SV Babu: ಚಂದಾಪುರದಲ್ಲಿ ದೇವಸ್ಥಾನ ಕಟ್ಟಿಸಿದ ಜೋಶ್ ಚಿತ್ರದ ನಿರ್ಮಾಪಕ ಎಸ್.ವಿ. ಬಾಬು
ಕನ್ನಡದಲ್ಲಿ ‘ಜೋಶ್ʼ, ‘ಸವಿಸವಿ ನೆನಪುʼ, ‘ಹನಿಮೂನ್ ಎಕ್ಸ್‌ಪ್ರೆಸ್ʼ ಮುಂತಾದ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ ಮತ್ತು ಖ್ಯಾತ ಉದ್ಯಮಿ ಎಸ್.ವಿ. ಬಾಬು (SV Babu), ಚಂದಾಪುರದಲ್ಲಿರುವ ಜಿ.ಪಿ.ಆರ್. ಗ್ರಾಂಡ್ ಲೇಔಟ್‍ನಲ್ಲಿ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ ಮತ್ತು ಶ್ರೀ ಲಕ್ಷ್ಮೀ, ಪದ್ಮಾವತಿ ದೇವಿ ದೇವಸ್ಥಾನವನ್ನು ಕಟ್ಟಿಸಿದ್ದಾರೆ.


ಬೆಂಗಳೂರು: ಕನ್ನಡದಲ್ಲಿ ‘ಜೋಶ್ʼ, ‘ಸವಿಸವಿ ನೆನಪುʼ, ‘ಹನಿಮೂನ್ ಎಕ್ಸ್‌ಪ್ರೆಸ್ʼ ಮುಂತಾದ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ ಮತ್ತು ಖ್ಯಾತ ಉದ್ಯಮಿ ಎಸ್.ವಿ. ಬಾಬು (SV Babu), ಚಂದಾಪುರದಲ್ಲಿರುವ ಜಿ.ಪಿ.ಆರ್. ಗ್ರಾಂಡ್ ಲೇಔಟ್‍ನಲ್ಲಿ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ ಮತ್ತು ಶ್ರೀ ಲಕ್ಷ್ಮೀ, ಪದ್ಮಾವತಿ ದೇವಿ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಈ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಇತ್ತೀಚೆಗೆ ನೆರವೇರಿತು.
ಸುಮಾರು ಎಂಟು ಸಾವಿರ ಚದುರಡಿ ವಿಸ್ತೀರ್ಣದಲ್ಲಿ ಈ ಭವ್ಯ ದೇವಸ್ಥಾನದಲ್ಲಿ ಕಟ್ಟಲಾಗಿದೆ. ಆಯೋಧ್ಯೆಯ ಶ್ರೀರಾಮ ಮಂದಿರ ದೇವಸ್ಥಾನದ ರಾಮ್ ಲಲ್ಲಾ ಮೂರ್ತಿಯನ್ನು ಕೆತ್ತಿರುವ ಮೈಸೂರಿನ ಅರುಣ್ ಯೋಗಿರಾಜ್ ಅವರ ತಂಡದವರು, ಈ ದೇವಸ್ಥಾನದ ಮೂರ್ತಿಗಳನ್ನು ಕೆತ್ತಿದ್ದಾರೆ.

ಮೂರು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆದ ದೇವಸ್ಥಾನ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಸಾವಿರಾರು ಜನ ಸಾಕ್ಷಿಯಾಗಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು, ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ಕಾರ್ಯದರ್ಶಿ ಡಿ.ಕೆ. ರಾಮಕೃಷ್ಣ, ನಟಿಯರಾದ ಪ್ರಿಯಾ ಹಾಸನ್, ಕಾರುಣ್ಯ ರಾಮ್ ಹಾಗೂ ಇತರರು ಪಾಲ್ಗೊಂಡಿದ್ದರು.
ಈ ಸುದ್ದಿಯನ್ನೂ ಓದಿ | Festival Fashion 2025: ಗೌರಿ ಹಬ್ಬದ ಸೀಸನ್‌ನಲ್ಲಿ ಬಂತು ವೈವಿಧ್ಯಮಯ ಅತ್ಯಾಕರ್ಷಕ ಬಳೆಗಳು