ನವದೆಹಲಿ,ಜು.12: ಮಳೆಗಾಲ ಆರಂಭವಾಗುತ್ತಿದ್ದಂತೆ ಅನೇಕರಿಗೆ ವಾತಾವರಣ ಬದಲಾವಣೆ ಯಿಂದಾಗಿ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಅದರಲ್ಲೂ ದೇಹದಲ್ಲಿ ಉರಿಯೂತ ಉಂಟಾಗುವ ಸಾಧ್ಯತೆ ಇರುವುದರಿಂದ ಅನೇಕ ಜನರು ಕೀಲು ನೋವು ಹಾಗೂ ಮೊಣಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಾರೆ. ಇದಕ್ಕೆ ಮನೆಯಲ್ಲೇ ನೀವು ಪರಿಹಾರ ಕಂಡುಕೊಳ್ಳಬಹುದು. ಈ ಸಮಸ್ಯೆಗೆ ಅರಿಶಿನ ಚಹಾ (Turmeric powder) ಒಂದು ಅತ್ಯುತ್ತಮ ನೈಸರ್ಗಿಕ ಔಷಧಿಯಾಗಿದ್ದು ಉರಿಯೂತ ನಿವಾರಕ ಗುಣ ಇದರಲ್ಲಿದೆ. ಅರಶಿನದ ಕರ್ಕ್ಯುಮಿನ್ ಎಂದು ಕರೆಯಲ್ಪಡುವ ಸಂಯುಕ್ತವು ಕೀಲು ನೋವು ಇರುವವರ ನೋವಿನ ಸಮಸ್ಯೆಯನ್ನು 30% ರಷ್ಟು ಕಡಿಮೆ ಮಾಡುತ್ತದೆ.
ಕೀಲು ನೋವಿಗೆ ಅರಿಶಿನ ಚಹಾವನ್ನು ಪರಿಹಾರವನ್ನಾಗಿ ಬಳಕೆ ಮಾಡುವುದು ಹೇಗೆ?
ಅರಿಶಿನವು ನೋವು ನಿವಾರಕ ಮಾತ್ರೆಗಳಿಗಿಂತ ಕಡಿಮೆ ಅಡ್ಡಪರಿಣಾಮಗಳನ್ನು ಹೊಂದಿದ್ದು, ಕೀಲುಗಳ ಜಡತ್ವವನ್ನು ಕಡಿಮೆ ಮಾಡಿ ಆ್ಯಕ್ಟೀವ್ ಆಗಿ ಇರಲು ಸಹಾಯ ಮಾಡುತ್ತವೆ. ದೇಹದಲ್ಲಿನ ಉರಿಯೂತವನ್ನು ನಿಯಂತ್ರಿಸಿದಾಗ, ಕೀಲು ನೋವಿನ ತೀವ್ರತೆಯನ್ನು ಕಡಿಮೆ ಮಾಡಬಹುದು.. ಇದಲ್ಲದೆ, ಅರಿಶಿನ ಚಹಾವು ಕೀಲುಗಳನ್ನು ಬಲಪಡಿಸುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ದೀರ್ಘಕಾಲದ ಉರಿಯೂತಕ್ಕೆ ಸಂಬಂಧಿಸಿದ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಕೀಲು ನೋವನ್ನು ನಿವಾರಿಸಬಹುದು.
Health Tips: ಶುಂಠಿ ಚಹಾ ಹೆಚ್ಚು ಕುಡಿಯುತ್ತೀರಾ? ಮಿತಿಮೀರಿದರೆ ಈ ಆರೋಗ್ಯ ಸಮಸ್ಯೆ ಕಾಡಬಹುದು!
ಸಂಶೋಧನೆ ಏನು ಹೇಳುತ್ತದೆ?
ಅರಿಶಿನ ಚಹಾವು ಕೀಲುಗಳೊಳಗಿನ ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ. ಉಗುರು ಬೆಚ್ಚಗಿನ ನೀರಿನಲ್ಲಿ ಅರಿಶಿನವನ್ನು ಪುಡಿಮಾಡಿ ಬಿಸಿ ನೀರಿನಲ್ಲಿ ಹಾಕಿ ಕುಡಿಯಬಹುದು...
ಅರಿಶಿನ ಚಹಾ ತಯಾರಿಸುವ ವಿಧಾನ:
1 ಕಪ್ ಕುಡಿಯುವ ನೀರಿಗೆ ಅರ್ಧ ಅಥವಾ 1 ಚಮಚ ಅರಿಶಿನ ಪುಡಿ ಅಥವಾ ಜಜ್ಜಿದ ಹಸಿ ಅರಿಶಿನ ಹಾಕಿ ಇದಕ್ಕೆ ಚಿಟಿಕೆ ಕರಿ ಮೆಣಸಿನ ಪುಡಿ ರುಚಿಗೆ ಸ್ವಲ್ಪ ಜೇನುತುಪ್ಪ, ಶುಂಠಿ ಬಳಕೆ ಮಾಡ ಬಹುದು.ನೀರನ್ನು ಚೆನ್ನಾಗಿ ಕುದಿಸಿ ಅದಕ್ಕೆ ಅರಿಶಿನ ಮತ್ತು ಮೆಣಸಿನ ಪುಡಿಯನ್ನು ಸೇರಿಸಿ. ಸ್ವಲ್ಪ ಸಮಯದ ನಂತರ ಸೋಸಿಕೊಂಡು ಕುಡಿಯಿರಿ.
ಯಾರಿಗೆ ಉಪಯೋಗಕಾರಿ?
ವಯಸ್ಸಾದವರು ಮತ್ತು ಕೀಲು ಜಡತ್ವ ಇರುವವರಿಗೆ ಪ್ರಯೋಜನಕಾರಿಯಾಗಿದೆ. ಹಾಗೆಯೇ ಆಸ್ಟಿಯೋಆರ್ಥ್ರೈಟಿಸ್ ಸಮಸ್ಯೆ ಇರುವ ರೋಗಿಗಳು ಹಾಗೂ ಒಂದೇ ಕಡೆ ಕುಳಿತು ಕೆಲಸ ಮಾಡುವ ಉದ್ಯೋಗಿಗಳಿಗೂ ಸಹಕಾರಿ..