಂದಿದೆ. ನಿರಂತರ ಜ್ವರ, ಮುಖ ಊದುವುದು, ಊಟ ಸೇರದೇ ಇರುವುದು, ಮೂತ್ರ ಉತ್ಪಾದನೆಯಾಗದೇ ಇರುವುದು ಸೇರಿದಂತೆ ಅನೇಕ ಲಕ್ಷಣದಿಂದ ಬಳಲುತ್ತಿತ್ತು.

ಇದನ್ನೂ ಓದಿ: Ranjith H Ashwath Column: ಅತಿಯಾದ್ರೆ ʼಕಪ್‌ʼ ಕೂಡ ಕಪ್ಪಾಗುತ್ತೆ

ಪ್ರಾರಂಭದಲ್ಲಿ ಸಣ್ಣ ಸಮಸ್ಯೆಯಂತೆ ಕಂಡರೂ, ನಂತರದಲ್ಲಿ ಮಗು ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಕಾರಣ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಿಸಿದರು. ಇಲ್ಲಿ ಮಗುವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿದ ಬಳಿಕ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ ಇರುವುದು ಪತ್ತೆ ಹಚ್ಚಿದರು. ಈ ಮಧ್ಯೆ ಮಗುವಿನ ಬಿಳಿರಕ್ತ ಕಣಗಳ ಕುಸಿತ ಹಾಗೂ ಮೂತ್ರಪಿಂಡದಲ್ಲಿ ಗಾಯ ಸಂಭವಿಸಿತ್ತು.

Doc 10

ಇದು ಇನ್ನಷ್ಟು ಸಮಸ್ಯೆಗೆ ಒಡ್ಡಿತು. ಮಗುವಿನ ವಯಸ್ಸು ತೀರ ಸಣ್ಣದಿರುವ ಕಾರಣ, ಅತ್ಯಂತ ಸೂಕ್ಷ್ಮ ವಾಗಿ ಮಗುವಿಗೆ ಚಿಕಿತ್ಸೆ ನೀಡುವುದು ಸವಾಲಿನ ಕೆಲಸವಾಗಿತ್ತು. ಮಗುವೂ ಸಹ ನಾವು ನೀಡುತ್ತಿದ್ದ ಚಿಕಿತ್ಸೆ ಸೂಕ್ತವಾಗಿ ಸ್ಪಂದಿಸಿದ್ದ ಕಾರಣ, ರಕ್ತದ ಕ್ಯಾನ್ಸರ್‌ನಿಂದ ಮಗುವ ಶೀಘ್ರವೇ ಚೇತರಿಸಿ ಕೊಳ್ಳಲು ಸಾಧ್ಯವಾಯಿತು ಎಂದು ವಿವರಿಸಿದರು.

ಪೀಡಿಯಾಟ್ರಿಕ್ ಆಂಕೊಲಾಜಿಸ್ಟ್‌ ಡಾ.ತನುಶ್ರೀ ಪಾಲ್ ಮಾತನಾಡಿ, ಸಣ್ಣ ಮಗುವಿಗೆ ರಕ್ತದ ಕ್ಯಾನ್ಸರ್‌ ಅತ್ಯಂತ ಅಪರೂಪಗಳಲ್ಲಿ ಅಪರೂಪ. ಹಾಗೆಯೇ ಈ ಮಗುವು ಸಹ ತನ್ನ ವಯಸ್ಸಿಗೂ ಮೀರಿದ ಆರೋಗ್ಯ ಸಮಸ್ಯೆಗೆ ಒಳಗಾಗಿ ಸತತ 6 ತಿಂಗಳ ಚಿಕಿತ್ಸೆಯ ಬಳಿಕ ಇದೀಗ ಸಂಪೂರ್ಣವಾಗಿ ಕ್ಯಾನ್ಸರ್‌ ಮುಕ್ತಳಾಗಿದ್ದಾಳೆ ಎಂದು ಹೇಳಿದರು.