ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಿಮ್ಮ ಮೆದುಳಿನ ಹಾನಿಗೆ ಈ ಅಭ್ಯಾಸಗಳೇ ಕಾರಣ! ಜಾಗರೂಕರಾಗಿರಿ!

Health Tips: ದೇಹದ ಇತರ ಭಾಗಗಳಂತೆ ಮೆದುಳಿನ ಆರೋಗ್ಯ ಕಾಪಾಡಲು ನಾವು ಮುನ್ನೆಚ್ಚರಿಕೆಯನ್ನು ವಹಿಸಿಕೊಳ್ಳುವುದು ಕಮ್ಮಿಯೇ. ನಮಗೆ ವಯಸ್ಸಾದಂತೆ ಮೆದುಳಿನ ಕಾರ್ಯಕ್ಷಮತೆ ಕಡಿಮೆ ಯಾಗಲಿದ್ದು ಇದು ಜ್ಞಾಪಕ ಶಕ್ತಿ ಕಡಿಮೆಯಾಗಲು ಮತ್ತು ಮಾನಸಿಕ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ನಾವು ದಿನ ನಿತ್ಯ ಮಾಡುವ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು ಮೆದುಳಿನ ಕಾರ್ಯಕ್ಷಮತೆಯ ಮೇಲೆ ತೀವ್ರ ಪರಿಣಾಮ ಬೀರುತ್ತವೆ.

ಸಂಗ್ರಹ ಚಿತ್ರ

ನವದೆಹಲಿ,ಸೆ.27: ​ನಮ್ಮ ಶರೀರ ಹಾಗೂ ಮನಸ್ಸನ್ನು ಸಕ್ರಿಯವಾಗಿ ಇಡಲು ಮೆದುಳಿನ ಆರೋಗ್ಯ (Brain health) ಬಹಳಷ್ಟು ಮುಖ್ಯವಾಗುತ್ತದೆ. ಆದರೆ ದೇಹದ ಇತರ ಭಾಗಗಳಂತೆ ಮೆದುಳಿನ ಆರೋಗ್ಯ ಕಾಪಾಡಲು ನಾವು ಮುನ್ನೆಚ್ಚರಿಕೆಯನ್ನು ವಹಿಸಿಕೊಳ್ಳುವುದು ಕಮ್ಮಿಯೇ. ನಮಗೆ ವಯಸ್ಸಾದಂತೆ ಮೆದುಳಿನ ಕಾರ್ಯಕ್ಷಮತೆ ಕಡಿಮೆಯಾಗಲಿದ್ದು ಇದು ಜ್ಞಾಪಕ ಶಕ್ತಿ ಕಡಿಮೆಯಾಗಲು ಮತ್ತು ಮಾನಸಿಕ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ನಾವು ದಿನ ನಿತ್ಯ ಮಾಡುವ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು ಮೆದುಳಿನ ಕಾರ್ಯಕ್ಷಮತೆಯ ಮೇಲೆ ತೀವ್ರ ಪರಿಣಾಮ ಬೀರುತ್ತವೆ.

*ಆರಾಮ ಇಲ್ಲದೆ ಇದ್ದಾಗ ಕೆಲಸ ಮಾಡುವುದು:

ದೇಹಕ್ಕೆ ಕಾಯಿಲೆ ಬಂದಾಗ ಸುಸ್ತು, ನಿಶ್ಯಕ್ತಿ ಹೆಚ್ಚು ಇರುತ್ತದೆ. ಈ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿಯೂ ಸೋಂಕಿನ ವಿರುದ್ಧ ಹೋರಾಡುತ್ತಿರುತ್ತದೆ. ಹಾಗಾಗಿ ಸರಿಯಾಗಿ ರೆಸ್ಟ್ ಮಾಡದೇ ಇದ್ದಾಗ ಮೆದುಳಿಗೆ ಒತ್ತಡ ಬೀಳಬಹುದು

*ಅತಿಯಾಗಿ ಸಕ್ಕರೆ ಸೇವಿಸುವುದು:

ಅತಿಯಾದ ಸಂಸ್ಕರಿಸಿದ ಸಕ್ಕರೆಯ ಸೇವನೆಯು ಪ್ರೋಟೀನ್ ಮತ್ತು ಪೋಷಕಾಂಶಗಳನ್ನು ಹೀರಿಕೊಂಡು ಮೆದುಳು ಮತ್ತು ದೇಹದ ಸಾಮರ್ಥ್ಯವನ್ನು ಕುಗ್ಗುವಂತೆ ಮಾಡುತ್ತದೆ. ಹೆಚ್ಚಿನ ಸಕ್ಕರೆ ಸೇವನೆಯೂ ಮೆದುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು.

*ದೈಹಿಕ ಚಟುವಟಿಕೆಯಿಲ್ಲದಿರುವುದು;

ಒಬ್ಬ ವ್ಯಕ್ತಿಯು ಆಲಸ್ಯದಿಂದಿದ್ದು ಸಾಕಷ್ಟು ದೈಹಿಕ ವ್ಯಾಯಾಮ ಮಾಡದಿದ್ದಾಗ, ಮೆದುಳಿನ ಸಾಮರ್ಥ್ಯ ಕುಗ್ಗುತ್ತದೆ. ಇದು ಕೌಶಲ್ಯಗಳ ಕುಸಿತಕ್ಕೆ ಕಾರಣವಾಗುತ್ತದೆ. ದೈಹಿಕ ಚಟುವ ಟಿಕೆಗಳು ಸಂತೋಷದ ಹಾರ್ಮೋನ ಬಿಡುಗಡೆ ಮಾಡುತ್ತದೆ. ಇವು ನಿಮ್ಮನ್ನು ಯೌವನ ಯುತವಾಗಿರಿಸಲು ಸಹಾಯ ಮಾಡುತ್ತದೆ.

ಉಪಹಾರ ಅಥವಾ ಊಟವನ್ನು ಬಿಡುವುದು:

ಸರಿಯಾದ ಸಮಯಕ್ಕೆ ಉಪಹಾರ, ಊಟ ಮಾಡದೇ ಇದ್ದಾಗ ಮೆದುಳಿಗೆ ಅಗತ್ಯವಾದ ಗ್ಲುಕೋಸ್ ಮತ್ತು ಪೋಷಕಾಂಶಗಳು ಸಿಗುವುದಿಲ್ಲ. ದೀರ್ಘಕಾಲ ಹೀಗೆ ಮಾಡಿದರೆ ಮೆದುಳಿನ ಕಾರ್ಯ ಚಟುವಟಿಕೆ ಕ್ಷೀಣಿಸುತ್ತವೆ.

Health Tips: ಬೆಲ್ಲ ತಿಂದರೆ ತೂಕ ಇಳಿಯುತ್ತಾ? ಸಕ್ಕರೆಗಿಂತ ಬೆಲ್ಲ ನಿಜಕ್ಕೂ ಉತ್ತಮವೇ? ಇಲ್ಲಿದೆ ಗೊಂದಲಗಳಿಗೆ ಉತ್ತರ

​*ಅತೀಯಾಗಿ ಸೋಶಿಯಲ್ ಮೀಡಿಯಾ ವೀಕ್ಷಣೆ:

ದಿನವಿಡಿ ಟಿವಿ ನೋಡುವುದು, ನಿರಂತರವಾಗಿ ಸೋಷಿಯಲ್ ಮೀಡಿಯಾದಲ್ಲಿ ತೊಡಗಿಸಿಕೊಳ್ಳುವುದು ಆತಂಕ ಮತ್ತು ಖಿನ್ನತೆಯನ್ನು ಹೆಚ್ಚಿಸಿ, ಮೆದುಳನ ಆಲೋಚ ಶಕ್ತಿ ಕುಗ್ಗಿಸುತ್ತದೆ.

ಕತ್ತಲೆಯಲ್ಲಿ ಹೆಚ್ಚಿನ ಸಮಯ ಕಳೆಯುವುದು:

ಸೂರ್ಯನ ಬೆಳಕು ಕಡಿಮೆಯಾದಷ್ಟೂ ದೇಹದಲ್ಲಿ ಆಲೋಚನೆ ನಿಯಂತ್ರಿಸುವ 'ಸೆರೊಟೋನಿನ್' ರಾಸಾಯನಿಕ ಕಡಿಮೆ ಯಾಗುತ್ತದೆ. ಇದು ಮೆದುಳಿನ ಕಲಿಕಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ

ಮೆದುಳಿಗೆ ಏನೂ ಕೆಲಸ ನೀಡದೆ ಇರುವುದು:

ಒಂದೇ ಕೆಲಸ ಮಾಡುತ್ತಿರುವುದು, ಹೊಸ ವಿಷಯಗಳ ಕಲಿಕೆ ಮೂಲಕ ಮೆದುಳಿಗೆ ದೈನಂದಿನ ಕಸರತ್ತು ನೀಡಬೇಕು. ಇಲ್ಲದಿದ್ದರೆ ಮೆದುಳಿನ ಕಾರ್ಯಕ್ಷಮತೆ ಕುಗ್ಗುತ್ತದೆ.

ಕಹಿ ನೆನಪುಗಳನ್ನು ಹಿಡಿದಿಟ್ಟುಕೊಳ್ಳುವುದು:

ಕೋಪ ಹಾಗೂ ಹಳೆಯ ನೋವಿನ ನೆನಪುಗಳು ಹೆಚ್ಚಾಗಿ ಕಾಡಿ ಆಲೋಚಿಸುವ ಸಾಮರ್ಥ್ಯವನ್ನು ಕಡಿತಗೊಳಿಸುತ್ತವೆ.