ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಷ್ಟು ತಿಂದರೂ ಮತ್ತೆ ತಿನ್ನುವ ಆಸೆ — ಇದ್ಯಾವ ಸಮಸ್ಯೆ? ಆಯುರ್ವೇದ ಏನು ಹೇಳುತ್ತೆ?

ಊಟ ಮುಗಿಸಿ ಕೈ ತೊಳೆದ ತಕ್ಷಣವೇ 'ಮುಂದೆ ಏನ್ ತಿನ್ನೋಣ?' ಅಂತ ಯೋಚಿಸುವ 25ರ ಹರೆಯದ ಯುವಕರನ್ನು ನೀವು ನೋಡಿರಬಹುದು. "ನನಗೆ ಹಸಿವು ಜಾಸ್ತಿ, ಮೆಟಬಾಲಿಸಂ ಸಖತ್ತಾಗಿದೆ" ಎಂದು ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುವವರೂ ಇದ್ದಾರೆ. ಆದರೆ, ಎಷ್ಟು ತಿಂದರೂ ತೀರದ ಈ ಹಸಿವು ಕೇವಲ 'ಜೀರ್ಣಶಕ್ತಿಯ ಸಂಕೇತ'ವಲ್ಲ; ಇದರ ಹಿಂದೆ ಒಂದು ದೊಡ್ಡ ವೈಜ್ಞಾನಿಕ ಮತ್ತು ಆಯುರ್ವೇದೀಯ ರಹಸ್ಯವಿದೆ. ಆಯುರ್ವೇದದಲ್ಲಿ ಈ ಸ್ಥಿತಿಯನ್ನು 'ಭಸ್ಮಕ ರೋಗ' ಅಥವಾ 'ಅತ್ಯಗ್ನಿ' ಎಂದು ಕರೆಯಲಾಗು ತ್ತದೆ.

ಊಟ ಮುಗಿಸಿ ಕೈ ತೊಳೆದ ತಕ್ಷಣವೇ 'ಮುಂದೆ ಏನ್ ತಿನ್ನೋಣ?' ಅಂತ ಯೋಚಿಸುವ 25ರ ಹರೆಯದ ಯುವಕರನ್ನು ನೀವು ನೋಡಿರಬಹುದು. "ನನಗೆ ಹಸಿವು ಜಾಸ್ತಿ, ಮೆಟಬಾಲಿಸಂ ಸಖತ್ತಾಗಿದೆ" ಎಂದು ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುವವರೂ ಇದ್ದಾರೆ. ಆದರೆ, ಎಷ್ಟು ತಿಂದರೂ ತೀರದ ಈ ಹಸಿವು ಕೇವಲ 'ಜೀರ್ಣಶಕ್ತಿಯ ಸಂಕೇತ'ವಲ್ಲ; ಇದರ ಹಿಂದೆ ಒಂದು ದೊಡ್ಡ ವೈಜ್ಞಾನಿಕ ಮತ್ತು ಆಯುರ್ವೇದೀಯ ರಹಸ್ಯವಿದೆ. ಆಯುರ್ವೇದದಲ್ಲಿ ಈ ಸ್ಥಿತಿಯನ್ನು 'ಭಸ್ಮಕ ರೋಗ' ಅಥವಾ 'ಅತ್ಯಗ್ನಿ' ಎಂದು ಕರೆಯಲಾಗುತ್ತದೆ.

ಜಠರದಲ್ಲಿರುವ ಜೀರ್ಣಾಗ್ನಿಯು ಮಿತಿಮೀರಿ ಪ್ರಕೋಪಗೊಂಡಾಗ, ಅದು ಹಾಕಿದ ಇಂಧನ ವನ್ನೆಲ್ಲಾ (ಆಹಾರವನ್ನು) ಕ್ಷಣಾರ್ಧದಲ್ಲಿ ಸುಟ್ಟು ಭಸ್ಮ ಮಾಡಿಬಿಡುತ್ತದೆ. ಇದು ಒಲೆಯಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ — ಎಷ್ಟು ಹಾಕಿದರೂ ಸಾಲದು! ಆಹಾರದ ಗುಣಮಟ್ಟ- ಹೆಚ್ಚು ಪ್ರಕ್ರಿಯೆಗೊಳಿಸಿದ, ಸಕ್ಕರೆ-ಮೈಯುಕ್ತ ಆಹಾರ ತೃಪ್ತಿಯನ್ನು ತ್ವರಿತವಾಗಿ ಕೊಟ್ಟರೂ ಶೀಘ್ರವೇ ಹಸಿವಾಗಿಸುತ್ತದೆ.

ಇದನ್ನೂ ಓದಿ: Health Camp: ಹಳೇ ಉಪ್ಪಾರಹಳ್ಳಿಯಲ್ಲಿ ‘ವತ್ಸಲಾ’ ಪಶು ಆರೋಗ್ಯ ಶಿಬಿರ ಯಶಸ್ವಿ

ವಿಜ್ಞಾನ ಮತ್ತು ಆಯುರ್ವೇದದ ಜುಗಲ್ಬಂದಿ

ಆಧುನಿಕ ವೈದ್ಯಕೀಯ ವಿಜ್ಞಾನವು ಇದನ್ನು 'ಪಾಲಿಫೇಜಿಯಾ' (Polyphagia) ಎಂದು ಕರೆಯುತ್ತದೆ. ಜಾಗತಿಕ ಆರೋಗ್ಯ ಸಂಸ್ಥೆಗಳ (WHO) ಅಂಕಿ-ಅಂಶಗಳ ಪ್ರಕಾರ, ಅತಿಯಾದ ಹಸಿವು ಮತ್ತು ಹಾರ್ಮೋನ್ ಏರುಪೇರುಗಳ ನಡುವೆ ನೇರ ಸಂಬಂಧವಿದೆ. ನಮ್ಮ ದೇಹದಲ್ಲಿ ತೃಪ್ತಿಯನ್ನು ನೀಡುವ 'ಲೆಪ್ಟಿನ್' (Leptin) ಮತ್ತು ಹಸಿವನ್ನು ಹೆಚ್ಚಿಸುವ 'ಗ್ರೆಲಿನ್' (Ghrelin) ಎಂಬ ಹಾರ್ಮೋನ್‌ಗಳ ಸಮತೋಲನ ತಪ್ಪಿದಾಗ ಈ ಸಮಸ್ಯೆ ಎದುರಾಗುತ್ತದೆ. ಈ ಭಸ್ಮಕ ರೋಗ ಅಲ್ಲದೆ - ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಟೈಪ್-2 ಮಧುಮೇಹ (Diabetes) ಮತ್ತು ಹೈಪರ್ ಥೈರಾಯ್ಡಿಸಂ (Hyperthyroidism) ಸಮಸ್ಯೆಗಳ ಆರಂಭಿಕ ಲಕ್ಷಣವೇ ಈ ನಿರಂತರ ಹಸಿವು.

ಆಯುರ್ವೇದದ ಪ್ರಕಾರ, ದೇಹದಲ್ಲಿ 'ಪಿತ್ತ ದೋಷ' ವಿಪರೀತವಾಗಿ ಹೆಚ್ಚಾದಾಗ ವಾಯು (ವಾತ) ಅದರೊಂದಿಗೆ ಸೇರಿ ಅಗ್ನಿಯನ್ನು ತೀವ್ರಗೊಳಿಸುತ್ತದೆ. ಪರಿಣಾಮ? ಆಹಾರ ಜೀರ್ಣವಾದರೂ ದೇಹಕ್ಕೆ ಪೋಷಣೆ ಸಿಗದೆ, ಧಾತುಗಳು ಕ್ಷಯಿಸಲು (Weight loss ಅಥವಾ ಆಯಾಸ) ಆರಂಭಿಸುತ್ತವೆ.

ಅಡುಗೆಮನೆಯಲ್ಲಿದೆ ಮದ್ದು: ಸರಳ ಪರಿಹಾರಗಳು

ಈ 'ಭಸ್ಮಕ' ಅಗ್ನಿಯನ್ನು ಶಾಂತಗೊಳಿಸಲು ಅಡುಗೆಮನೆಯ ಮಸಾಲೆಗಳೇ ಅತ್ಯುತ್ತಮ ಔಷಧ. ಬೆಂಕಿಗೆ ನೀರು ಸುರಿಯುವ ಬದಲು, ಅದನ್ನು ನಿಯಂತ್ರಿಸುವ ತಂತ್ರ ಇಲ್ಲಿದೆ:

ಧನಿಯಾ ಮತ್ತು ಜೀರಿಗೆ ಕಷಾಯ: ಪಿತ್ತವನ್ನು ಶಾಂತಗೊಳಿಸಲು ಧನಿಯಾ (ಕೊತ್ತಂಬರಿ ಬೀಜ) ಮತ್ತು ಜೀರಿಗೆಯನ್ನು ನೀರಲ್ಲಿ ಕುದಿಸಿ ಕುಡಿಯಿರಿ. ಇದು ಅತಿಯಾದ ಜೀರ್ಣಾಗ್ನಿಯನ್ನು ತಹಬದಿಗೆ ತರುತ್ತದೆ.

ನೆಲ್ಲಿಕಾಯಿ (ಆಮ್ಲಾ): ಪ್ರತಿದಿನ ಬೆಳಗ್ಗೆ ನೆಲ್ಲಿಕಾಯಿ ರಸ ಅಥವಾ ಚೂರ್ಣವನ್ನು ಸೇವಿಸುವು ದರಿಂದ ಪಿತ್ತ ಶಮನವಾಗಿ, ಹಾರ್ಮೋನ್‌ಗಳು ಸಮತೋಲನಕ್ಕೆ ಬರುತ್ತವೆ.

ತುಪ್ಪದ ಬಳಕೆ: ಅಡುಗೆಯಲ್ಲಿ ಎಣ್ಣೆಯ ಬದಲು ಹಸುವಿನ ತುಪ್ಪ ಬಳಸಿ. ತುಪ್ಪವು ಅಗ್ನಿಯನ್ನು ಮಂದಗೊಳಿಸದೆ, ಅದರ ತೀಕ್ಷ್ಣತೆಯನ್ನು (ಕ್ರೂರತೆಯನ್ನು) ಕಡಿಮೆ ಮಾಡುತ್ತದೆ.

ಬಾಳೆಹಣ್ಣು ಮತ್ತು ಹಾಲು: ಅತಿಯಾದ ಹಸಿವಾದಾಗ ತಕ್ಷಣ ಜಂಕ್ ಫುಡ್ ತಿನ್ನುವ ಬದಲು, ತಂಪು ಹಾಲಿನೊಂದಿಗೆ ಬಾಳೆಹಣ್ಣು ಸೇವಿಸಿ. ಇದು ಜಠರದ ಉರಿಯನ್ನು ತಣಿಸುತ್ತದೆ.

ದಿನದ ಆರಂಭದಲ್ಲಿ ಪ್ರೋಟೀನ್-ರಿಚ್ ಉಪಾಹಾರ: ಮೊಟ್ಟೆ/ದಾಳೆ/ಮೊಸರು + ಹಣ್ಣು; ಇದು ಘ್ರೆಲಿನ್ ತಗ್ಗಿಸಲು ಸಹಾಯ ಮಾಡುತ್ತದೆ.

ತೃಪ್ತಿದಾಯಕ ಆಹಾರ ಸಂಯೋಜನೆ: ಪ್ರೋಟೀನ್, ಒಳ್ಳೆಯ ಕೊಬ್ಬು (ಅವೊಕಾಡೋ/ಬಾದಾಮಿ), ಮತ್ತು ನಾರಿನ (ಫೈಬರ್) ಸಮತೋಲನವು ಘ್ರೆಲಿನ್ ಕಡಿಮೆ ಮಾಡುತ್ತದೆ ಮತ್ತು ತೃಪ್ತಿಯನ್ನು ದೀರ್ಘಗೊಳಿಸುತ್ತದೆ.

ಮನೋವೃತ್ತಿ ನಿಯಂತ್ರಣ: ಆಯುರ್ವೇದದಲ್ಲಿ ಪ್ರಾಣಾಯಾಮ ಮತ್ತು ಧ್ಯಾನವು ಮನೋಆಸಕ್ತಿಯನ್ನು ಕಡಿಮೆ ಮಾಡುವಂತೆ ಹೇಳಿದೆ; ಆಧುನಿಕ ಅಧ್ಯಯನಗಳು ಮನೋಚೇತನ ನಿಯಂತ್ರಣದಿಂದ ತಿನ್ನುವ ಆಲೋಚನೆ ಕಡಿಮೆಯಾಗುವುದನ್ನು ತೋರಿಸುತ್ತವೆ.

ನಿತ್ಯ ಜೀವನಕ್ಕೆ ಸರಳ ನಿಯಮಗಳು

● ಸಮಯಕ್ಕೆ ಊಟ ಮಾಡಿ; ಜಾಗೃತ ಮನಸ್ಸಿನಿಂದ ತಿನ್ನಿ (mindful eating).

● ಪ್ರಕ್ರಿಯೆಗೊಳಿಸಿದ ಆಹಾರ ಕಡಿಮೆ ಮಾಡಿ; ಸಂಪೂರ್ಣ ಆಹಾರ ಹೆಚ್ಚಿಸಿ.

● ನಿದ್ರೆ, ಒತ್ತಡ ನಿರ್ವಹಣೆ: ಕಮ್ಮಿ ನಿದ್ರೆ ಮತ್ತು ಹೆಚ್ಚು ಒತ್ತಡವು ಘ್ರೆಲಿನ್ ಹೆಚ್ಚಿಸುತ್ತದೆ.

"ಅತಿಯಾದರೆ ಅಮೃತವೂ ವಿಷ" ಎಂಬುದು ಕೇವಲ ಗಾದೆಯಲ್ಲ, ಜೈವಿಕ ಸತ್ಯ. ನಿರಂತರ ಹಸಿವು ಕೇವಲ ಹೊಟ್ಟೆಯ ಸಮಸ್ಯೆಯಲ್ಲ, ಅದು ನಿಮ್ಮ ದೇಹ ನೀಡುತ್ತಿರುವ ಎಚ್ಚರಿಕೆಯ ಗಂಟೆ. ಯುವ ಪೀಳಿಗೆಯು ಕ್ರ್ಯಾಶ್ ಡಯಟ್ ಅಥವಾ ಜಂಕ್ ಫುಡ್ ಸಂಸ್ಕೃತಿಯಿಂದ ಹೊರಬಂದು, ದೇಹದ ಪ್ರಕೃತಿಯನ್ನು ಅರ್ಥಮಾಡಿಕೊಳ್ಳಬೇಕು. ಸರಿಯಾದ ಜೀವನಶೈಲಿ ಮತ್ತು ಪಿತ್ತಶಾಮಕ ಆಹಾರಗಳ ಮೂಲಕ ಈ ಅತ್ಯಗ್ನಿಯನ್ನು ನಿಯಂತ್ರಣದಲ್ಲಿಡಬಹುದು.

Dr. Muralidhar R Ballal

General Manager

SDM Ayurveda Pharmacy Udupi