ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾತ್ರಿ ಮಲಗಿದ್ರೆ ನಿದ್ದೆ ಬರಲ್ವಾ? ಇಲ್ಲಿದೆ ಸುಲಭ ಪರಿಹಾರ

Better Sleep: ಕೆಲಸದ ಒತ್ತಡ, ಆಹಾರ ಪದ್ಧತಿ, ಆರೋಗ್ಯ ಸಮಸ್ಯೆ ಹೀಗೆ ನಾನಾ ಕಾರಣಗಳಿಂದ ನಿದ್ರೆಯ ಸಮಸ್ಯೆ ಜಾಸ್ತಿಯಾಗುತ್ತಿದೆ. ಹಾಗಂತ ಈ ಸಮಸ್ಯೆಯ ನಿರ್ಲಕ್ಷ್ಯ ಮಾಡಲು ಹೋದರೆ ಮುಂದಿನ ದಿನದಲ್ಲಿ ದೊಡ್ಡ ಮಟ್ಟದ ಸಮಸ್ಯೆಯಾಗಬಹುದು. ಹಾಗಾಗಿ ವಯಸ್ಸಿಗೆ ಅನುಗುಣವಾಗಿ ಯಾವ ಕಾರಣಕ್ಕೆ ನಿದ್ರಾಹೀನತೆ ಕಾಡುವುದು? ಅದಕ್ಕೆ ಯಾವೆಲ್ಲ ರೀತಿಯ ವಿಶೇಷ ಚಿಕಿತ್ಸೆಗಳಿವೆ? ನಮ್ಮ ಜೀವನ ಶೈಲಿಯನ್ನು ಹೇಗೆ ಬದಲಿಸಿಕೊಳ್ಳಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ.

ನಿದ್ರಾಹೀನತೆ ಸಮಸ್ಯೆಗೆ ಪರಿಹಾರ

ಬೆಂಗಳೂರು, ಡಿ. 14: ಇತ್ತೀಚೆಗೆ ನಿದ್ರಾಹೀನತೆ (Sleeping problems) ಸಮಸ್ಯೆಯಿಂದ ಒತ್ತಡ ಅನುಭವಿಸುವವರು ಅನೇಕರು ಇದ್ದಾರೆ. ಅದರಲ್ಲೂ ಯುವಜನರಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಿದೆ. ಕೆಲಸದ ಒತ್ತಡ, ಆಹಾರ ಪದ್ಧತಿ, ಆರೋಗ್ಯ ಸಮಸ್ಯೆ ಹೀಗೆ ನಾನಾ ಕಾರಣಗಳಿಂದ ನಿದ್ರೆಯ ಸಮಸ್ಯೆ ಜಾಸ್ತಿಯಾಗುತ್ತಿದೆ. ಹಾಗಂತ ಈ ಸಮಸ್ಯೆಯ ನಿರ್ಲಕ್ಷ್ಯ ಮಾಡಲು ಹೋದರೆ ಮುಂದಿನ ದಿನದಲ್ಲಿ ದೊಡ್ಡ ಮಟ್ಟದಲ್ಲಿ ಕಾಡುವ ಸಾಧ್ಯತೆ ಇದೆ. ಹಾಗಾಗಿ ವಯಸ್ಸಿಗೆ ಅನುಗುಣವಾಗಿ ಯಾವ ಕಾರಣಕ್ಕೆ ನಿದ್ರಾ ಹೀನತೆ ಕಾಡುತ್ತದೆ? ಅದಕ್ಕೆ ಯಾವೆಲ್ಲ ರೀತಿಯ ವಿಶೇಷ ಚಿಕಿತ್ಸೆಗಳಿವೆ? ನಮ್ಮ ಜೀವನ ಶೈಲಿಯನ್ನು ಹೇಗೆ ಬದಲಿಸಿಕೊಳ್ಳಬೇಕು? ಮುಂತಾದ ವಿಚಾರವಾಗಿ ʼವಿಶ್ವವಾಣಿ ಹೆಲ್ತ್‌ʼ ಯೂಟ್ಯೂಬ್‌ ಚಾನೆಲ್‌ನಲ್ಲಿ ವೈದ್ಯ ಡಾ. ಮಲ್ಲಿಕಾರ್ಜುನ ಡಂಬಳ ಮಾಹಿತಿ ನೀಡಿದ್ದಾರೆ..

ನಿದ್ರಾ ಹೀನತೆ ಎನ್ನುವುದು ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಕಾಡುವಂತಹ ಸಮಸ್ಯೆ. ಹಾಗಾಗಿ ನಿದ್ರೆ ಅನ್ನೋದು ಮನಸ್ಸು ಮತ್ತು ಇಂದ್ರಿಯಗಳಿಗೆ ಮುಖ್ಯವಾಗಿದ್ದು. ನಮ್ಮ ಜೀವನ ಶೈಲಿಯೇ ನಿದ್ರಾಹೀನತೆಗೆ ಕಾರಣ ಎಂದು ಡಾ. ಮಲ್ಲಿಕಾರ್ಜುನ ತಿಳಿಸಿದ್ದಾರೆ. ಕೆಲವೊಮ್ಮೆ ನಾವು ಮಾಡುವ ಅತೀಯಾದ ಆಲೋಚನೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟು ಮಾಡಬಹುದು. ನಾವು ಕಂಡ ಆಸೆಗಳು ನೆರವೇರದಿದ್ದಾಗ ಕೂಡ ಅತಿಯಾದ ಅಲೋಚನೆಗೆ ಸಿಲುಕಿ ಮಾನಸಿಕವಾಗಿ ನಮ್ಮನ್ನು ನೋಯಿಸಬಹುದು ಎಂದು ಅವರು ಹೇಳಿದ್ದಾರೆ. ಹಾಗಾಗಿ ಸಾಧ್ಯವಾದಷ್ಟು ಸುಲಭ ಮಾರ್ಗದಲ್ಲಿ ಹೋಗುವ ಕನಸು ಕಂಡರೆ ಮನಸ್ಸಿಗೆ ನೆಮ್ಮದಿ ಇರುತ್ತದೆ. ಅತೀಯಾದ ಅಲೋಚನೆ ಕೂಡ ನಿಮ್ಮ ನಿದ್ರಾಭಂಗಕ್ಕೆ ಕಾರಣ ವಾಗಬಹುದು. ಹಾಗಾಗಿ ಕೆಲಸ ಮಾಡುವುದು ಎಷ್ಟು ಮುಖ್ಯವೋ ಹಾಗೆಯೇ ನಿದ್ದೆ ಮಾಡುವುದು ಬಹಳ ಮುಖ್ಯ ಎಂದು ತಜ್ಞರು ತಿಳಿಸಿದ್ದಾರೆ.

ವಿಡಿಯೊ ನೋಡಿ:



ಶಾರೀರಕವಾದ ಸಮಸ್ಯೆ ನೋಡುವುದಾದರೆ ರಾತ್ರಿ ಸಮಯಕ್ಕೆ ಸರಿಯಾಗಿ ಹೊಟ್ಟೆ ತುಂಬಾ ಊಟ ಮಾಡದೇ ಇರುವುದು ಅಥವಾ ಟೀ, ಕಾಫಿ ಸೇವನೆಯೂ ಕೂಡ ನಿದ್ರಾ ಹೀನತೆಗೆ ಕಾರಣವಾಗಬಹುದು. ನೀವು ಈ ಸಮಸ್ಯೆಯನ್ನು ಪದೇ ಪದೆ ಅನುಭವಿಸುತ್ತಿದ್ದರೆ ಅದನ್ನು ಹಗುರವಾಗಿ ಪರಿಗಣಿಸಬೇಡಿ. ವೈದ್ಯರನ್ನು ಸಂಪರ್ಕಿಸಿ ಎಂದು ತಿಳಿಸಿದ್ದಾರೆ.

ಚಳಿಗಾಲವೆಂದರೆ ಸ್ವಪೋಷಣೆಯ ಕಾಲ! ಹೇಗೆ?

ಪರಿಹಾರ ಏನು?

  • ದಿನನಿತ್ಯದ ಜೀವನದಲ್ಲಿ ನಾವು ಅನಾರೋಗ್ಯಕರ ಜೀವನಶೈಲಿಯನ್ನು ಬದಲಾವಣೆ ಮಾಡಿ ಅರೋಗ್ಯಕರ ಆಹಾರ ಸೇವನೆ ಕ್ರಮ ಅನುಸರಿಬೇಕು.
  • ಸಂಜೆ 5- 7 ಗಂಟೆಯ ಒಳಗೆ ಊಟ ಮಾಡುವ ಹವ್ಯಾಸ ಮಾಡಿಕೊಳ್ಳಬೇಕು.
  • ರಾತ್ರಿ ಸಮಯ ಅಲ್ಪ ಪ್ರಮಾಣದಲ್ಲಿ ಊಟ ಮಾಡಿದರೆ ನಿಮ್ಮ ಚಯಾಪಚಯ ಕ್ರಿಯೆ ಹೆಚ್ಚಿಸಬಹುದು.
  • ರಾತ್ರಿ ಮಾಂಸಾಹಾರ ಸೇವನೆ ತಪ್ಪಿಸಬೇಕು.
  • ಹಾಸಿಗೆಗೆ ಹೋಗುವ ಮುನ್ನ ಸಾಧ್ಯವಾದಷ್ಟು ನಿಮ್ಮ ಯೋಚನೆಗಳನ್ನು ತೊಡೆದುಹಾಕಲು ಪ್ರಯತ್ನಿಸುವುದು ಉತ್ತಮ.
  • ಜಂಕ್ ಫುಡ್ ಸೇವನೆ, ಅತಿಯಾದ ಹೊರಗಿನ‌ ಆಹಾರ ತಪ್ಪಿಸಿ.

ಚಿಕಿತ್ಸೆ ಇದೆಯೇ?

ನಿದ್ರಾಹೀನತೆಯನ್ನು ನಿವಾರಿಸಲು ಆಯುರ್ವೇದದಲ್ಲಿ ಕೆಲವು ಚಿಕಿತ್ಸೆ ಇದೆ. ನಿಯಮಿತ ಆಸನಗಳು ಮತ್ತು ಗಿಡಮೂಲಿಕೆಗಳನ್ನು ಬಳಸಬಹುದು. ನಿದ್ರೆಯ ಸಮಸ್ಯೆಗೆ ಆಯುರ್ವೇದದಲ್ಲಿ ಬ್ರಾಹ್ಮಿ, ಅಶ್ವಗಂಧ‌ ಅಥವಾ ವಾತ-ಪಿತ್ತ ಸಮತೋಲನ ಎಣ್ಣೆಗಳಿಂದ ತಲೆಯನ್ನು ಮಸಾಜ್ ಮಾಡಬಹುದು.