ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನೆಲದ ಮೇಲೆ ಕುಳಿತುಕೊಂಡು ಮಾಡುವ ದೇವಸ್ಥಾನದ ಊಟಕ್ಕೆ ರುಚಿ ಹೆಚ್ಚು ಯಾಕೆ?

Health Tips: ನೆಲದ ಮೇಲೆ ಕುಳಿತು ಊಟ ಮಾಡುವುದು ದೇಹ ಮತ್ತು ಮನಸ್ಸಿನ ಮೇಲೆ ಸಾಕಷ್ಟು ಧನಾತ್ಮಕ ಬದಲಾವಣೆ ಉಂಟು ಮಾಡುತ್ತದೆ. ಹಾಗೆಯೇ ದೇವಸ್ಥಾನದಲ್ಲಿ ಪ್ರಸಾದ ಊಟ ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ಯಾವೆಲ್ಲ ಬದಲಾವಣೆಗಳನ್ನು ಕಾಣಬಹುದು? ಅದು ಆರೋಗ್ಯವನ್ನು ಹೇಗೆ ಸುಧಾರಿಸುತ್ತದೆ? ಯಾಕೆ ನಾವು ದೇವಸ್ಥಾನದ ಪ್ರಸಾದ ಊಟ ಮಾಡಬೇಕು? ಎನ್ನುವಂತಹ ಸಾಕಷ್ಟು ಮಾಹಿತಿಯನ್ನು ಪ್ರೊ. ಸುತ್ತೂರು ಎಸ್‌. ಮಾಲಿನಿ ಮಾಹಿತಿ ನೀಡಿದ್ದಾರೆ.

ಪ್ರೊ. ಸುತ್ತೂರು ಎಸ್‌. ಮಾಲಿನಿ

ಬೆಂಗಳೂರು, ಜ. 16: ನಾವು ಊಟ ಮಾಡುವ ವಿಧಾನ ಕೂಡ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ ಎನ್ನುವುದು ನಿಮಗೆ ಗೊತ್ತೆ? ಹೌದು, ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ದೇಹ ಮತ್ತು ಮನಸ್ಸಿನ ಮೇಲೆ ಸಾಕಷ್ಟು ಧನಾತ್ಮಕ ಬದಲಾವಣೆ ಕಂಡು ಬರುತ್ತದೆ. ಹಾಗೆಯೇ ದೇವಸ್ಥಾನದಲ್ಲಿ ಪ್ರಸಾದ ಊಟ (Temple food) ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ಯಾವೆಲ್ಲ ಬದಲಾವಣೆಗಳನ್ನು ಕಾಣಬಹುದು? ಅದು ಆರೋಗ್ಯವನ್ನು ಹೇಗೆ ಸುಧಾರಿಸುತ್ತದೆ? ಯಾಕೆ ನಾವು ದೇವಸ್ಥಾನದ ಪ್ರಸಾದ ಊಟ ಮಾಡಬೇಕು? ಎನ್ನುವಂತಹ ಸಾಕಷ್ಟು ಮಾಹಿತಿಯನ್ನು ಪ್ರೊ. ಸುತ್ತೂರು ಎಸ್‌. ಮಾಲಿನಿ ಮಾಹಿತಿ ನೀಡಿದ್ದಾರೆ. ʼವಿಶ್ವವಾಣಿ ಹೆಲ್ತ್‌ʼ ಯೂಟ್ಯೂಬ್‌ ಚಾನೆಲ್‌ ಜತೆ ಅವರು ಮಾತನಾಡಿದರು.

ದೇವಸ್ಥಾನಕ್ಕೆ ತೆರಳಿದಾಗ ನಮ್ಮ ಆಲೋಚನೆಗಳೇ ಬೇರೆ ಬೇರೆ ರೀತಿಯಾಗಿ ಇರುತ್ತದೆ. ಇದು ದೈವಿಕ ಮನೋಭಾವ ನೀಡಲಿದ್ದು, ಮನೆಯಲ್ಲಿ ಮಾಡುವ ಅಡುಗೆಗೆ ಹೋಲಿಸಿದರೆ ದೇವಸ್ಥಾನದ ಊಟ ವಿಶೇಷವಾಗಿ ಸೆಳೆಯುತ್ತದೆ. ದೇವರ ಬಳಿ ಹೋದಾಗ ಯಾವುದೇ ನಕಾರಾತ್ಮಕ ಯೋಚನೆಗಳು ನಮ್ಮ ಬಳಿ ಬರುವುದಿಲ್ಲ. ಮನಸ್ಸು ಶಾಂತ ರೀತಿಯಲ್ಲಿದ್ದು ಅಲ್ಲಿನ ಪ್ರಸಾದ ಕೂಡ ನಮ್ಮ ಮನ ಸೆಳೆಯುತ್ತದೆ ಎಂದು ಪ್ರೊ. ಸುತ್ತೂರು ತಿಳಿಸಿದ್ದಾರೆ.

ವಿಡಿಯೊ ನೋಡಿ:



ದೇವಸ್ಥಾನದಲ್ಲಿ ನೆಲದಲ್ಲಿ ಕುಳಿತು ಮಾಡುವುದರಿಂದ ಪದ್ಮಾಸನ ಅಥವಾ ಸುಖಾಸನವು ನಮ್ಮ ಇಡೀ ದೇಹಕ್ಕೆ ಆರೋಗ್ಯವನ್ನು ನೀಡುವಂತಹ ಯೋಗದ ಆಸನಗಳು. ಇವುಗಳಿಂದ ಹಲವು ರೀತಿಯ ಆರೋಗ್ಯ ಲಾಭ ಇದ್ದು ನೆಲದ ಮೇಲೆ ಊಟ ಮಾಡುವುದರಿಂದ ವೈಜ್ಞಾನಿಕವಾಗಿ ಬಹಳಷ್ಟು ಅನುಕೂಲವಿದೆ ಎಂದು ತಿಳಿಸಿದ್ದಾರೆ.

  • ತಜ್ಞರು ಹೇಳುವ ಹಾಗೆ ನಾವು ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಸೇವಿಸುವ ಆಹಾರದಲ್ಲಿ ಕಂಡುಬರುವಂತಹ ವಿವಿಧ ಬಗೆಯ ಪೌಷ್ಟಿಕಾಂಶಗಳು ಸಿಗುತ್ತದೆ.
  • ಎಷ್ಟು ಬೇಕು ಅಷ್ಟೇ ಪ್ರಮಾಣದ ಆಹಾರವನ್ನು ಸೇವನೆ ಮಾಡಬಹುದು. ಅಲ್ಲದೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಕುರಿತಾಗಿ ಸಹ ನೀವು ಆಲೋಚಿಸಿ ಆಹಾರವನ್ನು ಸೇವಿಸುತ್ತೀರಿ.

ಅಗಸೆ ಬೀಜಗಳಿಂದ ಕೂದಲಿನ ಆರೈಕೆ ಹೇಗೆ ಗೊತ್ತೆ?

  • ಅದೇ ಟೇಬಲ್, ಚೇರ್ ಮೇಲೆ ಕುಳಿತುಕೊಳ್ಳುವ ಭಂಗಿ ಊಟ ಮಾಡಲು ಸರಿಯಲ್ಲ. ಇಲ್ಲಿ ಹೆಚ್ಚು ಪ್ರಮಾಣದ ಆಹಾರವನ್ನೇ ಸೇವನೆ ಮಾಡುವುದು ಹೆಚ್ಚು.
  • ತಜ್ಞರು ಹೇಳುವ ಹಾಗೆ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಮ್ಮ ಕರುಳಿನ ಚಲನೆ ಚೆನ್ನಾಗಿ ನಡೆಯುತ್ತದೆ.
  • ನಮ್ಮ ಹೃದಯ ದೇಹದ ಎಲ್ಲ ಭಾಗಗಳಿಗೆ ರಕ್ತವನ್ನು ಸರಿಯಾಗಿ ಚಲನೆ ಮಾಡುತ್ತದೆ. ಇದರಿಂದ‌ ನಮ್ಮ ದೇಹದ ವಿವಿಧ ಭಾಗಗಳಿಗೆ ಅತ್ಯುತ್ತಮ ರಕ್ತ ಸಂಚಾರ ಉಂಟಾಗುತ್ತದೆ. ಬೊಜ್ಜು, ರಕ್ತದೊತ್ತಡ, ಡಯಾಬೀಟಿಸ್ ಬರುವ ಸಾಧ್ಯತೆ ಕಡಿಮೆ.
  • ಕುಳಿತು ಊಟ ಮಾಡುವಾಗ ಆಹಾರವನ್ನು ಸೇವಿಸಲು ಸ್ವಲ್ಪ ಮುಂದೆ ಬಾಗಿ ಅದನ್ನು ಅಗಿಯಲು ಹಿಂದಕ್ಕೆ ಬಾಗುತ್ತೀರಿ. ಹೀಗೆ ಮಾಡುವುದರಿಂದ ನಿಮ್ಮ‌ಸ್ನಾಯುಗಳು ಸಕ್ರಿಯಗೊಳ್ಳುತ್ತವೆ. ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ.
  • ಅದೇ ರೀತಿ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಮ್ಮ‌ ಪಂಚೇಂದ್ರೀಯಗಳು ಕೂಡ ಆ್ಯಕ್ಟಿವ್ ಆಗುತ್ತವೆ. ಉತ್ತಮ ಸ್ಪರ್ಶ ಧ್ಯಾನ ಕೂಡ ನಮಗೆ ಸಿಗುತ್ತದೆ.