ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಿಮ್ಮ ನಾಲಗೆಯ ಬಣ್ಣ ಬಿಚ್ಚಿಡುತ್ತೆ ಆರೋಗ್ಯದ ಗುಟ್ಟು; ಮನೆಯಲ್ಲೇ ಹೆಲ್ತ್‌ ಚೆಕಪ್‌ ಮಾಡಿಕೊಳ್ಳಿ

Health Tips: ನಾಲಗೆ ಮಸುಕಾದ, ಪ್ರಕಾಶಮಾನವಾದ ಕೆಂಪು, ಬಿಳಿ, ಹಳದಿ, ನೇರಳೆ ಅಥವಾ ಕಪ್ಪು ಬಣ್ಣಕ್ಕೆ ತಿರುಗಿದರೆ ಅದು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎನ್ನುವುದನ್ನು ಸೂಚಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಾದ್ಯಂತ ಸುಮಾರು ಅರ್ಧದಷ್ಟು ಜನರು ಬಾಯಿ ಮತ್ತು ಹಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿಮ್ಮ ಆರೋಗ್ಯದ ಬಗ್ಗೆ ನಾಲಗೆಯ ಬಣ್ಣ ಏನನ್ನು ಹೇಳುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಮೇ 17: ನಮ್ಮ ದೇಹದ ಮುಖ್ಯ ಅಂಗಗಳಲ್ಲಿ ನಾಲಗೆ (Tongue health) ಕೂಡ ಒಂದು. ಕೇವಲ ರುಚಿ ನೋಡಲು ಮಾತ್ರವಲ್ಲದೆ ಸ್ಪಷ್ಟವಾಗಿ ಮಾತನಾಡಲು ಕೂಡ ನಾಲಗೆ ಬೇಕೇ ಬೇಕು. ಅಷ್ಟೇ ಅಲ್ಲ ನಿಮಗೆ ಗೊತ್ತೆ ನಾಲಗೆಯೂ ನಮ್ಮ ಆರೋಗ್ಯದ ಸೂಚನೆಯನ್ನು ಬಹಿರಂಗಪಡಿಸುತ್ತದೆ. ಅನಾರೋಗ್ಯದ ಗುಟ್ಟನ್ನು ರಟ್ಟು ಮಾಡುತ್ತದೆ. ನಾಲಗೆಯ ಬಣ್ಣ, ಅದರ ವಿನ್ಯಾಸ ನೋಡಿ ವೈದ್ಯರು ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡುತ್ತಾರೆ.

ನಾಲಗೆ ಮಸುಕಾದ, ಪ್ರಕಾಶಮಾನವಾದ ಕೆಂಪು, ಬಿಳಿ, ಹಳದಿ, ನೇರಳೆ ಅಥವಾ ಕಪ್ಪು ಬಣ್ಣಕ್ಕೆ ತಿರುಗಿದರೆ ಅದು ಆರೋಗ್ಯದ ಗಮನ ಹರಿಸುವಂತೆ ಸೂಚಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ ಸುಮಾರು ಅರ್ಧದಷ್ಟು ಜನರು ಬಾಯಿ ಮತ್ತು ಹಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಾಲಗೆಯ ಬಣ್ಣಗಳು ಏನನ್ನು ಬಹಿರಂಗಪಡಿಸುತ್ತದೆ ಎನ್ನುವ ವಿವರ ಇಲ್ಲಿದೆ.

ಗುಲಾಬಿ ಬಣ್ಣ

ಆರೋಗ್ಯವಂತ ನಾಲಗೆ ಸಾಮಾನ್ಯವಾಗಿ ತಿಳಿ, ಗಾಢ ಗುಲಾಬಿ ಬಣ್ಣದ್ದಾಗಿದ್ದು, ಮೇಲ್ಮೈಯಲ್ಲಿ ಸಣ್ಣ ಪ್ಯಾಪಿಲ್ಲೆಗಳು ಗೋಚರಿಸುತ್ತವೆ. ನಾಲಿಗೆ ಗುಲಾಬಿ ಬಣ್ಣ ಇದ್ದರೆ ನೀವು ಸರಿಯಾಗಿ ನೀರು ಕುಡಿಯುತ್ತಿದ್ದೀರಿ ಮತ್ತು ಉತ್ತಮ ರಕ್ತ ಪರಿಚಲನೆ ಹೊಂದಿದ್ದೀರಿ ಎಂದರ್ಥ.

ಬಿಳಿ ಬಣ್ಣ

ಬಿಳಿ ಬಣ್ಣ ಇದ್ದರೆ ನಿರ್ಜಲೀಕರಣ ಅಥವಾ ಶಿಲೀಂಧ್ರ ಸೋಂಕು ಕಾಣಿಸಿಕೊಂಡಿದೆ ಎಂದರ್ಥ‌. ನಾಲಗೆ ಬಿಳಿಯಾಗಲು ದೇಹದಲ್ಲಿ ನೀರಿನ ಕೊರತೆ, ಧೂಮಪಾನ ಅಥವಾ ಫಂಗಲ್ ಸೋಂಕು ಕಾರಣವಾಗಿರಬಹುದು. ಬಿಳಿ ಕಲೆಗಳು ಕೆಲವೊಮ್ಮೆ ಲ್ಯುಕೋಪ್ಲಾಕಿಯಾವನ್ನು ಸೂಚಿಸಬಹುದು, ಇದು ತಂಬಾಕು ಸೇವನೆಯಿಂದ ಉಂಟಾಗುವ ಲಕ್ಷಣ.

ಮಸುಕಾದ ನಾಲಿಗೆ

ಮಸುಕಾದ ಅಥವಾ ಅಸಾಮಾನ್ಯವಾಗಿ ತಿಳಿ ಬಣ್ಣದ ನಾಲಗೆ ರಕ್ತಹೀನತೆಯನ್ನು ಸೂಚಿಸುತ್ತದೆ. ಇದು ವಿಶೇಷವಾಗಿ ಕಬ್ಬಿಣದ ಕೊರತೆ, ರಕ್ತಹೀನತೆ ಅಥವಾ ವಿಟಮಿನ್ ಬಿ 12 ಕೊರತೆಯ ಲಕ್ಷಣವಾಗಿರಬಹುದು. ಕಡಿಮೆ ಹಿಮೋಗ್ಲೋಬಿನ್ ಅಂಶ ಅಂಗಾಂಶಗಳಿಗೆ ಆಮ್ಲಜನಕದ ವಿತರಣೆಯನ್ನು ಕಡಿಮೆ ಮಾಡುತ್ತದೆ.

ಬೇಸಿಗೆಗೂ ಕಣ್ಣಿನ ಆರೋಗ್ಯಕ್ಕೂ ಏನು ನಂಟು?

ಪ್ರಕಾಶಮಾನವಾದ ಕೆಂಪು ನಾಲಿಗೆ

ನಾಲಗೆ ಕೆಂಪು ಬಣ್ಣದಲ್ಲಿದ್ದರೆ ಅದಕ್ಕೆ ಕಾರಣ ವಿಟಮಿನ್ ಕೊರತೆ ಅಥವಾ ಸೋಂಕು ಆಗಿರಬಹುದು. ನಾಲಗೆಯು ಸ್ಟ್ರಾಬೆರಿಯಂತೆ ಗಾಢ ಕೆಂಪಾಗಿದ್ದರೆ ಅದು ವಿಟಮಿನ್ B12, ಫೋಲಿಕ್ ಆ್ಯಸಿಡ್ ಕೊರತೆಯಾಗಿರಬಹುದು. ಇದೇ ಕಾರಣದಿಂದ ಕೆಲವು ಸಂದರ್ಭಗಳಲ್ಲಿ ನಾಲಗೆ ಊದಿಕೊಳ್ಳುತ್ತದೆ ಮತ್ತು ನೋವು ಕೂಡ ಕಾಣಿಸಿಕೊಳ್ಳುತ್ತದೆ.

ಹಳದಿ ಅಥವಾ ಕಿತ್ತಳೆ ಬಣ್ಣ

ನಾಲಗೆ ಹಳದಿ ಬಣ್ಣದಲ್ಲಿರುವುದು ಸ್ವಚ್ಛತೆ ಇಲ್ಲದಿರುವ ಸಂಕೇತ. ಅತಿಯಾದ ಧೂಮಪಾನ, ಕಾಫಿ-ಟೀ ಸೇವನೆಯಿಂದಲೂ ನಾಲಗೆ ಹಳದಿ ಬಣ್ಣಕ್ಕೆ ತಿರುಗಬಹುದು. ಕೆಲವೊಮ್ಮೆ ದೇಹದಲ್ಲಿ ನೀರಿನ ಕೊರತೆಯಿಂದ ಬ್ಯಾಕ್ಟೀರಿಯಾಗಳು ಉಂಟಾಗಿ ನಾಲಗೆ ಹಳದಿಯಾಗುತ್ತದೆ.

ನೇರಳೆ ಅಥವಾ ನೀಲಿ ಬಣ್ಣ

ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾದಾಗ ನಾಲಿಗೆ ನೀಲಿ ಅಥವಾ ನೇರಳೆ ಬಣ್ಣಕ್ಕೆ ತಿರುಗುತ್ತದೆ. ಇದು ಉಸಿರಾಟದ ತೊಂದರೆ, ಹೃದಯದ ಕಾಯಿಲೆ ಅಥವಾ ರಕ್ತನಾಳಗಳ ಸಮಸ್ಯೆಯ ಸೂಚನೆಯಾಗಿರಬಹುದು.